ಮಂಗಳೂರಿಗೆ ಜೂ.ಎನ್‌ಟಿಆರ್ ಎಂಟ್ರಿ; ಇದು 'ದೇವರ 2' ಅಲ್ಲ ಪ್ರಶಾಂತ್ ನೀಲ್ ಸಿನಿಮಾ

RRR ಸಿನಿಮಾ ಬಳಿಕ ಜೂ.ಎನ್‌ಟಿಆರ್ ಸಿಕ್ಕಾಪಟ್ಟೆ ಬ್ಯುಸಿಯಾಗಿ ಬಿಟ್ಟಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳು ಲೈನ್‌ಅಪ್‌ನಲ್ಲಿವೆ. ಈ ಮಧ್ಯೆ ಬಾಲಿವುಡ್‌ ಸಿನಿಮಾವನ್ನೂ ಬಹುತೇಕ ಮುಗಿಸಿದ್ದಾರೆ. ಹೃತಿಕ್ ರೋಷನ್ ಹಾಗೂ ಜೂ.ಎನ್‌ಟಿಆರ್ ಮುಖಾ ಮುಖಿಯಾಗಿರುವ 'ವಾರ್ 2'ನಲ್ಲಿ ಯಂಗ್ ಟೈಗರ್ ಖದರ್ ಹೇಗಿರುತ್ತೆ ಅಂತ ನೋಡುವುದೇ ಒಂದು ಮಜಾ. ಆದರೆ, 'ವಾರ್ 2'ಗಿಂತಲೂ ಹೆಚ್ಚು ಕಿಕ್ ಕೊಡುವ ಸಿನಿಮಾ ಕೂಡ ಶೂಟಿಂಗ್ ಶುರುವಾಗಿದೆ.

ಬಹಳ ದಿನಗಳಿಂದ ಈ ಕಾಂಬಿನೇಷನ್ ಸಿನಿಮಾಗಾಗಿ ಸಿನಿಪ್ರಿಯರು ಎದುರು ನೋಡುತ್ತಿದ್ದರು. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ RRR ಹೀರೋ ಜೂ.ಎನ್‌ಟಿಆರ್ ಕಾಂಬಿನೇಷನ್ ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದೆ. ಪ್ರಶಾಂತ್ ನೀಲ್ 'ಡ್ಯಾಗನ್' ಸಿನಿಮಾವನ್ನು ಭರ್ಜರಿ ಆಕ್ಷನ್ ಸೀನ್ ಮೂಲಕ ಆರಂಭ ಮಾಡಿದ್ದರು.

Jr NTR in Mangalore for the Prashanth Neel movie that will start from April 22nd

ಈಗ ಇನ್ನೊಂದು ಹಂತದ ಶೂಟಿಂಗ್ ನಾಳೆ (ಏಪ್ರಿಲ್ 22)ಯಿಂದ ಆರಂಭ ಆಗುತ್ತಿದೆ. ಅದೂ ಕರ್ನಾಟಕದ ಕರಾವಳಿ ಮಂಗಳೂರಿನಲ್ಲಿ. ಹೀಗಾಗಿ ಜೂ.ಎನ್‌ಟಿಆರ್ ಮಂಗಳೂರಿಗೆ ಈಗಾಗಲೇ ಎಂಟ್ರಿ ಕೊಟ್ಟಿದ್ದಾರೆ. ಇಬ್ಬರೂ ಮಾಸ್ ಎಂಜಿನ್‌ಗಳು ಶೂಟಿಂಗ್‌ಗೆ ಹೋಗುವುದಕ್ಕೂ ಮುನ್ನ ಕಡಲ ತೀರದಲ್ಲಿ ಸಮಾಲೋಚನೆ ನಡೆಸಿದ್ದು, ಆ ಫೋಟೋವನ್ನು ರಿವೀಲ್ ಮಾಡಿದೆ.

ಪ್ರಶಾಂತ್ ನೀಲ್ ಈಗಾಗಲೇ ಶೂಟಿಂಗ್ ಆರಂಭಿಸಿ, ಒಂದು ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಆದರೆ, ಆ ಶೆಡ್ಯೂಲ್‌ನಲ್ಲಿ ಜೂ.ಎನ್‌ಟಿಆರ್ ಭಾಗಿಯಾಗಿರಲಿಲ್ಲ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಶಾಂತ್ ನೀಲ್ ಆಕ್ಷನ್ ಸೀನ್‌ಗಳನ್ನು ಚಿತ್ರೀಕರಣ ಮಾಡಿಕೊಂಡಿದ್ದರು. ಅದು ಬಿಟ್ಟರೆ, ಈಗ ಮಂಗಳೂರಿನಲ್ಲಿ 'ಡ್ರ್ಯಾಗನ್' ಟೀಮ್ ಬೀಡುಬಿಟ್ಟಿದೆ. ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಹಾಗೂ ತಂಡ ಮೂರು ವಾರಗಳ ಕಾಲ ಇಲ್ಲಿ ಮಂಗಳೂರಿನಲ್ಲಿ ಶೂಟಿಂಗ್ ಮಾಡುತ್ತಿದೆ ಎನ್ನಲಾಗಿದೆ.

ಜೂ.ಎನ್‌ಟಿಆರ್ ಮಂಗಳೂರಿಗೆ ಬಂದು ಇಳಿದಾಗಲೇ ಹೊರ ಬಿದ್ದ ಫೋಟೋಗಳು ಅವರ ಅಭಿಮಾನಿಗಳಲ್ಲಿ ಕುತೂಹಲವನ್ನು ಹೆಚ್ಚಿಸಿತ್ತು. ಯಾಕಂದ್ರೆ, ಯಂಗ್ ಟೈಗರ್ ಈ ಸಿನಿಮಾಗಾಗಿ ಸಿಕ್ಕಾಪಟ್ಟೆ ಸಣ್ಣಗಾಗಿದ್ದಾರೆ. ಈ ಫೋಟೋಗಳನ್ನು ನೋಡಿ ಫ್ಯಾನ್ಸ್ ಅಂತೂ ಥ್ರಿಲ್ ಆಗಿದ್ದಾರೆ. ಮಂಗಳೂರಿನ ಬೀಚ್‌ನಲ್ಲಿ ನಿಂತು ಪ್ರಶಾಂತ್ ನೀಲ್ ಜೊತೆ ಚರ್ಚೆ ಮಾಡುತ್ತಿರುವ ಫೋಟೋದಲ್ಲೂ ಸಿಕ್ಕಾಪಟ್ಟೆ ಸ್ಲಿಮ್ ಆಗಿ ಕಾಣಿಸುತ್ತಾರೆ.

ಜೂ.ಎನ್‌ಟಿಆರ್ ಇಷ್ಟೊಂದು ಸಣ್ಣಗಾಗಿದ್ದು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿತ್ತು. ಓಜೆಂಪಿಕ್ ಚಿಕಿತ್ಸೆಯ ಮೂಲಕ ಜೂ.ಎನ್‌ಟಿಆರ್ ಸ್ಲಿಮ್ ಆಗಿದ್ದರೆಂಬ ಆರೋಪ ಕೇಳಿ ಬಂದಿತ್ತು. ಆದರೆ, ಕೂಡಲೇ ಜೂ.ಎನ್‌ಟಿಆರ್ ಟೀಮ್ ಈ ಆರೋಪವನ್ನು ತಳ್ಳಿ ಹಾಕಿದ್ದರು. ಪ್ರಶಾಂತ್ ನೀಲ್ ಸಿನಿಮಾಗಾಗಿ ಹೊಸ ಡಯೆಟ್‌ ಅನ್ನು ಫಾಲೋ ಮಾಡುತ್ತಿದ್ದು, ಕೇವಲ ದಿನಕ್ಕೆ ಒಂದು ಬಾರಿ ಮಾತ್ರ ಆಹಾರವನ್ನು ಸೇವಿಸುತ್ತಾರೆಂದು ಸ್ಪಷ್ಟನೆ ನೀಡಿದ್ದರು.

ಇನ್ನು ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ ಸಿನಿಮಾವನ್ನು 'ಪುಷ್ಪ 2' ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಈ ಮಧ್ಯೆ ಪ್ರಶಾಂತ್ ನೀಲ್ 'ಸಲಾರ್ 2'ಗೂ ಕೈ ಹಾಕಿದ್ದಾರೆ. ಹಾಗೇ ಜೂ.ಎನ್‌ಟಿಆರ್ 'ವಾರ್‌ 2' ಪಬ್ಲಿಸಿಟಿಯಲ್ಲಿ ಬ್ಯುಸಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Jr NTR in Mangalore for the Prashanth Neel movie that will start from April 22nd
Read more about: prashanth neel ntr mangalore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X