RRR Day 3 Box Office Collection: ಮೂರೇ ದಿನದಲ್ಲಿ 500 ಕೋಟಿ ಲೂಟಿ ಮಾಡಿದ್ದೇಗೆ RRR?

RRR ಭಾರತದ ಮೋಸ್ಟ್‌ ಎಕ್ಸ್‌ಪೆಕ್ಟೆಡ್ ಸಿನಿಮಾ. ಈ ಸಿನಿಮಾ ನೋಡಲು ಕಾದು ಕಾದು ಸುಸ್ತಾದವರು ಅದೆಷ್ಟೋ ಮಂದಿ. ಕೊನೆಗೂ RRR ಥಿಯೇಟರ್‌ಗೆ ಲಗ್ಗೆ ಇಟ್ಟಾಗ, ಜನರು ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ವಿಶ್ವದಾದ್ಯಂತ ರಾಜಮೌಳಿ ಸಿನಿಮಾ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಕ್ಸಾಫೀಸ್‌ನಲ್ಲೂ ಗೂಳಿಯಂತೆ ಮುನ್ನುಗ್ಗುತ್ತಿದೆ.

RRR ಸಿನಿಮಾಗೆ ರಾಜಮೌಳಿ ಟ್ರೇಡ್ ಮಾರ್ಕ್ ಇದೆ. ಜೂ.ಎನ್‌ಟಿಆರ್ ಹಾಗೂ ರಾಮ್‌ಚರಣ್ ಅಂತಹ ಇಬ್ಬರು ಟಾಲಿವುಡ್‌ ನಟರ ಮಹಾ ಸಂಗಮ ಆಗಿದೆ. ದುಬಾರಿ ಸೆಟ್ಟು, ಅದ್ಧೂರಿ ಆಕ್ಷನ್, ದುಬಾರಿ ತಾರಾಬಳಗ ಇವೆಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರದೆಡೆಗೆ ಸೆಳೆಯುತ್ತಿದೆ. ಈ ಕಾರಣಕ್ಕೆ RRR ವರ್ಲ್ಡ್‌ ವೈಡ್ ಬಾಕ್ಸಾಫೀಸ್‌ನಲ್ಲೂ ಚಿಂದಿ ಉಡಾಯಿಸುತ್ತಿದೆ.

ರಾಜಮೌಳಿ RRR ಸಿನಿಮಾದಿಂದ ಮತ್ತೆ ಗೆದ್ದು ಬೀಗಿದ್ದಾರೆ. ಬಾಹುಬಲಿ ಬಳಿಕ ವಿಶ್ವದ ಮಾರುಕಟ್ಟೆಯಲ್ಲಿ ಅದಿಪತ್ಯ ಸಾಧಿಸುತ್ತಿದ್ದಾರೆ. 'ಬಾಹುಬಲಿ' ಭಾರತದ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು. ಈಗ RRR ಮತ್ತೊಂದು ಇತಿಹಾಸ ಬರೆಯಲು ಮುಂದಾಗಿದೆ. ರಾಜಮೌಳಿ ಮತ್ತೊಮ್ಮೆ ಬಾಕ್ಸಾಫೀಸ್ ಕಿಂಗ್ ಅನ್ನುವುದನ್ನು ಸಾಬೀತು ಮಾಡಿದ್ದಾರೆ.

RRR 500 ಕೋಟಿ ಲೂಟಿ

RRR 500 ಕೋಟಿ ಲೂಟಿ

ಮೂರೇ ದಿನದಲ್ಲಿ RRR ಸಿನಿಮಾ 500 ಕೋಟಿ ಕ್ಲಬ್ ಸೇರಿದೆ. ಇಂತಹದ್ದೊಂದು ಸಾಧನೆಯನ್ನು ಬಾಲಿವುಡ್‌ನ ಯಾವುದೇ ಸಿನಿಮಾ ಕೂಡ ಮಾಡಿಲ್ಲ. ವಿಶ್ವದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗಿದ್ದ RRR ಭರ್ಜರಿ ಕಲೆಕ್ಷನ್ ಮಾಡಿದೆ. ಇಷ್ಟು ದಿನ ಕಾದು ಸಿನಿಮಾವನ್ನು ಬಿಡುಗಡೆ ಮಾಡಿದ್ದಕ್ಕೂ ಚಿತ್ರತಂಡಕ್ಕೆ ಸಾರ್ಥವೆನಿಸಿದೆ. RRR ಸಿನಿಮಾದ ಆಟ ಇನ್ನೂ ನಿಂತಿಲ್ಲ. ಗ್ಲೋಬಲ್ ಲೆವೆಲ್‌ನಲ್ಲಿ ಈ ಸಿನಿಮಾದ ಗಳಿಕೆ ಹೊಸ ದಾಖಲೆ ಎಂದೇ ಹೇಳಲಾಗುತ್ತಿದೆ. ಸದ್ಯ ವಿಶ್ವದಾದ್ಯಂತ ಮೂರು ಭಾಷೆಗಳಲ್ಲಿ, ಮೂರು ದಿನಗಳಲ್ಲಿ 500 ಕೋಟಿ ಲೂಟಿ ಮಾಡಿದೆ.

RRR ಹಿಂದಿ ವರ್ಷನ್ 30 ಕೋಟಿ

RRR ಹಿಂದಿ ವರ್ಷನ್ 30 ಕೋಟಿ

ಕೊರೊನಾ ಬಳಿಕ ಭಾರತೀಯ ಚಿತ್ರರಂಗಕ್ಕೆ ಹೊಸ ಹುರುಷು ಬಂದಿದೆ. ಮತ್ತೆ ಭಾರತೀಯ ಚಿತ್ರರಂಗ ಚಿಗುರಿಕೊಂಡಿದೆ. RRR ಬಿಡುಗಡೆ ಬಳಿಕ ಬಾಲಿವುಡ್ ಬಾಕ್ಸಾಫೀಸ್ ಕೂಡ ಚಿಂದಿ ಉಡಾಯಿಸಿದೆ. ಭಾನುವಾರ( ಮಾರ್ಚ್ 27) ಒಂದೇ ದಿನ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ 31.50 ಕೋಟಿ ಗಳಿಕೆ ಕಂಡಿದೆ. ಇದು ಕೊರೊನಾ ಬಳಿಕ ಅತೀ ಹೆಚ್ಚು ಗಳಿಕೆ ಕಂಡ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ. ಇಲ್ಲಿವರೆಗೂ RRR ಹಿಂದಿ ವರ್ಷನ್ ಸುಮಾರು 74.50 ಕೋಟಿ ಗಳಿಕೆ ಕಂಡಿದೆ.

ಭಾನುವಾರದ ಗಳಿಕೆಯಲ್ಲೂ ಮೇಲು

ಭಾನುವಾರದ ಗಳಿಕೆಯಲ್ಲೂ ಮೇಲು

RRR ಸಿನಿಮಾ ಕೊರೊನಾ ಬಳಿಕ ಭಾನುವಾರದಂದು ಹೆಚ್ಚು ಬ್ಯುಸಿನೆಸ್ ಮಾಡಿದ ಸಿನಿಮಾಗಳ ಪಟ್ಟಿ ಸೇರಿದೆ. ಭಾನುವಾರ ಹೆಚ್ಚು ಗಳಿಕೆ ಕಂಡ 5 ಸಿನಿಮಾಗಳ ಪೈಕಿ RRR ಮೊದಲ ಸ್ಥಾನದಲ್ಲಿದೆ. 'ದಿ ಕಾಶ್ಮೀರ್ ಫೈಲ್ಸ್' 15.10 ಕೋಟಿ, 'ಗಂಗೂಬಾಯಿ ಕಾಠಿಯಾವಾಡಿ ' 15.30 ಕೋಟಿ, '83' 17.41 ಕೋಟಿ, 'ಸೂರ್ಯವಂಶಿ' 26.94 ಕೋಟಿ ಹಾಗೂ RRR 31.50 ಕೋಟಿ ಗಳಿಕೆ ಕಾಣುವ ಮೂಲಕ ಮೊದಲ ಸ್ಥಾನದಲ್ಲಿದೆ.

ಬದಲಾಯಿತು ಭಾರತೀಯ ಚಿತ್ರರಂಗದ ದಿಕ್ಕು

ಬದಲಾಯಿತು ಭಾರತೀಯ ಚಿತ್ರರಂಗದ ದಿಕ್ಕು

RRR ಸಿನಿಮಾ ಮೂಲಕ ಭಾರತೀಯ ಚಿತ್ರರಂಗ ದಿಕ್ಕು ಮತ್ತೆ ಬದಲಾಗಿದೆ. ಸೋಲಿನ ಸುಳಿಗೆ ಸಿಕ್ಕು ನಲುಗಿ ಹೋಗಿದ್ದ ಚಿತ್ರರಂಗಕ್ಕೆ ಹೊಸ ಹರುಷು ಸಿಗುತ್ತಿದೆ. ವಿಶ್ವದಾದ್ಯಂತ 500 ಕೋಟಿ ಲೂಟಿ ಮಾಡಿರುವುದು ಭಾರತೀಯ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ಸಿಕ್ಕಂತಾಗಿದೆ.

More from Filmibeat

English summary
Jr.Ntr Ramcharan starrer Rajamouli directed RRR movie day 3 worldwide Boxoffice Collection. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X