Devara Box Office Day 2: ಸಿಂಗಲ್ ಆಗಿ ಬಂದು ಧೂಳೆಬ್ಬಿಸಿದ ಜೂ.ಎನ್‌ಟಿಆರ್: 2ನೇ ದಿನದ 'ದೇವರ' ಕಲೆಕ್ಷನ್ ಎಷ್ಟು?

ಜೂ.ಎನ್‌ಟಿಆರ್ ಸೋಲೊ ಹೀರೋ ಆಗಿ ಸಿನಿಮಾ ಮಾಡದೇ ಆರು ವರ್ಷಗಳಾಗಿತ್ತು. ಇದೇ ವಿಷಯವನ್ನೇ ಇಟ್ಟುಕೊಂಡು ರಾಮ್‌ ಚರಣ್ ಅಭಿಮಾನಿಗಳು ಜೂ.ಎನ್‌ಟಿಆರ್ ಫ್ಯಾನ್ಸ್ ಕಾಲೆಳೆದಿದ್ದರು. ಅದಕ್ಕೀಗ ಉತ್ತರ ಸಿಕ್ಕಿದೆ. 'ದೇವರ' ಅವತಾರವೆತ್ತಿ ಸಿಂಗಲ್ ಬಂದು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸುತ್ತಿದ್ದಾರೆ.

'ದೇವರ' ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಪ್ರೀಮಿಯರ್, ಫ್ಯಾನ್ಸ್ ಶೋ, ಸ್ಪೆಷಲ್ ಶೋ ಅಂತ ಟಾಲಿವುಡ್‌ನಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿತ್ತು. ಎರಡನೇ ದಿನ ಈ ಸಿನಿಮಾಗೆ ಮೊದಲ ದಿನದಷ್ಟು ದೊಡ್ಡ ಕಲೆಕ್ಷನ್ ಸಿಗದೇ ಹೋದರೂ, ಗಳಿಕೆಯಲ್ಲಿ ಕಮ್ಮಿ ಅಂತೇನೂ ಆಗಿಲ್ಲ.

Jr NTR starrer Devara worldwide and Karnataka Box Office Collection Day 2 Report

ಜೂ.ಎನ್‌ಟಿಆರ್ 'ದೇವರ' ದಕ್ಷಿಣ ಭಾರತದ ಅಷ್ಟೇ ಅಲ್ಲ ಹಿಂದಿ ಬೆಲ್ಟ್‌ನಲ್ಲಿಯೂ ಸೂಪರ್ ಕಲೆಕ್ಷನ್ ಮಾಡಿದೆ. ಮೊದಲನೇ ದಿನಕ್ಕಿಂತ ಎರಡನೇ ದಿನದ ಕಲೆಕ್ಷನ್‌ನಲ್ಲಿ ಏರಿಕೆ ಕಂಡಿರುವುದು ಮತ್ತೊಂದು ವಿಶೇಷ. ಹಾಗಿದ್ದರೆ, ಎರಡನೇ ದಿನದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ? ಕರ್ನಾಟಕದಲ್ಲಿ ಎರಡನೇ ದಿನ ಎಷ್ಟು ಗಳಿಕೆ ಮಾಡಿದೆ? ತಿಳಿಯಲು ಮುಂದೆ ಓದಿ..

'ದೇವರ' 2ನೇ ದಿನದ ಕಲೆಕ್ಷನ್ ಎಷ್ಟು?

ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಜೋಡಿಯ ಸಿನಿಮಾ 'ದೇವರ' ಬಾಕ್ಸಾಫೀಸ್‌ ಲೂಟಿ ಮಾಡಿದೆ. ಮೊದಲ ದಿನ ವಿಶ್ವದಾದ್ಯಂತ ಸುಮಾರು 172 ಕೋಟಿ ರೂಪಾಯಿ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅದೇ ಸಿನಿಮಾಗಳ ಟ್ರೇಡಿಂಗ್ ವೆಬ್‌ ಸೈಟ್ Sacnilk 140 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಮಿಶ್ರ ಪ್ರತಿಕ್ರಿಯೆ ಹೊರತಾಗಿಯೂ ಈ ಸಿನಿಮಾ ಎರಡನೇ ದಿನವೂ ಆ ಕ್ರೇಜ್ ಅನ್ನು ಹಾಗೇ ಉಳಿಸಿಕೊಂಡಿದೆ. ವರ್ಲ್ಡ್‌ವೈಡ್ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಒಟ್ಟು 220 ಕೋಟಿ ರೂಪಾಯಿ ದಾಟಿದೆ.

2ನೇ ದಿನ ಹಿಂದಿ ಬೆಲ್ಟ್‌ಗಳಲ್ಲಿ ಏರಿಕೆ?

ಜೂ.ಎನ್‌ಟಿಆರ್‌ಗೆ RRR ಸಿನಿಮಾ ಬಳಿಕ ಹಿಂದಿ ಬೆಲ್ಟ್‌ಗಳಲ್ಲೀ ಏರಿಕೆ ಆಗಿದೆ. ಮೊದಲನೇ ದಿನಕ್ಕಿಂತ ಎರಡನೇ ದಿನ ಸಿನಿಮಾ ಕಲೆಜ್ಷನ್ ಭರ್ಜರಿಯಾಗಿದೆ. ಮೊದಲನೇ ದಿನ ಈ ಸಿನಿಮಾ ಹಿಂದಿ ಏರಿಯಾಗಳಿಂದ 7 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಅದೇ ಎರಡನೇ ದಿನ ಇದೇ ಏರಿಯಾಗಳಲ್ಲಿ 9.5 ಕೋಟಿ ರೂಪಾಯಿ ಗಳಿಕೆ ಕಂಡಿದೆ. ಎರಡೂ ದಿನಗಳಿಂದ ಈ ಏರಿಯಾಗಳಲ್ಲಿ 16.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

Jr NTR starrer Devara worldwide and Karnataka Box Office Collection Day 2 Report

ಕರ್ನಾಟಕದ ಕಲೆಕ್ಷನ್ ಎಷ್ಟು?

ಇನ್ನು ಕರ್ನಾಟಕದಲ್ಲಿ 'ದೇವರ' ಸಿನಿಮಾ ಕಲೆಕ್ಷನ್ ಭರ್ಜರಿಯಾಗಿದೆ. ಮೊದಲ ದಿನ ಈ ಸಿನಿಮಾದ ಕಲೆಕ್ಷನ್ ಸುಮಾರು 8 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಆಗಿದ್ದು ಟ್ರೇಡ್ ಎಕ್ಸ್‌ಪರ್ಟ್‌ ಲೆಕ್ಕ ಹಾಕಿದ್ದರು. ಅದೇ ಎರಡನೇ ದಿನ ಗಳಿಕೆಯಲ್ಲಿ ಇಳಿಕೆ ಕಂಡಿದ್ದರೂ, 5 ಕೋಟಿ ಯಿಂದ 6 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಸಿರಬಹುದೆಂದು ಕರ್ನಾಟಕದ ವಿತರಕರು ಲೆಕ್ಕ ಹಾಕಿದ್ದಾರೆ.

300 ಕೋಟಿ ಕ್ಲಬ್ ಮೇಲೆ ಕಣ್ಣು

ಎರಡು ದಿನಗಳಲ್ಲಿ 'ದೇವರ' ಸಿನಿಮಾದ ಕಲೆಕ್ಷನ್ ಅದ್ಭುತವಾಗಿದ್ದು, 220 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇಂದು (ಸೆಪ್ಟೆಂಬರ್ 29)ರಂದು ವೀಕೆಂಡ್ ಆಗಿದ್ದರಿಂದ ಸುಮಾರು 300 ಕೋಟಿ ರೂಪಾಯಿ ಗಳಿಕೆ ಮಾಡುವ ಗುರಿ ಇಟ್ಟುಕೊಂಡಿದೆ. ಹೀಗಾಗಿ 300 ಕೋಟಿ ರೂಪಾಯಿ ಕ್ಲಬ್ ಸೇರಿದರೆ, ಜೂ.ಎನ್‌ಟಿಆರ್ ಸಿನಿಮಾ ಹೊಸ ದಾಖಲೆಯನ್ನು ಬರೆದಂತೆಯೇ. 300 ಕೋಟಿ ರೂಪಾಯಿ ಲೂಟಿ ಮಾಡುತ್ತಾ? ಅನ್ನೋದೇ ಪ್ರಶ್ನೆ.

Links

More from Filmibeat

Read more about: ntr box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X