Devara Box Office Day 7: 6ನೇ ದಿನ ಶೇ.40ರಷ್ಟು ಏರಿಕೆ.. 7ನೇ ದಿನ ಶೇ. 65ರಷ್ಟು ಇಳಿಕೆ; ಕರ್ನಾಟಕದಲ್ಲೂ ಹೀಗೆನಾ?

ಜೂ. ಎನ್‌ಟಿಆರ್‌ಗೆ RRR ಸಿನಿಮಾ ಗ್ಲೋಬಲ್ ಇಮೇಜ್ ಕೊಟ್ಟ ಸಿನಿಮಾ. ರಾಜಮೌಳಿ ನಿರ್ದೇಶನದ ಈ ಸಿನಿಮಾದಿಂದ ಯಂಗ್ ಟೈಗರ್‌ಗೆ ವಿಶ್ವ ಮಟ್ಟದಲ್ಲಿ ಗುರುತು ಸಿಗುವಂತಾಗಿದೆ. ಇದೇ ಇಮೇಜ್ ಇಟ್ಟುಕೊಂಡು ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಜೂ.ಎನ್‌ಟಿಆರ್ ಮುಂದಾಗಿದ್ದರು. ಆ ಸಿನಿಮಾವೇ 'ದೇವರ'.

ಇಡೀ ಭಾರತೀಯ ಚಿತ್ರರಂಗವೇ 'ದೇವರ' ಸಿನಿಮಾ ಮೇಲೆ ಕಣ್ಣಿಟ್ಟು ಕೂತಿತ್ತು. ಜೂ.ಎನ್‌ಟಿಆರ್ ಮತ್ತೆ ಗ್ಲೋಬಲ್ ಮಟ್ಟಲ್ಲಿ ಮಿಂಚುತ್ತಾರಾ? ಅನ್ನೋ ಪ್ರಶ್ನೆನೂ ಎದ್ದಿತ್ತು. ಆದರೆ, ಚಿತ್ರತಂಡ ಹಿಂದಿ ಏರಿಯಾಗೆ ಸ್ಕೆಚ್ ಹಾಕಿ ಸಿನಿಮಾ ನಿರ್ಮಾಣ ಮಾಡಿದಂತೆ ಇತ್ತು. ಅದಕ್ಕೆ ತಕ್ಕಂತೆ ಜಾಹ್ನವಿ ಕಪೂರ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಸೈಫ್ ಅಲಿಖಾನ್ ಎಂಟ್ರಿ ಆಗಿತ್ತು.

Jr NTR starrer Devara worldwide and Karnataka Box Office collection Day 7 Report

'ಆಚಾರ್ಯ'ದಂತಹ ಅತೀ ದೊಡ್ಡ ಫ್ಲಾಪ್ ಸಿನಿಮಾ ಕೊಟ್ಟಿದ್ದ ಕೊರಟಾಲ ಶಿವಗೆ ದೊಡ್ಡ ಸಕ್ಸಸ್ ಬೇಕಿತ್ತು. ಜೂ.ಎನ್‌ಟಿಆರ್‌ಗೆ ಸಿಕ್ಕಿರುವ ಸಕ್ಸಸ್ ಉಳಿಸಿಕೊಳ್ಳಬೇಕಿತ್ತು. 'ದೇವರ' ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಆದರೆ, ಏಳನೇ ದಿನಕ್ಕೆ ಭಾರೀ ಇಳಿಕೆ ಕಂಡಿದ್ದು, ಜೂ.ಎನ್‌ಟಿಆರ್ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಹಾಗಿದ್ದರೆ, ಏಳನೇ ದಿನ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಪರ್ಸಂಟೇಜ್ ಕುಸಿತ ಕಂಡಿದೆ? ಗಳಿಸಿದ್ದು ಎಷ್ಟು? ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ತಿಳಿಯಲು ಮುಂದೆ ಓದಿ..

7ನೇ ದಿನ 'ದೇವರ' ಕಲೆಕ್ಷನ್ ಎಷ್ಟು?

'ದೇವರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಮೊದಲ ಆರು ದಿನ ಸಿನಿಮಾ ಗಳಿಕೆ ಚೆನ್ನಾಗಿಯೇ ಇತ್ತು. ಆದರೆ, ನಿನ್ನೆ (ಅಕ್ಟೋಬರ್ 3) ಅಂದರೆ ಏಳನೇ ದಿನ ಸಿನಿಮಾ ಗಳಿಕೆಯಲ್ಲಿ ಶೇ.65ರಷ್ಟು ಕಂಡಿದೆ. ಇಂಡಸ್ಟ್ರೀ ಟ್ರ್ಯಾಕರ್ sacnilk ಪ್ರಕಾರ 7ನೇ ದಿನ 'ದೇವರ' ಸಿನಿಮಾದ ಕಲೆಕ್ಷನ್ ಕೇವಲ 7.25 ಕೋಟಿ ರೂಪಾಯಿ. ಅದೇ ಆರನೇ ದಿನ ಈ ಸಿನಿಮಾದ ಕಲೆಕ್ಷನ್ 21 ಕೋಟಿ ರೂಪಾಯಿ ಇತ್ತು.

Jr NTR starrer Devara worldwide and Karnataka Box Office collection Day 7 Report

ಕರ್ನಾಟಕದಲ್ಲಿ ಹೇಗಿದೆ ಕಲೆಕ್ಷನ್?

ಜೂ.ಎನ್‌ಟಿಆರ್‌ಗೆ ಕರ್ನಾಟಕದಲ್ಲೂ ಫ್ಯಾನ್ಸ್ ಇದ್ದಾರೆ. ಹೀಗಾಗಿ ಆರಂಭದ ದಿನಗಳಲ್ಲಿ 'ದೇವರ' ಕಲೆಕ್ಷನ್ ಚೆನ್ನಾಗಿ ಆಗಿದೆ. ಒಂದು ಅಂದಾಜಿನ ಪ್ರಕಾರ ಇಲ್ಲಿವರೆಗೂ ಕೇವಲ ಕರ್ನಾಟಕದಲ್ಲಿ 30 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಕಂಡಿರಬಹುದೆಂದು ವಿತರಕರು ಹೇಳುತ್ತಾರೆ. ಹಾಗೇ ಏಳನೇ ದಿನ ರಾಜ್ಯದಲ್ಲಿ ಅತೀ ಕಡಿಮೆ ಅಂದರೆ, 60 ರಿಂದ 70 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವಿತರಕರು ಹೇಳುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ವಿತರಿಸಿರುವ ಕೆವಿಎನ್ ಪ್ರೊಡಕ್ಷನ್ ಅಧಿಕೃತ ಮಾಹಿತಿ ನೀಡಿಲ್ಲ.

ಹಿಂದಿ ಏರಿಯಾದಲ್ಲಿ ಮಸ್ತ್ ಕಲೆಕ್ಷನ್

ಜೂ.ಎನ್‌ಟಿಆರ್ ಸಿನಿಮಾಗೆ ಹಿಂದಿ ಏರಿಯಾಗಳಲ್ಲಿ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಹಿಂದಿ ಬೆಲ್ಟ್‌ನಲ್ಲಿ ಏಳನೇ ದಿನ 2 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ. ಈ ಮೂಲಕ ಸಿನಿಮಾ ಕಲೆಕ್ಷನ್ ಏಳು ದಿನಕ್ಕೆ 43 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಏಳನೇ ದಿನದ ಒಟ್ಟು 7.25 ಕೋಟಿ ರೂಪಾಯಿಯಲ್ಲಿ ಹಿಂದಿ ಏರಿಯಾದಿಂದಲೇ 2 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟು?

'ದೇವರ' ಭಾರತದಲ್ಲಿ ಏಳು ದಿನಕ್ಕೆ 215.6 ಕೋಟಿ ರೂಪಾಯಿ (nett) ಕಲೆಕ್ಷನ್ ಮಾಡಿದೆ. ಅದೇ ವಿಶ್ವದಾದ್ಯಂತ 370 ಕೋಟಿ ರೂಪಾಯಿ (nett) ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಏಳು ದಿನದಲ್ಲಿಯೇ 'ದೇವರ' ಯಶಸ್ಸು ಕಂಡಿದೆ. ನವರಾತ್ರಿ ಶುರುವಾದ ಬೆನ್ನಲ್ಲೇ 'ದೇವರ' ಗಳಿಕೆಯಲ್ಲಿ ಮತ್ತೆ ಏರಿಕೆ ಆಗಬಹುದೆಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Jr.NTR starrer Devara worldwide and Karnataka Box Office collection Day 7 Report:
Read more about: ntr box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X