Devara Box Office Day 5: 5ನೇ ದಿನವೂ 'ದೇವರ' ಅಬ್ಬರ; ಕರ್ನಾಟಕದ ಕಲೆಕ್ಷನ್ ಎಷ್ಟು?
ಜೂ.ಎನ್‌ಟಿಆರ್ ಸಿನಿಮಾ 'ದೇವರ' ಬಾಕ್ಸಾಫೀಸ್ ಕಲೆಕ್ಷನ್ ಸಿನಿಮಾ ಮಂದಿಯ ಗಮನ ಸೆಳೆಯುತ್ತಿದೆ. ಮೊದಲ ಮೂರು ದಿನ ಗಲ್ಲಾಪಟ್ಟಿಗೆಯಲ್ಲಿ ಚಿಂದಿ ಉಡಾಯಿಸಿದ್ದ ಸಿನಿಮಾ 4ನೇ ದಿನ ಕುಸಿತ ಕಂಡಿತ್ತು. ಮೊದಲ ಸೋಮವಾರದ ಪರೀಕ್ಷೆಯಲ್ಲಿ ಹಿಂದೆ ಬಿದ್ದಿತ್ತು. ಇದು ಚಿತ್ರತಂಡಕ್ಕೆ ಕೊಂಚ ಮಟ್ಟಿಗೆ ಆತಂಕ ಹುಟ್ಟಾಕಿತ್ತು.
ಆದರೆ, ಐದನೇ ದಿನ 'ದೇವರ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮತ್ತೆ ಚೇತರಿಸಿಕೊಂಡಿದೆ. ಸಂಜೆ ಮೇಲಿನ ಶೋಗಳು ಬಾಕ್ಸಾಫೀಸ್‌ನಲ್ಲಿ ಮ್ಯಾಜಿಕ್ ಮಾಡಿವೆ. ಜನರು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುವುದಕ್ಕೆ ಶುರು ಮಾಡಿದ್ದಾರೆ. ಹಿಂದಿ ಬೆಲ್ಟ್‌ನಲ್ಲಿ ಜೂ.ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಜೋಡಿಯ 'ದೇವರ'ಗೆ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ನಿನ್ನೆ (ಅಕ್ಟೋಬರ್ 1) 'ದೇವರ' ಎಲ್ಲಾ ಏರಿಯಾಗಳಲ್ಲೂ ಗಳಿಕೆಯಲ್ಲಿ ಏರಿಕೆ ಕಂಡಿದೆ. ತೆಲುಗು ಹಾಗೂ ಹಿಂದಿ ಸರ್ಕ್ಯೂಟ್‌ನಲ್ಲಿ ಈ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲೂ ಹಿಂದಿ ಬೆಲ್ಟ್‌ನಲ್ಲಿ ಏರಿಕೆ ಕಂಡಿದ್ದು ಸಿನಿಮಾದ ಗಳಿಕೆಯಲ್ಲಿ ಮತ್ತಷ್ಟು ಏರಿಕೆ ಕಂಡಿದೆ. ಇದರೊಂದಿಗೆ ಇಂದು (ಅಕ್ಟೊಬರ್ 2) ದೇಶಾದ್ಯಂತ ರಜೆ ಇರುವುದರಿಂದ ಗಳಿಕೆಯಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ.
5ನೇ ದಿನದ ಕಲೆಕ್ಷನ್ ಎಷ್ಟು?
ಜೂ. ಎನ್‌ಟಿಆರ್ 'ದೇವರ' ಮತ್ತೆ ಟ್ರ್ಯಾಕ್‌ಗೆ ಬಂದಿದೆ. ಸೂಪರ್ ಓಪನ್ ಪಡೆದ ಬಳಿಕ ವಾರದ ಆರಂಭದ ದಿನವೇ ಕಲೆಕ್ಷನ್ ಡ್ರಾಪ್ ಆಗಿತ್ತು. ಆದರೆ, ಮಂಗಳವಾರ ಸಂಜೆ ವೇಳೆಗೆ ಜನರು ಥಿಯೇಟರ್‌ಗೆ ಬರುವುದಕ್ಕೆ ಶುರು ಮಾಡಿದ್ದರು. ಹೀಗಾಗಿ ಸೋಮವಾರಕ್ಕಿಂತ ಮಂಗಳವಾರ ಗಳಿಕೆಯಲ್ಲಿ ಏರಿಕೆಯಾಗಿದೆ. ಬಾಕ್ಸಾಫೀಸ್ ಟ್ರಾಕ್ ಮಾಡುವ Sacnilk ಪ್ರಕಾರ ಐದನೇ ದಿನ 'ದೇವರ' ಸಿನಿಮಾದ ಕಲೆಕ್ಷನ್ 13.5 ಕೋಟಿ ರೂಪಾಯಿ (Nett) ಕಲೆಕ್ಷನ್ ಆಗಿದೆ. ಕರ್ನಾಟಕದಲ್ಲೂ ಕಲೆಕ್ಷನ್ ಚೆನ್ನಾಗಿದ್ದು, ಶೇ. 21ರಷ್ಟು ಕಲೆಕ್ಷನ್ ಆಗಿದೆ. ಈ ಮೂಲಕ 2.5 ರಿಂದ 3 ಕೋಟಿ ಕಲೆಕ್ಷನ್ ಆಗಿರಬಹುದೆಂದು ನಿರೀಕ್ಷೆ ಮಾಡಲಾಗಿದೆ.

ವಿಶ್ವದಾದ್ಯಂತ ಕಲೆಕ್ಷನ್ ಎಷ್ಟಾಯ್ತು?
ಭಾರತದಾದ್ಯಂತ 'ದೇವರ' ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆಯಾಗಿದೆ. ಐದು ದಿನಗಳಲ್ಲಿ ಭಾರತದ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ 186 ಕೋಟಿ ರೂಪಾಯಿ (Nett) ಕಲೆಕ್ಷನ್ ಆಗಿದೆ. ಹಾಗೇ ವಿಶ್ವದಾದ್ಯಂತ 340 ಕೋಟಿ ರೂಪಾಯಿ ಗಳಿಸಿದೆ. 'ದೇವರ' ತೆಲುಗು ವರ್ಷನ್ ಹಾಗೂ ಹಿಂದಿ ವರ್ಷನ್ ಗಳಿಕೆಯಲ್ಲಿ ಏರಿಕೆ ಕಂಡಿದೆ. ಈ ಮೂಲಕ ಈ ವರ್ಷದ ಎರಡನೇ ಅತೀ ದೊಡ್ಡ ಸಿನಿಮಾ ಆಗುವ ಸಾಧ್ಯತೆಯಿದೆ.
ಹಿಂದಿ ಏರಿಯಾಗಳಲ್ಲಿ ಮಸ್ತ್ ಕಲೆಕ್ಷನ್
ಜೂ.ಎನ್‌ಟಿಆರ್, ಜಾಹ್ನವಿ ಕಪೂರ್ ಹಾಗೂ ಸೈಫ್ ಅಲಿ ಖಾನ್ ಕಾಂಬಿನೇಷನ್ ವರ್ಕ್ ಔಟ್ ಆಗಿದೆ. ಹಿಂದಿ ಏರಿಯಾಗಳಲ್ಲಿ ಈ ಸ್ಟಾರ್ ಕಾಸ್ಟ್ ನೋಡುವುದಕ್ಕೆ ಜನರು ಆಸಕ್ತಿ ತೋರುತ್ತಿದ್ದಾರೆ. ಐದನೇ ದಿನ ಹಿಂದಿ ಏರಿಯಾದಲ್ಲಿ ಶೇ.12.5ರಷ್ಟು ಏರಿಕೆ ಕಂಡಿದ್ದು, 4.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರಿದಿಯಾಗಿದೆ. ಈ ಮೂಲಕ ಕೇವಲ ಹಿಂದಿ ಏರಿಯಾಗಳಿಂದಲೇ 38.40 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.
ಗಾಂಧಿ ಜಯಂತಿ ಮೇಲೆ ಕಣ್ಣು
ಸೋಲಿನ ಸುಳಿಗೆ ಸಿಲುಕಿದ್ದ ನಿರ್ದೇಶಕ ಕೊರಟಾಲ ಶಿವಗೆ ಮತ್ತೆ ಈ ಸಿನಿಮಾದಿಂದ ಸಕ್ಸಸ್ ಸಿಕ್ಕಿದೆ. ಜೂ.ಎನ್‌ಟಿಆರ್ ಜೊತೆ ಮತ್ತೊಂದು ಸಕ್ಸಸ್ ಸಿಕ್ಕಂತಾಗಿದೆ. ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ ಆಗಿರುವುದರಿಂದ ದೇಶಾದ್ಯಂತ ರಜೆ ಇದೆ. ಹೀಗಾಗಿ ಇಂದು ಕೂಡ ಭರ್ಜರಿ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.


Click it and Unblock the Notifications











