ಜೂ. ಎನ್‌ಟಿಆರ್ ಕಟೌಟ್ ಗೆ ಬೆಂಕಿ: ಥಿಯೇಟರ್‌ನಲ್ಲಿ ಜನರು ಸಿನಿಮಾ ನೋಡುವಾಗಲೇ ಘಟನೆ.. ಎಲ್ಲಿ? ಹೇಗಾಯ್ತು?
ಜೂ.ಎನ್‌ಟಿಆರ್ ಹಾಗೂ ಕೊರಟಾಲ ಶಿವ ಕಾಂಬಿನೇಷನ್ ಸಿನಿಮಾ 'ದೇವರ' ಅದ್ಧೂರಿಯಾಗಿ ರಿಲೀಸ್ ಆಗಿದೆ. ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ತೆರೆಕಂಡಿದ್ದು, ಮೊದಲ ದಿನವೇ ಈ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಎನ್‌ಟಿಆರ್ ಸಿನಿಮಾವನ್ನು ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದಾರೆ. ರಿಲೀಸ್‌ಗೂ ಮುನ್ನವೇ ಈ ಸಿನಿಮಾಗೆ ಅಡ್ವಾನ್ಸ್ ಬುಕಿಂಗ್ ಕೂಡ ಮಾಡಿದ್ದರು.
ಟಾಲಿವುಡ್‌ನ ಮ್ಯಾನ್ ಆಫ್ ಮಾಸ್ ಜೂ.ಎನ್‌ಟಿಆರ್ ಸುಮಾರು ಆರು ವರ್ಷಗಳ ಬಳಿಕ ಸೋಲೊ ಹೀರೋ ಆಗಿ ತೆರೆಮೇಲೆ ಬರುತ್ತಿದ್ದಾರೆ. RRR ಸಿನಿಮಾ ಬಳಿಕ ಸಿಕ್ಕಿರುವ ಪ್ಯಾನ್ ಇಂಡಿಯಾ ಇಮೇಜ್ ಅನ್ನು ಈ ಸಿನಿಮಾ ಬಳಸಿಕೊಳ್ಳುವಲ್ಲಿ ಯಶಸ್ವಿ ಆಯ್ತಾ ಅನ್ನೋದು ಇನ್ನು ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ.

ಜೂ.ಎನ್‌ಟಿಆರ್‌ಗೆ ನಾಯಕಿಯಾಗಿ ಜಾಹ್ನವಿ ಕಪೂರ್ ನಟಿಸಿದ್ದು, 'ದೇವರ' ಎರಡು ಪಾರ್ಟ್‌ಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಪಾರ್ಟ್ ಇಂದು (ಸೆಪ್ಟೆಂಬರ್ 27) ರಿಲೀಸ್ ಆಗಿದೆ. ಸಿನಿಮಾ ಬಿಡುಗಡೆಗೂ ಒಂದು ಮುನ್ನವೇ ಈ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಥಿಯೇಟರ್ ಮುಂದೆ ಕಾದು ನಿಂತಿದ್ದರು. ಆದರೆ, ಸಿನಿಮಾ ಬಿಡುಗಡೆಯಾದ ಮೊದಲ ದಿನವೇ ಕೆಲವೆಡೆ ಅವಘಡಗಳು ನಡೆದಿವೆ. ಆ ಘಟನೆ ಏನು ಅಂತ ನೋಡುವುದಾದರೇ..
RRR ಬಳಿಕ ರಿಲೀಸ್ ಆಗುತ್ತಿರುವ ಜೂ.ಎನ್‌ಟಿಆರ್ ಸಿನಿಮಾ ಸಹಜವಾಗಿ ಹೈಪ್ ಕ್ರಿಯೇಟ್ ಮಾಡಿತ್ತು. ಅಡ್ವಾನ್ಸ್ ಬುಕಿಂಗ್‌ನಲ್ಲೂ ಈ ಸಿನಿಮಾ ದಾಖಲೆಯನ್ನು ಬರೆದಿತ್ತು. ಸುಮಾರು 10 ಲಕ್ಷ ಟಿಕೆಟ್‌ಗಳು ಬುಕ್ ಮೈ ಶೋನಿಂದಲೇ ಮಾರಾಟ ಆಗಿದ್ದವು. ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಟಿಕೆಟ್ ಮಾರಾಟ ಆಗಿದ್ದಾಗಿ ಬುಕ್ ಮೈ ಶೋ ಹೇಳಿಕೊಂಡಿದೆ. ಈ ಕಾರಣಕ್ಕೆ ಮೊದಲ ದಿನವೇ ಸಿನಿಮಾ ಕಲೆಕ್ಷನ್ ಕೂಡ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿದೆ.
ಇನ್ನೊಂದು ಕಡೆ ತೆಲಂಗಾಣದ ಹೈದರಾಬಾದ್‌ನಲ್ಲಿ ಹಲವು ಕಡೆಗಳಲ್ಲಿ ಸಿನಿಮಾ ಶೋಗಳನ್ನು ಹೆಚ್ಚಿಸಲಾಗಿದೆ. ಹೆಚ್ಚೆಚ್ಚು ಫ್ಯಾನ್ಸ್ ಶೋಗಳಿಗೆ ಅವಕಾಶವನ್ನು ನೀಡಲಾಗಿತ್ತು. ಈ ಸಂಬಂಧ ಅಭಿಮಾನಿಗಳು ಮಧ್ಯರಾತ್ರಿಯಿಂದಲೇ ಸಿನಿಮಾವನ್ನು ನೋಡುವುದಕ್ಕೆ ಆರಂಭಿಸಿದ್ದರು. ಕೆಲವು ಥಿಯೇಟರ್‌ಗಳಲ್ಲಂತೂ ಇಂದಿನ (ಸೆಪ್ಟೆಂಬರ್ 27) ಪ್ರತಿ ಶೋಗಳು ಕೂಡ ಫುಲ್ ಆಗಿದ್ದವು.
ಇದೇ ವೇಳೆ ಕಿಕ್ಕಿರಿದು ಸೇರಿದ್ದ ಚಿತ್ರಮಂದಿರವೊಂದರಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡಿತ್ತು. ಯಾರೋ ಕಿಡಿಗೇಡಿಗಳು ಸಿನಿಮಾ ಪ್ರದರ್ಶನ ಕಾಣುವಾಗ ಪಟಾಕಿಯನ್ನು ಸಿಡಿಸಿದ್ದರು. ಇದರಿಂದ ಬಿಂಕಿ ಥಿಯೇಟರ್ ಮುಂದೆ ಬೃಹತ್ ಎತ್ತರದಲ್ಲಿ ನಿಲ್ಲಿಸಿದ್ದ ಕಟೌಟ್‌ಗೆ ಬೆಂಕಿ ಹತ್ತಿಕೊಂಡಿತ್ತು. ಈ ಸಮಯದಲ್ಲಿ ಥಿಯೇಟರ್ ಜನರಿಂದ ಕಿಕ್ಕಿರಿದು ತುಂಬಿತ್ತು ಎನ್ನಲಾಗಿದೆ. ಸದ್ಯ ಅಂತಹ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ವರದಿಯಾಗಿದೆ.
ಇನ್ನು ಜೂ.ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಕಾಂಬಿನೇಷನ್‌ಗೆ ಪ್ರೇಕ್ಷಕರು ಮನಸೋತಿದ್ದಾರೆ. ಪಕ್ಕಾ ಮಾಸ್ ರಗಡ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೊದಲನೇ ದಿನ ದೊಡ್ಡ ಮಟ್ಟದಲ್ಲಿ ಗಳಿಕೆ ಕಂಡಿದೆ. ಆದರೆ, ವೀಕೆಂಡ್‌ನಲ್ಲಿ ಎಷ್ಟು ಕಲೆಕ್ಷನ್ ಮಾಡುತ್ತೆ? ತನ್ನ ನೆಚ್ಚಿನ ನಟನ ಸಿನಿಮಾ ಏನೆಲ್ಲ ದಾಖಲೆಗಳನ್ನು ಬರೆಯಬಹುದು ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











