Kalki 2898 AD box office: 2ನೇ ದಿನ ಕಲ್ಕಿ ಗಳಿಕೆಯಲ್ಲಿ ಇಳಿಕೆ; ಕರ್ನಾಟಕದಲ್ಲಿ ಹೇಗಿದೆ ಕಲೆಕ್ಷನ್?
ಕರ್ನಾಟಕದ ಚಿತ್ರಮಂದಿರಗಳು ಒಂದೊಂದಾಗೇ ಮುಚ್ಚುತ್ತಿವೆ. ಒಳ್ಳೊಳ್ಳೆ ಸಿನಿಮಾಗಳು ಇಲ್ಲದೆ ಥಿಯೇಟರ್ ಮಾಲೀಕರು ಪರದಾಡುವಂತಾಗಿದೆ. ಇಂತಹದ ಸಂದರ್ಭದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ 2898ಎಡಿ' ರಿಲೀಸ್ ಆಗಿದೆ. ಈ ಸಿನಿಮಾ ನಷ್ಟದಲ್ಲಿರುವ ಥಿಯೇಟರ್ ಮಾಲೀಕರ ಕಷ್ಟವನ್ನು ನಿವಾರಿಸಬಹುದೆಂಬ ನಿರೀಕ್ಷೆಯಿದೆ.
ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಅಂತಹ ದಿಗ್ಗಜರು ನಟಿಸಿರುವ ಈ ಸಿನಿಮಾ ಕರ್ನಾಟಕದಲ್ಲೂ ಅದ್ಭುತ ಓಪನಿಂಗ್ ಪಡೆದುಕೊಂಡಿತ್ತು. ಹೀಗಾಗಿ ಎರಡನೇ ದಿನದ ಮೇಲೆ ಎಲ್ಲರೂ ಕಣ್ಣಿಟ್ಟು ಕೂತಿದ್ದರು. ಆದರೆ, ಭಾರತದಾದ್ಯಂತ ಈ ಸಿನಿಮಾ ಎರಡನೇ ದಿನ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಇಳಿಮುಖ ಕಂಡಿದೆ.

'ಕಲ್ಕಿ 2898ಎಡಿ' ಮೊದಲ ದಿನ ವಿಶ್ವದಾದ್ಯಂತ 191.5 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಕೇವಲ ಭಾರತದ ಬಾಕ್ಸಾಫೀಸ್‌ನಿಂದಲೇ 120 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಇದರಲ್ಲಿ ತೆಲುಗು ರಾಜ್ಯಗಳಿಂದ ಹೆಚ್ಚು ಕಲೆಕ್ಷನ್ ಆಗಿತ್ತು. ಈಗ ತೆಲುಗು ಬಾಕ್ಸಾಫೀಸ್‌ನಲ್ಲೂ ಗಳಿಕೆ ಇಳಿಮುಖವಾಗಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಎರಡನೇ ದಿನದ ಕಲೆಕ್ಷನ್ ಹೇಗಿದೆ? ತಿಳಿಯಲು ಮುಂದೆ ಓದಿ.
ಕರ್ನಾಟಕದ ವಿತರಕರ ಪ್ರಕಾರ, ಪ್ರಭಾಸ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಕಲ್ಕಿ 2898ಎಡಿ' ಸುಮಾರು 444 ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಂಡಿದೆ. ಎರಡನೇ ದಿನವೂ ಸ್ಕ್ರೀನ್‌ಗಳ ಸಂಖ್ಯೆಯಲ್ಲೇನು ಇಳಿಮುಖವಾಗಿದೆ. ಹೀಗಾಗಿ ತೆಲುಗು ಸೇರಿದಂತೆ ಹಿಂದಿ ಬೆಲ್ಟ್‌ಗಳಲ್ಲಿ ಗಳಿಕೆ ಡ್ರಾಪ್ ಆದಂತೆ ಕರ್ನಾಟಕದಲ್ಲೂ ಆಗಿದೆಯಾ? ಎರಡನೇ ದಿನ ಎಷ್ಟು ಕಲೆಕ್ಷನ್ ಆಗಿದೆ ಅನ್ನೋ ಡಿಲೈಟ್ಸ್ ಇಲ್ಲಿದೆ.

ಕರ್ನಾಟಕದಲ್ಲಿ 'ಕಲ್ಕಿ 2898ಎಡಿ'ಯ ತೆಲುಗು ವರ್ಷನ್ 219 ಸ್ಕ್ರೀನ್‌ಗಳಲ್ಲಿ ತೆರೆಕಂಡಿತ್ತು. ತೆಲುಗು ವರ್ಷನ್‌ನಿಂದ ಮೊದಲ ದಿನ 4.85 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದ್ದರೆ, ಎರಡನೇ ದಿನ 3.13 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಿಂದ ಬಂದಿರೋ ಮಾಹಿತಿ. ಎರಡು ದಿನಗಳಲ್ಲಿ ಒಟ್ಟು 7.98 ಕೋಟಿ ರೂಪಾಯಿ (Net) ಕಲೆಕ್ಷನ್ ಆಗಿದೆ ಎನ್ನಲಾಗಿದೆ.
ಹಾಗೇ 'ಕಲ್ಕಿ 2898ಎಡಿ'ಯ ಕನ್ನಡ ವರ್ಷನ್ ಕೂಡ ಉತ್ತಮ ಗಳಿಕೆ ಕಂಡಿದೆ. ಸುಮಾರು 100 ಸ್ಕ್ರೀನ್‌ಗಳಲ್ಲಿ ತೆರೆಕಂಡಿದ್ದ ಈ ಸಿನಿಮಾ ಮೊದಲ ದಿನ 80 ಲಕ್ಷ ರೂಪಾಯಿ (Net) ಕಲೆಕ್ಷನ್ ಮಾಡಿತ್ತು. ಅದೇ ಎರಡನೇ ದಿನ 45 ಲಕ್ಷ ರೂಪಾಯಿ (Net) ಲೂಟಿ ಮಾಡಿದೆ. ಈ ಮೂಲಕ ಒಟ್ಟು 1.25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನುತ್ತಾರೆ ವಿತರಕರು.
ಇನ್ನು ರಾಜ್ಯದಲ್ಲಿ 'ಕಲ್ಕಿ 2898ಎಡಿ'ಯ ತಮಿಳು ವರ್ಷನ್‌ನಿಂದ 28 ಲಕ್ಷ ಕಲೆಕ್ಷನ್ ಮಾಡಿದೆ. ಅದೇ ಹಿಂದಿ ವರ್ಷನ್ 1.45 ಕೋಟಿ ರೂಪಾಯಿ (Net)ಗಳಿಕೆ ಕಂಡಿದೆ. ಕರ್ನಾಟಕದಲ್ಲಿ ಮೊದಲ ದಿನ 6.70 ಕೋಟಿ ರೂಪಾಯಿ (Net) ಗಳಿಸಿದ್ದರೆ, ಎರಡನೇ ದಿನ 4.31 ಕೋಟಿ ರೂಪಾಯಿ (Net) ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಒಟ್ಟು ಎರಡು ದಿನಗಳಲ್ಲಿ 'ಕಲ್ಕಿ 2898ಎಡಿ'ಯ ಕರ್ನಾಟಕದ ಬಾಕ್ಸಾಫೀಸ್ ಕಲೆಕ್ಷನ್ 10.96 ಕೋಟಿ ರೂಪಾಯಿ (Net) ಎನ್ನಲಾಗಿದೆ.
ಇನ್ನು ಭಾರತದಾದ್ಯಂತ ಎರಡನೇ ದಿನದ ಕಲೆಕ್ಷನ್ ಇಳಿಮುಖವಾಗಿದೆ. ಮೊದಲ ದಿನ 120 ಕೋಟಿ ರೂಪಾಯಿ ಹತ್ತಿರ ಕಲೆಕ್ಷನ್ ಆಗಿತ್ತು. ಅದೇ ಎರಡನೇ ದಿನ 54 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎನ್ನಲಾಗಿದ್ದು, ಈ ಎರಡು ದಿನಗಳಲ್ಲಿ ಕೇವಲ ಭಾರತದಲ್ಲಿ 149.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.


Click it and Unblock the Notifications











