₹500 ಕೋಟಿ ಬಜೆಟ್‌, ₹160 ಕೋಟಿ ಸಂಭಾವನೆ? ಯಾರಿಗೆ, ಎಷ್ಟು ಕೋಟಿ ಸಿಕ್ತು?

ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 AD' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಭಾರೀ ಬಜೆಟ್ ಸಿನಿಮಾ ಇದು. ಪ್ರಭಾಸ್ ಜೊತೆ ದೀಪಿಕಾ ಪಡುಕೋಣೆ, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದಿಶಾ ಪಟಾಣಿ ನಟಿಸಿದ್ದಾರೆ. ಈ ಸೈನ್ಸ್ ಫಿಕ್ಷನ್ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಸೂಪರ್ ಹಿಟ್ ಸಿನಿಮಾಗಳ ಮೂಲಕ ಸದ್ದು ಮಾಡಿದ ವೈಜಯಂತಿ ಮೂವೀಸ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. 'ಮಹಾನಟಿ' ಬಳಿಕ ನಾಗ್ ಅಶ್ವಿನ್ ನಿರ್ದೇಶನದ ಸಿನಿಮಾ ಆಗಿರುವುದರಿಂದ ಸಹಜವಾಗಿಯೇ ಕುತೂಹಲ ಮೂಡಿದೆ. ಪದೇ ಪದೆ ರಿಲೀಸ್ ಡೇಟ್ ಮುಂದೂಡಿ ಅಂತೂ ಇಂತೂ ಈ ಬಾರಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಅದ್ಧೂರಿ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಕಟ್ಟಿಕೊಡಲಾಗಿದೆ.

Kalki 2898 AD cast salary how much prabhas deepika padukoane kamal haasan amitabh got paid

'ಕಲ್ಕಿ 2898 AD' ಚಿತ್ರಕ್ಕಾಗಿ ಒಂದು ವಿಭಿನ್ನ ವಿನ್ಯಾಸದ ವಾಹನ ತಯಾರಿಸಿ ಬಳಸಿಕೊಳ್ಳಲಾಗಿದೆ. ಅದಕ್ಕಾಗಿ 6 ಕೋಟಿ ರೂ. ವ್ಯಯಿಸಿರುವ ಸಾಧ್ಯತೆಯಿದೆ. ಯಾವುದಕ್ಕೂ ರಾಜಿಯಾಗದೇ ಹಣವನ್ನು ನೀರಿನಂತೆ ಖರ್ಚು ಮಾಡಿ ಸಿನಿಮಾ ತಯಾರಿಸಲಾಗಿದೆ. ಭಾರತೀಯ ಚಿತ್ರರಂಗದ ಖ್ಯಾತನಾಮರನ್ನು ತಾರಾಗಣದಲ್ಲಿ ಸೇರಿಸಲಾಗಿದೆ. ಹಾಲಿವುಡ್ ತಂತ್ರಜ್ಞರು ಕೆಲಸ ಮಾಡಿದ್ದಾರೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಬಜೆಟ್ ಹೆಚ್ಚಾಗಿದೆ.

ಒಂದಿಷ್ಟು ಬಜೆಟ್ ಎಂದು ಮೊದಲೇ ಲೆಕ್ಕ ಹಾಕದೇ ಕಥೆ ಕೇಳಿದ್ದನ್ನೆಲ್ಲಾ ಕೊಟ್ಟು ಸಿನಿಮಾ ಮಾಡುತ್ತಿರುವುದಾಗಿ ಈ ಹಿಂದೆ ನಿರ್ಮಾಪಕ ಅಶ್ವಿನಿ ದತ್ ಹೇಳಿದ್ದರು. ಸಿನಿಮಾ ಬಜೆಟ್ 500 ಕೋಟಿ ರೂ. ಮೀರಿರುವ ಅಂದಾಜಿದೆ. ಅದಕ್ಕೆ ತಕ್ಕಂತೆ ಸ್ಟಾರ್ ನಟ-ನಟಿಯರಿಗೆ ಸಂಭಾವನೆ ಸಿಕ್ಕಿದೆ. ತಂತ್ರಜ್ಞರು ಈ ಚಿತ್ರದಿಂದ ಒಳ್ಳೆ ಸಂಬಳ ಪಡೆದಿದ್ದಾರೆ. ಆದರೆ 'ಕಲ್ಕಿ 2898 AD' ಸಿನಿಮಾ ಯಾಕೋ ಇನ್ನು ದೊಡ್ಡದಾಗಿ ಹೈಪ್ ಕ್ರಿಯೇಟ್ ಮಾಡಿಲ್ಲ. ಹೊಸ ಟ್ರೈಲರ್ ಮಾತ್ರ ಕೊಂಚ ಭರವಸೆ ಮೂಡಿಸಿದೆ.

ಭೈರವ ಆಗಿ ನಟಿಸಲು ಪ್ರಭಾಸ್ ಅಂದಾಜು 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಇನ್ನು ಕಮಲ್ ಹಾಸನ್, ಅಮಿತಾಬ್ ಬಚ್ಚನ್ ತಲಾ 10 ಕೋಟಿ ರೂ. ದೀಪಿಕಾ ಪಡುಕೋಣೆ 20 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನುಳಿದ ಕಲಾವಿದರು, ತಂತ್ರಜ್ಞರು ಸೇರಿ 20 ಕೋಟಿ ರೂ.ವರೆಗೂ ಸಂಭಾವನೆ ಸಿಕ್ಕಿದೆ ಎನ್ನುವ ಚರ್ಚೆ ಟಾಲಿವುಡ್‌ನಲ್ಲಿ ನಡೀತಿದೆ.

Kalki 2898 AD cast salary how much prabhas deepika padukoane kamal haasan amitabh got paid

ಮತ್ತೊಂದು ವಾದದ ಪ್ರಕಾರ ಪ್ರಭಾಸ್‌ 150 ಕೋಟಿ ರೂ. ಅಮಿತಾಬ್‌, ಕಮಲ್, ದೀಪಿಕಾ ತಲಾ 20 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮೋಜಿ ಫಿಲ್ಮ್‌ಸಿಟಿಯಲ್ಲಿ ಭಾರೀ ಸೆಟ್‌ಗಳನ್ನು ನಿರ್ಮಿಸಿ ಸಿನಿಮಾ ಚಿತ್ರೀಕರಣ ಮಾಡಲಾಗಿತ್ತು. ಪ್ರಾಜೆಕ್ಟ್- K ಹೆಸರಿನಲ್ಲಿ ಶುರುವಾದ ಸಿನಿಮಾ ಬಳಿಕ 'ಕಲ್ಕಿ 2898 AD' ಆಗಿ ಬದಲಾಗಿತ್ತು.

ಚಿತ್ರದಲ್ಲಿ ಕುರುಕ್ಷೇತ್ರ ಯುದ್ಧದಿಂದ ಕಲಿಯುಗದಲ್ಲಿ ಇನ್ನು 800 ವರ್ಷಗಳ ಮುಂದೆ ಏನಾಗಬಹುದು ಎನ್ನುವ ಕಥೆಯನ್ನು ಕಟ್ಟಿಕೊಡಲಾಗಿದೆ. 6000 ವರ್ಷಗಳ ನಡುವೆ ಏನೆಲ್ಲಾ ಆಗುತ್ತದೆ ಎನ್ನುವುದನ್ನು ನಾಗ್ ಅಶ್ವಿನ್ ಕಟ್ಟಿಕೊಟ್ಟಿದ್ದಾರೆ. ಮೇಕಿಂಗ್‌, ವಿಷ್ಯುವಲ್ಸ್‌ನಿಂದಲೇ ಸಿನಿಮಾ ಕುತೂಹಲ ಮೂಡಿಸಿದೆ.

ರಾಜೇಂದ್ರ ಪ್ರಸಾದ್, ಶೋಭನಾ, ಬ್ರಹ್ಮಾನಂದಂ, ಪಶುಪತಿ, ಮಾಳವಿಕಾ ನಾಯರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇನ್ನುಳಿದಂತೆ ಮೃಣಾಲ್ ಠಾಕುಲ್, ದುಲ್ಕರ್ ಸಲ್ಮಾನ್, ವಿಜಯ್ ದೇರವಕೊಂಡ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಸಂತೋಷ್ ನಾರಾಯಣನ್ ಸಂಗೀತ, ಜೊರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಹಣ ಚಿತ್ರಕ್ಕಿದೆ.

More from Filmibeat

English summary
Nag ashwin directional Kalki 2898 AD star cast remuneration;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X