Project-K: 'ಕಲ್ಕಿ' ಟೀಸರ್‌ನಲ್ಲಿ ಈ ವಿಚಾರಗಳನ್ನು ಗಮನಿಸಿದ್ರಾ? ಕಮಲ್ ಕಾಣಿಸಿದ್ರಾ?
ಪ್ರಭಾಸ್ ನಟನೆಯ 'ಪ್ರಾಜೆಕ್ಟ್- K' ಫಸ್ಟ್ ಗ್ಲಿಂಪ್ಸ್ ಧೂಳೆಬ್ಬಿಸಿದೆ. ಚಿತ್ರದ ಟೈಟಲ್ ಕೂಡ ರಿವೀಲ್ ಆಗಿದೆ. ಅಂತಾರಾಷ್ಟ್ರೀಯ ಸಿನಿಮಾ ವೇದಿಕೆ ಸ್ಯಾನ್ ಡಿಯಾಗೋ ಕಾಮಿಕ್-ಕಾಮ್ 2023ರಲ್ಲಿ ಚಿತ್ರದ ಫಸ್ಟ್ ಗ್ಲಿಂಪ್ಸ್ ಪ್ರದರ್ಶನವಾಗಿದೆ. ಇಡೀ ಚಿತ್ರತಂಡ ಈ ಶೋನಲ್ಲಿ ಭಾಗಿ ಆಗಿ ಸಿನಿಮಾ ಪ್ರಚಾರ ಮಾಡಿದೆ. ಇನ್ನು ಪ್ರಭಾಸ್ ಅಭಿಮಾನಿಗಳಿಂದಲೂ ಗ್ಲಿಂಪ್ಸ್‌ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ.
ಇತ್ತೀಚೆಗೆ ರಿಲೀಸ್ ಆಗಿದ್ದ ಪ್ರಭಾಸ್ ಫಸ್ಟ್ ಲುಕ್ ಪೋಸ್ಟರ್‌ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಫಸ್ಟ್ ಗ್ಲಿಂಪ್ಸ್ ಅಭಿಮಾನಿಗಳ ಮನಗೆದ್ದು ಕೊಂಚಮಟ್ಟಿಗೆ ಸಿನಿಮಾ ಮೇಲೆ ನಿರೀಕ್ಷೆ ಮೂಡಿಸಿದೆ. ಇನ್ನು ಚಿತ್ರಕ್ಕೆ 'ಕಲ್ಕಿ 2898 AD' ಎನ್ನುವ ಟೈಟಲ್ ಫಿಕ್ಸ್ ಆಗಿದೆ. ಇಷ್ಟು ದಿನ 'ಪ್ರಾಜೆಕ್ಟ್-K' ಹೆಸರಿನಲ್ಲಿ ಸಿನಿಮಾ ಚಿತ್ರೀಕರಣ ನಡೀತಿತ್ತು. ನಾಗ್ ಅಶ್ವಿನ್ ಚಿತ್ರದಲ್ಲಿ ಭವಿಷ್ಯ ಕಥೆ ಹೇಳುತ್ತಿದ್ದಾರೆ. ಇನ್ನು 800 ವರ್ಷಗಳ ಬಳಿಕ ನಡೆಯುವ ಒಂದು ಕಾಲ್ಪನಿಕ ಕಥೆಯನ್ನು ತೆರೆಗೆ ತರುತ್ತಾರೆ. ಅದಕ್ಕೆ ಪುರಾಣದ ಲಿಂಕ್ ಕೊಟ್ಟು ಬೆಳ್ಳೆಪರದೆ ಮೇಲೆ ಅದ್ಭುತ ಸೃಷ್ಟಿಸುವ ಪ್ರಯತ್ನ ನಡೀತಿದೆ.

'ಕಲ್ಕಿ 2898 AD' ಟೀಸರ್‌ನಲ್ಲಿ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳಿವೆ. ಕಲ್ಕಿ ಎಂದರೆ ಕಲಿಯುಗದಲ್ಲಿ ಮಾನವರನ್ನು ರಕ್ಷಿಸಲು ಬರುವ ಶ್ರೀ ಮಹಾವಿಷ್ಣುವು ಅವತಾರ ಎಂದು ನಾವು ಪುರಾಣಗಳಲ್ಲಿ ಓದಿದ್ದೇವೆ. ಫ್ಯೂಚರ್‌ನಲ್ಲಿ ಮಾನವರನ್ನು ರಕ್ಷಿಸಲು ಪ್ರಭಾಸ್ ಕಲ್ಕಿ ಎನ್ನುವ ಯೋಜನೆ ಕೈಗೆತ್ತಿಕೊಳ್ಳಿದ್ದಾರೆ. ಆದರೆ ಮನುಷ್ಯ ಸಂಕುಲಕ್ಕೆ ಎದುರಾಗುವ ವಿಪತ್ತು ಏನು ಎನ್ನುವುದು ರಿವೀಲ್ ಆಗಿಲ್ಲ. ಆದರೂ ಚಿತ್ರದಲ್ಲಿ ಹಿಂದೂ ದೈವಗಳಿಗೆ ಹೆಚ್ಚು ಆದ್ಯತೆ ಕೊಟ್ಟಿರುವುದು ಗೊತ್ತಾಗುತ್ತಿದೆ.
ಟೀಸರ್ ಆರಂಭದಲ್ಲೇ ಪದ್ಮಾಕಾರದಲ್ಲಿ ಒಂದು ವಸ್ತು ಕಾಣುತ್ತದೆ. ಇನ್ನು ವ್ಯಕ್ತಿಯೊಬ್ಬ ತನ್ನ ಕೈಯಲ್ಲಿ ಹನುಮಂತನ ಪುಟ್ಟ ವಿಗ್ರಹ ಹಿಡಿದಿರುವುದನ್ನು ನೋಡಬಹುದು. ಚಿತ್ರದಲ್ಲಿ ಹನುಮಂತನ ಶಕ್ತಿಯನ್ನು ತೋರಿಸುತ್ತಿದ್ದಾರೆ. ಇನ್ನು ಆಕಾಶದಿಂದ ಒಂದು ವಿಚಿತ್ರ ಕೈ ಆಕಾರ ಕೆಳಗೆ ಬೀಳುತ್ತದೆ. ಈ ಹಿಂದೆ ಥೀಂ ಪೋಸ್ಟರ್‌ನಲ್ಲೂ ಕೂಡ ಅದನ್ನು ತೋರಿಸಲಾಗಿತ್ತು. ಇದು ಬಹಳ ಕುತೂಹಲ ಮೂಡಿಸಿದೆ. ಅಷ್ಟೇ ಅಲ್ಲ ಟೀಸರ್‌ನಲ್ಲಿ ಶಿವಲಿಂಗದ ದರ್ಶನವೂ ಆಗುತ್ತದೆ. ಅಲ್ಲಿಗೆ ಒಬ್ಬ ವ್ಯಕ್ತಿ ಏನನ್ನೋ ಹುಡುಕುತ್ತಾ ಬರುವುದನ್ನು ನೋಡಬಹುದು.

ಆಕ್ಷನ್ ಸನ್ನಿವೇಶಗಳಲ್ಲಿ ನಾಗ್ ಅಶ್ವಿನ್, ಕಲಾವಿದರ ಕೈಗೆ ವಿಚಿತ್ರ ಆಯುಧಗಳನ್ನು ಕೊಟ್ಟಿದ್ದಾರೆ. ಇನ್ನು ಪ್ರಭಾಸ್ ಲುಕ್, ಒಂದೆರಡು ಫ್ರೇಮ್‌ಗಳಲ್ಲಿ ಅವರ ಆರ್ಭಟ ಸಖತ್ ಕಿಕ್ ಕೊಡುತ್ತದೆ. ಇನ್ನು ಪ್ರಭಾಸ್ ತನ್ನ ಕೈಯಲ್ಲಿರುವ ಕವಚವನ್ನು ಆಪರೇಟ್ ಮಾಡುವುದನ್ನು ನೋಡಬಹುದು. ಈ ಅಂಶಗಳು 'ಕಲ್ಕಿ 2898 AD' ಟೀಸರ್‌ನಲ್ಲಿ ಕುತೂಹಲ ಮೂಡಿಸುತ್ತವೆ. ಒಂದೇ ಮಾತಲ್ಲಿ ಹೇಳಬೇಕು ಅಂದರೆ ಹಾಲಿವುಡ್ ಸ್ಟೈಲ್‌ನಲ್ಲಿ ಭಾರತದ ಭವಿಷ್ಯದ ಕತೆಯನ್ನು ಸಿನಿಮಾದಲ್ಲಿ ಹೇಳೋಕೆ ಬರ್ತಿರೋದು ಗೊತ್ತಾಗುತ್ತಿದೆ.
ಸೈನ್ಸ್ ಫಿಕ್ಷನ್ ಜಾನರ್ ಸಿನಿಮಾ ಸಖತ್ ನಿರೀಕ್ಷೆ ಹುಟ್ಟಾಕ್ಕಿದೆ. ಟೀಸರ್‌ನಲ್ಲಿ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಆಗಿದೆ. ಅಮಿತಾಬ್ ಬಚ್ಚನ್ ಸಣ್ಣ ಝಲಕ್ ಇದೆ. ಆದರೆ ಸಂಪೂರ್ಣವಾಗಿ ಅವರ ಲುಕ್ ಗೊತ್ತಾಗಿಲ್ಲ. ಇನ್ನು ಕಮಲ್ ಹಾಸನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಇನ್ನು ಚಿತ್ರೀಕರಣದಲ್ಲಿ ಉಳಗನಾಯಗನ್ ಭಾಗಿ ಆಗಿಲ್ಲ. ಹಾಗಾಗಿ ಅವರ ಲುಕ್ ಕೂಡ ಫಸ್ಟ್ ಗ್ಲಿಂಪ್ಸ್‌ನಲ್ಲಿ ನೋಡೋಕೆ ಸಿಗುತ್ತಿಲ್ಲ.
ಬಹುಕೋಟಿ ವೆಚ್ಚದಲ್ಲಿ 'ಕಲ್ಕಿ 2898 AD' ಸಿನಿಮಾ ನಿರ್ಮಾಣವಾಗುತ್ತಿದೆ. ಪ್ರಭಾಸ್, ಅಮಿತಾಬ್, ದೀಪಿಕಾ ಜೊತೆಗೆ ಕಮಲ್ ಹಾಸನ್ ಕೂಡ ನಟಿಸಿರೋದು ಕುತೂಹಲ ಹೆಚ್ಚಿಸಿದೆ. ಇತ್ತೀಚೆಗೆ ಕಮಲ್ 'ಪ್ರಾಜೆಕ್ಟ್- K' ಚಿತ್ರದಲ್ಲಿ ನಟಿಸೋ ವಿಚಾರ ರಿವೀಲ್ ಆಗಿತ್ತು. ಈ ಚಿತ್ರದಲ್ಲಿ ನಟಿಸೋಕೆ ಯಾಕೆ ಒಪ್ಪಿಕೊಂಡೆ ಎನ್ನುವ ಬಗ್ಗೆ ಉಳಗ ನಾಯಗನ್ ಮಾತನಾಡಿದ್ದಾರೆ. ಸ್ಯಾನ್ ಡಿಯಾಗೋ ಕಾಮಿಕ್-ಕಾಮ್ 2023ರಲ್ಲಿ ಇಡೀ ಚಿತ್ರತಂಡದ ಸದಸ್ಯರು ಭಾಗಿ ಆಗಿದ್ದರು.
"ಈ ಸಿನಿಮಾ ಒಪ್ಪಿಕೊಳ್ಳಲು ಕಾರಣ. ಪ್ಯಾರಲಲ್ ಸಿನಿಮಾಗಳನ್ನು ಮಾಡುತ್ತಾ ಬಂದವನು. ಅದರಲ್ಲಿ ನೆಗಟಿವ್, ಪಾಸಿಟಿವ್ ಎನ್ನುವುದು ಇರುವುದಿಲ್ಲ. ಹಾಗಾಗಿ ಸಿನಿಮಾದಲ್ಲಿ ನೆಗೆಟಿವ್ ರೋಲ್ ಕೂಡ ಬಹಳ ಮುಖ್ಯವಾದ ಪಾತ್ರ" ಎಂದು ಕಮಲ್ ಹಾಸನ್ ಹೇಳಿದ್ದಾರೆ. ಟೀಸರ್‌ನಲ್ಲಿ ಕಮಲ್ ಕಾಣಿಸುತ್ತಿಲ್ಲವಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ನಾಗ್ ಅಶ್ವಿನ್ ಟೀಸರ್ ತುಂಬಾ ಕಮಲ್ ಇದ್ದಾರೆ. ಆದರೆ ನಿಮಗೆ ಅದು ಗೊತ್ತಾಗುತ್ತಿಲ್ಲ" ಎಂದು ಉತ್ತರಿಸಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಬರೋಬ್ಬರಿ 10 ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ತರಲಾಗುತ್ತಿದೆ.


Click it and Unblock the Notifications











