Kalki 2898AD:ಕರ್ನಾಟಕದಲ್ಲಿ 'ಕಲ್ಕಿ' ಅಬ್ಬರ ನಿಂತಿಲ್ಲ; ಕನ್ನಡ ವರ್ಷನ್‌ ಕಲೆಕ್ಷನ್ ಮಾಡಿದ್ದೆಷ್ಟು ಕೋಟಿ ಗೊತ್ತೇ?

ಪ್ರಭಾಸ್, ದೀಪಿಕಾ ಪಡುಕೋಣೆ ಜೋಡಿಯ ಸಿನಿಮಾ 'ಕಲ್ಕಿ 2898AD' ರಿಲೀಸ್ ಆಗಿ ಇಂದಿಗೆ 6ನೇ ದಿನ. ಜೂನ್ 27ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಿದ್ದ ಸಿನಿಮಾ ವರ್ಲ್ಡ್‌ವೈಡ್ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಕಳೆದ ಐದು ದಿನಗಳಲ್ಲಿ ಈ ಸಿನಿಮಾ ದಾಖಲೆ ಗಳಿಕೆಯತ್ತ ಮುನ್ನುಗ್ಗುತ್ತಿದೆ. ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆದ ಮೊದಲ ವಾರ ಕಲೆಕ್ಷನ್ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆ ಕಾಣುತ್ತವೆ. ಆದರೆ, ಮೊದಲ ಸೋಮವಾರದಿಂದ ಸವಾಲು ಎದುರಾಗುತ್ತೆ.

'ಕಲ್ಕಿ 2898AD'ಕೂಡ ಇದರಿಂದ ಹೊರತಾಗಿಲ್ಲ. ಸೋಮವಾರ ಕೂಡ ಈ ಸಿನಿಮಾ ಗಳಿಕೆಯಲ್ಲಿ ಡ್ರಾಪ್ ಆಗಿದೆ. ಆದರೂ, ಚಿತ್ರತಂಡ ಆತಂಕ ಪಡುವಷ್ಟು ಇಳಿಕೆ ಆಗಿಲ್ಲ. ಭಾರತದಾದ್ಯಂತ ಕಲ್ಕಿ ಸಿನಿಮಾ ಸೋಮವಾರ (ಜುಲೈ 1) 34.6 ಕೋಟಿ ರೂಪಾಯಿ (Net)ಕಲೆಕ್ಷನ್ ಆಗಿದೆ. ಕಳೆದ ಐದು ದಿನಗಳಲ್ಲಿ ಕೇವಲ ಭಾರತದಲ್ಲಿ ಸುಮಾರು 343.6 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

Kalki 2898AD Karnataka Day 5 Box Office report Prabhas Deepika movie collects Rs 25 crores

ಇನ್ನು ವಿದೇಶದಲ್ಲಿಯೂ ಸಿನಿಮಾ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ವಿಶ್ವದಾದ್ಯಂತ ಈ ಸಿನಿಮಾ 635 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಹಾಗೇ ಕರ್ನಾಟಕದಲ್ಲಿಯೂ ಈ ಸಿನಿಮಾ ರೆಸ್ಪಾನ್ಸ್ ಚೆನ್ನಾಗಿದೆ. ಇಲ್ಲೂ ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿತ್ತು. ಮಲಯಾಳಂ ಭಾಷೆಯನ್ನು ಹೊರತು ಪಡಿಸಿ, ಉಳಿದ ನಾಲ್ಕು ಭಾಷೆಗಳಿಗೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಸಿನಿಮಾದ ಕಲೆಕ್ಷನ್ ಹೇಗಿದೆ? ಕನ್ನಡ ವರ್ಷನ್ ಕೆಲಕ್ಷನ್ ಮಾಡಿದ್ದೆಷ್ಟು ತಿಳಿಯಲು ಮುಂದೆ ಓದಿ..

'ಕಲ್ಕಿ 2898AD' ಸಿನಿಮಾ ಕರ್ನಾಟಕದಾದ್ಯಂತ ಸುಮಾರು 444 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಅದರಲ್ಲಿ ತೆಲುಗು ವರ್ಷನ್ 219, ಹಿಂದಿ ವರ್ಷನ್ 85, ಕನ್ನಡ 100 ಹಾಗೂ ತಮಿಳು ವರ್ಷನ್ 40, ಮಲಯಾಳಂ ವರ್ಷನ್ ಸೇರಿ ರಾಜ್ಯದಲ್ಲಿ 444 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಕಳೆದ ಐದು ದಿನಗಳಲ್ಲಿ ಕಲ್ಕಿ ಎಲ್ಲಾ ಭಾಷೆಗಳಿಂದ ಅಂದಾಜು 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ತೆಲುಗು ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆದಾಗ ಮೂಲ ಭಾಷೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಕಲ್ಕಿ 2898AD' ವಿಚಾರದಲ್ಲೂ ಅದು ಮುಂದುವರೆದಿದೆ. ಇದರೊಂದಿಗೆ ಕನ್ನಡ ವರ್ಷನ್ ಕೂಡ ಕೋಟಿ ಲೆಕ್ಕದಲ್ಲಿ ಗಳಿಕೆ ಮಾಡಿದ್ದು ವಿತರಕರಿಗೆ ಖುಷಿ ಕೊಟ್ಟಿದೆ. ಅಂದ್ಹಾಗೆ, 'ಕಲ್ಕಿ' ತೆಲುಗು ವರ್ಷನ್ ಐದನೇ ದಿನ 1.75 ಕೋಟಿ ರೂಪಾಯಿ (Net)ಗಳಿಸಿದೆ ಎನ್ನಲಾಗಿದ್ದು, ಒಟ್ಟು 15.98 ಕೋಟಿ ರೂಪಾಯಿ (Net)ತೆಲುಗು ಭಾಷೆಯಿಂದಲೇ ಕಲೆಕ್ಷನ್ ಆಗಿದೆ ಎನ್ನುತ್ತಿದೆ ವಿತರಕರ ವಲಯ.

Kalki 2898AD Karnataka Day 5 Box Office report Prabhas Deepika movie collects Rs 25 crores

ಕಳೆದ ಐದು ದಿನಗಳಲ್ಲಿ ಕನ್ನಡ ವರ್ಷನ್‌ ಕೂಡ ಉತ್ತಮ ಗಳಿಕೆಯನ್ನೇ ಮಾಡಿದೆ. ಮೊದಲ ದಿನ 80 ಲಕ್ಷ ರೂಪಾಯಿ (Net) ಕಲೆಕ್ಷನ್ ಮಾಡಿದ್ದೇ ಹೆಚ್ಚು. ಇದು ಬಿಟ್ಟರೆ ಭಾನುವಾರ 72 ಲಕ್ಷ ರೂಪಾಯಿ (Net)ಕಲೆಕ್ಷನ್ ಮಾಡಿದೆ. ಇನ್ನು ಐದನೇ ದಿನವಾದ ಸೋಮವಾರ 25 ಲಕ್ಷ ರೂಪಾಯಿ (Net)ಕಲೆಕ್ಷನ್ ಆಗಿದೆ. ಈ ಐದು ದಿನಗಳಲ್ಲಿ ಕಲ್ಕಿ ಕನ್ನಡ ವರ್ಷನ್ 2.77 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಕರ್ನಾಟಕದಲ್ಲಿ ಹಿಂದಿ ಹಾಗೂ ತಮಿಳು ವರ್ಷನ್ ಕೂಡ ಕಲೆಕ್ಷನ್ ಚೆನ್ನಾಗಿಯೇ ಮಾಡಿದೆ. ಐದು ದಿನಕ್ಕೆ ಕಲ್ಕಿ ಹಿಂದಿ ವರ್ಷನ್ 3.07 ಕೋಟಿ ರೂಪಾಯಿ (Net)ಆಗಿದೆ. ಅದೇ ತಮಿಳು ವರ್ಷನ್ ಕೇವಲ 52 ಲಕ್ಷ ರೂಪಾಯಿ (Net) ಕಲೆಕ್ಷನ್ ಮಾಡಿದೆ. ಒಟ್ಟು ಎಲ್ಲಾ ಐದು ಭಾಷೆಗಳಿಂದ ಕರ್ನಾಟಕದಲ್ಲಿ 'ಕಲ್ಕಿ 2898AD'24.44 ಕೋಟಿ ರೂಪಾಯಿ (Net)ಕಲೆಕ್ಷನ್ ಮಾಡಿದೆ.

More from Filmibeat

English summary
Kalki 2898AD Karnataka Day 5 Box Office report. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X