16 ವರ್ಷಗಳ ಬಳಿಕ ಪ್ರಭಾಸ್ ಸಿನಿಮಾದಲ್ಲಿ ಕಂಗನಾ? 'ಕಣ್ಣಪ್ಪ'ನ ಕಥೆಯಲ್ಲಿ ಕ್ವೀನ್.. ಟ್ರೆಂಡ್ ಆಗ್ತಿರೋದೇಕೆ?

'ಬಾಹುಬಲಿ' ಸಿನಿಮಾದ ನಂತರ ಸಾಲು ಸಾಲು ಸೋಲು ಕಂಡಿದ್ದ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ 'ಸಲಾರ್' ಸಿನಿಮಾದ ಮೂಲಕ ಮತ್ತೆ ಯಶಸ್ಸಿನ ಶಿಖರವೇರಿದ್ದಾರೆ. ಇದೇ ಜೋಷ್‌ನಲ್ಲಿ ಮತ್ತೊಂದು ಪೌರಾಣಿಕ ಸಿನಿಮಾಗಾಗಿ ತಯಾರಿನೂ ನಡೀತಿದೆ. ಅದೇ ವಿಷ್ಣು ಮಂಚು ನಿರ್ಮಾಣದ 'ಕಣ್ಣಪ್ಪ'. ಇದು ಬೇಡರ ಕಣ್ಣಪ್ಪನ ಕತೆ ಅಂದಕೂಡ್ಲೇ ಕನ್ನಡದ ಸಿನಿ ಅಭಿಮಾನಿಗಳು ಒಂದು ಸಲ ವರನಟ ಡಾ ರಾಜ್‌ಕುಮಾರ್ ನಟಿಸಿದ 'ಬೇಡರ ಕಣ್ಣಪ್ಪ' ಸಿನಿಮಾವನ್ನು ನೆನಪಿಸಿಕೊಳ್ಬಹುದು.

'ಕಣ್ಣಪ್ಪ'ನ ಕಥೆಯಲ್ಲಿ ಶಿವ ಮತ್ತು ಪಾರ್ವತಿಯ ಪಾತ್ರ ಅಷ್ಟೇ ಮುಖ್ಯವಾದದ್ದು. ಕಣ್ಣಪ್ಪ ಶಿವನ ನಿಷ್ಠಾವಂತ ಭಕ್ತ. ಹಾಗಾಗಿ ಸಿನಿಮಾದ ಕಥೆಯ ತಿರುವಿಗೆ ಶಿವ- ಪಾರ್ವತಿಯರ ಪಾತ್ರ ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಹಾಗಾಗಿ ಪ್ರಭಾಸ್ ಈ ಪಾತ್ರವನ್ನು ಒಪ್ಪಿಕೊಂಡಿದ್ದಕ್ಕೆ ಆಶ್ಚರ್ಯವೇನು ಆಗ್ಲಿಲ್ಲ. ಜೊತೆಗೆ ವಿಷ್ಣು ಮಂಚು ತೆಲುಗಿನ ಪ್ರಮುಖ ನಿರ್ಮಾಪಕರಲ್ಲೊಬ್ಬರು. ಹಾಗಾಗಿ ಈ ಪ್ರಾಜೆಕ್ಟ್ ಭಾರಿ ಬಜೆಟ್‌ನದ್ದು ಅನ್ನೋದರ ಬಗ್ಗೆ ಯಾವುದೇ ಅನುಮಾನವಿಲ್ಲ.

Kangana Ranaut to play opposite Prabhas in Kannappa mythology movie

ಅಂದ್ಹಾಗೆ 'ಕಣ್ಣಪ್ಪ' ಸಿನಿಮಾವನ್ನು ಮುಕೇಶ್ ಕುಮಾರ್ ಸಿಂಗ್ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಕೃತಿ ಸನನ್ ಸಹೋದರಿ ನೂಪುರ್ ಸನನ್ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ಆದರೆ, ಈಗ ಚರ್ಚೆಯಾಗ್ತಿರೋ ವಿಚಾರ ಇದಲ್ಲ. ಶಿವನಾಗಿ ಪ್ರಭಾಸ್ ಕಾಣಿಸಿಕೊಳ್ಳುತ್ತಿರೋ ಹೌದಾದರೂ, ಆ ಶಿವನಿಗೆ ಪಾರ್ವತಿ ಯಾರು? ಅನ್ನೋ ಕುತೂಹಲ ಇತ್ತು. ಕೆಲವು ದಿನಗಳ ಹಿಂದೆ ಕಂಗನಾ ರಣಾವತ್ ಹೆಸರು ಓಡಾಡಿತ್ತು. ಬಳಿಕ ಅದು ಸೈಲೆಂಟ್ ಆಗಿತ್ತು.

ಈಗ ಮತ್ತೆ ಕಂಗನಾ ಹೆಸರು ಓಡಾಡುತ್ತಿದೆ. ಪ್ರಭಾಸ್ ಜೊತೆ ಪಾರ್ವತಿ ಪಾತ್ರಕ್ಕೆ ಕಂಗನಾ ರಣಾವತ್ ಫಿಕ್ಸ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿಸಲಾಗಿದೆ. ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಕಂಗನಾಗೆ ಪೌರಾಣಿಕ ಪಾತ್ರ ನಿಜಕ್ಕೂ ಚೆನ್ನಾಗೇ ಸೂಟ್ ಆಗುತ್ತೆ ಎಂದು ನಟಿಯ ಅಭಿಮಾನಿಗಳು ಈಗಾಗ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ.

Kangana Ranaut to play opposite Prabhas in Kannappa mythology movie

ಪ್ರಭಾಸ್ ಹಾಗೂ ಕಂಗನಾ ಈ ಹಿಂದೆ 'ಏಕ್ ನಿರಂಜನ್' ಅನ್ನುವ ತೆಲುಗು ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾವನ್ನು ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. 2009ರಲ್ಲಿ ಈ ಸಿನಿಮಾ ತೆರೆಕಂಡಿತ್ತು. ಒಂದು ವೇಳೆ 'ಕಣ್ಣಪ್ಪ' ಸಿನಿಮಾದಲ್ಲಿ ಕಂಗನಾ ನಟಿಸುದೇ ಆದರೆ, 16 ವರ್ಷಗಳ ಬಳಿಕ ಈ ಜೋಡಿ ಒಂದಾದಂತೆ ಆಗುತ್ತೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇದಲ್ಲದೇ ಕಂಗನಾ ರಾಜಕೀಯ ಹಿನ್ನೆಲೆಯ ಕಥೆಯುಳ್ಳ ಸಿನಿಮಾದಲ್ಲಿ ನಾಯಕಿಯ ಪಾತ್ರ ನಿರ್ವಹಿಸ್ತಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಬದುಕಿನ ಸುತ್ತ ಹೆಣೆದ ಕಥೆಯ ಚಿತ್ರ 'ಎಮರ್ಜೆನ್ಸಿ'ಯನ್ನು ಯಾವೇ ನಿರ್ಮಿಸಿ, ನಿರ್ದೇಶಿಸಿ ಇಂದಿರೆಯ ಪಾತ್ರದಲ್ಲೂ ಖುದ್ದು ಕಂಗನಾ ನಟಿಸಿದ್ದಾರೆ. ಈ ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲು ಸಜ್ಜಾಗ್ತಿದೆ. ಈ ಸಿನಿಮಾ ಕೂಡ ಅತೀ ದೊಡ್ಡ ವಿವಾದಗಳಿಗೆ ನಾಂದಿ ಹಾಡುವ ಎಲ್ಲಾ ಸೂಚನೆಗಳಿವೆ. ಯಾಕೆಂದರೆ ದೇಶಕ್ಕೆ ಮೊದಲ ಬಾರಿ ಎಮರ್ಜೆನ್ಸಿ ಘೋಷಿಸಿದ್ದ ಪ್ರಧಾನಿ ಇಂದಿರಾ ಗಾಂಧಿಯವರ ಆ ಸಮಯದ ಬದುಕು, ಆಲೋಚನೆ, ತಂತ್ರ, ಮನಸ್ಥಿತಿ ಎಲ್ಲವುಗಳ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗಿದೆ.

More from Filmibeat

English summary
Buzz: Kangana to play in Prabhas mythology movie Kannappa
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X