ಇತರ ಭಾಷೆಗಳಿಗೆ ರಿಮೇಕಾದ ಕನ್ನಡದ ಚಿತ್ರಗಳು - 1
ಕನ್ನಡದಲ್ಲಿ ಬರುವ ಚಿತ್ರಗಳು ರಿಮೇಕ್ ಚಿತ್ರಗಳು, ನಮ್ಮ ಕೆಲ ನಾಯಕ ನಟರು ಬರೀ ರಿಮೇಕ್ ಚಿತ್ರದಲ್ಲಿ ನಟಿಸುತ್ತಾರೆಂದು ಮೂಗು ಮುರಿಯುವವರು ಒಂದು ಸಲ ಈ ಆರ್ಟಿಕಲ್ ಮೇಲೆ ಕಣ್ಣು ಹಾಯಿಸಿ.
ಇತರ ಭಾಷೆಯ ಚಿತ್ರಾಭಿಮಾನಿಗಳಿಗೆ ರಿಮೇಕ್ ಚಿತ್ರವೋ ಅಥವಾ ಸ್ವಮೇಕ್ ಚಿತ್ರವೋ ಅನ್ನೋ ಕುತೂಹಲ ಅಷ್ಟಾಗಿ ಇರುವುದಿಲ್ಲ ಅಥವಾ ನಮ್ಮವರ ಹಾಗೇ ಅದಕ್ಕಾಗಿ ಸಂಶೋಧನೆ ನಡೆಸುವುದಕ್ಕೂ ಹೋಗುವುದಿಲ್ಲ.
ಕನ್ನಡದಿಂದ ಇತರ ಭಾಷೆಗಳಿಗೆ ಅದರಲ್ಲೂ ಪ್ರಮುಖವಾಗಿ ಹಿಂದಿ, ತೆಲುಗು ಮತ್ತು ತಮಿಳು ರಿಮೇಕ್ ಆದ ಚಿತ್ರಗಳ ಸಂಖ್ಯೆ ದೊಡ್ಡದಿದೆ.
ಕನ್ನಡದಿಂದ ರಿಮೇಕ್ ಆದ ಮತ್ತು ಸ್ಪೂರ್ಥಿ ಪಡೆದು ನಿರ್ಮಾಣವಾದ ಪ್ರಮುಖ ಚಿತ್ರಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಲೇಖನವೊಂದರಲ್ಲಿ ಐದು ಚಿತ್ರಗಳ ಮಾಹಿತಿಯಂತೆ ಕಂತುಗಳ ಮೂಲಕ ಮುಂದಿನ ದಿನದಲ್ಲೂ ನೀಡುತ್ತೇವೆ.
ರಿಮೇಕ್ ಆದ ಹಳೆಯ ಐದು ಚಿತ್ರಗಳಾವುವು ಸ್ಲೈಡಿನಲ್ಲಿ ನೋಡಿ

ಮಲ್ಲಮ್ಮನ ಪವಾಡ
ಜ್ಯೋತಿ (ಹಿಂದಿ), ಎಂಗ ಚಿನ್ನ ರಾಸ (ತಮಿಳು), ಬೇಟಾ (ಹಿಂದಿ), ಅಬ್ಬಯ್ಯಗಾರು (ತೆಲುಗು), ಅಣ್ಣಯ್ಯ (ಕನ್ನಡ)
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಬಿ ಸರೋಜಾ ದೇವಿ, ವಜ್ರಮುನಿ
ನಿರ್ದೇಶಕ (ಹಿಂದಿ): ಪ್ರಮೋದ್ ಚಕ್ರವರ್ತಿ (ಜ್ಯೋತಿ) , ಇಂದ್ರ ಕುಮಾರ್ (ಬೇಟಾ)
ನಿರ್ದೇಶಕ (ತಮಿಳು) : ಭಾಗ್ಯರಾಜ್
ನಿರ್ದೇಶಕ (ಕನ್ನಡ, ಅಣ್ಣಯ್ಯ) : ರಾಜೇಂದ್ರ ಸಿಂಗ್ ಬಾಬು

ನಾಗರಹಾವು
ಜಹ್ರೀಲಾ ಇನ್ಸಾನ್ (ಹಿಂದಿ), ರಾಜಾ ನಾಗಂ (ತಮಿಳು), ಕೊಡೆ ನಾಗು (ತೆಲುಗು)
ಮೂಲ ನಿರ್ದೇಶಕರು : ಪುಟ್ಟಣ್ಣ ಕಣಗಾಲ್
ಮೂಲ ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ಆರತಿ, ವೈಶಾಲಿ ಕಾಸರವಳ್ಳಿ, ಅಶ್ವಥ್
ನಿರ್ದೇಶಕ (ಹಿಂದಿ): ಪುಟ್ಟಣ್ಣ ಕಣಗಾಲ್ (ಮುಖ್ಯ ಪಾತ್ರದಲ್ಲಿ ರಿಶಿ ಕಪೂರ್, ಮೌಸಮಿ ಚಟರ್ಜಿ, ನೀತು ಸಿಂಗ್)
ನಿರ್ದೇಶಕ (ತಮಿಳು) : ಎನ್ ಎಸ್ ಮನಿಯನ್
ನಿರ್ದೇಶಕ (ತೆಲುಗು) : ಕೆ ಎಸ್ ಪ್ರಕಾಶ್ ರಾವ್

ಶಂಕರ್ ಗುರು
ತ್ರಿಶೂಲಂ (ತಮಿಳು),
ಮೂಲ ನಿರ್ದೇಶಕರು : ಸೋಮಶೇಖರ್ ವಿ
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಮಾಲ, ಬಾಲಕೃಷ್ಣ
ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ಪ್ರಧಾನ ಭೂಮಿಕೆಯಲ್ಲಿದ್ದರು. ಇದು ಶಿವಾಜಿ ಅವರ 200ನೇ ಚಿತ್ರ. ನಾಯಕಿಯಾಗಿ ಇಂದಿನ ತಮಿಳುನಾಡು ಸಿಎಂ ಜಯಲಲಿತಾ ನಟಿಸಿದ್ದರು.
ಮಹಾನ್ (ಹಿಂದಿ)
ನಿರ್ದೇಶಕರು: ರಾಮನಾಥನ್
ಅಮಿತಾಬ್ ಬಚ್ಚನ, ವಹೀದಾ ರೆಹಮಾನ್

ಕಸ್ತೂರಿ ನಿವಾಸ
ಆವನಥನ್ ಮನಿಯನ್ (ತಮಿಳು)
ಮೂಲ ನಿರ್ದೇಶಕರು : ದೊರೈ - ಭಗವಾನ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಜಯಂತಿ, ಆರತಿ
ನಿರ್ದೇಶಕ (ತಮಿಳು) : ಕೆ ಶಂಕರ್
ತಮಿಳು ಚಿತ್ರದಲ್ಲಿ ಶಿವಾಜಿ ಗಣೇಶನ್ ಪ್ರಧಾನ ಭೂಮಿಕೆಯಲ್ಲಿದ್ದರು. ಇದು ಶಿವಾಜಿ ಅವರ ನೂರನೇ ಚಿತ್ರವಾಗಿತ್ತು.

ಅನುರಾಗ ಅರಳಿತು
ಘರನಾ ಮೊಗಡು (ತೆಲುಗು), ಮನ್ನನ್ (ತಮಿಳು), ಲಡ್ಲಾ (ಹಿಂದಿ)
ಕಾದಂಬರಿ ಆಧಾರಿತ ಅನುರಾಗ ಅರಳಿತು ಚಿತ್ರವು ಮೂರು ಭಾಷೆಯಲ್ಲಿ ರಿಮೇಕ್ ಗೊಂಡಿತ್ತು.
ಮೂಲ ನಿರ್ದೇಶಕರು : ಎಂ ಎಸ್ ರಾಜಶೇಖರ್
ಮೂಲ ತಾರಾಗಣದಲ್ಲಿ : ಡಾ. ರಾಜಕುಮಾರ್, ಮಾಧವಿ, ಗೀತಾ
ನಿರ್ದೇಶಕ (ತೆಲುಗು): ಕೆ ರಾಘವೇಂದ್ರ ರಾವ್
ನಿರ್ದೇಶಕ (ತಮಿಳು): ಪಿ ವಾಸು
ನಿರ್ದೇಶಕ (ಹಿಂದಿ): ರಾಜ್ ಕನ್ವರ್


Click it and Unblock the Notifications











