ನಮ್ಮ ಚಿತ್ರಗಳೇನು ಕಮ್ಮಿ,ರಿಮೇಕಾದ ಕನ್ನಡದ ಚಿತ್ರಗಳು - 4
ನಮ್ಮ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಉದಾಹರಣೆ ಒಂದಲ್ಲಾ, ಎರಡಲ್ಲಾ. ಅದನ್ನು ನಮ್ಮ ಓದುಗರಿಗೆ ತಿಳಿಸುವ ಪ್ರಯತ್ನವಾಗಿ ಈ ಲೇಖನಗಳ ಸರಣಿಯನ್ನು ಆರಂಭಿಸಿ, ಇದುವರೆಗೆ ಹದಿನೈದು ಚಿತ್ರಗಳ ಬಗ್ಗೆ ತಿಳಿಸಿದ್ದೇವೆ.
ಮೊದಲ ಲೇಖನದಲ್ಲಿ ಮಲ್ಲಮ್ಮನ ಪವಾಡ, ನಾಗರಹಾವು, ಶಂಕರ್ ಗುರು, ಕಸ್ತೂರಿ ನಿವಾಸ ಮತ್ತು ಅನುರಾಗ ಅರಳಿತು ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಮಾಹಿತಿ ನೀಡಿದ್ದೆವು.
ಎರಡನೇ ಲೇಖನದಲ್ಲಿ ಬಂಗಾರದ ಪಂಜರ, ಸ್ಕೂಲ್ ಮಾಸ್ಟರ್, ಮಾನಸ ಸರೋವರ, ಪಡುವಾರಹಳ್ಳಿ ಪಾಂಡವರು ಮತ್ತು ಬಂಧಮುಕ್ತ ಚಿತ್ರಗಳು ಯಾವ ಯಾವ ಭಾಷೆಗೆ ರಿಮೇಕಾದ ಬಗ್ಗೆ ಬರೆದಿದ್ದೆವು.
ಮೂರನೇ ಲೇಖನದಲ್ಲಿ ಪ್ರೇಮದ ಕಾಣಿಕೆ, ನಾ ನಿನ್ನ ಮರೆಯಲಾರೆ, ನಾನೊಬ್ಬ ಕಳ್ಳ, ಕಥಾ ಸಂಗಮ ಮತ್ತು ವಸಂತ ಗೀತ ಚಿತ್ರಗಳು ಇತರ ಭಾಷೆಗಳಿಗೆ ರಿಮೇಕಾದ ಬಗ್ಗೆ ತಿಳಿಸಿದ್ದೆವು.
ಸರಣಿಯ ನಾಲ್ಕನೇ ಲೇಖನದಲ್ಲಿ ಮತ್ತೆ ಐದು ಚಿತ್ರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೇರೆ ಭಾಷೆಗೆ ರಿಮೇಕಾದ ಚಿತ್ರಗಳಾವುವು ಸ್ಲೈಡಿನಲ್ಲಿ ನೋಡಿ

ಸಹೋದರರ ಸವಾಲ್
ಅನ್ನಾದಮುಲ್ಲಾ ಸವಾಲ್ (ತೆಲುಗು),
ಸಹೋದರರ ಸಪ್ತಂ (ತಮಿಳು)
ಮೂಲ ನಿರ್ದೇಶಕರು : ಕೆ ಎಸ್ ಆರ್ ದಾಸ್
ಮೂಲ ತಾರಾಗಣದಲ್ಲಿ : ಡಾ. ವಿಷ್ಣುವರ್ಧನ್, ರಜನೀಕಾಂತ್, ಪದ್ಮಪ್ರಿಯಾ
ನಿರ್ದೇಶಕ (ತೆಲುಗು) : ಕೆ ಎಸ್ ಆರ್ ದಾಸ್
ತಾರಾಗಣದಲ್ಲಿ : ಕೃಷ್ಣ, ರಜನೀಕಾಂತ್
ನಿರ್ದೇಶಕ (ತಮಿಳು) : ಕೆ ಎಸ್ ಆರ್ ದಾಸ್
ತಾರಾಗಣದಲ್ಲಿ : ರಜನೀಕಾಂತ್

ಕುಂಕುಮ ರಕ್ಷೆ
ಕುರಿಂಜಿ ಮಲಾರ್ (ತಮಿಳು)
ಮೂಲ ನಿರ್ದೇಶಕರು : ಎಸ್ ಕೆ ಎ ಚಾರಿ
ಮೂಲ ತಾರಾಗಣದಲ್ಲಿ : ರಜನೀಕಾಂತ್, ಮಂಜುಳಾ
ನಿರ್ದೇಶಕ (ತಮಿಳು) : ಎಸ್ ಕೆ ಎ ಚಾರಿ
ತಾರಾಗಣದಲ್ಲಿ : ರಜನೀಕಾಂತ್

ಸತ್ಯ ಹರಿಶ್ಚಂದ್ರ
ಹರಿಶ್ಚಂದ್ರ (ಮಲಯಾಳಂ)
1943ರಲ್ಲಿ ಬಿಡುಗಡೆಯಾದ ಕನ್ನಡ ಸತ್ಯ ಹರಿಶ್ಚಂದ್ರ ಚಿತ್ರದ ಸ್ಪೂರ್ಥಿಯಿಂದ ಬಂದ ಚಿತ್ರ.
1965ರಲ್ಲಿ ಹುಣಸೂರು ಕೃಷ್ಣಮೂರ್ತಿ ಮತ್ತೊಮ್ಮೆ ಕನ್ನಡದಲ್ಲಿ ನಿರ್ದೇಶಿಸಿದ್ದರು. ಡಾ. ರಾಜ್, ಪಂಡರೀಬಾಯಿ, ನರಸಿಂಹರಾಜು ಪ್ರಮುಖ ಭೂಮಿಕೆಯಲ್ಲಿದ್ದರು.
ನಿರ್ದೇಶಕ (ಮಲಯಾಳಂ) : ಆಂಥೋನಿ ಮಿತ್ರದಾಸ್
ತಾರಾಗಣದಲ್ಲಿ : ಟಿ ಸುಕುಮಾರನ್ ನಾಯರ್, ಮಿಸ್ ಕುಮಾರಿ, ಜಿ ಕೆ ಪಿಳ್ಳೈ
(1943ರಲ್ಲಿ ಬಿಡುಗಡೆಯಾದ ಸತ್ಯ ಹರಿಶ್ಚಂದ್ರ ಚಿತ್ರದ ಇಮೇಜಲ್ಲ).

ಅಮೃತಧಾರೆ
ಅಮೃತವರ್ಷಂ (ತೆಲುಗು)
ಮೂಲ ನಿರ್ದೇಶಕರು : ನಾಗತಿಹಳ್ಳಿ ಚಂದ್ರಶೇಖರ್
ಮೂಲ ತಾರಾಗಣದಲ್ಲಿ : ಧ್ಯಾನ್, ರಮ್ಯಾ, ಭವ್ಯಾ, ಮಂಡ್ಯ ರಮೇಶ್, ಅಮಿತಾಭ್ ಬಚ್ಚನ್
ನಿರ್ದೇಶಕ (ತೆಲುಗು): ಚಂದ್ರಶೇಖರ್
ತಾರಾಗಣದಲ್ಲಿ : ಸಮೀರ್ ದತ್ತಾನಿ, ರಮ್ಯಾ, ಜಯಸುಧಾ

ಮರ್ಮ
ಮರ್ಮಂ (ತೆಲುಗು)
ಮೂಲ ನಿರ್ದೇಶಕರು : ಸುನಿಲ್ ಕುಮಾರ್ ದೇಸಾಯಿ
ಮೂಲ ತಾರಾಗಣದಲ್ಲಿ : ಪ್ರೇಮಾ, ಆನಂದ್
ನಿರ್ದೇಶಕ (ತೆಲುಗು ): ಮದನ್
ತಾರಾಗಣದಲ್ಲಿ : ಸಾಯಿ ಕುಮಾರ್, ಥ್ರಿಲ್ಲರ್ ಮಂಜು, ಜಾಕಿ ಶ್ರಾಫ್


Click it and Unblock the Notifications











