'NTR 30' ಕನ್ನಡದ ಕಿರುತೆರೆ ನಟಿಗೆ ಬಂಪರ್ ಆಫರ್: ಸಿಕ್ಕಿದ್ದು ಸೈಫ್ ಪತ್ನಿ ಪಾತ್ರ..ಯಾರೀ ನಟಿ?

RRR ವಿಶ್ವ ಮಟ್ಟದಲ್ಲಿ ಸದ್ದು ಮಾಡಿದ ಬಳಿಕ ಜೂ.ಎನ್‌ಟಿಆರ್ 30ನೇ ಸಿನಿಮಾ ಬಗ್ಗೆ ಕುತೂಹಲ ಗರಿಗೆದರಿತ್ತು. ರಾಜಮೌಳಿ ಬಳಿಕ ಯಾರು ನಿರ್ದೇಶನ ಮಾಡುತ್ತಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿತ್ತು. ಕೊರಟಾಲ ಶಿವ ಆಕ್ಷನ್ ಕಟ್ ಹೇಳೋದು ಕನ್ಫರ್ಮ್ ಆಗಿತ್ತು. ಇಲ್ಲಿಂದ ಈ ಸಿನಿಮಾ ಒಂದಲ್ಲ ಒಂದು ಸರ್ಪ್ರೈಸ್ ಸಿಗುತ್ತಲೇ ಇದೆ.

ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೆ ಏರುತ್ತಿದ್ದಂತೆ ಜೂ.ಎನ್‌ಟಿಆರ್ 30ನೇ ಸಿನಿಮಾಗೆ ದಿಗ್ಗಜರೇ ಎಂಟ್ರಿ ಕೊಟ್ಟಿದ್ದಾರೆ. 'NTR 30' ಸಿನಿಮಾ ಮೂಲಕ ಬಾಲಿವುಡ್ ನಟ ಸೈಫ್ ಅಲಿಖಾನ್ ಟಾಲಿವುಡ್‌ಗೆ ಎಂಟ್ರಿಕೊಟ್ಟಿದ್ದಾರೆ. ಹಾಗೇ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅನ್ನು ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿದೆ.

Kannada Serial Actress Chaithra Rai will seen as Saif ali khan wife in NTR 30

ಈಗ ಮತ್ತೊಬ್ಬ ನಟಿ ಎಂಟ್ರಿಯಾಗಿದೆ. ಇದು ತೆಲುಗು ಹಾಗೂ ಕನ್ನಡ ಸಿನಿಪ್ರಿಯರಿಗೆ ಸರ್ಪ್ರೈಸ್. ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿರೋ ಮಂಗಳೂರಿನ ಮೂಲದ ನಟಿ ಚೈತ್ರಾ ರೈ 'NTR 30'ಯ ಪ್ರಮುಖ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಈ ಬಿಗ್ ಬಜೆಟ್ ಸಿನಿಮಾಗೆ ಕಿರುತೆರೆ ನಟಿ ಚೈತ್ರಾ ರೈ ಅವರನ್ನು ಆಯ್ಕೆ ಮಾಡಿ ಸರ್ಪ್ರೈಸ್ ಕೊಟ್ಟಿದೆ.

'NTR 30' ಸಿನಿಮಾದಲ್ಲಿ ಚೈತ್ರಾ ರೈ

ಚೈತ್ರಾ ರೈ, ಕನ್ನಡ ಹಾಗೂ ತೆಲುಗು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲೂ ಸ್ಟಾರ್ ಮಾದಲ್ಲಿ ಪ್ರಸಾರ ಆಗುತ್ತಿದ್ದ 'ಅಷ್ಟ ಚೆಮ್ಮಾ' ಜನಪ್ರಿಯ ಧಾರಾವಾಹಿ ಚೈತ್ರಾ ರೈ ಹೊಸ ಇಮೇಜ್ ಕೊಟ್ಟಿತ್ತು. ತೆಲುಗು ರಾಜ್ಯಗಳ ಮನೆಮನೆಯಲ್ಲಿ ಜನಪ್ರಿಯವಾಗುವಂತೆ ಮಾಡಿತ್ತು. ಇದೇ ನಟಿ ಈಗ 'ಎನ್‌ಟಿಆರ್ 30' ಸಿನಿಮಾ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

Kannada Serial Actress Chaithra Rai will seen as Saif ali khan wife in NTR 30

ಟಾಲಿವುಡ್‌ನಲ್ಲಿ ಕಳೆದ ಎರಡು ದಿನಗಳಿಂದ ಚೈತ್ರಾ ರೈ ಬಗ್ಗೆನೇ ಸುದ್ದಿಯಾಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾದ ಪ್ರಮುಖ ಪಾತ್ರಕ್ಕೆ ಚೈತ್ರಾ ರೈ ಎಂಟ್ರಿ ಜೊತೆಗೆ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಅನ್ನೋ ಬಗ್ಗೆನೂ ಚರ್ಚೆಯಾಗುತ್ತಿದೆ.

ಸೈಫ್ ಅಲಿಖಾನ್ ಪತ್ನಿ ಪಾತ್ರದಲ್ಲಿ ಚೈತ್ರಾ ರೈ

'ಎನ್‌ಟಿಆರ್ 30' ಸಿನಿಮಾದ ಶೂಟಿಂಗ್ ಈಗಾಗಲೇ ಆರಂಭ ಆಗಿದೆ. ಚೈತ್ರಾ ರೈ ಕೂಡ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಟಾಲಿವುಡ್ ಮೂಲಗಳ ಪ್ರಕಾರ, ಈ ಕಿರುತೆರೆ ನಟಿ ಸೈಫ್ ಅಲಿ ಖಾನ್ ಪತ್ನಿಯಾಗಿ ನಟಿಸುತ್ತಿದ್ದಾರೆ.

" ಸಿನಿಮಾ ಸೆಟ್‌ನಲ್ಲಿ ಜೂ.ಎನ್‌ಟಿಆರ್, ಸೈಫ್ ಅಲಿಖಾನ್ ಅವರಂತಹ ಬಿಗ್ ಸ್ಟಾರ್‌ಗಳನ್ನು ನೋಡಿ ಥ್ರಿಲ್ ಆದೆ. ಅಂತಹ ದೊಡ್ಡ ಸ್ಟಾರ್‌ಗಳ ಜೊತೆ ನಟಿಸೋ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ." ಎಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಚೈತ್ರಾ ರೈ ಹೇಳಿದ್ದಾರೆಂದು ವರದಿಯಾಗಿದೆ.

ಚೈತ್ರಾ ರೈ ಹಿನ್ನೆಲೆ ಏನು?

ಚೈತ್ರಾ ರೈ ಕನ್ನಡದ ಕಿರುತೆರೆಯಿಂದ ವೃತ್ತಿ ಜೀವನ ಆರಂಭ ಮಾಡಿದ್ದರು. ಕನ್ನಡ ಧಾರಾವಾಹಿ 'ಕುಸುಮಾಂಜಲಿ' ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇದರ ಹಿಂದೆನೇ 'ಬೊಂಬೆಯಾಟವಯ್ಯ'ದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಬ್ರೇಕ್ ಕೊಟ್ಟಿದ್ದು 'ರಾಧಾ ಕಲ್ಯಾಣ' ಧಾರಾವಾಹಿ. ಅಲ್ಲದೆ 'ವಿಶಾಕಾ' ಅನ್ನೋ ಧಾರಾವಾಹಿಯಲ್ಲಿ ನೆಗೆಟಿವ್ ರೋಲ್‌ನಲ್ಲೂ ಮಿಂಚಿದ್ದರು.

ಕನ್ನಡದ ಬಳಿಕ ತೆಲುಗು ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. 'ಅಷ್ಟಾ ಚಮ್ಮ' ಚೈತ್ರಾ ರೈ ನಟಿಸಿದ ತೆಲುಗಿನ ಜನಪ್ರಿಯ ಹಾಗೂ ಮೊದಲ ಧಾರಾವಾಹಿ. ಇಲ್ಲಿಂದ 'ಅತ್ತಾರಿಂತ್ಲೋ ಅಕ್ಕ ಚೆಲ್ಲೆಲ್ಲು' ಹಾಗೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಚೈತ್ರಾ ರೈ ರಾಡಕು ನೀವೆರ ಪ್ರಾಣಂ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Kannada Serial Actress Chaithra Rai will seen as Saif ali khan wife in NTR 30, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X