ಬೋಲ್ಡ್ ಫೋಟೊ ಶೇರ್ ಮಾಡಿ ಹೆಲ್ತ್ ಟಿಪ್ಸ್ ಕೊಟ್ಟ ಜ್ಯೋತಿ ರೈ: ನೆಟ್ಟಿಗರು ರಿಯಾಕ್ಷನ್ ಏನು?

ಕರ್ನಾಟಕದ ಕರಾವಳಿಯ ನಟಿಯರು ಪಕ್ಕದ ರಾಜ್ಯದಲ್ಲಿ ಮಿಂಚುತ್ತಿರೋದು ಗೊತ್ತೇ ಇದೆ. ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ ಹೀಗೆ ಹೆಸರುಗಳು ಬೆಳೆಯುತ್ತಾ ಹೋಗುತ್ತವೆ. ಇವರಲ್ಲಿ ಕಿರುತೆರೆ ನಟಿ ಜ್ಯೋತಿ ರೈ ಕೂಡ ಒಬ್ಬರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದಾರೆ. ಆಗಾಗ ಗ್ಲಾಮರ್ ಫೋಟೊಗಳನ್ನು ಶೇರ್ ಮಾಡಿ ಗಮನ ಸೆಳೆಯುತ್ತಾರೆ.

ಜ್ಯೋತಿ ರೈ ಇನ್ನೊಂದು ಹೆಸರು ಜಯಶ್ರೀ ರೈ. ಸದ್ಯ ತೆಲುಗಿನಲ್ಲಿ ಬ್ಯುಸಿಯಾಗಿರುವ ನಟಿ, ಕನ್ನಡದಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಜೋಗಳ' ಧಾರಾವಾಹಿ ಇವರಿಗೆ ಜನಪ್ರಿಯತೆ ತಂದುಕೊಟ್ಟಿತ್ತು. ಇದರೊಂದಿಗೆ 'ಕನ್ಯಾದಾನ', 'ಗೆಜ್ಜೆಪೂಜೆ', 'ಅನುರಾಗ ಸಂಗಮ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು', 'ಕಸ್ತೂರಿ ನಿವಾಸ'ದಂತಹ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

Kannada Telugu actress Jyothi Rai shares health tips with glam photo

ನಿಖಿಲ್ ಕುಮಾರ್ ನಟಿಸಿದ 'ಸೀತಾರಾಮ ಕಲ್ಯಾಣ' ಸಿನಿಮಾದಲ್ಲೂ ಪೋಷಕ ಪಾತ್ರದಲ್ಲಿ ನಟಿಸಿದ್ದರು. ಹಾಗಂತ ಕನ್ನಡದಲ್ಲಷ್ಟೇ ಅಲ್ಲ ತೆಲುಗಿ ಧಾರಾವಾಹಿಗಳಲ್ಲೂ ಜ್ಯೋತಿ ರೈ ತುಂಬಾನೇ ಫೇಮಸ್. 38 ವರ್ಷ ಈ ನಟಿ 'ಗುಪ್ಪೆದಂತ ಮನಸ್ಸು' ತೆಲುಗು ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬೋಲ್ಡ್ ಫೋಟೊಗಳನ್ನು ಹಂಚಿಕೊಂಡು ಹೆಲ್ತ್ ಟಿಪ್ಸ್ ಅನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಜ್ಯೋತಿ ರೈ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದರು. ಮಿನಿ ಡ್ರೆಸ್‌ನಲ್ಲಿ ತಲೆ ಕೂದಲನ್ನು ಇಳಿ ಬಿಟ್ಟು, ಕೈಯಲ್ಲಿ ಗ್ಲಾಸ್ ಹಿಡಿದು ಜ್ಯೋತಿ ರೈ ಪೋಸ್ ಕೊಟ್ಟಿದ್ದರು. ಈ ಫೋಟೊ ಪಡ್ಡೆ ಹುಡುಗರ ನಿದ್ದೆ ಕದ್ದಿರೋದು ಅಷ್ಟೇ ನಿಜ.

ಜ್ಯೋತಿ ರೈ ತಮ್ಮ ಇನ್‌ಸ್ಟಾ ಸ್ಟೇಟಸ್‌ನಲ್ಲಿ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದಷ್ಟೇ ಅಲ್ಲ. ಹೆಲ್ತ್ ಟಿಪ್ಸ್ ಕೂಡ ಕೊಟ್ಟಿದ್ದಾರೆ. ಬೆಳ್ಳುಳ್ಳಿಯನ್ನು ಫೋಟೊವನ್ನು ಶೇರ್ ಮಾಡಿ, ಅದರ ಉಪಯೋಗಗಳನ್ನು ಬರೆದುಕೊಂಡಿದ್ದಾರೆ. "ಬೆಳಗ್ಗೆ ಎದ್ದ ಕೂಡಲೇ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಿಸುತ್ತೆ. ಲಿವರ್ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತೆ. ಜೀರ್ಣಕ್ರಿಯೆ ಹೆಚ್ಚಾಗುತ್ತೆ" ಎಂದು ಜ್ಯೋತಿ ರೈ ಸಲಹೆ ನೀಡಿದ್ದಾರೆ.

Kannada Telugu actress Jyothi Rai shares health tips with glam photo

ಜ್ಯೋತಿ ರೈ ಇತ್ತೀಚೆಗೆ ತೆಲುಗಿನ ಯುವ ನಿರ್ದೇಶಕನೊಂದಿಗೆ ಎಂಗೇಜ್ ಆಗಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. 'ಶುಕ್ರ', 'ಮಾತಾ ರಾಣಿ ಮೌನಮಿದಿ', 'ಎ ಮಾಸ್ಟರ್‌ಪೀಸ್' ಅಂತಹ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಸುಕು ಪೂರ್ವಜ್ ಜೊತೆ ಎಂಗೇಜ್ ಆಗಿದ್ದಾರೆ. ಈ ವಿಷಯವನ್ನು ಜ್ಯೋತಿ ರೈ ಬಹಿರಂಗ ಪಡಿಸಿ ಸುದ್ದಿಯಲ್ಲಿದ್ದರು.

ಅಂದ್ಹಾಗೆ, ಜ್ಯೋತಿ ರೈ 20ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ ಒಬ್ಬ ಮಗ ಕೂಡ ಇದ್ದಾನೆ. ಆದರೆ, ಮೊದಲನೇ ಪತಿಯಿಂದ ವಿಚ್ಚೇದನ ಪಡೆದಿದ್ದಾರೆ. ಜ್ಯೋತಿ ರೈ 'ಬಂದೇ ಬರತಾವ ಕಾಲ' ಅನ್ನೋ ಕನ್ನಡ ಧಾರಾವಾಹಿ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು. ಈಗ ಸುಮಾರು 18ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಾಗೇ ಕನ್ನಡ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.

More from Filmibeat

English summary
Actress Jyothi Rai's beauty secrets and health tips:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X