ಸುಭಾಷ್ ಚಂದ್ರ ಬೋಸ್‌ಗಾಗಿ 'ಸ್ಪೈ' ಆದ 'ಕಾರ್ತಿಕೇಯ': ಮೋದಿ ಉದ್ಘಾಟಿಸಿದ್ದ ನೇತಾಜಿ ಪ್ರತಿಮೆ ಬಳಿಯೇ ಟೀಸರ್ ರಿಲೀಸ್!
ದಕ್ಷಿಣ ಭಾರತದ ಸಿನಿಮಾಗಳು ಬಾಲಿವುಡ್‌ನಲ್ಲೂ ಮೋಡಿವೆ. ಅಂತದ್ರಲ್ಲಿ ನಿಖಿಲ್ ಸಿದ್ಧಾರ್ಥ್ ಅಭಿನಯದ 'ಕಾರ್ತಿಕೇಯ 2' ಕೂಡ ಒಂದು. ಈ ಸಿನಿಮಾ ತೆಲುಗಿಗಿಂತ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದೇ ಹೆಚ್ಚು. ಬಾಕ್ಸಾಫೀಸ್‌ನಲ್ಲಿ ಅಚ್ಚರಿ ಫಲಿತಾಂಶ ಸಿಕ್ಕಿತ್ತು.
'ಕಾರ್ತಿಕೇಯ 2' ಸಿನಿಮಾದಿಂದ ನಿಖಿಲ್ ಸಿದ್ಧಾರ್ಥ್ ಬಾಲಿವುಡ್‌ನಲ್ಲಿ ಶೈನ್ ಆಗಿದ್ದಾರೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರೋ ನಟ ಮತ್ತೊಂದು ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಬಾರಿ ಇನ್ನೂ ಗಂಭೀರ ವಿಷಯವನ್ನು ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡಬೇಕಿಲ್ಲ. ಅವರ ಬದುಕಿನ ಅದೆಷ್ಟು ರಹಸ್ಯಗಳು ಇನ್ನೂ ರಹಸ್ಯವಾಗಿಯೇ ಉಳಿದಿವೆ. ನಿಖಿಲ್ ಸಿದ್ಧಾರ್ಥ್ ಇವರ ಬದುಕಿನ ಆಧರಿಸಿದ 'ಸ್ಪೈ' ಸಿನಿಮಾದಲ್ಲಿ ನಟಿಸಿದ್ದಾರೆ. ಅದೇ ಸಿನಿಮಾದ ಟೀಸರ್ ಈಗ ರಿಲೀಸ್ ಆಗಿದೆ.
'ಸ್ಪೈ' ಸಿನಿಮಾದಲ್ಲಿ ನೇತಾಜಿ ಜೀವನ ರಹಸ್ಯ?
ನಿಖಿಲ್ ಸಿದ್ಧಾರ್ಥ್ ಸಿನಿಮಾ 'ಸ್ಪೈ' ಟೀಸರ್ ಸಿನಿಪ್ರಿಯರ ಮನಸ್ಸು ಗೆದ್ದಿದೆ. ಪಕ್ಕಾ ಆಕ್ಷನ್ ಪ್ಯಾಕ್ಡ್ ಟೀಸರ್ ಪ್ರೇಕ್ಷಕರಿಗೆ ಕಂಡಿತಾ ಇಷ್ಟ ಆಗುತ್ತೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ನೇತಾಗಿ ಸುಭಾಷ್ ಚಂದ್ರ ಬೋಸ್ ಬದುಕಿನ ಬಗ್ಗೆ ಸಿನಿಮಾ ಅನ್ನೋದು ಗೊತ್ತಾಗಿದೆ. ಹೀಗಾಗಿ ಸಿನಿಮಾ ಪ್ರೇಮಿಗಳಿಗೆ 'ಸ್ಪ್ರೈ' ಕೌತುಕವನ್ನು ದುಪ್ಪಟ್ಟು ಮಾಡಿದೆ.
'ಸ್ಪೈ' ಸಿನಿಮಾದಲ್ಲಿ ಭಾರತದ ಟಾಪ್ ಸೀಕ್ರೆಟ್ ರಹಸ್ಯಗಳು, ವಿಮಾನ ಅಪಘಾತದಲ್ಲಿ ನೇತಾಜಿ ಸುಭಾಷ್ ಚಂದ್ರಬೋಸ್ ಸಾವು. ಆ ಅಪಘಾತದ ಸುತ್ತ ಹುಟ್ಟಿಕೊಂಡ ಊಹಾಪೋಹಾಗಳನ್ನು ನಿಖಿಲ್ ಸಿದ್ಧಾರ್ಥ್ ಬೆನ್ನು ಹತ್ತಿತಾರೆ. ಈ ಸಿನಿಮಾದಲ್ಲಿ ಗೂಢಚಾರಿಯಾಗಿ ನಿಖಿಲ್ ಸಿದ್ದಾರ್ಥ್ ನಟಿಸಿದ್ದಾರೆ.

ನೇತಾಜಿ ಪ್ರತಿಮೆ ಮುಂದೆನೇ ಟೀಸರ್ ಲಾಂಚ್
ನಿಖಿಲ್ ಸಿದ್ಧಾರ್ಥ್ ಗೂಢಾಚಾರಿಯಾಗಿ ನಟಿಸಿರುವ 'ಸ್ಪೈ' ಸುಭಾಷ್ ಚಂದ್ರ ಬೋಸ್ ಅವರ ಕೆಲವು ರಹಸ್ಯಗಳನ್ನು ಬಿಡಿಸಲು ಹೊರಟಿದೆ. ಈ ಕಾರಣಕ್ಕಾಗಿಯೇ ಟೀಸರ್ ಅನ್ನು ದೆಹಲಿಯ ಇಂಡಿಯಾ ಗೇಟ್ ಸಮೀಪವಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಬಳಿ ರಿಲೀಸ್ ಮಾಡಲಾಗಿದೆ.
ಕಳೆದ ವರ್ಷವಷ್ಟೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರ್ತವ್ಯ ಪಥ್ ಬಳಿಯಿರುವ ಸುಭಾಷ್ ಚಂದ್ರ ಬೋಸ್ ಪ್ರತಿಮೆಯನ್ನು ಅನಾವರಣ ಮಾಡಿದ್ದರು. ಈ ಪ್ರತಿಮೆ ಮುಂದೆ ಟೀಸರ್ ರಿಲೀಸ್ ಮಾಡಿದ್ದ ಮೊದಲ ಸಿನಿಮಾ ಎನ್ನಲಾಗಿದೆ.
'ಸ್ಪೈ' ಪ್ಯಾನ್ ಇಂಡಿಯಾ ಸಿನಿಮಾ
'ಸ್ಪೈ' ಸಿನಿಮಾದ ಪೋಸ್ಟರ್ ಹಾಗೂ ಗ್ಲಿಂಪ್ಸ್ ಸಿನಿಮಾ ಪ್ರಿಯರ ಕುತೂಹಲವನ್ನು ದುಪ್ಪಟ್ಟು ಮಾಡಿದೆ. 'ಕಾರ್ತಿಕೇಯಾ 2' ಸಿನಿಮಾ ಬಳಿಕ ನಿಖಿಲ್ ಸಿದ್ಧಾರ್ಥ್ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ. ಹೀಗಾಗಿ ಈ ಸಿನಿಮಾವನ್ನೂ ಪ್ಯಾನ್ ಇಂಡಿಯಾ ರಿಲೀಸ್ ಮಾಡುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ರಾಜಶೇಖರ್ ರೆಡ್ಡಿ 'ಸ್ಪೈ' ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಕಥೆ ಕೂಡ ಬರೆದಿದ್ದಾರೆ. ಬಿ.ಎಚ್. ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಸಿನಿಮಾದಲ್ಲಿ ನಿಖಿಲ್ ಜೊತೆ ಐಶ್ವರ್ಯಾ ಮೆನನ್ ನಟಿಸಿದ್ದಾರೆ. ಅಭಿನವ್ ಗೋಮತಮ್, ಮಕರಂದ್ ದೇಶಪಾಂಡೆ, ನಿತಿನ್ ಮೆಹ್ತಾ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯಾ ನರೇಶ್ ನಟಿಸಿದ್ದು, ಜೂನ್ 29ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ.


Click it and Unblock the Notifications











