'ಮಹಾನಟಿ' ಕೀರ್ತಿ ಸುರೇಶ್ ನಟಿಸಿದ 7 ಸಿನಿಮಾ ಬ್ಯಾಕ್ ಟು ಬ್ಯಾಕ್ ಸೋಲು: ಮಹೇಶ್ ಬಾಬು ಫ್ಯಾನ್ಸ್‌ ಕಂಗಾಲು

ಟಾಲಿವುಡ್‌ನಲ್ಲಿ ಕೀರ್ತಿ ಸುರೇಶ್ ದಿಕ್ಕು ಬದಲಿಸಿ ಸಿನಿಮಾವೇ 'ಮಹಾನಟಿ'. ಈ ಸಿನಿಮಾ ಮೂಲಕ ಕೀರ್ತಿ ಸುರೇಶ್‌ಗೆ ಬ್ಯಾಕ್ ಟು ಬ್ಯಾಕ್ ಆಫರ್‌ಗಳು ಬರಲಾರಂಭಿಸಿದ್ದರು. ಒಂದರ ಹಿಂದೆ ಇನ್ನೊಂದು ಸಿನಿಮಾದಲ್ಲಿ ನಟಿಸಲು ಶುರು ಮಾಡಿದ್ದರು. ಇದೇ ಈಗ ಈ ಮಹಾನಟಿಗೆ ದೊಡ್ಡ ತೊಡಕಾಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುಣ್ಣುತ್ತಿದೆ. ಇದು ಮಹೇಶ್ ಬಾಬು ಅಭಿಮಾನಿಗಳನ್ನು ಕಂಗಾಲಾಗುವಂತೆ ಮಾಡಿದೆ.

'ಮಹಾನಟಿ' ಬಳಿಕ ಕೀರ್ತಿ ಸುರೇಶ್ ಮಹಿಳಾ ಪ್ರಧಾನ ಸಿನಿಮಾಗಳಿಯೇ ಹೆಚ್ಚು ನಟಿಸಲು ಆರಂಭಿಸಿದ್ದರು. ಮಹಾನಟಿಯಿಂದ ಇದೂವರೆಗೂ ಬಿಡುಗಡೆಗೊಂಡಿರುವ ಬಹುತೇಕ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಲೇಡಿ ಓರಿಯಂಟೆಡ್ ಚಿತ್ರಗಳಲ್ಲಿಯೇ ಹೆಚ್ಚು ನಟಿಸಿದ್ದಾರೆ. ಕೀರ್ತಿ ಸುರೇಶ್ ಹೆಸರಿನ ಹಿಂದೆ ಬಿದ್ದು, ಸೋಲಿನ ಸುಳಿಗೆ ಸಿಲುಕಿದ್ದಾರೆ ಎಂದು ಟಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಇತ್ತೀಚೆಗೆ ತೆರೆಕಂಡ ಸಿನಿಮಾ 'ಗುಡ್ ಲಕ್ ಸಖಿ'.

ಬಾಕ್ಸಾಫೀಸ್‌ನಲ್ಲಿ ಸೋತು ಸುಣ್ಣವಾದ 'ಗುಡ್‌ ಲಕ್ ಸಖಿ'

ಟಾಲಿವುಡ್ ನಟಿ ಕೀರ್ತಿ ಸುರೇಶ್ ನಟಿಸಿದ 'ಗುಡ್‌ ಲಕ್ ಸಖಿ' ಇಂದು (ಜನವರಿ 28) ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಈ ಸಿನಿಮಾಗೆ ಪ್ರೇಕ್ಷಕರು ಉತ್ತಮ ಪ್ರತಿಕ್ರಿಯೆಯನ್ನು ಕೊಟ್ಟಿಲ್ಲ. ಮೊದಲ ದಿನವೇ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಡಲ್ ಹೊಡೆಯುತ್ತಿದೆ. ಸಿನಿಮಾ ಮೊದಲ ದಿನವೇ ನಿರಾಸೆ ಮೂಡಿಸಿದೆ ಎಂದು ಟಾಲಿವುಡ್ ಮೂಲಗಳು ಹೇಳುತ್ತಿವೆ.

Keerthy Suresh Good Luck Sakhi Flop Mahesh Babu Fans Worried

ಈ ಸಿನಿಮಾ ಮೂಲಕ ಕೀರ್ತಿ ಸುರೇಶ್ ಮತ್ತೊಂದು ಸೋಲನ್ನು ದಾಖಲಿಸಿದ್ದಾರೆ. 'ಗುಡ್ ಲಕ್ ಸಖಿ' ಸೋತು ಕೀರ್ತಿ ಸುರೇಶ್ ಖಾತೆ ಸೇರಿದ ಏಳನೇ ಸಿನಿಮಾ. 'ಮಹಾನಟಿ' ಎನಿಸಿಕೊಂಡಿರುವ ಕೀರ್ತಿ ಸುರೇಶ್ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲುತ್ತಿರುವುದು ಮಹೇಶ್ ಬಾಬು ಅಭಿಮಾನಿಗಳನ್ನು ಇನ್ನಿಲ್ಲದಂತೆ ಕಾಡುತ್ತಿದೆ.

ಕೀರ್ತಿ ಸುರೇಶ್‌ಗೆ ಸೋಲು ರುಚಿ ತೋರಿಸಿದ 7 ಸಿನಿಮಾಗಳ್ಯಾವುವು?

2018ರಲ್ಲಿ 'ಮಹಾನಟಿ' ಸಿನಿಮಾ ತೆರೆಕಂಡಿತ್ತು. ಈ ಸಿನಿಮಾದ ಬಳಿಕ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸಿದ್ದರೂ, ಅಲ್ಲಲ್ಲಿ ಹೀರೋ ಓರಿಯಂಟೆಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಕೀರ್ತಿ ಸುರೇಶ್ ಸೋಲಿನ ಪರ್ವ 'ಸಾಮಿ 2' ಸಿನಿಮಾದಿಂದ ಆರಂಭ ಆಗಿತ್ತು. 'ಸಂಡಕೋಳಿ 2', 'ಪೆಂಗ್ವಿನ್', ಮಿಸ್ ಇಂಡಿಯಾ, ರಂಗ್ ದೇ, ಮರಕ್ಕರ್ ಹಾಗೂ ಇಂದು (ಜನವರಿ 28) ತೆರೆಕಂಡಿರುವ 'ಗುಡ್ ಲಕ್ ಸಖಿ' ಸೋತಿವೆ. ಆದರೆ, ರಜನಿಕಾಂತ್ ನಟಿಸಿದ 'ಅಣ್ಣಾತ್ತೆ' ಮಿಶ್ರ ಪ್ರತಿಕ್ರಿಯೆ ನಡುವೆ ತಮಿಳಿನ ಬಾಕ್ಸಾಫೀಸ್‌ನಲ್ಲಿ ಗೆದ್ದಿತ್ತು. ಆದರೆ, ತೆಲುಗು ರಿಮೇಕ್‌ನಲ್ಲಿ ಸೋತಿತ್ತು.

Keerthy Suresh Good Luck Sakhi Flop Mahesh Babu Fans Worried

ಮಹೇಶ್ ಬಾಬು ಅಭಿಮಾನಿಗಳಿಗೆ ಹೆಚ್ಚಿದ ಆತಂಕ

ಕೀರ್ತಿ ಸುರೇಶ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸುತ್ತಿರುವ 'ಸರ್ಕಾರು ವಾರಿ ಪಾಟ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಈ ಏಳು ಪ್ಲಾಪ್ ಸಿನಿಮಾಗಳಯ ತಮ್ಮ ನೆಚ್ಚಿನ ನಟನ ಸಿನಿಮಾ ಮೇಲೆ ಪರಿಣಾಮ ಬೀರಬಹುದೆಂಬ ಆತಂಕದಲ್ಲಿದ್ದಾರೆ. ಕೀರ್ತಿ ಸುರೇಶ್ ಸೋಲು ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲೂ ಮುಂದುವರೆದರೆ ಏನು ಗತಿ? ಅಂತ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.

More from Filmibeat

English summary
Keerthy Suresh movie Mahanati massive success in boxoffice. After Mahanati Keerthy Suresh 7 movies floped at boxoffice. recently released movie good luck sakhi also washed away. Mahesh Babu fans worried.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X