ಮಹೇಶ್ ಬಾಬು ಮುಖಕ್ಕೆ ಹೊಡೆದ್ದಿದ ಕೀರ್ತಿ ಸುರೇಶ್: ವಿಷಯ ಈಗ ಬಹಿರಂಗ?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳ ಬಗ್ಗೆ ಸ್ಪೆಷಲ್ ಆಗಿ ಹೇಳಬೇಕಿಲ್ಲ. ತಮ್ಮ ನೆಚ್ಚಿನ ನಟನ ಜೊತೆ ನಟಿಸುತ್ತಿರುವ ನಾಯಕಿಯರು ಬೇರೆ ನಟನ ಬಗ್ಗೆ ಮಾತಾಡಿದರೆ ಸುಮ್ಮನಿರುವುದಿಲ್ಲ. ಅಂತಹದ್ರಲ್ಲಿ ಮಹೇಶ್ ಬಾಬು ಮುಖಕ್ಕೆ ಹೊಡೆದರೆ ಸುಮ್ಮನೆ ಇರುತ್ತಾರಾ? ಖಂಡಿತಾ ಇಲ್ಲ. ಆದರೆ, ಈ ಬಾರಿ ಪ್ರಿನ್ಸ್ ಫ್ಯಾನ್ಸ್ ಕೀರ್ತಿ ಸುರೇಶ್ ವಿರುದ್ಧ ಕೋಪ ಮಾಡಿಕೊಂಡಿಲ್ಲ.
ಕೀರ್ತಿ ಸುರೇಶ್ ಮೇಲೆ ಮಹೇಶ್ ಬಾಬು ಅಭಿಮಾನಿಗಳು ಚಿಕ್ಕದೊಂದು ಕೋಪವಿತ್ತು. ಹೀಗಿದ್ದರೂ, ಸ್ವತ: ಟಾಲಿವುಡ್ ನಟಿ ಕೀರ್ತಿ ಸುರೇಶ್ ಶೂಟಿಂಗ್ ವೇಳೆ ನಡೆದ ಘಟನೆಯನ್ನು ಧೈರ್ಯವಾಗಿ ಹೇಳಿದ್ದಾರೆ. ಇದಕ್ಕೆ ಅಭಿಮಾನಿಗಳು ಸದ್ಯಕ್ಕೆ ಕೂಲ್ ಆಗಿ ಪ್ರತಿಕ್ರಿಯಿಸಿದ್ದು, ಮುಂದೆ ಏನು ಯಾವ ರೀತಿ ರಿಯಾಕ್ಟ್ ಮಾಡುತ್ತಾರೋ ಗೊತ್ತಿಲ್ಲ. ಆದರೆ, ಮಹೇಶ್ ಬಾಬು ಮುಖಕ್ಕೆ ಹೊಡೆಯುವಂತಹ ಘಟನೆ ನಡೆದಿದ್ದಾರೂ ಏನು? ಅಂತ ತಿಳಿಯಲು ಮುಂದೆ ಓದಿ.

ಪ್ರಿನ್ಸ್-ಕೀರ್ತಿ ಸುರೇಶ್ ಮೊದಲ ಸಿನಿಮಾ
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಜೋಡಿಯ 'ಸರ್ಕಾರು ವಾರಿ ಪಾಟ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದೇ ಮೇ 12 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ಬಿಡುಗಡೆಯಾಗಲಿದೆ. ತೆರೆಮೇಲೆ ಈ ಜೋಡಿ ಯಾವ ರೀತಿ ಮೋಡಿ ಮಾಡುತ್ತೆ ಅನ್ನೋದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಸಿನಿಮಾ ರಿಲೀಸ್‌ಗೆ ಇನ್ನು ಕೆಲವು ದಿನಗಳು ಇರುವಾಗಲೇ ಚಿತ್ರತಂಡ ಸಂದರ್ಶನಗಳನ್ನು ನೀಡಲು ಆರಂಭಿಸಿದೆ. ಇಂತಹದ್ದೊಂದು ಸಂದರ್ಶನದಲ್ಲಿ ಕೀರ್ತಿ ಸುರೇಶ್ ಸೂಪರ್‌ಸ್ಟಾರ್ ಮುಖಕ್ಕೆ ಹೊಡೆದ ವಿಚಾರವನ್ನು ರಿವೀಲ್ ಮಾಡಿದ್ದಾರೆ.

ಪ್ರಿನ್ಸ್ ಮುಖಕ್ಕೆ ಬಾರಿಸಿದ ಕೀರ್ತಿ
'ಸರ್ಕಾರು ವಾರಿ ಪಾಟ' ಚಿತ್ರದ ಹಾಡಿನ ಚಿತ್ರೀಕರಣವೊಂದು ನಡೆಯುತ್ತಿತ್ತು. ಈ ವೇಳೆ ಡ್ಯಾನ್ಸ್ ಮಾಡುವ ಸಂದರ್ಭದಲ್ಲಿ ಇಬ್ಬರ ಸ್ಟೆಪ್ಸ್ ಮ್ಯಾಚ್ ಆಗುತ್ತಿರಲಿಲ್ಲ. ಆ ವೇಳೆ ಕೀರ್ತಿ ಸುರೇಶ್ ಪ್ರಿನ್ಸ್ ಮಹೇಶ್ ಬಾಬು ಮುಖಕ್ಕೆ ಬಾರಿಸಿದ್ದರಂತೆ. " ನಾನು ಈ ಸಿನಿಮಾದ ಕೊನೆಯ ಹಾಡನ್ನು ಚಿತ್ರೀಕರಣ ಮಾಡುತ್ತಿದೆ. ನನ್ನ ಕಡೆಯಿಂದ ಆದ ತಪ್ಪಿನಿಂದ ಮಹೇಶ್ ಬಾಬು ಮುಖಕ್ಕೆ ಆಕಸ್ಮಿಕವಾಗಿ ತಾಗಿತ್ತು." ಎಂದು ಕೀರ್ತಿ ಸುರೇಶ್ ಸಂದರ್ಶನದಲ್ಲಿ ಹೇಳಿದ್ದಾರೆ.

ಮೂರು ಬಾರಿ ಕ್ಷಮೆ ಕೇಳಿದ ಕೀರ್ತಿ
'ಸರ್ಕಾರು ವಾರಿ ಪಾಟ' ಸಿನಿಮಾದ ಸೆಟ್ಟಿನಲ್ಲಿ ನಡೆದ ಈ ಆಕಸ್ಮಿಕ ಘಟನೆಯ ಬಳಿಕ ಮಹೇಶ್ ಬಾಬು ಬಳಿ ಕೀರ್ತಿ ಸುರೇಶ್ ಕ್ಷಮೆ ಕೇಳಿದ್ದರು. ಮಹೇಶ್ ಬಾಬು ಕೂಡ ಈ ಘಟನೆಯನ್ನು ಲೈಟಾಗಿ ತೆಗೆದುಕೊಂಡಿದ್ದರಂತೆ. ಆದರೂ ಕೀರ್ತಿ ಸುರೇಶ್‌ಗೆ ತಡೆದುಕೊಳ್ಳಲು ಆಗಿರಲಿಲ್ಲ. ಹೀಗಾಗಿ ಮೂರು ಬಾರಿ ಮಹೇಶ್ ಬಾಬು ಬಳಿ ಹೋಗಿ ಕ್ಷಮೆ ಕೇಳಿದ್ದರಂತೆ. ಮಹೇಶ್ ಬಾಬು ಕೂಡ ಈ ಘಟನೆಯನ್ನು ಆರಾಮಾಗಿ ತೆಗೆದುಕೊಂಡಿದ್ದರು ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.

ಕೀರ್ತಿ ಮೇಲೆ ಮಹೇಶ್ ಬಾಬು ಫ್ಯಾನ್ಸ್ ಗರಂ
ಕೀರ್ತಿ ಸುರೇಶ್ ಹಾಗೂ ಮಹೇಶ್ ಬಾಬು ಅಭಿಮಾನಿಗಳ ನಡುವೆ ಅಷ್ಟಕ್ಕಷ್ಟೆ. ಕೀರ್ತಿ ಸುರೇಶ್ ಸಾಲು ಸಾಲು ಸಿನಿಮಾಗಳು ಸೋತಿದ್ದರಿಂದ ಪ್ರಿನ್ಸ್ ಫ್ಯಾನ್ಸ್ ಆತಂಕಕ್ಕೆ ಒಳಗಾಗಿದ್ದರು. ಇದೇ ವೇಳೆ ಕೀರ್ತಿ ಸುರೇಶ್ ತಮಿಳು ನಟ ದಳಪತಿ ವಿಜಯ್ ನಟಿಸಿದ ಬೀಸ್ಟ್ ಚಿತ್ರದ 'ಹಲಮತಿ ಹಬಿಬೋ' ಹಾಡಿಗೆ ಹೆಜ್ಜೆ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಇದೇ ವೇಳೆ 'ಸರ್ಕಾರು ವಾರಿ ಪಾಟ' ಚಿತ್ರದ 'ಕಲಾವತಿ' ಸಾಂಗ್ ಟ್ರೆಂಡಿಂಗ್‌ನಲ್ಲಿತ್ತು. ಈ ಕಾರಣಕ್ಕೆ ಪ್ರಿನ್ಸ್ ಫ್ಯಾನ್ಸ್ ಕೋಪಗೊಂಡಿದ್ದರು.


Click it and Unblock the Notifications











