ಮಹೇಶ್ ಬಾಬು ಮಲತಾಯಿಯ ಬಯೋಪಿಕ್‌ನಲ್ಲಿ ನಟಿಸಲಿದ್ದಾರಾ ಕೀರ್ತಿ ಸುರೇಶ್?
'ಮಹಾನಟಿ' ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದ ನಟಿ ಕೀರ್ತಿ ಸುರೇಶ್ ಮತ್ತೊಂದು ಬಯೋಪಿಕ್‌ನಲ್ಲಿ ನಟಿಸುವ ಸಾಧ್ಯತೆ ಇದೆ.
Recommended Video
ಗಿನ್ನೆಸ್ ವಿಶ್ವದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರು ಮೂಡಿಸಿರುವ ಖ್ಯಾತ ನಿರ್ದೇಶಕಿ ವಿಜಯಾ ನಿರ್ಮಲಾ ಅವರ ಬದುಕನ್ನಾಧರಿಸಿದ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲು ಕೀರ್ತಿ ಸುರೇಶ್ ಅವರನ್ನು ಸಂಪರ್ಕಿಸಲಾಗಿದೆ ಎಂದು ವರದಿಯಾಗಿದೆ. ವಿಜಯಾ ನಿರ್ಮಲಾ ಅವರು 44 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇಡೀ ಜಗತ್ತಿನಲ್ಲಿಯೇ ಇಷ್ಟು ಸಿನಿಮಾಗಳನ್ನು ನಿರ್ದೇಶಿಸಿ ಮೊದಲ ಮಹಿಳಾ ನಿರ್ದೇಶಕರು ಎಂಬ ಹೆಗ್ಗಳಿಕೆ ಅವರದು.
ವಿಜಯಾ ನಿರ್ಮಲಾ, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರ ಮಲತಾಯಿ ಕೂಡ ಹೌದು. 2019ರ ಜೂನ್ 27ರಂದು ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಮುಂದೆ ಓದಿ...

ಅಮ್ಮನ ಬದುಕು ಸಿನಿಮಾದಲ್ಲಿ
ವಿಜಯಾ ನಿರ್ಮಲಾ ಅವರ ಮಗ, ನಟ ನರೇಶ್ ಅಮ್ಮನ ಬದುಕಿನ ಕಥೆಯನ್ನು ಸಿನಿಮಾ ರೂಪದಲ್ಲಿ ಜನರಿಗೆ ತೋರಿಸಲು ಬಯಸಿದ್ದಾರೆ. ಅದಕ್ಕಾಗಿ ಅವರು ಇತ್ತೀಚೆಗೆ ಕೀರ್ತಿ ಸುರೇಶ್ ಅವರನ್ನು ಸಂಪರ್ಕಿಸಿದ್ದು, ವಿಡಿಯೋ ಕಾಲ್ ಮೂಲಕವೇ ಸ್ಕ್ರಿಪ್ಟ್ ವಿವರಿಸಿದ್ದಾರೆ ಎನ್ನಲಾಗಿದೆ.

ಕೀರ್ತಿ ಸುರೇಶ್ ಸೂಕ್ತ
ವಿಜಯಾ ನಿರ್ಮಲಾ ಅವರ ಬಯೋಪಿಕ್‌ಗಾಗಿ ನರೇಶ್ ಬಹಳ ಸಮಯದಿಂದ ಸೂಕ್ತ ನಟಿಗಾಗಿ ಹುಡುಕಾಟ ನಡೆಸಿದ್ದರು. ಖ್ಯಾತ ನಟಿ ಸಾವಿತ್ರಿ ಗಣೇಶನ್ ಅವರ ಜೀವನಗಾಥೆ ಆಧರಿಸಿದ 'ಮಹಾನಟಿ'ಯಲ್ಲಿ ಅಭಿನಯಿಸಿದ್ದ ಕೀರ್ತಿ ಸುರೇಶ್ ಈ ಪಾತ್ರಕ್ಕೆ ಸೂಕ್ತ ಎಂದು ಅವರು ಪರಿಗಣಿಸಿದ್ದಾರೆ. ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯದಲ್ಲಿ ಸಿನಿಮಾ ಸೆಟ್ಟೇರಬಹುದು.

ಮೂರು ಭಾಷೆಗಳಲ್ಲಿ ನಟನೆ, ನಿರ್ದೇಶನ
ವಿಜಯಾ ನಿರ್ಮಲಾ ಅವರು ತಮಿಳು, ತೆಲುಗು ಮತ್ತು ಮಲಯಾಳಂನ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. 1971ರಲ್ಲಿ 'ಮೀನಾ' ಚಿತ್ರದ ಮೂಲಕ ನಿರ್ದೇಶನಕ್ಕೆ ಇಳಿದಿದ್ದ ಅವರು, ನಟನೆಯ ಜತೆಗೆ ನಿರ್ದೇಶಕಿಯಾಗಿಯೂ ಸೈ ಎನಿಸಿಕೊಂಡರು. 2009ರವರೆಗೂ ಅವರು ಮೂರೂ ಭಾಷೆಗಳಲ್ಲಿ ಒಟ್ಟು 44 ಚಿತ್ರಗಳನ್ನು ನಿರ್ದೇಶಿಸಿದ್ದರು.

ಎರಡನೆಯ ಮದುವೆ
ನಟ ಕೃಷ್ಣಮೂರ್ತಿ ಅವರನ್ನು ಮದುವೆಯಾಗಿದ್ದ ವಿಜಯಾ ನಿರ್ಮಲಾ ಅವರಿಗೆ ಮಗ ನರೇಶ್ ಜನಿಸಿದ್ದರು. ಬಳಿಕ ತೆಲುಗು ನಟ ಕೃಷ್ಣ ಜತೆ ನಂಟು ಬೆಳೆಯಿತು. ಪತಿಗೆ ಡೈವೋರ್ಸ್ ನೀಡಿ ಕೃಷ್ಣ ಅವರನ್ನು ಮದುವೆಯಾದರು. ಕೃಷ್ಣ ಅವರಿಗೆ ಮೊದಲ ಪತ್ನಿಯಿಂದ ಖ್ಯಾತ ನಟ ಮಹೇಶ್ ಬಾಬು ಸೇರಿದಂತೆ ಒಟ್ಟು ಐವರು ಮಕ್ಕಳಿದ್ದಾರೆ.


Click it and Unblock the Notifications











