ದುನಿಯಾ ವಿಜಯ್ ಬಳಿಕ ಬಾಲಕೃಷ್ಣ ತಂಡ ಸೇರಿಕೊಂಡ 'ಕೆಜಿಎಫ್ 2' ನಟ: ಪಾತ್ರದ ಹೆಸರು ಗಂಗಿ ರೆಡ್ಡಿ!

ಟಾಲಿವುಡ್‌ನ ಲೆಜೆಂಡ್ ನಂದಮೂರಿ ಬಾಲಕೃಷ್ಣ ಬೇಡಿಕೆಯ ನಟನಾಗಿದ್ದಾರೆ. 'ಅಖಂಡ' ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗುತ್ತಿದ್ದಂತೆ ಬಾಲಯ್ಯ ಖದರ್ ಕೂಡ ಬದಲಾಗಿದೆ. ಈ ಸಿನಿಮಾ ಮೂಲಕ ಬಾಕ್ಸಾಫೀಸ್‌ನಲ್ಲಿ ಬಾಲಕೃಷ್ಣ ಖದರ್ ಏನು ಅನ್ನೋದು ಸಾಬೀತಾಗಿದೆ.

'ಅಖಂಡ' ಬಾಲಕೃಷ್ಣ ವೃತ್ತಿ ಬದುಕಿನ ಅತ್ಯಂತ ಯಶಸ್ವಿ ಸಿನಿಮಾ. ನಿರಂತರ ಸೋಲುಗಳಿಂದ ಕಂಗೆಟ್ಟಿದ್ದ ಬಾಲಕೃಷ್ಣಗೆ ಈ ಸಿನಿಮಾ ಸೂಪರ್‌ ಸಕ್ಸಸ್ ಕೊಟ್ಟಿತ್ತು. ಈ ಕಾರಣಕ್ಕೆ ಬಾಲಯ್ಯನ 107ನೇ ಸಿನಿಮಾ 'ವೀರ ಸಿಂಹ ರೆಡ್ಡಿ' ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

'ವೀರ ಸಿಂಹ ರೆಡ್ಡಿ' ಟಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ ಒಂದು. ಈಗಾಗಲೇ ಸಿನಿಮಾ ಶೂಟಿಂಗ್ ಜೋರಾಗಿಯೇ ನಡೆಯುತ್ತಿದೆ. ದುನಿಯಾ ವಿಜಯ್ ಈ ಸಿನಿಮಾದಲ್ಲಿ ಬಾಲಯ್ಯ ವಿರುದ್ಧ ತೊಡೆತಟ್ಟುತ್ತಿದ್ದಾರೆ. ಈ ಮಧ್ಯೆನೇ ಕನ್ನಡದ ಮತ್ತೊಬ್ಬ ನಟನ ಎಂಟ್ರಿಯಾಗಿದೆ.

ಬಾಲಯ್ಯನ ಸಿನಿಮಾದಲ್ಲಿ 'ಕೆಜಿಎಫ್ 2' ಸ್ಟಾರ್

ಬಾಲಯ್ಯನ ಸಿನಿಮಾದಲ್ಲಿ 'ಕೆಜಿಎಫ್ 2' ಸ್ಟಾರ್

'ವೀರ ಸಿಂಹ ರೆಡ್ಡಿ' ಬಾಲಯ್ಯನ 107ನೇ ಸಿನಿಮಾ. ಗೋಪಿ ಚಂದ್ ಮಲಿನೇನಿ ನಿರ್ದೇಶನದ ಈ ಸಿನಿಮಾ ಮೇಲೆ ನಿರೀಕ್ಷೆ ದೊಡ್ಡದಿದೆ. ಇದೇ ಸಿನಿಮಾ 'ಕೆಜಿಎಫ್ ಚಾಪ್ಟರ್ 2'ನಲ್ಲಿ ವಿಲನ್ ರೋಲ್‌ನಲ್ಲಿ ಮೆಚ್ಚುಗೆ ಗಳಿಸಿದ್ದ ಅವಿನಾಶ್ ಎಂಟ್ರಿಕೊಟ್ಟಿದ್ದಾರೆ. ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ ಸಿನಿಮಾ 'ಕೆಜಿಎಫ್ 2'ನಲ್ಲಿ ಅವಿನಾಶ್ ಖಳನಾಯಕ ಆಂಡ್ರ್ಯೂಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಬಾಲಯ್ಯ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಕೆಜಿಎಫ್' ಅವಿನಾಶ್ ಪಾತ್ರವೇನು?

'ಕೆಜಿಎಫ್' ಅವಿನಾಶ್ ಪಾತ್ರವೇನು?

ಬಾಲಕೃಷ್ಣ ಸಿನಿಮಾದಲ್ಲಿ 'ಕೆಜಿಎಫ್' ಅವಿನಾಶ್‌ಗೆ ನಿರ್ದೇಶಕರು ಪವರ್‌ಫುಲ್ ರೋಲ್ ನೀಡಿದ್ದಾರೆ. ಇಲ್ಲಿ ಗಂಗಿ ರೆಡ್ಡಿ ಪಾತ್ರದಲ್ಲಿ ಅವಿನಾಶ್ ಕಾಣಿಸಿಕೊಳ್ಳಲಿದ್ದಾರೆ. ಸದ್ಯ 'ವೀರ ಸಿಂಹ ರೆಡ್ಡಿ'ಯಲ್ಲಿ ಅವಿನಾಶ್ ಭಾಗವನ್ನು ಚಿತ್ರೀಕರಿಸುತ್ತಿದ್ದಾರೆ. ಗಂಗಿ ರೆಡ್ಡಿ ಹೆಸರಲ್ಲೇ ಪವರ್‌ ಇದ್ದು, ಖಡಕ್ ವಿಲನ್ ರೋಲ್‌ನಲ್ಲಿ ಟಾಲಿವುಡ್‌ ಲೆಜೆಂಡ್‌ಗೆ ಕಿಕ್ ಕೊಡಲಿದ್ದಾರೆ ಅನ್ನೋ ಟಾಕ್ ಶುರುವಾಗಿದೆ. 'ಕೆಜಿಎಫ್' ಬಳಿಕ ಅವಿನಾಶ್‌ಗೆ ಮತ್ತೊಂದು ಖಡಕ್ ರೋಲ್ ಸಿಕ್ಕಿದ್ದು, ನಿರ್ದೇಶಕರ ಜೊತೆಗಿರುವ ಫೋಟೊ ವೈರಲ್ ಆಗುತ್ತಿದೆ.

ಬಾಲಯ್ಯಗೆ ದುನಿಯಾ ವಿಜಯ್ ವಿಲನ್

ಬಾಲಯ್ಯಗೆ ದುನಿಯಾ ವಿಜಯ್ ವಿಲನ್

'ಕೆಜಿಎಫ್' ಅವಿನಾಶ್ ಗಂಗಿ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರೆ, ಈಗಾಗಲೇ ಕನ್ನಡದ ಮತ್ತೊಂದು ನಟ ದುನಿಯಾ ವಿಜಯ್ ಮೇನ್ ವಿಲನ್ ಆಗಿದ್ದಾರೆ. ಈಗಾಗಲೇ ದುನಿಯಾ ವಿಜಯ್ ಸಿನಿಮಾದ ಹಲವು ದೃಶ್ಯಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ನಿರ್ದೇಶಕ ಗೋಪಿಚಂದ್ ಮಲಿನೇನಿ ಜೊತೆ ಇರುವ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈಗ ಇನ್ನೊಬ್ಬ ಕನ್ನಡದ ನಟ ಈ ತಂಡ ಸೇರಿಕೊಂಡಿದ್ದಾರೆ.

ಡಬಲ್‌ ರೋಲ್‌ನಲ್ಲಿ ಬಾಲಕೃಷ್ಣ

ಡಬಲ್‌ ರೋಲ್‌ನಲ್ಲಿ ಬಾಲಕೃಷ್ಣ

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ ದಿಗ್ಗಜರೇ ದೊಡ್ಡ ಗುಂಪೇ ಇದೆ. ಶೃತಿ ಹಾಸನ್ ಲೀಡ್ ರೋಲ್‌ನಲ್ಲಿದ್ರೆ, ದುನಿಯಾ ವಿಜಯ್, ವರಲಕ್ಷ್ಮಿ ಶರತ್ ಕುಮಾರ್, ಕೆಜಿಎಫ್ ಅವಿನಾಶ್ ಸೇರಿದಂತೆ ದೊಡ್ಡ ಬಳಗವೇ ಇದೆ. ತಮನ್ ಈ ಸಿನಿಮಾದ ಹಾಡುಗಳಿಗೆ ಟ್ಯೂನ್ ಹಾಕುತ್ತಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ಬಾಲಕೃಷ್ಣ ಡಬಲ್‌ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

More from Filmibeat

English summary
KGF 2 Actor Avinash Is Playing Gangi Reddy In Balakrishna Movie Veera Simha Reddy, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X