KGF 2 Breaking : 'ಕೆಜಿಎಫ್ 2' ತೆಲುಗು ಟ್ರೈಲರ್ ರಿಲೀಸ್ ಮಾಡೋದು ತೆಲುಗಿನ ಮೆಗಾ ಪವರ್‌ಸ್ಟಾರ್‌

ಇಂದು (ಮಾರ್ಚ್ 27) ವಿಶ್ವದಾದ್ಯಂತ ಎಲ್ಲೆಲ್ಲಿ ಭಾರತೀಯರಿದ್ದಾರೋ ಅವರಿಗೆಲ್ಲಾ 'ಕೆಜಿಎಫ್' ಹಬ್ಬ. ಬಹಳ ದಿನಗಳಿಂದ ಕಾದು ಕೂತಿದ್ದ 'KGF 2' ಟ್ರೈಲರ್‌ಗೆ ಇಂದು ಮುಹೂರ್ತ ಫಿಕ್ಸ್ ಆಗಿದೆ. ದೇಶದ ಮೂಲೆ ಮೂಲೆಯಿಂದ 'ಕೆಜಿಎಫ್ 2 ಟ್ರೈಲರ್‌ಗಾಗಿ ಜನರು ಕಾದು ಕೂತಿದ್ದರು. ಕೊನೆಗೂ ಆ ಟ್ರೈಲರ್ ಅಭಿಮಾನಿಗಳ ಮುಂದೆ ಬರಲಿದೆ. ಮಾರ್ಚ್ 27ರಂದು ಸಂಜೆ 6.40ಕ್ಕೆ ಸರಿಯಾಗಿ ಟ್ರೈಲರ್ ಬಿಡುಗಡೆಯಾಗಲಿದೆ. ವಿಶೇಷ ಅಂದರೆ, ತೆಲುಗು ಟ್ರೈಲರ್ ಅನ್ನು ತೆಲುಗು ಸ್ಟಾರ್ ನಟ ರಿಲೀಸ್ ಮಾಡಲಿದ್ದಾರೆ.

'ಕೆಜಿಎಫ್ 2' ಟ್ರೈಲರ್ ಬಿಡುಗಡೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಆದರೆ, ಐದು ಭಾಷೆಗಳಲ್ಲಿ ಒಬ್ಬೊಬ್ಬರು ಆಯಾ ಚಿತ್ರರಂಗದ ಸ್ಟಾರ್ ನಟರು ರಿಲೀಸ್ ಮಾಡಲಿದ್ದಾರೆ. ಇಂದು (ಮಾರ್ಚ್ 27) ಸರಿಯಾಗಿ 6.40ಕ್ಕೆ 'ಕೆಜಿಎಫ್ 2' ತೆಲುಗು ಅವತರಣಿಕೆಯ ಟ್ರೈಲರ್ ಅನ್ನು ತೆಲುಗಿನ ಮೆಗಾ ಪವರ್‌ ಸ್ಟಾರ್ ರಿಲೀಸ್ ಮಾಡಲಿದ್ದಾರೆ.

'ಕೆಜಿಎಫ್ 2' ಟ್ರೈಲರ್‌ ಇಡೀ ವಿಶ್ವದಾದ್ಯಂತ ಕುತೂಹಲ ಕೆರಳಿಸಿದೆ. ಟ್ರೈಲರ್ ಹೇಗಿರುತ್ತೆ ಅಂತ ಕಣ್ತುಂಬಿಕೊಳ್ಳಲು ರಾಕಿ ಭಾಯ್ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮೂಲಕ ಹೊಸ ದಾಖಲೆಯನ್ನೇ ಬರೆಯಲಿದೆ. ಇನ್ನು ಇಂದು ರಾಮ್ ಚರಣ್ ಹುಟ್ಟುಹಬ್ಬ ಬೇರೆ. ಇದೇ ಖುಷಿಯಲ್ಲಿ 'ಕೆಜಿಎಫ್ 2' ತೆಲುಗು ಟ್ರೈಲರ್‌ ಅನ್ನು ಅವರೇ ಬಿಡುಗಡೆ ಮಾಡುತ್ತಿರುವುದು ಯಶ್ ಹಾಗೂ ರಾಮ್ ಚರಣ್ ಅಭಿಮಾನಿಗಳಿಗೆ ಖುಷಿಯನ್ನು ದುಪ್ಪಟ್ಟು ಮಾಡಿದೆ.

KGF 2 telugu trailer will be reaesing by mega power star Ram Charan

More from Filmibeat

English summary
KGF 2 telugu teaser will be reaesing by mega power star Ram Charan. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X