ತೆಲುಗು ಯುವ ನಟನಿಗೆ ಬೆಂಬಲ ಕೊಟ್ಟ ಕಿಚ್ಚ ಸುದೀಪ್: 'ಹರೋಮ್ ಹರ' ಕನ್ನಡ ಟೀಸರ್ ರಿಲೀಸ್!

ದಕ್ಷಿಣ ಭಾರತದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಕ್ರೇಜ್ ಏನು ಕಮ್ಮಿಯಾಗಿಲ್ಲ. ಯುವ ನಟರೂ ಕೂಡ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಶೈನ್ ಆಗಬೇಕು ಅಂತ ಹಾತೊರೆಯುತ್ತಿದ್ದಾರೆ. ಇಂತಹವರಲ್ಲಿ ತೆಲುಗಿನ ಯುವ ನಟ ಸುಧೀರ್ ಬಾಬು ಕೂಡ ಒಬ್ಬರು.

ಸುಧೀರ್ ಬಾಬು ನಟಿಸುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಹರೋಮ್ ಹರ. ಈ ಸಿನಿಮಾದ ಪ್ರಚಾರ ಭರ್ಜರಿಯಾಗಿಯೇ ಆರಂಭ ಆಗಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಫಸ್ಟ್ ಲುಕ್ ರಿಲೀಸ್ ಆದ್ಮೇಲೆ ಕುತೂಹಲ ಹುಟ್ಟಿಸಿತ್ತು. ಅದೇ ಸಿನಿಮಾದ ಟೀಸರ್ ಅನ್ನು ಸ್ಟಾರ್ ನಟರು ರಿಲೀಸ್ ಮಾಡಿದ್ದಾರೆ.

Kichcha Sudeep released Telugu hero Sudheer Babus Harom Hara movie teaser

'ಹರೋಮ್ ಹರ' ಕನ್ನಡ ಟೀಸರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿ ತೆಲುಗು ನಟನಿಗೆ ಶುಭ ಹಾರೈಸಿದ್ದಾರೆ. ಹಾಗೇ ಈ ಸಿನಿಮಾ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗುತ್ತಿರೋದ್ರಿಂದ ಆಯಾ ಭಾಷೆಯ ಸ್ಟಾರ್‌ ನಟರು ಕೂಡ ಟೀಸರ್ ರಿಲೀಸ್ ಮಾಡಿ ಶುಭ ಹಾರೈಸಿದ್ದಾರೆ.

'ಹರೋಮ್ ಹರ' ತೆಲುಗು ಟೀಸರ್ ಅನ್ನು ಡಾರ್ಲಿಂಗ್ ಪ್ರಭಾಸ್ ರಿಲೀಸ್ ಮಾಡಿದ್ದರೆ, ಕನ್ನಡದಲ್ಲಿ ಕಿಚ್ಚ ಸುದೀಪ್, ಮಲಯಾಳಂನಲ್ಲಿ ಮಮ್ಮುಟ್ಟಿ, ತಮಿಳಿನಲ್ಲಿ ವಿಜಯ್ ಸೇತುಪತಿ ಹಾಗೂ ಹಿಂದಿ ಭಾಷೆಯ ಟೀಸರ್ ಅನ್ನು ಬಾಲಿವುಡ್ ನಟ ಟೈಗರ್ ಶ್ರಾಫ್ ರಿವೀಲ್ ಮಾಡಿದ್ದಾರೆ. ಹೀಗಾಗಿ ಟೀಸರ್‌ಗೆ ಉತ್ತಮ ಆರಂಭ ಸಿಕ್ಕಿದೆ ಎಂದು ಹೇಳಬಹುದು.

Kichcha Sudeep released Telugu hero Sudheer Babus Harom Hara movie teaser

ಅಂದ್ಹಾಗೆ 'ಹರೋಮ್ ಹರ' ಪ್ಯಾನ್ ಇಂಡಿಯಾ ಸಿನಿಮಾಗೆ ಸುಧೀರ್ ಬಾಬು ಹೀರೊ. 1989ರಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂನಲ್ಲಿ ನಡೆದ ಘಟನೆಯ ಸುತ್ತ ಈ ಸಿನಿಮಾ ಸಾಗುತ್ತೆ. ಹೀಗಾಗಿ ಇದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಹೇಳಬಹುದು. ಸದ್ಯ ಟೀಸರ್ ರಿಲೀಸ್ ಆಗಿದ್ದು, ಟ್ರೈಲರ್ ಮತ್ತಷ್ಟು ಸುಳಿವನ್ನು ಬಿಟ್ಟುಕೊಡಬಹುದು.

'ಹರೋಮ್ ಹರ' ಸಿನಿಮಾದ ಶೂಟಿಂಗ್ ಇನ್ನೂ ಮುಗಿದಿಲ್ಲ. ಇನ್ನೂ ಒಂದು ಹಂತದ ಶೂಟಿಂಗ್ ಬಾಕಿ ಉಳಿದುಕೊಂಡಿದೆ. ಕೊನೆಯ ಹಂತದ ಚಿತ್ರೀಕರಣದಲ್ಲಿ ಇಡೀ ಚಿತ್ರತಂಡ ಬ್ಯುಸಿಯಾಗಿದೆ. ಅಂದ್ಹಾಗೆ ಈ ಸಿನಿಮಾದಲ್ಲಿ ಸುಧೀರ್ ಬಾಬು ಜೊತೆ ಮಾಳವಿಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗು ನಟ ಸುನೀಲ್, ಖಳನಾಯಕನಾಗಿ ಅರ್ಜುನ್ ಗೌಡ ನಟಿಸುತ್ತಿದ್ದಾರೆ. ಉಳಿದಂತೆ, ಜೆಪಿ ಅಕ್ಷರ ಗೌಡ, ಲಕ್ಕಿ ಲಕ್ಷಣ್, ರವಿಕಾಳೆ ಪ್ರಮುಖ ತಾರಾಗಣದಲ್ಲಿದ್ದಾರೆ.

ಜ್ಞಾನಸಾಗರ ದ್ವಾರಕಾ 'ಹರೋಮ್ ಹರ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ದುಬಾರಿ ಮೊತ್ತದಲ್ಲಿ ಸುಮಂತ್ ಜಿ ನಾಯ್ಡು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚೈತಮ್ ಭಾರದ್ವಾಜ್ ಈ ಸಿನಿಮಾಗೆ ಸಂಗೀತ ನೀಡಿದ್ದು, ಅರವಿಂದ್ ವಿಶ್ವನಾಥನ್ ಛಾಯಾಗ್ರಹಣವಿದೆ. ಶ್ರೀ ಸುಬ್ರಹ್ಮಣ್ಯೇಶ್ವರ ಸಿಮಿಮಾಸ್ ಬ್ಯಾನರ್ ನಡಿ 'ಹರೋಮ್ ಹರಾ' ಸಿನಿಮಾ ನಿರ್ಮಾಣ ಆಗುತ್ತಿದೆ.

More from Filmibeat

English summary
Kichcha Sudeep released Telugu hero Sudheer Babu's Harom Hara movie teaser:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X