ಮೂರು ಪ್ಲಾಪ್ ಸಿನಿಮಾ ಕೊಟ್ಟ ಕರಾವಳಿ ಸುಂದರಿ ಕೃತಿ ಶೆಟ್ಟಿ: ಲಕ್ಕಿ ಗರ್ಲ್ ಪಟ್ಟದ ಗತಿಯೇನು?
ಕರಾವಳಿ ಬೆಡಗಿ ಕೃತಿ ಶೆಟ್ಟಿ ಟಾಲಿವುಡ್ ಪಾಲಿಗೆ ಲಕ್ಕಿ ಗರ್ಲ್ ಆಗಿದ್ದರು. ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಂತೆ ಯಶಸ್ಸು ಅನ್ನೋದು ಈ ನಟಿಯನ್ನು ಹಿಂಬಾಲಿಸಿಕೊಂಡು ಬರೋಕೆ ಶುರು ಮಾಡಿತ್ತು. ಆದರೆ, ಈಗ್ಯಾಕೋ ಕೃತಿ ಶೆಟ್ಟಿ ನಟಿಸಿದ ಸಿನಿಮಾಗಳು ಒಂದೊಂದಾಗೇ ಮಕಾಡೆ ಮಲುಗುತ್ತಿವೆ.
ಮೊದಲ ಸಿನಿಮಾ 'ಉಪ್ಪೇನ' ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಮೊದಲ ಸಿನಿಮಾದಲ್ಲಿಯೇ ಕೃತಿ ಶೆಟ್ಟಿ ಸ್ಟಾರ್ ಆಗಿ ಹೊರಮ್ಮಿದ್ದರು. 'ಉಪ್ಪೇನ' ಸಿನಿಮಾ ಬಾಕ್ಸಾಫೀಸ್‌ನಲ್ಲಿ 100 ಕೋಟಿ ರೂ. ಬಾಚಿಕೊಂಡಿದ್ದೇ ಇಷ್ಟೆಲ್ಲಾ ಎಕ್ಸ್‌ಪೆಕ್ಟೆಷನ್‌ಗೆ ಕಾರಣ.
'ಉಪ್ಪೇನ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇಲ್ಲಿಂದ ಕೃತಿ ಶೆಟ್ಟಿ ಟಾಲಿವುಡ್ ಮಂದಿಗೆ ಲಕ್ಕಿ ಗರ್ಲ್ ಆಗಿದ್ದರು. ಸ್ಟಾರ್ ನಟರಿಗೆಲ್ಲಾ ಕೃತಿ ಶೆಟ್ಟಿ ನಾಯಕಿಯಾಗಬೇಕಿತ್ತು. ಆದರೆ, ಇತ್ತೀಚೆಗ್ಯಾಕೋ ಇವರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಣ್ಣುತ್ತಲೇ ಇವೆ. ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿರುವ ಕೃತಿ ಶೆಟ್ಟಿ ಬಗ್ಗೆ ಟಾಲಿವುಡ್‌ನ ಚರ್ಚೆ ಜೋರಾಗಿದೆ.

ಬ್ಲಾಕ್ ಬಸ್ಟರ್ ಸಿನಿಮಾಗೆ ಕೃತಿ ಶೆಟ್ಟಿ ಪರದಾಟ
ಕೃತಿ ಶೆಟ್ಟಿ ವೃತ್ತಿ ಬದುಕಿನಲ್ಲಿ ಇಳಿಮುಖವಾಗಿದೆ. ಇತ್ತೀಚೆಗೆ ಈ ನಟಿ ನಟಿಸಿದ ಒಂದೇ ಒಂದು ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಒಂದೇ ಒಂದು ಹಿಟ್ ಸಿನಿಮಾಗಾಗಿ ಕೃತಿ ಎದುರು ನೋಡುವಂತಾಗಿದೆ. ಹೀಗೆ ಮುಂದುವರೆದರೆ, ಟಾಲಿವುಡ್ ಲಕ್ಕಿ ಗರ್ಲ್ ಅನ್ನೋ ಪಟ್ಟವನ್ನೂ ಕಳೆದ ಕೊಳ್ಳಬೇಕಾಗುತ್ತೆ ಅಂತ ಮಾತಾಡಿಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಕೃತಿ ಶೆಟ್ಟಿ ಸಿನಿಮಾಗಳು ಹೀಗೆ ಸೋಲಲು ಕಾರಣವೇನು? ಮುಂದಿನ ಹಾದಿಯೇನು ಅನ್ನೋದನ್ನು ತಿಳಿಯಲು ಮುಂದೆ ಓದಿ.

3 ಸಿನಿಮಾ ಸೋಲು
ಕೃತಿ ಶೆಟ್ಟಿ ಅಭಿನಯದ ಮೂರು ಸಿನಿಮಾಗಳು ಸೋಲುಂಡಿವೆ. ಇತ್ತೀಚೆಗೆ ತೆರೆಕಂಡಿರೋ 'ಆ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ' ಬಾಕ್ಸಾಫೀಸ್‌ನಲ್ಲಿ ಜಾದು ಮಾಡಿಲ್ಲ. ಹಾಗೇ ಮಾಚೆರ್ಲಾ ನಿಯೋಜಕವರ್ಗಂ ಹಾಗೂ 'ದಿ ವಾರಿಯರ್' ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿವೆ. ಈ ಮೂರು ಸಿನಿಮಾಗಳ ಸೋಲು ಕೃತಿ ಶೆಟ್ಟಿ ಕರಿಯರ್‌ಗೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಮುಂದಿನ ರಿಲೀಸ್ ಆಗುವ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಜಾದು ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಕೃತಿ ಶೆಟ್ಟಿ ಸೋಲಿಗೆ ಕಾರಣ ಏನು?
ಕೃತಿ ಶೆಟ್ಟಿ ಸೋಲಿಗೆ ಟಾಲಿವುಡ್ ಕಾರಣಗಳನ್ನು ನೆಟ್ಟಿಗರು ಕಾರಣಗಳನ್ನು ಹುಡುಕಲಾಗುತ್ತಿದೆ. ತನಗೆ ಒಪ್ಪುವ ರೋಲ್‌ಗಳನ್ನು ನಟಿ ಆಯ್ಕೆ ಮಾಡಿಕೊಳ್ಳಬೇಕು. 'ಉಪ್ಪೇನ' ಬಳಿಕ ಸ್ಕ್ರಿಪ್ಟ್ ಬಗ್ಗೆ ನಟಿ ಗಮನ ಹರಿಸುತ್ತಿಲ್ಲ. ಹೀಗಾಗಿ ಕೃತಿ ಶೆಟ್ಟಿ ಮುಂದೆ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳನ್ನು ಜಾಗರೂಕತೆಯಿಂದ ಒಪ್ಪಿಕೊಳ್ಳಬೇಕು ಅಂತಿದ್ದಾರೆ.

ಮುಂದಿನ ಸಿನಿಮಾ ಯಾವುದು?
ಕೃತಿ ಶೆಟ್ಟಿ ಕೈಯಲ್ಲಿ ಮತ್ತೊಂದು ಬಿಗ್ ಪ್ರಾಜೆಕ್ಟ್ ಇದೆ. ಸದ್ಯ ವೆಂಕಟ್ ಪ್ರಭು ನಿರ್ದೇಶಿಸುತ್ತಿರುವ ಸಿನಿಮಾದಲ್ಲಿ ಕೃತಿ ನಡಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಾಗಚೈತನ್ಯ ಹೀರೊ. ಇವರಿಬ್ಬರ ಕಾಂಬಿನೇಷನ್ ವರ್ಕ್ ಔಟ್ ಆದರೆ, ಕೃತಿ ಶೆಟ್ಟಿ ಕರಿಯರ್ ಮುಂದುವರೆಯುತ್ತೆ. ಹೀಗಾಗಿ, ಮುಂದೆ ಆಯ್ಕೆ ಮಾಡಿಕೊಳ್ಳುವ ಸಿನಿಮಾಗಳನ್ನು ನಾಜೂಕಾಗಿ ಒಪ್ಪಿಕೊಳ್ಳಬೇಕಿದೆ. ಸದ್ಯಕ್ಕಂತೂ ಕೃತಿ ಶೆಟ್ಟಿ ಈಗ ಸಿಕ್ಕಿರೋ ನೇಮ್ ಅಂಡ್ ಫೇಮ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ.


Click it and Unblock the Notifications











