'ಲೈಗರ್' ಹೀರೊ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್: ವಿಡಿಯೋ ವೈರಲ್!
ಟಾಲಿವುಡ್ ರೌಡಿ ವಿಜಯ್ ದೇವರಕೊಂಡ ನಟನೆಯ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ಲೈಗರ್'. ಈ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ವೇಳೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಆ ವಿಡಿಯೋ ಬಗ್ಗೆ ಚರ್ಚೆ ಶುರುವಾಗಿದೆ.
ಮಾಸ್ ಡೈರೆಕ್ಟರ್ ಪೂರಿ ಜಗನ್ನಾಥ್ ಹಾಗೂ ಟಾಲಿವುಡ್ ರೌಡಿ ಕಾಂಬಿನೇಷನ್ ಅಂದ್ರೆ ಕಮ್ಮಿನಾ? ಸಹಜವಾಗಿಯೇ ಕ್ರೇಜ್ ದುಪ್ಪಟ್ಟಾಗಿದೆ. ವಿಜಯ್ ದೇವರಕೊಂಡ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಸ್ಟ್ 25 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಹೆಚ್ಚು ಕಡಿಮೆ ಒಂದು ತಿಂಗಳಿನಿಂದ 'ಲೈಗರ್' ಸಿನಿಮಾಗಾಗಿ ಬಿಡುವಿಲ್ಲದೆ ಪ್ರಚಾರ ಮಾಡಲಾಗುತ್ತಿದೆ.
'ಲೈಗರ್' ತಂಡಕ್ಕೆ ದೇಶದ ವಿವಿಧ ಭಾಗಕ್ಕೆ ಪಯಣ ಬೆಳೆಸಿತ್ತು. ಎಲ್ಲಾ ಕಡೆಗಳಲ್ಲೂ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೇ ವೇಳೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ವಿಜಯ್ ದೇವರಕೊಂಡ ಜೊತೆ ಯೂಟ್ಯೂಬರ್ ನಿಹಾರಿಕಾ ಫೈಟ್ ಮಾಡುವ ಸನ್ನಿವೇಶಗಳಿವೆ.

ವಿಜಯ್- ನಿಹಾರಿಕಾ ಫನ್ನಿ ಫೈಟ್
'ಲೈಗರ್' ಸಿನಿಮಾದ ಹೀರೊ ವಿಜಯ್ ಹಾಗೂ ಸೋಶಿಯಲ್ ಮೀಡಿಯಾ ಸೆನ್ಸೇಷನ್ ನಿಹಾರಿಕಾ ಇಬ್ಬರೂ ಫೈಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ಸಿನಿಮಾ ಪ್ರಚಾರಕ್ಕಾಗಿ ಮಾಡಿದ ವಿಡಿಯೋ ಆಗಿದ್ದು, ಇಬ್ಬರೂ ಫನ್ನಿ ಫೈಟ್ ಮಾಡಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಫನ್ನಿ ವಿಡಿಯೋಗೆ ಸಖತ್ ಕಮೆಂಟ್
ಟಾಲಿವುಡ್ ಸಿನಿಮಾ ಮಂದಿ ಪ್ರಚಾರಕ್ಕೆ ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಯೂಟ್ಯೂಬರ್‌ಗಳನ್ನು ಬಳಸಿಕೊಳ್ಳುತ್ತಲೇ ಇರುತ್ತಾರೆ. ಇವರಲ್ಲಿ ಭಾರತೀಯ ಮೂಲದ ಅಮೆರಿಕ ಯೂಟ್ಯೂಬರ್ ನಿಹಾರಿಕಾ ಕೂಡ ಒಬ್ಬರು. ಈಗ 'ಲೈಗರ್' ಸಿನಿಮಾ ಬಿಡುಗಡೆ ವೇಳೆನೂ ನಿಹಾರಿಕಾ ಪ್ರತ್ಯಕ್ಷ ಆಗಿದ್ದಾರೆ. ವಿಜಯ್ ದೇವರಕೊಂಡ ಜೊತೆ ಫೈಟ್ ಮಾಡೋದು, ಕೂಗೋದು, ತಮಾಷೆ ಮಾಡೋದು ನೆಟ್ಟಿಗರಿಗೆ ಮಸ್ತ್ ಮಜಾ ಕೊಟ್ಟಿದೆ.

ನಾಚಿ ನೀರಾದಾ ನಿಹಾರಿಕಾ
ಈ ವಿಡಿಯೋದಲ್ಲಿ ಕೇವಲ ಫೈಟ್ ಅಷ್ಟೇ ಇಲ್ಲ. ವಿಜಯ್ ದೇವರಕೊಂಡ ಹಾಗೂ ನಿಹಾರಿಕಾ ನಡುವೆ ತಮಾಷೆಯ ಮಾತುಕತೆಗಳೂ ಕೂಡ ಇವೆ. ವಿಜಯ್ ದೇವರಕೊಂಡ 'ನಾವು ಹೋರಾಡೋಣವೇ?' ಎಂದಾಗ, ನಿಹಾರಿಕಾ 'ಏನು ಫೈಟ್ ಮಾಡೋದಾ? ಎಂದು ತಿರುಗಿ ಕೇಳುತ್ತಾರೆ. ಆ ವೇಳೆ ವಿಜಯ್ 'ಪಿಲ್ಲೊ ಫೈಟ್ ಆಡೋಣ' ಎಂದಿದ್ದರು. ಈ ವೇಳೆ 'ನಾನು ನಿಮ್ಮ ತಲೆದಿಂಬು ಆಗುತ್ತೇನೆ' ಎಂದು ನಾಚಿ ನೀರಾಕಿ ಅಲ್ಲಿಂದ ಹೊರಟು ಹೋಗುವ ವಿಡಿಯೋ ಇದೆ.

ಈ ವಿಡಿಯೋಗೆ ಸೆಲೆಬ್ರಿಟಿಗಳು ಫಿದಾ!
ವಿಜಯ್ ದೇವರಕೊಂಡ ಹಾಗೂ ನಿಹಾರಿಕಾ ವಿಡಿಯೋಗೆ ಸೆಲೆಬ್ರೆಟಿಗಳು ಫಿದಾ ಆಗಿದ್ದಾರೆ. ಸುಶ್ಮಿತಾ ಕೊನಿಡೇಲಾ, ಇಲಿಯಾನಾ, ಸೋನಾಲ್ ದೇವರಾಜ್, ನಿಖಿಲ್ ತನೇಜಾ ಸೇರಿದಂತೆ ಹಲವರು ಈ ವಿಡಿಯೋ ನೋಡಿ ಇಷ್ಟ ಪಟ್ಟಿದ್ದಾರೆ. ಈ ಹಿಂದೆ ನಿಹಾರಿಕಾ, ಮಹೇಶ್ ಬಾಬು ನಿರ್ಮಿಸಿದ್ದ 'ಮೇಜರ್' ಸಿನಿಮಾದ ಪ್ರಚಾರದ ವೇಳೆನೂ ಪ್ರತ್ಯಕ್ಷ ಆಗಿದ್ದರು. ಆಗಲೂ ನೆಟ್ಟಿಗರು ಖುಷಿ ವ್ಯಕ್ತಪಡಿಸಿದ್ದರು.


Click it and Unblock the Notifications











