ಚಿರಂಜೀವಿ 'ಕೈದಿ' ಕಥೆ ಹೇಳೋಕೆ ಹೋಗಿದ್ದ ಲೋಕೇಶ್ ಕನಕರಾಜ್; ಮೆಗಾಸ್ಟಾರ್ ಭೇಟಿ ಆಗಿದ್ರಾ? ಮಿಸ್ ಆಗಿದ್ದೇಗೆ?

ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿಯನ್ನು ಚಾಲ್ತಿಯಲ್ಲಿರೋ ನಟ. ಇತ್ತೀಚೆಗೆ ಅವರು ನಟಿಸಿದ 'ಮನಶಂಕರ ವರಪ್ರಸಾದ್ ಗಾರು' ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಹೀಗಾಗಿ ಮೆಗಾಸ್ಟಾರ್ ಎದುರು ನಿಲ್ಲುವುದಕ್ಕೆ ಇಂದಿನ ಸ್ಟಾರ್ ನಟರೇ ಪರದಾಡುತ್ತಾರೆ. ತಮ್ಮನ ಪುತ್ರ ಸಮಕಾಲೀನ ನಟರಿಗೆ ಸವಾಲೊಡ್ಡುತ್ತಿದ್ದಾರೆ. ಚಿರಂಜೀವಿ ಆ ಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಬೇರೂರಿದ್ದಾರೆ.

ಇನ್ನು ಚಿರಂಜೀವಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಬೇಕು ಅನ್ನೋದು ಅವರ ಅಭಿಮಾನಿಗಳ ಆಸೆ. ಆದರೆ, ಮೆಗಾಸ್ಟಾರ್ ಯಾಕೋ ಮನಸ್ಸು ಮಾಡುತ್ತಿಲ್ಲ. ಆದರೂ, ದಕ್ಷಿಣ ಭಾರತದಲ್ಲಿ ಚಿರಂಜೀವಿ ಸಿನಿಮಾಗಳು ಹವಾ ಏನು ಕಮ್ಮಿ ಆಗಿಲ್ಲ. ಸ್ಟಾರ್ ನಿರ್ದೇಶಕರು ಇವರಿಗೆ ಆಕ್ಷನ್ ಕಟ್ ಹೇಳುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಒಮ್ಮೆ 'ಕೂಲಿ' ನಿರ್ದೇಶಕ ಲೋಕೇಶ್ ಕನಕರಾಜ್ ಇವರಿಗೆ ಸಿನಿಮಾ ಮಾಡುವುದಕ್ಕೆ ಹೋಗಿದ್ರು. ಅದನ್ನು ಚಿರಂಜೀವಿ ಹೇಗೋ ಮಿಸ್ ಮಾಡಿಕೊಂಡಿದ್ದಾರೆ.

Lokesh Kanagaraj tried to pitch Kaithi story to Chiranjeevi but missed here is details

ಇನ್ನು ಲೋಕೇಶ್ ಕನಕರಾಜ್ ಕೂಡ ದಕ್ಷಿಣ ಭಾರತದ ಚಿತ್ರರಂಗದ ಸ್ಟಾರ್ ನಿರ್ದೇಶಕ. ಇವರಿಗೀಗ ಸೂಪರ್‌ಸ್ಟಾರ್‌ಗಳೇ ಕರೆದು ಕಾಲ್‌ಶೀಟ್ ಕೊಡುವಷ್ಟು ಮಟ್ಟಿಗೆ ಬೆಳೆದಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಹುಬೇಡಿಕೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಆದರೆ, ಇಬ್ಬರೂ ಒಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.

ನಿರ್ದೇಶಕ ಲೋಕೇಶ್ ಕನಕರಾಜ್ ಮೊದಲ ಬಾರಿಗೆ ಸಂದೀಪ್ ಕಿಶನ್ ಅವರ 'ಮಾನನಗರಂ' ಸಿನಿಮಾದ ಮೂಲಕ ವೃತ್ತಿಜೀವನ ಆರಂಭಿಸಿದರು. ಇಂದು ದಕ್ಷಿಣ ಭಾರತದ ಟಾಪ್ ಡೈರೆಕ್ಟರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಮೊದಲ ಸಿನಿಮಾದಿಂದಲೂ ಇವರ ನಿರ್ದೇಶನಕ್ಕೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದಾರೆ. ಆದರೆ, ಇತ್ತೀಚೆಗೆ ದಳಪತಿ ವಿಜಯ್‌ಗೆ ನಿರ್ದೇಶಿಸಿದ 'ಲಿಯೋ' ಹಾಗೂ ರಜನಿಕಾಂತ್ ನಟಿಸಿದ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದರೂ, ಇವರ ನಿರ್ದೇಶನದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದವು.

ಸ್ವತಂತ್ರವಾಗಿ ನಿರ್ದೇಶಿಸಿದ ಚೊಚ್ಚಲ ಸಿನಿಮಾ 'ಮಾನಗಾರಂ' ಬಳಿಕ ಲೋಕೇಶ್ ಕನಕರಾಜ್ ಅವಕಾಶಗಳಿಗಾಗಿ ಹಲವು ಸ್ಟಾರ್ ನಾಯಕರನ್ನು ಭೇಟಿಯಾಗಿದ್ದರು. ಆದರೆ, ಯಾರೂ ಲೋಕೇಶ್‌ ಕನಕರಾಜ್‌ಗೆ ಅಂತ ಅವಕಾಶವನ್ನು ನೀಡಿರಲಿಲ್ಲ. ಆ ವೇಳೆ ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿಯಾಗಲು ಲೋಕೇಶ್ ಕನಕರಾಜ್ ಹಲವು ಬಾರಿ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಿರಲಿಲ್ಲ.

Lokesh Kanagaraj tried to pitch Kaithi story to Chiranjeevi but missed here is details

ತಮಿಳಿನ ಸ್ಟಾರ್ ನಟ ಕಾರ್ತಿ ಅಭಿನಯದ 'ಕೈದಿ' ದೊಡ್ಡ ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ, ಕಾರ್ತಿಗೆ ಈ ಸಿನಿಮಾವನ್ನು ಮಾಡುವುದಕ್ಕೂ ಮುನ್ನ ಲೋಕೇಶ್ ಕನಕರಾಜ್ ಈ ಸಿನಿಮಾವನ್ನು ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಮಾಡಲು ಬಯಸಿದ್ದರು ಎನ್ನಲಾಗಿದೆ. ಹೀಗಾಗಿ ತಮ್ಮ ಆಪ್ತ ಮೂಲಗಳಿಂದ ಮೇಗಾಸ್ಟಾರ್ ಚಿರಂಜೀವಿಯನ್ನು ಭೇಟಿ ಮಾಡುವುದಕ್ಕೆ ಮುಂದಾಗಿದ್ದರು. ಆದರೆ, ಈ ಪ್ರಯತ್ನಗಳು ವಿಫಲವಾದಾಗ ಇದೇ 'ಕೈದಿ' ಕಥೆಯನ್ನು ಕಾರ್ತಿಗೆ ಹೇಳಿದ್ದರು. ಕಾರ್ತಿ ಆ ತಕ್ಷಣವೇ ಇಷ್ಟ ಪಟ್ಟು ಲೋಕೇಶ್‌ಗೆ ಕಾಲ್-ಶೀಟ್‌ಗಳನ್ನು ನೀಡಿದ್ದರು.

ಯಾವುದೇ ನಿರೀಕ್ಷೆಗಳಿಲ್ಲದೆ ಬಿಡುಗಡೆಯಾದ 'ಕೈದಿ' ಬಾಕ್ಸ್ ಆಫೀಸ್ ದಾಖಲೆಯನ್ನು ಬರೆದಿತ್ತು. ಆಗಲೇ ಸುಮಾರು ₹130 ಕೋಟಿಗಳಷ್ಟು ಗಳಿಕೆ ಮಾಡಿತ್ತು. ಕಾರ್ತಿಗೆ ಈ ಮಟ್ಟಕ್ಕೆ ಅಷ್ಟೊಂದು ಯಶಸ್ಸು ಸಿಕ್ಕಿರಬೇಕಾದರೆ, ಮೆಗಾಸ್ಟಾರ್ ಚಿರಂಜೀವಿ ನಟಿಸಿದ್ದರೆ, ₹300 ಕೋಟಿಗೂ ಅಧಿಕ ಗಳಿಕೆ ದಾಖಲಿಸಬಹುದಿತ್ತು ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ. ಈ ವಿಷಯ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ಅಭಿಮಾನಿಗಳು ದುಬಾರಿ ಮಿಸ್ ಎಂದು ಬಣ್ಣಿಸಿದ್ದಾರೆ.

More from Filmibeat

Read more about: chiranjeevi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X