ಮಹಾಕುಂಭ ಮೇಳದಲ್ಲಿ ಅಖಾಡಕ್ಕಿಳಿದ ಬಾಲಕೃಷ್ಣ ಸಿನಿಮಾ 'ಅಖಂಡ 2'; ಅಘೋರಿಗಳೇ ಹೈಲೈಟ್

ಉತ್ತರಾಯಣ ಕಾಲ ಶುರುವಾಗುತ್ತಿದ್ದಂತೆ ಸಾಧು ಸಂತರು, ಅಘೋರಿಗಳು ಧಾರ್ಮಿಕ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಅದರಲ್ಲೂ 144 ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭ ಮೇಳದಲ್ಲಿ ದೇಶದ ಮೂಲೆ ಮೂಲೆಯಲ್ಲಿರುವ ನಾಗ ಸಾಧುಗಳು, ಸಾಧು ಸಂತರು ಆಗಮಿಸುತ್ತಿದ್ದಾರೆ. ಇದು ಧಾರ್ಮಿಕ ನಂಬಿಕೆ ಇಟ್ಟುಕೊಂಡವರಿಗೆ ಪವಿತ್ರ ಘಳಿಗೆ.

ವಿಶ್ವದ ಮೂಲೆ ಮೂಲೆಗಳಿಂದ ಈ ಮಹಾಕುಂಭ ಮೇಳಕ್ಕೆ ಜನರು ಕೂಡ ಆಗಮಿಸುತ್ತಿದ್ದಾರೆ. ಸಾಧು ಸಂತರು, ಅಘೋರಿಗಳು ತಮ್ಮದೇ ನಾನಾ ಅವತಾರದಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಇವರನ್ನು ನೋಡುವುದಕ್ಕೆ ಅಂತಲೇ ಭಾರತ ಅಷ್ಟೇ ಅಲ್ಲ, ವಿದೇಶದಿಂದಲೂ ಜನರು ಆಗಮಿಸಿ, ಈ ಮಹಾ ಸಂಗಮವನ್ನು ಕಣ್ತುಂಬಿಕೊಳ್ಳುತ್ತಾರೆ.

Maha Kumbh Mela 2025 Nandamuri Balakrishna film Akhanda 2 Shooting commence in Prayagraj

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಈ ಮಹಾಕುಂಭ ಮೇಳಕ್ಕೆ ಸಿನಿಮಾ ತಾರೆಯರು ಕೂಡ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸದ್ಯ ನಂದಮೂರಿ ಬಾಲಕೃಷ್ಣ ನಟಿಸುತ್ತಿರುವ ಹೊಸ ಸಿನಿಮಾ 'ಅಖಂಡ 2' ಶೂಟಿಂಗ್ ಆರಂಭ ಆಗಿದೆ ಎಂದು ವರದಿಗಳಾಗಿದೆ. ಇತ್ತ ಬಾಲಕೃಷ್ಣ ನಟನೆಯ 'ಡಾಕೂ ಮಹಾರಾಜ್' ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದರೆ, ಅತ್ತ ಪ್ರಯಾಗ್‌ರಾಜ್‌ನಲ್ಲಿ 'ಅಖಂಡ 2' ಸುದ್ದಿಯಲ್ಲಿದೆ.

ಟಾಲಿವುಡ್ ಲೆಜೆಂಡ್ ಬಾಲಕೃಷ್ಣಗೆ ಸೂಪರ್‌ ಸಕ್ಸಸ್ ಕೊಟ್ಟ ಸಿನಿಮಾ 'ಅಖಂಡ' ಸೀಕ್ವೆಲ್ ಶೂಟಿಂಗ್ ಆರಂಭ ಆಗಿದೆ. ಸೋಲಿನ ಸುಳಿಗೆ ಸಿಲುಕಿದ್ದ ಬಾಲಕೃಷ್ಣಗೆ 'ಅಖಂಡ' ಮತ್ತೆ ಗೆಲುವನ್ನು ತಂದುಕೊಟ್ಟಿತ್ತು. ಅಲ್ಲಿಂದ ಮತ್ತೆ ಹಿಂತಿರುಗಿ ನೋಡಲಿಲ್ಲ. 2021ರಲ್ಲಿ ತೆರೆಕಂಡಿದ್ದ 'ಅಖಂಡ' ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದೇ ಜೋಷ್‌ನಲ್ಲಿ 'ಅಖಂಡ 2' ಶೂಟಿಂಗ್ ಶುರುವಾಗಿದೆ.

Maha Kumbh Mela 2025 Nandamuri Balakrishna film Akhanda 2 Shooting commence in Prayagraj

ಅಷ್ಟಕ್ಕೂ ಮಹಾಕುಂಭ ಮೇಳದಲ್ಲಿ 'ಅಖಂಡ 2' ಸಿನಿಮಾದ ಚಿತ್ರೀಕರಣ ಮಾಡುವುದಕ್ಕೆ ಒಂದು ಬಲವಾದ ಕಾರಣವಿದೆ. ಬೊಯಪಾಟಿ ಶ್ರೀನು ನಿರ್ದೇಶಿಸಿದ್ದ 'ಅಖಂಡ' ಸಿನಿಮಾದಲ್ಲಿ ಬಾಲಕೃಷ್ಣ ಪವರ್‌ಫುಲ್ ಅಘೋರಿ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ತೆಲುಗು ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಅಘೋರಿ ಅವತಾರದಲ್ಲಿ ಬಾಲಕೃಷ್ಣ ಅಬ್ಬರಿಸಿ ಬೊಬ್ಬಿರಿದಿದ್ದರು. ಇವರ ಆರ್ಭಟ ನೋಡಿ ಬಾಲಯ್ಯನ ಫ್ಯಾನ್ಸ್ ಥ್ರಿಲ್ ಆಗಿದ್ದರು.

'ಅಖಂಡ 2'ನಲ್ಲಿಯೂ ಅಘೋರಿ ದೃಶ್ಯಗಳು ಇವೆ. ಈ ಕಾರಣಕ್ಕೆ ರಿಯಲ್ ಅಘೋರಿಗಳನ್ನು ಸಿನಿಮಾದಲ್ಲಿ ತೋರಿಸು ಸಾಧ್ಯತೆಯಿದೆ. ಜೊತೆಗೆ ಮಹಾಕುಂಭ ಮೇಳದ ಬಗ್ಗೆನೂ ಸಿನಿಮಾದಲ್ಲಿ ನೋಡುವುದಕ್ಕೆ ಸಿಗಬಹುದು. ಈಗಾಗಲೇ ವರದಿಯಾಗಿರುವ ಪ್ರಕಾರ 'ಅಖಂಡ' ಸಿನಿಮಾದಲ್ಲಿ ಕೆಲವು ದೃಶ್ಯಗಳು ಕುಂಭ ಮೇಳದಲ್ಲಿ ನಡೆಯಲಿವೆ. ಈ ಕಾರಣಕ್ಕೆ ಮಹಾಕುಂಭ ಮೇಳ ಶುರುವಾಗುತ್ತಿದ್ದಂತೆ ಸಿನಿಮಾ ತಂಡ ಪ್ರಯಾಗ್‌ರಾಜ್‌ನಲ್ಲಿ ಬೀಡು ಬಿಟ್ಟಿದೆ ಎನ್ನಲಾಗಿದೆ.

ನಂದಮೂರಿ ಬಾಲಕೃಷ್ಣ 'ಅಖಂಡ 2' ಮಹಾ ಘೋರಿ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ. ಸದ್ಯ ಸಿನಿಮಾ ತಂಡ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೆ, 'ಅಖಂಡ 2' ಬಾಲಯ್ಯನ ವೃತ್ತಿ ಬದುಕಿಗೆ ಮತ್ತೊಂದು ಸೂಪರ್‌ ಹಿಟ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯನ್ನಂತೂ ಹುಟ್ಟಿಸಿದೆ. ಸದ್ಯ 'ಡಾಕೂ ಮಹಾರಾಜ್' ಥಿಯೇಟರ್‌ ಲಗ್ಗೆ ಇಟ್ಟಿದ್ದು, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇನ್ನು 'ಅಖಂಡ 2' ಇದೇ ವರ್ಷ ರಿಲೀಸ್ ಆಗುತ್ತೋ? ಇಲ್ಲ ಮುಂದಿನ ವರ್ಷ ರಿಲೀಸ್ ಆಗುತ್ತೋ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

More from Filmibeat

English summary
Maha Kumbh Mela 2025 Nandamuri Balakrishna film Akhanda 2 Shooting commence in Prayagraj;
Read more about: balakrishna tollywood movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X