For Quick Alerts
  ALLOW NOTIFICATIONS  
  For Daily Alerts

  'ದಸರಾ'ಗಾಗಿ ಹಳ್ಳಿ ಹುಡುಗಿ ಲುಕ್ ಕೊಟ್ಟ 'ಮಹಾನಟಿ' ಕೀರ್ತಿ ಸುರೇಶ್!

  |

  ಟಾಲಿವುಡ್‌ನ ನ್ಯಾಚುರಲ್ ಸ್ಟಾರ್ ನಾನಿ ಮತ್ತೊಂದು ಸಿನಿಮಾ ಬಿಡುಗಡೆಗೂ ಮುನ್ನವೇ ಬೇಜಾನ್ ಸದ್ದು ಮಾಡುತ್ತಿದೆ. ಅದುವೇ 'ದಸರಾ'. ಇದು ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್. 'ದಸರಾ' ಸಿನಿಮಾ ಮೂಲಕ ನಾನಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಪ್ರಿಯರನ್ನು ತಲುಪಲಿದ್ದಾರೆ.

  ನಾನಿ ಈ ಸಿನಿಮಾ ಮೂಲಕ ಮಾಸ್ ಅವತಾರದಲ್ಲಿ ಪ್ರೇಕ್ಷಕರಿಗೆ ಕಿಕ್ ಕೊಡಲಿದ್ದಾರೆ. ಇನ್ನು 'ಮಹಾನಟಿ' ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಗೆದ್ದಿರೋ ಕೀರ್ತಿ ಸುರೇಶ್ ಖಡಕ್ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ. ನಾನಿಗೆ ನಾಯಕಿಯಾಗಿ ಮಾಸ್ ಅವತಾರವೆತ್ತಿದ್ದಾರೆ.

  ತೆಲುಗಿನ ಸ್ಟಾರ್ ನಟ ನಾನಿಯ ಮಾಸ್ ಸಿನಿಮಾ 'ದಸರಾ'ದಲ್ಲಿ ಕೀರ್ತಿ ಸುರೇಶ್ ಹೇಗೆ ಕಾಣಿಸುತ್ತಾರೆ ಎಂಬ ಕುತೂಹಲವಿತ್ತು. ಆ ಕುತೂಹಲವನ್ನು ಚಿತ್ರತಂಡ ಹಾಗೇ ಉಳಿಸಿಕೊಂಡು ಬಂದಿತ್ತು. ಅದನ್ನು ಕೀರ್ತಿ ಸುರೇಶ್ ಹುಟ್ಟುಹಬ್ಬದ ದಿನದಂದು ರಿವೀಲ್ ಮಾಡಿದೆ.

  ಕೀರ್ತಿ ಸುರೇಶ್ ಬರ್ತ್‌ಡೇ ದಿವೇ ಫಸ್ಟ್ ಲುಕ್ ರಿವೀಲ್ ಮಾಡಿದೆ. ನಾನಿ ಹೊಸ ಅವತಾರ ಖಡಕ್ ಲುಕ್ ಕಂಡು ಫಿದಾ ಆಗಿದ್ದ ಸಿನಿಪ್ರಿಯರಿಗೆ, ಕೀರ್ತಿ ಸುರೇಶ್ ಲುಕ್ ಕೂಡ ಅಷ್ಟೇ ಕಿಕ್ ಕೊಟ್ಟಿದೆ. ಈ ಸಿನಿಮಾದಲ್ಲಿ ವೆನ್ನಲ ಅನ್ನೋ ಪಾತ್ರವನ್ನು ನಿಭಾಯಿಸಿದ್ದು, ಹಳ್ಳಿ ಹುಡುಗಿಯಾಗಿ ಹಳದಿ ಸೀರೆಯಲ್ಲಿ ಮಿಂಚುತ್ತಿದ್ದಾರೆ. ಕೀರ್ತಿಯ ಈ ರಗಡ್ ಅವತಾರ ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.

  ಈಗಾಗಲೇ ರಿಲೀಸ್ ಆಗಿರುವ ನಾನಿ ಫಸ್ಟ್ ಲುಕ್, ಧೂಮ್ ದಾಮ್ ದೊಸ್ತಾನ ಹಾಡು ಸಿನಿ ಪ್ರಿಯರಿಂದ ಅದ್ಭುತ ರೆಸ್ಪಾನ್ ಪಡೆದುಕೊಂಡಿತ್ತು. ಇದೀಗ ಟಾಲಿವುಡ್ ನಟಿ ಕೀರ್ತಿ ಸುರೇಶ್ ಕೂಡ ಎಲ್ಲರ ಗಮನ ಸೆಳೆದಿದ್ದಾರೆ. ಇವೆಲ್ಲವೂ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

  Mahanati Fame Keerthy Suresh Village Girl Look In Nani Starrer Dasara Movie

  'ದಸರಾ' ಸಿನಿಮಾವನ್ನು ಶ್ರೀಕಾಂತ್ ಒಡೆಲಾ ನಿರ್ದೇಶಿಸುತ್ತಿದ್ದು, ಮಾಸ್ ಅಂಡ್ ಆಕ್ಷನ್ ಕಥಾಹಂದರವನ್ನು ಒಳಗೊಂಡಿದೆ. ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ದೊಡ್ಡ ಸ್ಟಾರ್ ಕಾಸ್ಟ್ ಸಿನಿಮಾದಲ್ಲಿದೆ. 2023 ಮಾರ್ಚ್ 30ರಂದು ಸಿನಿಮಾ ಬಿಡುಗಡೆಯಾಗೋದಾಗಿ ಚಿತ್ರತಂಡ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ. ಸುಧಾಕರ್ ಚೆರುಕುರಿ, ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದರೆ, ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

  English summary
  Mahanati Fame Keerthy Suresh Village Girl Look In Nani Starrer Dasara Movie, Know More.
  Thursday, October 20, 2022, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X