Sarkaru Vaari Paata: ತಂದೆ ಮಹೇಶ್ ಬಾಬು ಜೊತೆ ಹೆಜ್ಜೆ ಹಾಕಿದ ಪುತ್ರಿ ಸಿತಾರಾ: ಹೆಂಗೈತೆ ಸ್ಟೆಪ್ಸ್?

ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಸಿನಿಮಾ ಪ್ರತಿ ಸೆರ್ಪ್ರೈಸ್ ನೀಡುತ್ತಲೇ ಇದೆ. ರೆಕಾರ್ಡ್ ಬ್ರೇಕಿಂಗ್ ಸಾಂಗ್ 'ಕಲಾವತಿ' ಬಳಿಕ ಮತ್ತೊಂದು ಹಾಡು ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದರೆ, ಈ ಹಾಡಿನಲ್ಲಿ ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾರನ್ನು ನೋಡಬಹುದು. ಇದು ಪ್ರಿನ್ಸ್ ಅಭಿಮಾನಿಗಳಿಗೆ ಡಬಲ್ ಧಮಾಕಾ.

ಮಹೇಶ್ ಬಾಬು ನಿಧಾನವಾಗಿ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಮಹೇಶ್ ಬಾಬು ಅಪ್‌ ಕಮಿಂಗ್ ಸಿನಿಮಾ 'ಸರ್ಕಾರು ವಾರಿ ಪಾಟ' ಚಿತ್ರದ ಹಾಡೊಂದರಲ್ಲಿ ಸಿತಾರಾ ಸೂಪರ್‌ ಸ್ಟೆಪ್ ಹಾಕಿದ್ದಾರೆ. ಆ ಹಾಡಿನ ಚಿಕ್ಕದೊಂದು ತುಣುಕನ್ನು ಸಿನಿಮಾ ತಂಡ ರಿಲೀಸ್ ಮಾಡಿದೆ. ಈ ತುಣುಕನ್ನು ನೋಡಿನೇ ಫ್ಯಾನ್ಸ್ ಫಿದಾ ಆಗಿದ್ದಾರೆ.

ಮಹೇಶ್ ಬಾಬು ಪುತ್ರಿ ಸಿತಾರಾ ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್. ತಾವೇ ಒಂದು ಯುಟ್ಯೂಬ್ ಚಾನೆಲ್ ಅನ್ನು ಆರಂಭಿಸಿದ್ದರು. ಈ ಚಾನೆಲ್ ಮೂಲಕ ಸಿತಾರಾ ಫೇಮಸ್ ಆಗಿದ್ದರು. ಈಗ ತಂದೆ ಮಹೇಶ್ ಬಾಬು ಜೊತೆ ಸಿತಾರಾ ಬಿಗ್ ಸ್ಕ್ರೀನ್‌ಗೆ ಎಂಟ್ರಿ ಕೊಡುತ್ತಿದ್ದಾರೆ. 'ಸರ್ಕಾರಿ ಪಾರು ಪಾಟ' ಚಿತ್ರದ ಪೆನ್ನಿ ಸಾಂಗ್ ಮಾರ್ಚ್ 20ರಂದು ರಿಲೀಸ್ ಆಗಲಿದೆ.

ತಂದೆ-ಮಗಳ ಜುಗಲ್‌ಬಂಧಿ

ತಂದೆ-ಮಗಳ ಜುಗಲ್‌ಬಂಧಿ

'ಸರ್ಕಾರು ವಾರಿ ಪಾಟ' ಚಿತ್ರದ 'ಪೆನ್ನಿ' ಸಾಂಗ್ ಪ್ರೋಮೊ ರಿಲೀಸ್ ಆಗಿದೆ. ಈ ಸಾಂಗ್ ಪ್ರೋಮೊ ನೋಡಿದ ಪ್ರಿನ್ಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಯಾಕಂದ್ರೆ, ಮಹೇಶ್ ಬಾಬು ಜೊತೆ ಪುತ್ರಿ ಸಿತಾರಾ ಕೂಡ ಹಾಡಲ್ಲಿ ಎಂಟ್ರಿಕೊಟ್ಟಿದ್ದಾರೆ. ಹಾಗಂತ ಇದು ಜಸ್ಟ್ ಎಂಟ್ರಿ ಅಷ್ಟೆ ಅಲ್ಲ. ಸಿತಾರಾ ತಂದೆ ಜೊತೆ ಸ್ಟೆಪ್ಟ್ ಕೂಡ ಹಾಕಿದ್ದಾರೆ. ಈ ಹಾಡಿನಲ್ಲಿ ತಂದೆ-ಮಗಳ ಜುಗಲ್ ಬಂಧಿಯನ್ನು ನೋಡಲು ಮಹೇಶ್ ಬಾಬು ಅಭಿಮಾನಿಗಳು ಕಾದು ಕೂತಿದ್ದಾರೆ.

ಸಿತಾರಾ ಬಗ್ಗೆ ಮಹೇಶ್ ಬಾಬು ಹೇಳಿದ್ದೇನು?

ಸಿತಾರಾ ಬಗ್ಗೆ ಮಹೇಶ್ ಬಾಬು ಹೇಳಿದ್ದೇನು?

ಸೂಪರ್‌ಸ್ಟಾರ್ ಮಹೇಶ್ ಬಾಬು ತಮ್ಮ ಟ್ವಿಟರ್ ಖಾತೆಯಲ್ಲಿ 'ಪೆನ್ನಿ' ಸಾಂಗ್‌ ಬಿಡುಗಡೆಗೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಮಗಳ ಬಗ್ಗೆನೂ ಹೆಮ್ಮೆಯಿಂದ ಬರೆದುಕೊಂಡಿದ್ದಾರೆ. " ಮತ್ತೊಮ್ಮೆ ಈ ಶೋನಲ್ಲಿ ಗಮನ ಸೆಳೆಯುತ್ತಿದ್ದಾಳೆ. ನಾಳೆ ನಿಮ್ಮ ಮುಂದೆ ಪೆನ್ನಿ ಸಾಂಗ್ ಬರಲಿದೆ" ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲೂ ಆಕ್ಟಿವ್ ಆಗಿರುವ ಸಿತಾರಾ, ಇನ್‌ಸ್ಟಾಗ್ರಾಂನಲ್ಲಿ ತನ್ನ ಮೊದಲ ಸಾಂಗ್ ಫೋಮೊ ಶೇರ್ ಮಾಡಿಕೊಂಡಿದ್ದಾರೆ. " ಅದ್ಭುತ ತಂಡದೊಂದಿಗೆ ಸೇರಿಕೊಂಡಿದ್ದಕ್ಕೆ ತುಂಬಾನೇ ಸಂತೋಷವಾಗಿದೆ. ಅಪ್ಪ ನೀವು ಹೆಮ್ಮೆ ಪಡುತ್ತೀರಾ ಎಂದು ನಾನು ನಂಬಿದ್ದೇನೆ." ಎಂದು ಸಿತಾರಾ ಕೂಡ ಬರೆದುಕೊಂಡಿದ್ದಾರೆ.

ಲಿಟಲ್ ರಾಕ್‌ಸ್ಟಾರ್ ಎಂದ ಪ್ರಿನ್ಸ್ ಪತ್ನಿ

ಲಿಟಲ್ ರಾಕ್‌ಸ್ಟಾರ್ ಎಂದ ಪ್ರಿನ್ಸ್ ಪತ್ನಿ

ಪುತ್ರಿ ಸಿತಾರಾ ಬಗ್ಗೆ ಮಹೇಶ್ ಬಾಬು ಪತ್ನಿ ನಮೃತಾ ಶಿರೋಡ್ಕರ್ ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ. ಮಗಳ ಸೂಪರ್ ಅವತಾರಕ್ಕೆ ಫುಲ್ ಖುಷಿಯಾಗಿದ್ದಾರೆ. " ನನ್ನ ಲಿಟಲ್ ರಾಕ್‌ಸ್ಟಾರ್" ಎಂದು ಬರೆದು ಖುಷಿ ವ್ಯಕ್ತಪಡಿಸಿದ್ದಾರೆ. ಇನ್ನೊಂದು ಕಡೆ ನಮೃತಾ ಸಹೋದರಿ ಶಿಲ್ಪಾ ಶಿರೋಡ್ಕರ್ ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. " ನೀನು ನಿಜಕ್ಕೂ ಅದ್ಭುತ. ನಿನಗೆ ನನ್ನ ಪ್ರೀತಿ ಮತ್ತು ಆಶೀರ್ವಾದ ಎರಡೂ ಎಂದಿಗೂ ಇರುತ್ತೆ. ನಿನಗೆ ಅಭಿನಂದನೆಗಳು." ಎಂದು ಬರೆದುಕೊಂಡಿದ್ದಾರೆ.

ಮಹೇಶ್ ಬಾಬು ಫ್ಯಾನ್ಸ್ ಏನಂದ್ರು?

ಮಹೇಶ್ ಬಾಬು ಫ್ಯಾನ್ಸ್ ಏನಂದ್ರು?


ಸಿತಾರಾ ಹೆಜ್ಜೆ ಹಾಕಿದ ಪೆನ್ನಿ ಸಾಂಗ್ ಫ್ರೋಮೊ ರಿಲೀಸ್ ಆಗುತ್ತಿದ್ದಂತೆ, ಪ್ರಿನ್ಸ್ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ತಕ್ಷಣವೇ ಅಭಿಮಾನಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಂದೆ ಮಗಳನ್ನು ಒಂದೇ ಸಾಂಗ್‌ನಲ್ಲಿ ನೋಡಲು ಕಾತುರರಾಗಿದ್ದಾರೆ. 'ಸರ್ಕಾರು ವಾರಿ ಪಾಟ' ಚಿತ್ರದ ಎರಡನೇ ಹಾಡು 'ಪೆನ್ನಿ' ನಾಳೆ(ಮಾರ್ಚ್ 20)ಕ್ಕೆ ಬಿಡುಗಡೆಯಾಗಲಿದೆ.

More from Filmibeat

English summary
Mahesh Babu Daughter Sitara Dance Moves In Sarkaru Vaari Paata Penny Song, here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X