ಮಹೇಶ್ ಬಾಬು ಸಿನಿಮಾದಲ್ಲಿ ಆಂಧ್ರ ಸಿ ಎಂ ಡೈಲಾಗ್: ಕಾರಣ ಕೊಟ್ಟ ನಿರ್ದೇಶಕ!

ಟಾಲಿವುಡ್‌ನಲ್ಲಿ ಮಹೇಶ್ ಬಾಬು ಫ್ಯಾನ್ಸ್ ಸಂಭ್ರಮ ಮುಗಿಲು ಮುಟ್ಟಿದೆ. ಇನ್ನು ಆರು ದಿನದಲ್ಲಿ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ಹೀಗಾಗಿ ನೆಚ್ಚಿನ ನಟನ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಮಹೇಶ್ ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್‌ ಬಾಕ್ಸಾಫೀಸ್‌ನಲ್ಲಿ ಜಾದು ಮಾಡುತ್ತಾ? ಇಲ್ವಾ ಅನ್ನೋದರ ಮೇಲೆ ಎಲ್ಲರ ಕಣ್ಣಿದೆ.

ಈಗಾಗಲೇ 'ಸರ್ಕಾರು ವಾರಿ ಪಾಟ' ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಎಲ್ಲವೂ ಪ್ರಿನ್ಸ್ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಆದರೆ, ಇತ್ತೀಚೆಗೆ ಬಿಡುಗಡೆಯಾಗಿದ್ದ ಟ್ರೈಲರ್‌ನಲ್ಲಿ ಮಹೇಶ್ ಬಾಬು ಬಿಟ್ಟ ಡೈಲಾಗ್‌ವೊಂದು ಆಂಧ್ರ-ತೆಲಂಗಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆಂಧ್ರ ಸಿ ಎಂ ಜಗನ್ ಮೋಹನ್ ರೆಡ್ಡಿ ಬಳಸುತ್ತಿದ್ದ ಸ್ಲೋಗನ್ ಅನ್ನು 'ಸರ್ಕಾರು ವಾರಿ ಪಾಟ'ದಲ್ಲಿ ಬಳಸಲಾಗಿತ್ತು. ಈ ಬಗ್ಗೆ ಸಿನಿಮಾದ ನಿರ್ದೇಶಕ ಪರಶುರಾಮ್ ಈಗ ಕ್ಲಾರಿಟಿ ಕೊಟ್ಟಿದ್ದಾರೆ.

ಸಿನಿಮಾದಲ್ಲಿ ಆಂಧ್ರ ಸಿಎಂ ಡೈಲಾಗ್ ಯಾಕೆ?

ಸಿನಿಮಾದಲ್ಲಿ ಆಂಧ್ರ ಸಿಎಂ ಡೈಲಾಗ್ ಯಾಕೆ?

'ಸರ್ಕಾರು ವಾರಿ ಪಾಟ' ಸಿನಿಮಾ ಟ್ರೈಲರ್‌ನಲ್ಲಿ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಬಳಸುತ್ತಿದ್ದ ಸ್ಲೋಗನ್ ಅನ್ನು ಡೈಲಾಗ್ ರೂಪದಲ್ಲಿ ಬಳಸಲಾಗಿತ್ತು. "ನೇನು ವಿನ್ನನು.. ನೇನು ವುನ್ನಾನು" ತೆಲುಗಿನ ಡೈಲಾಗ್‌ನ ಭಾವಾರ್ಥ ಏನಂದರೆ, "ನಿನ್ನ ಕಷ್ಟ ನಾನು ಕೇಳಿಕೊಂಡಿದ್ದೀನಿ. ನಿನ್ನ ಜೊತೆ ನಾನು ಇರುತ್ತೇನೆ." ಎಂದು ಅರ್ಥೈಸಿಕೊಳ್ಳಬಹುದು. ಆದರೆ ಇದು ಪೊಲಿಟಿಕಲ್ ಡೈಲಾಗ್ ಅಲ್ಲ. ಸಿನಿಮಾ ನಾಯಕಿ ಕೀರ್ತಿ ಸುರೇಶ್‌ ಕಷ್ಟದ ಸನ್ನಿವೇಶವೊಂದರಲ್ಲಿ ಸಿಕ್ಕಿಕೊಂಡ ಸಂದರ್ಭದಲ್ಲಿ ಮಹೇಶ್ ಬಾಬು ಹೇಳುವ ಡೈಲಾಗ್ ಇದು.

ಜಗನ್ ಡೈಲಾಗ್ ಸಿನಿಮಾದಲ್ಲಿ ಬಳಸಿದ್ದೇಕೆ?

ಜಗನ್ ಡೈಲಾಗ್ ಸಿನಿಮಾದಲ್ಲಿ ಬಳಸಿದ್ದೇಕೆ?

"ನೇನು ವಿನ್ನನು.. ನೇನು ವುನ್ನಾನು" ಈ ಡೈಲಾಗ್ ಬಳಸಿದ್ದಕ್ಕೆ 'ಸರ್ಕಾರು ವಾರಿ ಪಾಟ' ಸಿನಿಮಾದ ನಿರ್ದೇಶಕ ಈಗ ಕ್ಲಾರಿಟಿ ಕೊಟ್ಟಿದ್ದಾರೆ. ತೆಲುಗು ಮಾಧ್ಯಮದ ಜೊತೆ ಈ ಡೈಲಾಗ್ ಬಗ್ಗೆ ಮಾಹಿತಿ ಹೊರಹಾಕಿದ್ದಾರೆ. " ನಾನು ವೈ ಎಸ್ ರಾಜಶೇಖರ ರೆಡ್ಡಿ ಅವರ ದೊಡ್ಡ ಅಭಿಮಾನಿ. ಅವರಿಗೆ ದೊಡ್ಡ ಅಭಿಮಾನಿ ಬಳಗವಿತ್ತು. ಅವರು ನನ್ನ ಪಾಲಿಗೆ ಹೀರೊ ಇದ್ದಂಗೆ. ಅವರು ಜನರಿಗೆ ಈ ಸ್ಲೋಗನ್ ಮೂಲಕ ಭರವಸೆಯನ್ನು ನೀಡುತ್ತಿದ್ದರು. ಈಗ ಸಿಎಂ ಜಗನ್ ಕೂಡ ಅದನ್ನೇ ಮುಂದುವರೆಸಿಕೊಂಡು ಬಂದಿದ್ದಾರೆ. ಸಿನಿಮಾದಲ್ಲೂ ಮಹೇಶ್ ಬಾಬು ನಾಯಕಿ ಕೀರ್ತಿ ಸುರೇಶ್‌ಗೆ ಭರವಸೆ ನೀಡುವ ದೃಶ್ಯವಿದೆ. ಆ ಸನ್ನಿವೇಶಕ್ಕೆ ಈ ಡೈಲಾಗ್ ಸೂಕ್ತ ಎಂದು ಅನಿಸಿತ್ತು." ಎಂದು ನಿರ್ದೇಶಕ ಪರಶುರಾಮ್ ಹೇಳಿದ್ದಾರೆ.

ಈ ಸಿನಿಮಾದಲ್ಲಿ ಮೆಸೇಜ್ ಇಲ್ಲ.. ಕಥೆ ಇದೆ.

ಈ ಸಿನಿಮಾದಲ್ಲಿ ಮೆಸೇಜ್ ಇಲ್ಲ.. ಕಥೆ ಇದೆ.

'ಸರ್ಕಾರು ವಾರಿ ಪಾಟ' ಸಿನಿಮಾ ನಿರ್ದೇಶಕ ಪರಶುರಾಮ್ ಸಿನಿಮಾ ಬಗ್ಗೆ ಮತ್ತಷ್ಟು ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಬ್ಯಾಂಕ್‌ನಲ್ಲಿ ಕೆಲಸ ಮಾಡುವುದಿಲ್ಲ. ಅಲ್ಲದೆ ಸರ್ಕಾರಿ ಅಧಿಕಾರಿ ಕೂಡ ಅಲ್ಲ ಎಂದು ಹೇಳುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ. ಇಷ್ಟೆ ಅಲ್ಲದೆ, ಈ ಸಿನಿಮಾದಲ್ಲಿ ಸಂದೇಶವಿಲ್ಲ. ಆದರೆ ಎಲ್ಲಾ ವರ್ಗದವರೂ ನೋಡಬಹುದಾದ ಕಥೆಯಿದೆ ಎಂದು ಹೇಳಿದ್ದಾರೆ.

ಕೀರ್ತಿ ಸುರೇಶ್ ಪಾತ್ರದಲ್ಲಿ ಟ್ವಿಸ್ಟ್

ಕೀರ್ತಿ ಸುರೇಶ್ ಪಾತ್ರದಲ್ಲಿ ಟ್ವಿಸ್ಟ್

ಇಡೀ ಸಿನಿಮಾದಲ್ಲಿ ದೊಡ್ಡ ತಿರುವು ಕೊಡುವುದು ಕೀರ್ತಿ ಸುರೇಶ್ ಪಾತ್ರ ಎನ್ನುತ್ತಾರೆ ನಿರ್ದೇಶಕ ಪರಶುರಾಮ್. ಹಾಗಾಗಿ 'ಸರ್ಕಾರು ವಾರಿ ಪಾಟ' ಟಾಲಿವುಡ್‌ನಲ್ಲಿ ಮತ್ತfಟು ಕುತೂಹಲವನ್ನು ಕೆರಳಿಸಿದೆ.

More from Filmibeat

English summary
Mahesh Babu Director Parasuram Clarifies About YS Jagan's Slogan In Sarkaru Vaari Paata teaser, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X