'ಸರ್ಕಾರು ವಾರಿ ಪಾಟ' ಪ್ರೀ-ರಿಲೀಸ್ ಇವೆಂಟ್ ಭಾವುಕರಾಗಿದ್ದೇಕೆ ಮಹೇಶ್ ಬಾಬು?

ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ನಾಲ್ಕು ದಿನಗಳಲ್ಲಿ ಪ್ರಿನ್ಸ್ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡಲಿದೆ. ಹೀಗಾಗಿ ಅಭಿಮಾನಿಗಳಿಗೋಸ್ಕರ ಹೈದರಾಬಾದ್‌ನಲ್ಲಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ತನ್ನ ನೆಚ್ಚಿನ ನಟನನ್ನು ನೋಡಲು ಸಹಸ್ರಾರು ಸಂಖ್ಯೆಯಲ್ಲಿ ಮಹೇಶ್ ಬಾಬು ಅಭಿಮಾನಿಗಳು ಸೇರಿದ್ದರು.

'ಸರ್ಕಾರು ವಾರಿ ಪಾಟ' ಸಿನಿಮಾ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ದಾಖಲೆ ಮಾಡಿವೆ. ಒಂದೊಂದು ಹಾಡು ಸಂಗೀತ ಪ್ರಿಯರನ್ನು ರಂಜಿಸುತ್ತಿವೆ. ಈಗಾಗಲೇ ಟಾಲಿವುಡ್ ಸಿನಿಪ್ರಿಯರಲ್ಲಿ ಕ್ರೇಜ್ ದುಪ್ಪಟ್ಟು ಮಾಡಿ ಗೆದ್ದಿರುವ 'ಸರ್ಕಾರು ವಾರಿ ಪಾಟ' ತಂಡ ಪ್ರೀ-ರಿಲೀಸ್ ಇವೆಂಟ್‌ ಅನ್ನು ಆಯೋಜಿಸಲಾಗಿತ್ತು. ಈ ವೇಳೆ ಮಹೇಶ್ ಬಾಬು ಅಭಿಮಾನಿಗಳ ಮಂದೆ ಭಾವುಕರಾಗಿದ್ದಾರೆ.

ಪ್ರಿನ್ಸ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್

ಪ್ರಿನ್ಸ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್

'ಸರ್ಕಾರು ವಾರಿ ಪಾಟ' ಪ್ರೀ-ರಿಲೀಸ್ ಇವೆಂಟ್ ಅನ್ನು ಹೈದರಾಬಾದ್‌ನ ಯುಸೂಫ್‌ಘಡ್ ಪೊಲೀಸ್ ಗ್ರೌಂಡ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಹುತೇಕ ಚಿತ್ರತಂಡವೇ ನೆರೆದಿತ್ತು. ಮಹೇಶ್ ಬಾಬು ಜೊತೆ ಕೀರ್ತಿ ಸುರೇಶ್ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದರು. ಈ ಇವೆಂಟ್‌ನ ಕೊನೆಯಲ್ಲಿ ಅಭಿಮಾನಿಗಳ ಮುಂದೆ ನಿಂತು ಮಾತಾಡುವಾಗ, ಸೂಪರ್‌ಸ್ಟಾರ್ ಮಹೇಶ್ ಬಾಬು ಭಾವುಕರಾಗಿದ್ದರು.

ಫ್ಯಾನ್ಸ್‌ಗೆ ಪ್ರಿನ್ಸ್ ಹೇಳಿದ್ದೇನು?

ಫ್ಯಾನ್ಸ್‌ಗೆ ಪ್ರಿನ್ಸ್ ಹೇಳಿದ್ದೇನು?

ಮಹೇಶ್ ಬಾಬು ವೇದಿಕೆ ಎಮೋಷನ್‌ಗಳನ್ನು ಹೊರಹಾಕುವುದು ತೀರಾ ಕಡಿಮೆ. ಆದರೆ, ಈ ಬಾರಿ ತನ್ನ ಭಾವನೆಗಳನ್ನು ತಡೆದಿಟ್ಟಿಕೊಳ್ಳಲು ಸಾಧ್ಯವಾಗಿಲ್ಲ. "ಕೋವಿಡ್ 19 ಸಾಂಕ್ರಮಿಕದ ವೇಳೆ ನಾನು ನನಗೆ ಆಪ್ತರಾಗಿದ್ದವರನ್ನು ಕಳೆದುಕೊಂಡಿದ್ದೇನೆ. ಇದು ನನಗೆ ತುಂಬಾ ಕೆಟ್ಟ ಅನುಭವವನ್ನು ನೀಡಿದೆ. ನಾನು ನಿಮ್ಮ ಪ್ರೀತಿಗೆ ಸದಾ ಚಿರಋಣಿ. ನಾನು ನನ್ನ ಕೆಲಸದಿಂದ ನೀವು ಹೆಮ್ಮೆ ಪಡುವಂತೆ ಮಾಡಲು ಸಾಧ್ಯವಾದಷ್ಟು ಪ್ರಯತ್ನ ಪಡುತ್ತೇನೆ." ಎಂದು ಅಭಿಮಾನಿಗಳ ಮುಂದು ಭಾವುಕರಾಗಿದ್ದಾರೆ.

ಮಹೇಶ್ ಬಾಬು ಭಾವುಕರಾಗಿದ್ದೇಕೆ?

ಮಹೇಶ್ ಬಾಬು ಭಾವುಕರಾಗಿದ್ದೇಕೆ?

ಮಹೇಶ್ ಬಾಬು ಭಾವುಕರಾಗಲು ಕಾರಣವಿದೆ. ಕೋವಿಡ್ ಸಂದರ್ಭದಲ್ಲಿ ಪ್ರಿನ್ಸ್ ಮಹೇಶ್ ಬಾಬು ತನ್ನ ಆಪ್ತರನ್ನು ಕಳೆದುಕೊಂಡಿದ್ದಾರೆ. ತಮ್ಮ ಸಹೋದರ ರಮೇಶ್ ಬಾಬು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದರು. ಈ ವೇಳೆ ಮಹೇಶ್ ಬಾಬುಗೂ ಕೊರೊನಾ ಸೋಂಕು ತಗುಲಿತ್ತು. ಹಾಗೇ ಮಹೇಶ್ ಬಾಬು ಪರ್ಸನಲ್ ಪಿ ಎ ಬಿ ಎ ರಾಜು ಕೂಡ ನಿಧನ ಹೊಂದಿದ್ದಾರೆ. ಈ ಕಾರಣಕ್ಕೆ ಮಹೇಶ್ ಬಾಬು ವೇದಿಕೆ ಮೇಲೆ ಭಾವುಕರಾಗಿದ್ದರು.

ಮಹೇಶ್ ಸಿನಿಮಾಗೆ ಹೆಚ್ಚಿದ ಕ್ರೇಜ್

ಮಹೇಶ್ ಸಿನಿಮಾಗೆ ಹೆಚ್ಚಿದ ಕ್ರೇಜ್

ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಇದೇ ಮೇ 12ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಮಹೇಶ್ ಬಾಬು ಹಾಗೂ ಕೀರ್ತಿ ಸುರೇಶ್ ಕೆಮಿಸ್ಟ್ರಿ ನೋಡಲು ಪ್ರೇಕ್ಷಕರು ಕಾದು ಕೂತಿದ್ದಾರೆ. ಮಹೇಶ್ ಹೇಳಿದಂತೆ, ಅವರ ಕಾಂಬಿನೇಷನ್ ನೋಡಲೆಂದೇ ಜನರು ಪದೇ ಪದೇ ಥಿಯೇಟರ್‌ಗೆ ಬರುತ್ತಾರಂತೆ. ಅಲ್ಲದೆ 'ಪೋಕರಿ'ಯಲ್ಲಿ ಕಂಡ ಮಹೇಶ್ ಬಾಬು ಮತ್ತೆ ಈ ಸಿನಿಮಾದಲ್ಲಿ ಕಾಣಿಸುತ್ತಾರೆ ಎಂದಿದ್ದಾರೆ. ಹೀಗಾಗಿ ಟಾಲಿವುಡ್ ಫ್ಯಾನ್ಸ್ ಸಿನಿಮಾ ನೋಡಲು ಥ್ರಿಲ್ ಆಗಿದ್ದಾರೆ.

More from Filmibeat

English summary
Mahesh Babu Gets Emotional In Sarkaru Vaari Paata Pre-Release Event, Here is the details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X