ಮಹೇಶ್ ಬಾಬು, ತ್ರಿವಿಕ್ರಮ್ ಜೋಡಿ ಮೋಡಿ ಮಾಡುತ್ತಾ?'ಗುಂಟೂರು ಖಾರಂ' ಬಾಕ್ಸಾಫೀಸ್ ಲೆಕ್ಕಾಚಾರವೇನು?
ಸಂಕ್ರಾಂತಿ ಹಬ್ಬಕ್ಕೆ ತೆಲುಗು ಹಾಗೂ ತಮಿಳು ಸಿನಿಮಾ ಮಂದಿ ತುಂಬಾನೇ ಪ್ರಾಮುಖ್ಯತೆ ಕೊಡುತ್ತಾರೆ. ಈ ಹಬ್ಬದ ವೇಳೆ ತೆರೆಕಂಡ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತವೆ ಅನ್ನೋ ನಂಬಿಕೆ ಸಿನಿಮಾ ಮಂದಿಯದ್ದು. ಈ ಹಿಂದೆ ತೆರೆಕಂಡ ಸಿನಿಮಾಗಳು ಕೂಡ ಹಾಗೇ ಬಾಕ್ಸಾಫೀಸ್‌ನಲ್ಲಿ ಜೋರಾಗಿಯೇ ಸದ್ದು ಮಾಡಿವೆ.
ಮಹೇಶ್ ಬಾಬು ನಟಿಸಿದ ಎಷ್ಟೋ ಸಿನಿಮಾಗಳು ಸಂಕ್ರಾಂತಿಗೆ ರಿಲೀಸ್ ಆಗಿ ಬಾಕ್ಸಾಫೀಸ್ ಲೂಟಿ ಮಾಡಿವೆ. 2020ರಲ್ಲಿ ಮಹೇಶ್ ಬಾಬು ಸಿನಿಮಾ 'ಸರಿಲೇರು ನೀಕೆವ್ವರು' ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿತ್ತು. ಆಗ ಬಾಕ್ಸಾಫೀಸ್‌ನಲ್ಲಿ ಆ ಸಿನಿಮಾ ಸುಮಾರು 260 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿತ್ತು. ಈಗ 'ಗುಂಟೂರು ಖಾರಂ' ಸಿನಿಮಾ ಕೂಡ ಸಂಕ್ರಾಂತಿಗೆ ರಿಲೀಸ್ ಆಗುತ್ತಿದ್ದು, ಇದೂ ಕೂಡ ಗಲ್ಲಾಪೆಟ್ಟಿಗೆ ಲೂಟಿ ಮಾಡುತ್ತೆ ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ.

ಈ ಬಾರಿ ಮಹೇಶ್ ಬಾಬುಗೆ ದೊಡ್ಡ ದೊಡ್ಡ ಸಿನಿಮಾಗಳು ಪೈಪೋಟಿಯೊಡ್ಡುತ್ತಿವೆ. ವಿಕ್ಟರಿ ವೆಂಕಟೇಶ್ ಸಿನಿಮಾ 'ಸೈಂಧವ' ಈ ಸಿನಿಮಾಗೆ ಕಾಂಪಿಟೇಷನ್ ಕೊಡುತ್ತಿದೆ. ಇದರೊಂದಿಗೆ ಧನುಷ್, ಶಿವರಾಜ್‌ಕುಮಾರ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಕೂಡ ರಿಲೀಸ್ ಆಗುತ್ತಿದೆ. ತೆಲುಗಿನಲ್ಲಿ ಧನುಷ್ ಸಿನಿಮಾಗೂ ಕ್ರೇಜ್ ಇರೋದ್ರಿಂದ ತಕ್ಕ ಮಟ್ಟಿಗೆ ಪೈಪೋಟಿ ಕೊಡುಬಹುದು. ಹೀಗಿದ್ದರೂ, 'ಗುಂಟೂರು ಖಾರಂ' ಮೊದಲ ದಿನದ ಕಲೆಕ್ಷನ್ ಬಗ್ಗೆ ಈಗಾಗಲೇ ಲೆಕ್ಕಾಚಾರ ಹಾಕಲಾಗಿದೆ.
'ಗುಂಟೂರು ಖಾರಂ' ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಟ್ರೇಡ್ ಎಕ್ಸ್‌ಪರ್ಟ್ಸ್ ವಿಭಿನ್ನವಾದ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ. ಇವರ ಪ್ರಕಾರ, ತ್ರಿವಿಕ್ರಮ್ ನಿರ್ದೇಶನದ ಸಿನಿಮಾ 35 ಕೋಟಿ ರೂಪಾಯಿಯಿಂದ 70 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು ಎಂದು ಹೇಳುತ್ತಿದ್ದಾರೆ. ಆದರೆ, ಇಬ್ಬೊಬ್ಬರ ಲೆಕ್ಕಾಚಾರ ಒಂದೊಂದು ರೀತಿ ಇರುವುದರಿಂದ ಮಹೇಶ್ ಬಾಬು ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ.
ಟ್ರೇಡ್ ಎಕ್ಸ್‌ಪರ್ಟ್ ಸಮಿತ್ ಕಡೆಲ್ ಪ್ರಕಾರ, 'ಗುಂಟೂರು ಖಾರಂ' ಸಿನಿಮಾ ಮೊದಲ ದಿನ 40 ರಿಂದ 50 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಅತೀ ಹೆಚ್ಚು ಭಾಗ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ ಕಲೆಕ್ಷನ್ ಆಗುತ್ತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಸಿನಿಮಾ ಬಗ್ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕರೆ, ಹಾಗೇ ಮೊದಲ ವಾರ ಸುಮಾರು 70 ರಿಂದ 90 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು ಎಂದು ಲೆಕ್ಕಕೊಟ್ಟಿದ್ದಾರೆ.

ಮತ್ತೊಬ್ಬ ಟ್ರೇಡ್ ಎಕ್ಸ್‌ಪರ್ಟ್ ರಮೇಶ್ ಬಾಲ 'ಗುಂಟೂರು ಖಾರಂ' ಸಿನಿಮಾ ಮೊದಲ ದಿನ ಭಾರತದಲ್ಲಿ ಸುಮಾರು 15 ರಿಂದ 20 ಕೋಟಿ ರೂಪಾಯಿ ಕಲೆಕ್ಷನ್ ಆಗಬಹುದು. ಇದಕ್ಕೆ ಇನ್ನು 10 ಕೋಟಿ ರೂಪಾಯಿ ವಿದೇಶದಿಂದ ಹರಿದು ಬರಬಹುದೆಂದು ಲೆಕ್ಕ ಕೊಟ್ಟಿದ್ದಾರೆ. 125 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರೋ ಈ ಸಿನಿಮಾ 250 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ, ಹಿಟ್ ಲಿಸ್ಟ್ ಸೇರಲಿದೆ.
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಶ್ರೀಲೀಲಾ, ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ 'ಅಲಾ ವೈಕುಂಠಪುರಮುಲೋ' ಬಳಿಕ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಕೊಡುತ್ತಾರಾ? ಅನ್ನೋ ನಿರೀಕ್ಷೆಯಿದೆ.


Click it and Unblock the Notifications











