ಶಿವರಾತ್ರಿ ಹಬ್ಬದಂದು ವೈಲೆಂಟ್ ಆದ ಸೂಪರ್‌ಸ್ಟಾರ್ ಮಹೇಶ್ ಬಾಬು

ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳಿಗೆ ದಿನದಿಂದ ದಿನಕ್ಕೆ ಟೆನ್ಷನ್ ಹೆಚ್ಚಾಗುತ್ತಲೇ ಇದೆ. ಪ್ರತಿದಿನ ಒಂದಲ್ಲ ಒಂದು ಸುದ್ದಿ ಮಹೇಶ್ ಬಾಬು ಟೀಮ್‌ನಿಂದ ಹೊರ ಬೀಳುತ್ತಲೇ ಇದೆ. ಶಿವರಾತ್ರಿ ಹಬ್ಬಕ್ಕೆ ಪ್ರಿನ್ಸ್ ಅಭಿಮಾನಿಗಳಿಗೆ 'ಸರ್ಕಾರು ವಾರಿ ಪಾಟ' ಚಿತ್ರತಂಡದಿಂದ ಹೊಸ ಪೋಸ್ಟರ್ ಉಡುಗೊರೆಯಾಗಿ ಸಿಕ್ಕಿದೆ. ಈ ಪೋಸ್ಟರ್ ನೋಡಿದ ಮೇಲಂತೂ ಮಹೇಶ್ ಬಾಬು ಅಭಿಮಾನಿಗಳಲ್ಲಿ ಕಾತರ ಮತ್ತಷ್ಟು ಹೆಚ್ಚಾಗಿದೆ.

ಅಭಿಮಾನಿಗಳು ಮಹೇಶ್ ಬಾಬು ಸಿನಿಮಾ ಇಷ್ಟ ಪಡುವುದಕ್ಕೆ ನೂರೆಂಟು ಕಾರಣವಿದೆ. ಅವುಗಳಲ್ಲಿ ಎರಡು ಪ್ರಮುಖ ಕಾರಣಗಳಿವೆ. ಒಂದೇ ಸಿನಿಮಾದಲ್ಲಿ ಮಹೇಶ್ ಬಾಬು ಚಾಕೊಲೇಟ್ ಬಾಯ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಇನ್ನೊಂದು ಕಡೆ ವೈಲೆಂಟ್ ಹೀರೊ ಆಗಿಯೂ ನೋಡಬಹುದು. ಮಾಸ್‌ ಮತ್ತು ಕ್ಲಾಸ್ ಎರಡು ಅವತಾರಗಳಿಗೆ ಸರಿ ಹೊಂದುವರ ನಟರು ಸಿಗುವುದು ತೀರಾ ವಿರಳ. ಸದ್ಯ ಶಿವರಾತ್ರಿ ಮಹೇಶ್ ಬಾಬು ಮಾಸ್ ಫೀಲ್‌ನಲ್ಲಿ ಲುಕ್ ಕೊಟ್ಟಿದ್ದಾರೆ.

 ಶಿವರಾತ್ರಿಗೆ ವೈಲೆಂಟ್ ಆದ ಮಹೇಶ್ ಬಾಬು

ಶಿವರಾತ್ರಿಗೆ ವೈಲೆಂಟ್ ಆದ ಮಹೇಶ್ ಬಾಬು

ಮಹೇಶ್ ಬಾಬು ನಟನೆಯ 'ಸರ್ಕಾರು ವಾರಿ ಪಾಟ' ಸಿನಿಮಾ ನಿರ್ಮಿಸಿದ ನಿರ್ಮಾಣ ಸಂಸ್ಥೆ ಮಾಸ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಚೆಕ್ಸ್ ಶರ್ಟ್ ತೊಟ್ಟ ಮಹೇಶ್ ಬಾಬು ತನ್ನ ಟಿಪಿಕಲ್ ಮ್ಯಾನರಿಸಂನಲ್ಲಿ ಫೈಟ್ ಮಾಡುವ ದೃಶ್ಯವದು. ಈ ಮಾಸ್ ಅವತಾರ ಪ್ರಿನ್ಸ್ ಅಭಿಮಾನಿಗಳಿಗೆ ಮಾಸ್ ಕಿಕ್ ಕೊಟ್ಟಿದೆ. ಶಿವರಾತ್ರಿ ಹಬ್ಬಕ್ಕೆ ತಕ್ಕಂತಹ ಪೋಸ್ಟ್ ರಿಲೀಸ್ ಮಾಡಿದ್ದಕ್ಕೆ ಪ್ರಿನ್ಸ್ ಫ್ಯಾನ್ ಸಮಾಧಾನಗೊಂಡಿದ್ದಾರೆ. ಇಲ್ಲಿವರೆಗೂ ಮಹೇಶ್ ಬಾಬು ಕ್ಲಾಸ್ ಲುಕ್ ನೋಡಿದ್ದರಿಂದ ಕೊಂಚ ಆತಂಕಕ್ಕೆ ಒಳಗಾಗಿದ್ದ ಅಭಿಮಾನಿಗಳು ನಿರಾಳರಾಗಿದ್ದಾರೆ.

ಶಿವರಾತ್ರಿಗೆ ವಿಶ್ ಮಾಡಿ ಪ್ರಿನ್ಸ್

'ಸರ್ಕಾರು ವಾರಿ ಪಾಟ' ನಿರ್ಮಾಪಕರು ಮಾಸ್ ಪೋಸ್ಟರ್ ಬಿಟ್ಟು ಫ್ಯಾನ್ಸ್‌ಗೆ ಶಿವರಾತ್ರಿ ಶುಭಾಶಯ ತಿಳಿಸಿದರೆ, ಇತ್ತ ಮಹೇಶ್ ಬಾಬು ಕೂಡ ಶುಭಾಶಯಗಳನ್ನು ಹೇಳಿದ್ದಾರೆ. " ಎಲ್ಲರಿಗೂ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು. ಶಿವನು ನಿಮಗೆ ಶಕ್ತಿ ಮತ್ತು ಸಮೃದ್ಧಿಯನ್ನು ನೀಡಲಿ. ಕೆಟ್ಟದ್ದರ ವಿರುದ್ಧ ಒಳ್ಳೆಯದು ಜಯಿಸಲಿ." ಎಂದು ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳಿಗೆ ಶಿವರಾತ್ರಿ ಶುಭಾಶಗಳನ್ನು ತಿಳಿಸಿದ್ದಾರೆ.

 'ಕಲಾವತಿ' ಸಾಂಗ್ ದಾಖಲೆ

'ಕಲಾವತಿ' ಸಾಂಗ್ ದಾಖಲೆ

ಕೆಲವೇ ದಿನಗಳ ಹಿಂದೆ, ಫೆಬ್ರವರಿ 13ರಂದು ಇದೇ ಸಿನಿಮಾದ 'ಕಲಾವತಿ' ಲಿರಿಕಲ್ ಸಾಂಗ್ ರಿಲೀಸ್ ಆಗಿತ್ತು. ತಮನ್ ಸಂಗೀತ ಸಂಯೋಜಿಸಿದ ಈ ಹಾಡು ಪ್ರೇಮಿಗಳ ದಿನಕ್ಕಾಗಿ ಬಿಡುಗಡೆಯಾಗಿತ್ತು. ರಿಲೀಸ್ ಆದ ದಿನದಿಂದಲೇ ಈ ಹಾಡು ಟ್ರೆಂಡಿಂಗ್‌ನಲ್ಲಿದೆ. ಟಾಲಿವುಡ್‌ನಲ್ಲಿ ಲಿರಿಕ್ ಸಾಂಗ್ ಒಂದು ಅತೀ ಹೆಚ್ಚು ವೀವ್ಸ್ ಪಡೆದ ಹಾಡುಗಳ ಸಾಲಿಗೆ ಈ ಹಾಡು ಸೇರಿಕೊಂಡಿದೆ. ಯೂಟ್ಯೂಬ್‌ನಲ್ಲಿ ಸುಮಾರು 50 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ.

 ಮೇ 12ಕ್ಕೆ ಸಿನಿಮಾ ರಿಲೀಸ್

ಮೇ 12ಕ್ಕೆ ಸಿನಿಮಾ ರಿಲೀಸ್

ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ' ಮೇ 12ಕ್ಕೆ ಬಿಡುಗಡೆ ಸಜ್ಜಾಗಿ ನಿಂತಿದೆ. ಟಾಲಿವುಡ್ ಪ್ರಿನ್ಸ್ ಹಾಗೂ ಕೀರ್ತಿ ಸುರೇಶ್ ಕಾಂಬಿನೇಷನ್ ಮೊದಲ ಸಿನಿಮಾ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. 'ಗೀತಾ ಗೋವಿಂದಂ' ಅಂತ 100 ಕೋಟಿ ಸಿನಿಮಾ ನೀಡಿರುವ ಪರಶುರಾಮ್ ನಿರ್ದೇಶನ ಮಾಡಿದ್ದಾರೆ. 'ಪುಷ್ಪ' ಸಿನಿಮಾ ನಿರ್ಮಿಸಿದ್ದ ಮೈತ್ರಿ ಮೂವಿ ಮೇಕರ್ಸ್ ಹಾಗೂ 14 ರೀಲ್ಸ್ ಪ್ಲಸ್ ಹಾಗೂ ಮಹೇಶ್ ಬಾಬು ನಿರ್ಮಾಣ ಸಂಸ್ಥೆ ಈ ಸಿನಿಮಾವನ್ನು ನಿರ್ಮಿಸಿದೆ. ಮೇ 12ಕ್ಕೆ ಸಿನಿಮಾ ತೆರೆಕಂಡ ಬಳಿಕ ರಾಜಮೌಳಿ ಸಿನಿಮಾ, ಇಲ್ಲವೇ ತ್ರಿವಿಕ್ರಮ್ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ.

More from Filmibeat

English summary
Mahesh Babu starrer Sarkaru Vaari Paata mass look poster released on Shivaratri festival. Tollywood superstar Mahesh Babu seen in action mode.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X