'ಸರ್ಕಾರು ವಾರಿ ಪಾಟ' ಮೊದಲ ದಿನದ ಕಲೆಕ್ಷನ್ ಎಷ್ಟು? ಎಲ್ಲೆಲ್ಲಿ ಎಷ್ಟೆಷ್ಟು?
ಈ ವಾರ ಬಿಡುಗಡೆಯಾಗಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಸರ್ಕಾರು ವಾರಿ ಪಾಟ' ಕೂಡ ಒಂದು. ಟಾಲಿವುಡ್ ಸೂಪರ್‌ಸ್ಟಾರ್ ಸಿನಿಮಾದ ಕಲೆಕ್ಷನ್ ಮೇಲೆ ಎಲ್ಲರೂ ಕಣ್ಣಿಟ್ಟಿದ್ದರು. 'ಕೆಜಿಎಫ್ 2' ಕೋಟಿ ಗಳಿಸಿದ ಬೆನ್ನಲ್ಲೇ ತೆಲುಗು ಸಿನಿಮಾವೊಂದು ಬಾಕ್ಸಾಫೀಸ್‌ನಲ್ಲಿ ಎಷ್ಟು ಗಳಿಕೆ ಮಾಡಬಹುದು ಎಂದು ಕಾದು ಕೂತಿದ್ದರು. ಅಂತವರಿಗೆ ಈ ಸಿನಿಮಾ ಸಖತ್ ಭರವಸೆಯನ್ನೇ ನೀಡಿದೆ.
'ಸರ್ಕಾರು ವಾರಿ ಪಾಟ' ಸಿನಿಮಾ ನಿನ್ನೆ (ಮೇ 12) ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಮಹೇಶ್ ಬಾಬುಗೆ ಇರುವ ಅಭಿಮಾನಿಗಳ ಲೆಕ್ಕಾಚಾರದ ಪ್ರಕಾರ, ವಿಶ್ವದಾದ್ಯಂತ ಅತೀ ಹೆಚ್ಚು ಗಳಿಕೆ ಕಾಣಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆ ವಿಶ್ವದಾದ್ಯಂತ ಸೂಪರ್ ಕಲೆಕ್ಷನ್ ಮಾಡಿದೆ.
ಪರಶುರಾಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಕೆಲವು ದಿನಗಳಿಂದ ಸಿನಿಮಾ ಸದ್ದು ಮಾಡುತ್ತಲೇ ಇತ್ತು. ಅದರಂತೆ ಭಾರತ ಬಾಕ್ಸಾಫೀಸ್ ಹಾಗೂ ಅಮೆರಿಕ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗಳಿಕೆಯನ್ನು ಲೆಕ್ಕ ಹಾಕಲಾಗಿದೆ. ಇದೂವರೆಗೂ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ ಅದ್ಭುತ ಗಳಿಕೆ ಕಂಡಿದೆ. ಹಾಗಿದ್ದರೆ, ಈ ಸಿನಿಮಾ ಮೊದಲ ದಿನ ಗಳಿಕೆ ಎಷ್ಟು? ಎಂದು ತಿಳಿಯಲು ಮುಂದೆ ಓದಿ.

ಮಹೇಶ್ ಬಾಬು ಸಿನಿಮಾ ಕಲೆಕ್ಷನ್ ಎಷ್ಟು?
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ'ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೂ, ಸಿನಿಮಾ ಗಳಿಕೆಯಲ್ಲಿ ಮೋಸ ಆಗಿಲ್ಲ. ಮಹೇಶ್ ಬಾಬು, ಕೀರ್ತಿ ಸುರೇಶ್, ನಾಧಿಯಾ, ಸೇರಿದಂತೆ ಟಾಲಿವುಡ್ ದಿಗ್ಗಜರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೆ 'ಗೀತ ಗೋವಿಂದಂ' ನಿರ್ದೇಶಕ ಪರಶುರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ತಮನ್ ಮ್ಯೂಸಿಕ್ ಕೂಡ ಕಿಕ್ ಕೊಟ್ಟಿದೆ. ಈ ಕಾರಣಕ್ಕೆ ಸರ್ಕಾರು ವಾರಿ ಪಾಟ ಸಿನಿಮಾ ಮೊದಲ ದಿನವೇ ವಿಶ್ವದಾದ್ಯಂತ ಬರೋಬ್ಬರಿ 52 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ.

ನಿಜಾಮ್‌ನಲ್ಲಿ ದಾಖಲೆ ಕಲೆಕ್ಷನ್
ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, 'ಸರ್ಕಾರು ವಾರು ಪಾಟ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹಣ ದೋಚುತ್ತಿದೆ. ತೆಲುಗು ಬಾಕ್ಸಾಫೀಸ್‌ನಲ್ಲಿ ನಿಜಾಂ ಏರಿಯಾದಲ್ಲಿ ದಾಖಲೆ ಗಳಿಕೆ ಮಾಡಿದೆ. ಆಂಧ್ರ ಬಾಕ್ಸಾಫೀಸ್ ಪ್ರಕಾರ, 'ಸರ್ಕಾರು ವಾರಿ ಪಾಟ' ಸಿನಿಮಾ ಬರೋಬ್ಬರಿ 12.24 ಕೋಟಿ ಗಳಿಸಿದೆ. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾದ ದಾಖಲೆಯನ್ನು ಹೊರತು ಪಡಿಸಿದರೆ, ಈ ಏರಿಯಾದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದಾಗಿದೆ.

ಯುಎಸ್ ಕಲೆಕ್ಷನ್ ಎಷ್ಟು?
ಅಮೆರಿಕದಲ್ಲಿ ಮಹೇಶ್ ಬಾಬು ಸಿನಿಮಾ ನೋಡಲು ಅಡ್ವಾನ್ಸ್ ಬುಕಿಂಗ್ ಆಗಿದ್ದರಿಂದ ಉತ್ತಮ ಗಳಿಕೆ ಕಂಡಿದೆ. ಅಮೆರಿಕದಲ್ಲಿ 'ಸರ್ಕಾರು ವಾರಿ ಪಾಟ' ಸಿನಿಮಾ ಮೊದಲ ದಿನವೇ 7.73 ಕೋಟಿ ಕಲೆಕ್ಷನ್ ಮಾಡಿದೆ. ಈ ಮೂಲಕ ಮಹೇಶ್ ಬಾಬು ಸಿನಿಮಾ ಕಲೆಕ್ಷನ್ 50 ಕೋಟಿ ದಾಟಿದ್ದು, ಈ ವಾರದ ಕಲೆಕ್ಷನ್ ಎಷ್ಟು ಗಳಿಕೆ ಮಾಡುತ್ತೆ ಅನ್ನುವ ಕುತೂಹಲವಿದೆ.

'ಸರಿಲೇಕು ನೀಕೆವ್ವರು' ಗಳಿದ್ದೆಷ್ಟು?
ದಕ್ಷಿಣದ ಸೂಪರ್‌ಸ್ಟಾರ್ ಮಹೇಶ್ ಬಾಬು ಈ ಹಿಂದೆ ಬಿಡುಗಡೆಯಾದ ಸಿನಿಮಾ 'ಸರಿಲೇರು ನೀಕೆವ್ವರು'. ಈ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಅದ್ಭುತ ಹಿಟ್ ಆಗಿತ್ತು. ಒಂದು ಲೆಕ್ಕಾಚಾರದ ಪ್ರಕಾರ ಸುಮಾರು ವರ್ಲ್ಡ್‌ವೈಡ್ ಕಲೆಕ್ಷನ್ 260 ಕೋಟಿ ಗಳಿಕೆ ಕಂಡಿತ್ತು. ಈ ಮೂಲಕ 'ಸರಿಲೇಕು ನೀಕೆವ್ವರು' ದಾಖಲೆಯನ್ನು 'ಸರ್ಕಾರು ವಾರಿ ಪಾಟ' ಮುರಿಯುತ್ತಾ? ಅನ್ನೋದನ್ನು ನೋಡಬೇಕಿದೆ.


Click it and Unblock the Notifications











