'ಸರ್ಕಾರು ವಾರಿ ಪಾಟ' ಟ್ರೈಲರ್ 14 ಗಂಟೆಯಲ್ಲಿ ಪ್ರಭಾಸ್ ದಾಖಲೆ ಬ್ರೇಕ್.. ಭಯಂಕರ ಆಕ್ರಮಣ!
ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಸ್ಟೈಲಿಶ್ ನಟನೆ ಮತ್ತು ಹ್ಯಾಂಡ್‌ಸಮ್ ಲುಕ್‌ನಿಂದ ತೆಲುಗು ಚಿತ್ರರಂಗದಲ್ಲಿ ವಿಶಿಷ್ಟವಾದ ಇಮೇಜ್ ಗಳಿಸಿದ್ದಾರೆ. ಹಲವು ವರ್ಷಗಳಿಂದ ಮಹೇಶ್ ಬಾಬು ಸಿನಿಮಾ ಸೋತಿದ್ದೇ ಇಲ್ಲ. ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕೊಟ್ಟು ತೆಲುಗಿನಲ್ಲಿ ಸೂಪರ್‌ಸ್ಟಾರ್ ಆಗಿ ಮೆರೆಯುತ್ತಿದ್ದಾರೆ.
ಇತ್ತೀಚೆಗೆ ಮಹೇಶ್ ಬಾಬು ಸಿನಿಮಾಗಳ ದಾಟಿನೇ ಬದಲಾಗಿದೆ. ಈಗ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ 'ಸರ್ಕಾರು ವಾರಿ ಪಾಟ' ಕೂಡ ಅದೇ ಸಾಲಿಗೆ ನಿಲ್ಲುತ್ತೆ. ಈ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದ್ದು, ಮಹೇಶ್ ಬಾಬು ಸೆನ್ಸೇಷನಲ್ ದಾಖಲೆ ಬರೆದಿದ್ದಾರೆ. ಸಿನಿಮಾದ ಕಥೆಯೇನು? ಟ್ರೈಲರ್ ಬರೆದ ದಾಖಲೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಸರ್ಕಾರು ವಾರಿ ಪಾಟ' ಸಿನಿಮಾದ ಹಾಡುಗಳು ಈಗಾಗಲೇ ಸೆನ್ಸೇಷನ್ ಸೃಷ್ಟಿಸಿದೆ. 'ಕಲಾವತಿ' ಹಾಡು ಇಂದಿಗೂ ಟ್ರೆಂಡಿಂಗ್‌ನಲ್ಲಿದೆ. ಇದರ ಜೊತೆ ಬಿಡುಗಡೆಯಾದ ಟೀಸರ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಡುಗಳು ಹಾಗೂ ಟೀಸರ್ ಎರಡಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ದಾಖಲೆಗಳ ಮೇಲೆ ದಾಖಲೆ ಬರೆದಿತ್ತು. ಈಗ ಟ್ರೈಲರ್ ಟಾಲಿವುಡ್‌ನಲ್ಲಿ ಹಲ್‌ಚಲ್ ಎಬ್ಬಿಸುತ್ತಿದೆ.

ಸಿನಿಮಾ ಟ್ರೈಲರ್‌ನಲ್ಲಿ ಆಕ್ಷನ್ ಹೈಲೈಟ್
ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ' ಮೇ 12ರಂದು ವಿಶ್ವದಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಕಾರಣಕ್ಕೆ ಇತ್ತೀಚೆಗಷ್ಟೇ ಈ ಸಿನಿಮಾದ ಅಧಿಕೃತ ಟ್ರೈಲರ್ ಬಿಡುಗಡೆಯಾಗಿದೆ. ಮಹೇಶ್ ಬಾಬು ಲುಕ್, ಮಾಸ್ ಖದರ್, ರೊಮ್ಯಾಂಟಿಕ್ ಲುಕ್ ನೋಡಿ ಪ್ರಿನ್ಸ್ ಫ್ಯಾನ್ಸ್ ಫುಲ್ ಸುಸ್ತಾಗಿದ್ದಾರೆ. ಅದರಲ್ಲೂ ಮಹೇಶ್ ಬಾಡಿ ಲಾಂಗ್ವೇಜ್, ಡೈಲಾಗ್ಸ್ ಪ್ರತಿ ದೃಶ್ಯವೂ ಅಭಿಮಾನಿಗಳ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ.

ದಾಖಲೆಗಳು ಬ್ರೇಕ್.. ಭರ್ಜರಿ ರೆಸ್ಪಾನ್ಸ್
ತೆಲುಗು ಚಿತ್ರರಂಗದಲ್ಲಿ 24 ಗಂಟೆಗಳಲ್ಲಿ ಅತಿ ಹೆಚ್ಚು ವೀವ್ಸ್ ಪಡೆದ ಸಿನಿಮಾ ಟ್ರೈಲರ್ ಪಟ್ಟಿಯಲ್ಲಿ 'ರಾಧೆ ಶ್ಯಾಮ್' ಮೊದಲ ಸ್ಥಾನದಲ್ಲಿದೆ. ಈ ಸಿನಿಮಾ ಒಂದೇ ದಿನದಲ್ಲಿ 23.2 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು. ಇದೀಗ ಮಹೇಶ್ ಬಾಬು ಸಿನಿಮಾ 'ಸರ್ಕಾರು ವಾರಿ ಪಾಟ'ದ ಟ್ರೈಲರ್ ಆ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ಕೇವಲ 14 ಗಂಟೆಗಳಲ್ಲಿ ಟಾಲಿವುಡ್‌ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.

ದಾಖಲೆ ಮುರಿದ ಸಿನಿಮಾ ಟ್ರೈಲರ್
'ಸರ್ಕಾರು ವಾರಿ ಪಾಟ' ಟ್ರೈಲರ್ ಯೂಟ್ಯೂಬ್‌ನಲ್ಲಿ 25 ಮಿಲಿಯನ್ ವೀವ್ಸ್ ಗಳಿಸಿದೆ. ಕಳೆದ 24 ಗಂಟೆಗಳಲ್ಲಿ ಸುಮಾರು 27 ಮಿಲಿಯನ್ ವೀವ್ಸ್ ಪಡೆದಿದ್ದು ಹೊಸ ದಾಖಲೆ ಬರೆದಿದೆ. ಇದೇ ವೇಗ ಮುಂದುವರೆದರೆ ದಕ್ಷಿಣದಲ್ಲಿ ಇನ್ನಷ್ಟು ದಾಖಲೆಗಳು ಮುರಿಯಬಹುದು ಎಂದು ಭವಿಷ್ಯ ನುಡಿಯಲಾಗಿದೆ.

ಅಭಿಮಾನಿಗಳಿಗೆ ಈ ಸಿನಿಮಾ ಹಬ್ಬ
ಬ್ಯಾಂಕ್‌ಗಳಿಗೆ ವಂಚಿಸುತ್ತಿರುವ ದೊಡ್ಡ ಉದ್ಯಮಿಗಳನ್ನು ಗುರಿಯಾಗಿಟ್ಟುಕೊಂಡು 'ಸರ್ಕಾರು ವಾರಿ ಪಾಟ' ಸಿನಿಮಾ ರೆಡಿಯಾಗಿದೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಯಾರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬುವುದೇ ಕುತೂಹಲ. ಇದರಲ್ಲಿ ಮಹೇಶ್ ಬಾಬು ಪಾತ್ರ ಅದ್ಭುತವೆಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.


Click it and Unblock the Notifications











