"ಪುಷ್ಪ ಚಿತ್ರದಿಂದ ನನಗೇ ಸಿಗಲಿಲ್ಲ.. ಇದನ್ನು ಸುಕುಮಾರ್ ಮುಖಕ್ಕೆ ಹೊಡೆದಂತೆ ಹೇಳಿದ್ದೆ"; ಫಹಾದ್ ಫಾಸಿಲ್

ಕಳೆದ ವರ್ಷ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳಲ್ಲಿ 'ಪುಷ್ಪ 2' ಕೂಡ ಒಂದು. ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್ ತೆಲುಗು ಚಿತ್ರರಂಗಕ್ಕೆ ಹೊಸ ಮೈಲೇಜ್ ಕೊಟ್ಟಿತ್ತು. ವಿಶ್ವದಾದ್ಯಂತ 'ಪುಷ್ಪ' ಅಬ್ಬರಕ್ಕೆ ದಾಖಲೆಗಳು ಚಿಂದಿಯಾಗಿವೆ. ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ.

ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಹೊರತಾಗಿ 'ಪುಷ್ಪ 2'ನಲ್ಲಿ ಗಮನ ಸೆಳೆದಿದ್ದ ನಟ ಫಹಾದ್ ಫಾಸಿಲ್. ಪೊಲೀಸ್ ಅಧಿಕಾರಿ ಶೇಖಾವತ್ ಪಾತ್ರದಲ್ಲಿ ಮಿಂಚಿದ್ದರು. ಸಿನಿಮಾ ನೋಡಿದವರು ಫಹಾದ್ ಫಾಸಿಲ್ ಪಾತ್ರವನ್ನು ಮೆಚ್ಚಿಕೊಂಡಿದ್ದರು. ಆದ್ರೀಗ ಇವರ 'ಪುಷ್ಪ 2' ಹಾಗೂ ನಿರ್ದೇಶಕ ಸುಕುಮಾರ್ ವಿರುದ್ಧ ಕೊಟ್ಟ ಹೇಳಿಕೆಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದಕ್ಕೆ ಶುರು ಮಾಡಿದೆ.

Malayalam actor Fahadh Faasil showed angry on Pushpa-2 director Sukumar

ಫಹಾದ್ ಫಾಸಿಲ್ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಷ್ಟಕ್ಕೂ 'ಪುಷ್ಪ 2' ಸಿನಿಮಾದ ನಿರ್ದೇಶಕನ ಮೇಲೆ ಫಹಾದ್ ಫಾಸಿಲ್‌ಗೆ ಯಾಕೆ ಕೋಪ? 'ಪುಷ್ಪ 2' ಸಿನಿಮಾ ಮಾಡಿ ತಪ್ಪು ಮಾಡಿದರೇ? ಸಿನಿಮಾ ಬಿಡುಗಡೆ ವೇಳೆ ಕೊಟ್ಟ ಹೇಳಿಕೆ ಇಷ್ಟೊಂದು ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು ಯಾಕೆ? ಅನ್ನೋದನ್ನು ನೋಡುವುದಾರೇ.

'ಪುಷ್ಪ' ಸೀರಿಸ್‌ನಲ್ಲಿ ಅಲ್ಲು ಅರ್ಜುನ್‌ಗೆ ಎಷ್ಟು ಕ್ರೆಡಿಟ್ ಸಿಕ್ಕಿದೆಯೋ ಅಷ್ಟೇ ಕ್ರೆಡಿಟ್ ಫಹಾದ್ ಫಾಸಿಲ್‌ಗೂ ಸಿಗಬೇಕು. ಶೇಖಾವತ್ ಪಾತ್ರ ಇರದೇ ಹೋಗಿದ್ದರೆ 'ಪುಷ್ಪ'ಗೆ ಇಷ್ಟೊಂದು ತಾಕತ್ತು ಸಿಗುತ್ತಿರಲಿಲ್ಲ. ಫಹಾದ್ ಫಾಸಿಲ್ ಆ ಪಾತ್ರವನ್ನು ಅಷ್ಟೇ ಪವರ್‌ಫುಲ್ ಆಗಿ ನಿಭಾಯಿಸಿದ್ದಾರೆ. ಆದರೆ, ಸಿನಿಮಾ ನೋಡಿದವರು ಕೆಲವು ಸಲಹೆಗಳನ್ನು ನೀಡಿದ್ದರು. ಕೆಲವು ಚಿತ್ರತಂಡದ ಮೇಲೆ ಅಸಮಧಾನವನ್ನು ಹೊರ ಹಾಕಿದ್ದರು. ಸಿನಿಮಾದಲ್ಲಿ ಫಹಾದ್ ಫಾಸಿಲ್ ಅನ್ನು ಬಿಂಬಿಸಿದ ರೀತಿ ಸರಿಯಿಲ್ಲ ಎಂದು ಟೀಕಿಸಿದ್ದರು.

'ಪುಷ್ಪ 2' ಸಿನಿಮಾದಲ್ಲಿ ಫಹಾದ್ ಫಾಸಿಲ್ ಪಾತ್ರ ಗಂಭೀರವಾಗಿದೆ. ಪೊಲೀಸ್ ಅಧಿಕಾರಿಯಾಗಿ ರಕ್ತ ಚಂದನ ಕಳ್ಳಸಾಗಣೆ ಮಾಡುವ ಕಾಡುಗಳ್ಳರನ್ನು ಮಟ್ಟ ಹಾಕುವ ಪಾತ್ರ. ಇಂತಹ ಪಾತ್ರವನ್ನು ಕಾಮಿಡಿಯಾಗಿ ತೋರಿಸಿದ್ದಾರೆ ಅಂತ ಕೆಲವರು ಟೀಕಿಸಿದ್ದರು. ಇದೇ ಕಾರಣಕ್ಕೆ ಮಲಯಾಳಂ ನಟ ಫಹಾದ್ ಫಾಸಿಲ್ ಕಣ್ಣುಗಳು ಕೆಂಪಾಗಿದ್ದವೇ? ಗೊತ್ತಿಲ್ಲ. ಆದರೆ, ಸಂದರ್ಶನವೊಂದರಲ್ಲಿ ಸುಕುಮಾರ್ ಬಗ್ಗೆ ಅಸಮಧಾನವನ್ನಂತೂ ಹೊರ ಹಾಕಿದ್ದರು.

Malayalam actor Fahadh Faasil showed angry on Pushpa-2 director Sukumar

'ಪುಷ್ಪ 2' ಯಶಸ್ಸಿನ ಬಳಿಕ ಫಹಾದ್ ಫಾಸಿಲ್ ಸಂದರ್ಶನವೊಂದನ್ನು ನೀಡಿದ್ದರು. ಇದರಲ್ಲಿ ಕೆಲವು ಕಾಮೆಂಟ್‌ಗಳನ್ನು ಮಾಡಿದ್ದರು. ಪುಷ್ಪ 1 ಹಾಗೂ ಪುಷ್ಪ 2 ಎರಡು ಸಿನಿಮಾಗಳಿಂದ ತನಗೆ ಏನೂ ಲಾಭ ಆಗಲಿಲ್ಲ. ತನ್ನ ಪಾತ್ರಕ್ಕೆ ಯಾವುದೇ ರೀತಿಯ ಮೈಲೇಜ್ ಸಿಗಲಿಲ್ಲ. ಆ ಸಿನಿಮಾ ಪ್ರೇಕ್ಷಕರು ನನ್ನಿಂದ ಹೆಚ್ಚಿನದನ್ನು ನಿರೀಕ್ಷೆ ಮಾಡಲೇ ಇಲ್ಲ. 'ಪುಷ್ಪ' ಸಿನಿಮಾವನ್ನು ಕೇವಲ ಸುಕುಮಾರ್‌ಗಾಗಿ ಮಾತ್ರ ಮಾಡಿದ್ದೆ ಎಂದು ಫಹಾದ್ ಫಾಸಿಲ್ ಹೇಳಿಕೊಂಡಿದ್ದರು.

ಹಾಗೇ ಮಲಯಾಳಂ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಅಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಒಳ್ಳೆಯ ಹೆಸರು ಸಿಗುತ್ತಿದೆ. ಈ ಮಾತನ್ನು 'ಪುಷ್ಪ 2' ನಿರ್ದೇಶಕ ಸುಕುಮಾರ್ ಮುಖಕ್ಕೆ ಹೊಡೆದಂತೆ ಹೇಳಿದ್ದೆ ಎಂದು ಫಹಾದ್ ಫಾಸಿಲ್ ಹೇಳಿಕೊಂಡಿದ್ದಾರೆ. ಫಹಾದ್ ಫಾಸಿಲ್ ಹೇಳಿದ್ದ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಫಹಾದ್ ಫಾಸಿಲ್ ಈ ಹಿಂದೆ ಕೂಡ ಅಸಮಧಾನ ಹೊರ ಹಾಕಿದ್ದರು. ಅಲ್ಲದೆ 'ಪುಷ್ಪ 2'ನಲ್ಲಿ ನಟಿಸಲು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ದವು. ಏನೇ ಇದ್ದರೂ 'ಪುಷ್ಪ 2' ಐಟಿ ರೇಡ್ ಆಗುವಷ್ಟು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದೆ. 1800 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಕಂಡಿದೆ.

More from Filmibeat

English summary
Malayalam actor Fahadh Faasil showed angry on Pushpa-2 director Sukumar;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X