ಸೂಪರ್‌ವುಮನ್ ಲುಕ್ ಕೊಟ್ಟ ಕರಾವಳಿ ಬ್ಯೂಟಿ ಜ್ಯೋತಿ ರೈ; ಹಲ್‌ಚಲ್ ಎಬ್ಬಿಸಿದ ಬೋಲ್ಡ್ ಫೋಟೊ

ಕನ್ನಡದ ಕರಾವಳಿ ಬೆಡಗಿ ಜ್ಯೋತಿ ರೈ ಟಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾಗಳಲ್ಲಿ ಬೋಲ್ಡ್ ಫೋಟೊಗಳನ್ನು ಶೇರ್ ಮಾಡಿಕೊಂಡು ಹಲ್‌ಚಲ್ ಎಬ್ಬಿಸುತ್ತಿದ್ದಾರೆ. 38 ವರ್ಷದ ನಟಿಯ ಗ್ಲಾಮರಸ್ ಲುಕ್ ಅನ್ನು ಕಣ್ತುಂಬಿಕೊಂಡು ಆಕೆಯ ಲೈಕ್ಸ್ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಜ್ಯೋತಿ ರೈ ಕನ್ನಡತಿಯಾಗಿದ್ದರೂ, ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಈ ಕರಾವಳಿ ಬ್ಯೂಟಿ ತೆಲುಗಿನ ಕಿರುತೆರೆಯಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಇವರು ನಟಿಸಿದ ಧಾರಾವಾಹಿಗಳು ಸೂಪರ್ ಹಿಟ್ ಆಗಿವೆ. ಕಿರುತೆರೆಯಲ್ಲಿ ಪಕ್ಕಾ ಗೃಹಿಣಿಯಂತೆ ಕಾಣಿಸಿಕೊಂಡರೂ, ಸೋಶಿಯಲ್ ಮೀಡಿಯಾದಲ್ಲಿ ಸಖತ್ ಬೋಲ್ಡ್ ಲುಕ್ ಕೊಡುತ್ತಿದ್ದಾರೆ.

Mangalore based actress Jyothi Rai shared stunning superwoman look

ಸದ್ಯ ಜ್ಯೋತಿ ರೈ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದು, ಅದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಬ್ಯಾಕ್ ಕಾಸ್ಟ್ಯೂಮ್‌ನಲ್ಲಿ ಸೂಪರ್‌ ವುಮನ್ ಲುಕ್ ಕೊಟ್ಟಿದ್ದು, ಆ ಫೋಟೊ ಅವರ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡುತ್ತಿದೆ. ಅಷ್ಟಕ್ಕೂ ಈ ಫೋಟೊ ಹಿಂದಿನ ಗುಟ್ಟೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ತೆಲುಗಿನಲ್ಲಿ ಹಲ್‌ಚಲ್ ಎಬ್ಬಿಸುತ್ತಿರುವ ಜ್ಯೋತಿ ರೈ ಮೊದಲು ಕನ್ನಡದ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರು ನಟಿಸಿದ 'ಜೋಗುಳ' ಧಾರಾವಾಹಿಯಲ್ಲಿ ಜ್ಯೋತಿ ರೈ ನಟಿಸಿದ್ದರು. ಆ ಧಾರಾವಾಹಿ ಜ್ಯೋತಿ ರೈಗೆ ಸಾಕಷ್ಟು ಜನಪ್ರಿಯತೆಯನ್ನು ನೀಡಿತ್ತು. ಇದರ ಹಿಂದೆನೇ 'ಗೆಜ್ಜೆಪೂಜೆ', 'ಅನುರಾಗ ಸಂಗಮ', 'ಕನ್ಯಾದಾನ', 'ಲವಲವಿಕೆ', 'ಪ್ರೇರಣಾ', 'ಕಿನ್ನರಿ', 'ಮೂರುಗಂಟು', 'ಕಸ್ತೂರಿ ನಿವಾಸ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಈಗ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸುತ್ತಿರುವ ನಟಿ ಬೋಲ್ಡ್ ಲುಕ್ ಕೊಟ್ಟ ಫೋಟೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಬ್ಲ್ಯಾಕ್ ಕಾಸ್ಟ್ಯೂಮ್‌ನಲ್ಲಿ ಸೂಪರ್‌ವುಮನ್ ಕೊಟ್ಟಿದ್ದು, ಆ ಫೋಟೊ ಶೇರ್ ಮಾಡಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವುದಕ್ಕೆ ಶುರುವಾಗಿದೆ. ಅಸಲಿಗೆ ಈ ಫೋಟೊ ಹಿಂದೊಂದು ರಹಸ್ಯವಿದೆ.

Mangalore based actress Jyothi Rai shared stunning superwoman look

ಜ್ಯೋತಿ ರೈ ಕೆಲವು ವಾರಗಳ ಹಿಂದಷ್ಟೇ ಒಂದು ಫೋಟೊವನ್ನು ಶೇರ್ ಮಾಡಿಕೊಂಡಿದ್ದರು. ಆದೇ ಶೈಲಿಯಲ್ಲಿಯೇ ಈ ಸೂಪರ್‌ವುಮನ್ ಫೋಟೊ ಕೂಡ ಇದೆ. ಹಾಗಾಗಿ ಇದು ಯಾವುದೇ ಸಿನಿಮಾಗಾಗಿ ಮಾಡಿಸಿದ ಫೋಟೊಶೂಟ್ ಅಲ್ಲ ಅನ್ನೋದು ಕನ್ಫರ್ಮ್. ಹಾಗೇ ಇದು ತನ್ನದೇ ಹಳೆಯ ಫೋಟೊ ಇಟ್ಟುಕೊಂಡು ಎಐ ತಂತ್ರಜ್ಞಾನವನ್ನು ಬಳಸಿ ಸೂಪರ್‌ವುಮನ್ ಇಮೇಜ್ ಅನ್ನು ಸೃಷ್ಟಿಸಿರಬಹುದು ಎಂದು ಫ್ಯಾನ್ಸ್ ಅಂದಾಜಿಸುತ್ತಿದ್ದಾರೆ.

ಸದ್ಯ ಈ ಸೂಪರ್‌ವುಮನ್ ಇಮೇಜ್ ನೆಟ್ಟಿಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಈ ಫೋಟೊಗಳಿಗೆ ಕಮೆಂಟ್‌ಗಳ ಮೇಲೆ ಕಮೆಂಟ್ ಮಾಡುತ್ತಿದ್ದಾರೆ. ಇದರ ಜೊತೆನೇ ರೆಡ್ ಕಾಸ್ಟ್ಯೂಮ್‌ನಲ್ಲಿ ಶೇರ್ ಮಾಡಿಕೊಂಡಿದ್ದ ಫೋಟೊ ಕೂಡ ವೈರಲ್ ಆಗುತ್ತಿದೆ.

38 ವರ್ಷದ ನಟಿ ಜ್ಯೋತಿ ರೈ ತೆಲುಗಿನ 'ಗುಪ್ಪೆಡಂತ ಮನಸ್ಸು' ತೆಲುಗು ಧಾರಾವಾಹಿ ಮೂಲಕ ಫೇಮಸ್ ಆಗಿದ್ದಾರೆ. ಸದ್ಯ ತಮ್ಮ ಧಾರಾವಾಹಿಗಳ ಜೊತೆನೇ ಇನ್‌ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಬೋಲ್ಡ್ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

More from Filmibeat

English summary
Mangalore actress Jyothi Rai superwoman look goes viral:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X