ಒಂದೇ ವರ್ಷದಲ್ಲಿ ಗೋಲ್ಡನ್ ಲೆಗ್ ಎನಿಸಿಕೊಂಡ ಕರಾವಳಿ ಬೆಡಗಿ ಕೃತಿ ಶೆಟ್ಟಿ: ಕೊಟ್ಟಿದ್ದು ಹ್ಯಾಟ್ರಿಕ್ ಹಿಟ್

ಒಂದು ವರ್ಷದ ಹಿಂದೆ ಟಾಲಿವುಡ್‌ನಲ್ಲಿ ಕೃತಿ ಶೆಟ್ಟಿ ಹೆಸರು ಪ್ರಚಲಿತದಲ್ಲಿಯೇ ಇರಲಿಲ್ಲ. ಒಂದೇ ಸಿನಿಮಾ ಕೃತಿ ಶೆಟ್ಟಿಯ ಬದುಕನ್ನೇ ಬದಲಿಸಿದೆ. ಕರ್ನಾಟಕ ಮೂಲದ ಈ ನಟಿ ಈಗ ತೆಲುಗು ಚಿತ್ರರಂಗ ಅದೃಷ್ಟ ದೇವತೆಯಾಗಿದ್ದಾಳೆ. ನಟಿಸಿದ ಸಿನಿಮಾಗಳೆಲ್ಲವೂ ಹಿಟ್ ಲಿಸ್ಟ್ ಸೇರಿದೆ. ಮುಂದಿನ ದಿನಗಳಲ್ಲಿ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆಗೆ ಟಕ್ಕರ್ ಕೊಡಬಹುದು ಅಂತ ಟಾಲಿವುಡ್ ಈಗಾಗಲೇ ಮಾತಾಡಿಕೊಳ್ಳುತ್ತಿದೆ.

Recommended Video

ತೆಲುಗುನಲ್ಲಿ ರಶ್ಮಿಕಾ ಜಾಗಕ್ಕೆ ಬಂತು ಆಪತ್ತು | Filmibeat Kannada

ಕೃತಿ ಶೆಟ್ಟಿ ಪೋಷಕರು ಮಂಗಳೂರು ಮೂಲದವರು. ಆದರೆ, ಮುಂಬೈನಲ್ಲಿ ಬಂದು ನೆಲೆಸಿದ್ದರು. ಹೀಗಾಗಿ ಕೃತಿ ಶೆಟ್ಟಿ ಕೂಡ ಮುಂಬೈನಲ್ಲಿ ಬೆಳೆದಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲೇ ಕೃತಿ ಶೆಟ್ಟಿಗೆ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಅಂದ ಹಾಗೇ ಟಾಲಿವುಡ್ ಸಿನಿಮಾದಲ್ಲಿ ನಟಿಸುವುದಕ್ಕೂ ಮುನ್ನ ಕೃತಿ ಶೆಟ್ಟಿ ಬಾಲಿವುಡ್ ಸಿನಿಮಾದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ನಟಿಸಿದ ಸೂಪರ್‌ 20ಯಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಕೃತಿ ಶೆಟ್ಟಿಯ ಬದುಕನ್ನೇ ಬದಲಾಯಿಸಿಬಿಟ್ಟಿದೆ. ಈ ನಟಿ ತೆಲುಗು ಚಿತ್ರರಂಗದ ಗೋಲ್ಡನ್ ಲೆಗ್ ಅನ್ನುವುದು ಸಾಬೀತಾಗಿದೆ.

ಒಂದೇ ವರ್ಷ ಕೃತಿಯ 3 ಹಿಟ್ ಸಿನಿಮಾ

ಒಂದೇ ವರ್ಷ ಕೃತಿಯ 3 ಹಿಟ್ ಸಿನಿಮಾ

ಕೃತಿ ಶೆಟ್ಟಿ ಒಂದು ವರ್ಷ ಹಿಂದಷ್ಟೇ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಮೊದಲ ಸಿನಿಮಾ ತೆರೆಕಂಡು ಒಂದು ವರ್ಷ ಮುಗಿಯುವುದರೊಳಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಈಕೆ ನಟಿಸಿದ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹೀಗಾಗಿ ತೆಲುಗು ಚಿತ್ರರಂಗ ಕರ್ನಾಟಕ ಮೂಲದ ಈ ಕರಾವಳಿ ಬೆಡಗಿಯನ್ನು ಅದೃಷ್ಟ ದೇವತೆ ಅಂತ ಕರೆಯಲು ಆರಂಭಿಸಿದೆ. ಇದರೊಂದಿಗೆ ಟಾಲಿವುಡ್ ಕೃತಿ ಶೆಟ್ಟಿ ಗೋಲ್ಡನ್ ಲೆಗ್ ಆಗಿರುವುದು ಸಾಬೀತಾಗಿದೆ.

'ಉಪ್ಪೇನಾ' 100 ಕೋಟಿ ಗಳಿಕೆ

'ಉಪ್ಪೇನಾ' 100 ಕೋಟಿ ಗಳಿಕೆ

ಕೃತಿ ಶೆಟ್ಟಿ ಮೊದಲ ತೆಲುಗು ಸಿನಿಮಾ 'ಉಪ್ಪೇನಾ'. ಮೆಗಾ ಕುಟುಂಬದ ಕುಡಿ ವೈಷ್ಣವ್ ತೇಜ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಿನಿಮಾ ಆಗಿತ್ತು. ಟಾಲಿವುಡ್‌ನ ಸ್ಟಾರ್ ನಿರ್ದೇಶಕ ಸುಕುಮಾರ್ ನೀಡಿದ ಕತೆಯನ್ನು ಅವರ ಶಿಷ್ಯ ಬುಚ್ಚಿ ಬಾಬು ನಿರ್ದೇಶನ ಮಾಡಿದ್ದರು. ತಮಿಳು ನಟ ವಿಜಯ್ ಸೇತುಪತಿ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಸಿನಿಮಾ ಮೊದಲ ಲಾಕ್‌ಡೌನ್ ಬಳಿಕ ತೆರೆಕಂಡಿತ್ತು. 'ಉಪ್ಪೇನಾ'ಗೆ ಯಾರೂ ನಿರೀಕ್ಷೆ ಮಾಡದಂತಹ ಯಶಸ್ಸು ಸಿಕ್ಕಿತ್ತು. ಬಾಕ್ಸಾಫೀಸ್‌ನಲ್ಲಿ ಸುಮಾರು 100 ಕೋಟಿ ಗಳಿಕೆ ಕಂಡಿತ್ತು.

'ಶ್ಯಾಮ್ ಸಿಂಗ ರಾಯ್' ಕೂಡ ಹಿಟ್

'ಶ್ಯಾಮ್ ಸಿಂಗ ರಾಯ್' ಕೂಡ ಹಿಟ್

ಕೃತಿ ಶೆಟ್ಟಿ ನಟಿಸಿದ ಎರಡನೇ 'ಸಿನಿಮಾ ಶ್ಯಾಮ್ ಸಿಂಗ ರಾಯ್'. ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಈ ಸಿನಿಮಾದಲ್ಲಿ ದ್ವಿ ಪಾತ್ರದಲ್ಲಿ ನಟಿಸಿದ್ದರು. ಇದು ಪುನರ್ಜನ್ಮದ ಕಥೆಯನ್ನು ಆಧರಿಸಿದ ಸಿನಿಮಾ. ಕೃತಿ ಈ ಸಿನಿಮಾದಲ್ಲಿ ನಾನಿಯ ಒಂದು ಪಾತ್ರಕ್ಕೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಕೊರೊನಾ ಭಯದ ನಡುವೆಯೂ ತೆರೆಕಂಡಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದು ಬೀಗಿದೆ. 47 ಕೋಟಿಗೂ ಅಧಿಕ ಮೊತ್ತ ಕಲೆಹಾಕುವ ಮೂಲಕ ಹಿಟ್ ಅಂತ ಸಾಬೀತಾಗಿದೆ.

ಕೃತಿ 3ನೇ ಚಿತ್ರ ಬಂಗಾರ್‌ರಾಜು

ಕೃತಿ 3ನೇ ಚಿತ್ರ ಬಂಗಾರ್‌ರಾಜು

ಕರಾವಳಿ ಬೆಡಗಿ ಕೃತಿ ಶೆಟ್ಟಿ ನಟಿಸಿದ ಮೂರನೇ ಸಿನಿಮಾವೇ 'ಬಂಗಾರ್‌ರಾಜು'. ನಾಗಾರ್ಜುನ ಹಾಗೂ ನಾಗಚೈತನ್ಯ ಅಭಿನಯದ ಸಿನಿಮಾ. ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಿದ್ದ ಈ ಸಿನಿಮಾ ಬಾಕ್ಸಾಫೀಸ್ ಬ್ಲಾಕ್ ಬಸ್ಟರ್ ಅಂತ ಸಾಬೀತಾಗಿದೆ. ಕೃತಿ ನಟಿಸಿದ ಮೂರು ಸಿನಿಮಾಗಳೂ ಕೊರೊನಾ ಸಂಕಷ್ಟದಲ್ಲಿಯೇ ಬಿಡುಗಡೆಯಾಗಿದ್ದು, ಆ ಮೂರು ಸಿನಿಮಾಗಳೂ ಬಾಕ್ಸಾಫೀಸ್ ಸಕ್ಸಸ್ ಆಗಿದ್ದು ವಿದೇಶ. ಸದ್ಯ ಕೃತಿ ಶೆಟ್ಟಿ ಕೈಯಲ್ಲೀಗ ' ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ', 'ದಿ ವಾರಿಯರ್' ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣ ನಡೆಯುತ್ತಿದೆ. ಈ ಮೂಲಕ ಸಂಭಾವನೆಯನ್ನೂ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

More from Filmibeat

English summary
Mangaluru Girl actress Krithi Shetty proved as golden leg in Tollywood. She scored a hat trick with recently released movie Bangarraju after Uppena and Shyam Singha Roy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X