Silk Smitha: ಕನಸಿನಲ್ಲಿ ಸಿಲ್ಮ್ ಸ್ಮಿತಾ ಕಂಡ ನಟಿ: ಸಮಾಧಿ ಹುಡುಕಿಕೊಂಡು ಹೋದಾಗ ಸಿಕ್ಕಿದ್ದೇನು?

ದಕ್ಷಿಣ ಭಾರತದಲ್ಲಿ ಸಿಲ್ಕ್ ಸ್ಮಿತಾ ಯಾರು ಅಂತ ಪರಿಚಯಮಾಡಿಕೊಡಬೇಕಾದ ಅವಶ್ಯಕತೆನೇ ಇಲ್ಲ. ಸಿಲ್ಮ್ ಸ್ಮಿತಾ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿದ ಮರೆಯಾಗಿದ್ದಾರೆ. ಸಿನಿಮಾಗಳಲ್ಲಿ ಗ್ಲಾಮರ್ ಪಾತ್ರಗಳನ್ನು ಮಾಡುವ ಅದೆಷ್ಟೋ ನಟಿಯರಿಗೆ ಸ್ಪೂರ್ತಿನೇ ಈ ಸಿಲ್ಮ್ ಸ್ಮಿತಾ.

ಒಂದು ಕಾಲದಲ್ಲಿ ಸಿಲ್ಕ್ ಸ್ಮಿತಾಗೆ ಇರೋ ಕ್ರೇಜ್ ಬೇರೆ ಯಾವುದೇ ನಟಿಗೂ ಇರಲಿಲ್ಲ. ಸೂಪರ್‌ಸ್ಟಾರ್‌ಗಳ ಸಿನಿಮಾಗಳಲ್ಲಿ ಒಂದು ಸಾಂಗ್‌ನಲ್ಲಾದರೂ ಸಿಲ್ಕ್ ಸ್ಮಿತಾ ಇರಬೇಕಿತ್ತು. ಒಂದು ಕಾಲದಲ್ಲಿ ಉತ್ತುಂಗದಲ್ಲಿ ಸಿಲ್ಮ್ ಸ್ಮಿತಾ ಬದುಕು ಬಳಿಕ ದುರಂತದ ಕಡೆಗೆ ಸಾಗಿತ್ತು. ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡರಲ್ಲ ಸೋಲುಂಡಿದ್ದರು.

Mark Antony actress Vishnu Priya Gandhi Visit Silk Smitha Grave Yard in search of her role

ಇದೇ ನೋವಿನಲ್ಲಿ ಸಿಲ್ಮ್ ಸ್ಮಿತಾ ಆತ್ಮಹತ್ಯೆಗೆ ಶರಣಾದರು. ಇಂದಿಗೂ ಸಿಲ್ಮ್ ಸ್ಮಿತಾ ಅಭಿಮಾನಿಗಳು ಇದ್ದಾರೆ. ಅದಕ್ಕೆ ಪ್ರತ್ಯಕ್ಷ ಸಾಕ್ಷಿನೇ ಜೂನಿಯರ್ ಸಿಲ್ಕ್ ಸ್ಮಿತಾ. ವಿಶಾಲ್ ಹಾಗೂ ಎಸ್‌ಜೆ ಸೂರ್ಯ ನಟನೆಯ 'ಮಾರ್ಕ್ ಆಂಟೋನಿ' ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಜೂನಿಯರ್ ಸಿಲ್ಕ್‌ಗೆ ಪ್ರೇಕ್ಷಕರು ಬಹುಪರಾಕ್ ಹೇಳಿದ್ದಾರೆ. ಆದರೆ, ಸಿಲ್ಮ್ ಸ್ಮಿತಾ ಪಾತ್ರ ಮಾಡುವುದಕ್ಕೂ ಮುನ್ನ ವಿಷ್ಣು ಪ್ರಿಯಾ (ಜೂನಿಯರ್ ಸಿಲ್ಕ್) ಅವರ ಸಮಾಧಿಯನ್ನು ಹುಡುಕಿಕೊಂಡು ಹೋಗಿದ್ದರು. ಅಲ್ಲೇನಾಯ್ತು ತಿಳಿಯಲು ಮುಂದೆ ಓದಿ..

ಜೂನಿಯರ್ ಸಿಲ್ಮ್ ಸ್ಮಿತಾ ವಿಷ್ಣು ಪ್ರಿಯಾ

ಸದ್ಯ ದಕ್ಷಿಣ ಭಾರತದಲ್ಲಿ ಜೂನಿಯರ್ ಸಿಲ್ಕ್ ಸ್ಮಿತಾ ಜೋರಾಗಿಯೇ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಜೂನಿಯರ್ ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಸದ್ದು ಮಾಡುತ್ತಿರುವ ಆ ನಟಿಯೇ ವಿಷ್ಣುಪ್ರಿಯಾ. 'ಮಾರ್ಕ್ ಆಂಟೋನಿ' ಸಿನಿಮಾದಲ್ಲಿ ಜೂನಿಯರ್ ಸಿಲ್ಕ್ ಸ್ಮಿತಾ ಗಮನ ಸೆಳೆದಿದ್ದಾರೆ. ಸಿಲ್ಕ್ ಅವತಾರವೆತ್ತಿ ವಿಷ್ಣು ಪ್ರಿಯಾ ಎಂಟ್ರಿ ಕೊಡುತ್ತಿದ್ದಂತೆ ಪ್ರೇಕ್ಷಕರಿಂದ ಶಿಳ್ಳೆಗಳು ಬೀಳುತ್ತವೆ. ಆ ಮಟ್ಟಿಗೆ ಜೂನಿಯರ್ ಸಿಲ್ಕ್ ಸ್ಮಿತಾ ಪಾತ್ರ ಫೇಮಸ್ ಆಗಿದೆ. ಆದರೆ, ಈಕೆ ಮಾರ್ಕ್ ಆಂಟೋನಿಯಲ್ಲಿ ನಟಿಸುವುದಕ್ಕೂ ಮುನ್ನ ಸಿಲ್ಕ್ ಸ್ಮಿತಾ ಸಮಾಧಿಗೆ ಭೇಟಿ ಕೊಟ್ಟಿದ್ದರು.

ಸಿಲ್ಕ್ ಸ್ಮಿತಾ ಸಮಾಧಿಗೆ ಹೋಗಿದ್ದ ನಟಿ

ವಿಷ್ಣು ಪ್ರಿಯಾಗೆ ಸಿಲ್ಕ್ ಸ್ಮಿತಾ ಕನಸಿನಲ್ಲಿ ಬಂದಿದ್ದರು. ಅದಕ್ಕಾಗಿ ಚೆನ್ನೈಗೆ ಹೋಗಿದ್ದಾಗ ಸಿಲ್ಮ್ ಸ್ಮಿತಾ ಸಮಾಧಿಯನ್ನು ಹುಡುಕಿಕೊಂಡು ಹೋಗಿದ್ದರು. ಸಿಲ್ಕ್ ಸ್ಮಿತಾ ಸಮಾಧಿ ಹುಡುಕುವುದಕ್ಕೆ ಗೂಗಲ್‌ನಲ್ಲಿ ಜಾಲಾಡಿದ್ದರು. ಇದರೊಂದಿಗೆ ಯೂಟ್ಯೂಬ್ ವಿಡಿಯೋಗಳನ್ನು ನೋಡಿದ್ದರು. ಆದರೆ, ವಿಷ್ಣು ಪ್ರಿಯಾ ಗಾಂಧಿಗೆ ದಿವಂಗತ ನಟಿ ಸಿಲ್ಕ್ ಸ್ಮಿತಾ ಸಮಾಧಿ ಬಗ್ಗೆ ಮಾಹಿತಿನೇ ಸಿಕ್ಕಿರಲಿಲ್ಲ. ಕೊನೆಗೂ ಯಾರಿಂದಲೋ ಮಾಹಿತಿ ಪಡೆದು ಸಮಾಧಿಗೆ ಭೇಟಿ ಕೊಟ್ಟಿದ್ದರು.

Mark Antony actress Vishnu Priya Gandhi Visit Silk Smitha Grave Yard in search of her role

ಸಿಲ್ಕ್ ಸ್ಮಿತಾ ಸಮಾಧಿ ಸಿಕ್ಕಿತಾ?

ದಿವಂಗತ ನಟಿ ಸಿಲ್ಕ್ ಸ್ಮಿತಾ ಸಮಾಧಿ ಹುಡುಕಿಕೊಂಡು ಎವಿಎಂ ಸ್ಟುಡಿಯೋ ಬಳಿ ಹೋಗಿದ್ದರು. ಆ ಸ್ಟುಡಿಯೋ ಹಿಂಭಾಗದಲ್ಲಿಯೇ ಸಿಲ್ಕ್ ಸ್ಮಿತಾ ಸಮಾಧಿ ಇದೆ ಎಂದು ಸಿನಿಮಾ ಮಂದಿ ಮಾಹಿತಿ ನೀಡಿದ್ದರು. ಆದರೆ, ಮತ್ತೆ ಕೆಲವರು ಇದು ಸಿಲ್ಕ್ ಸ್ಮಿತಾ ಸಮಾಧಿ ಅಲ್ಲ ಎಂದು ಹೇಳಿದ್ರು. ಕೆಲವರು ಇಲ್ಲಿ ಸಿಲ್ಕ್ ಸ್ಮಿತಾ ಸಮಾಧಿನೇ ಇಲ್ಲ. ಅವರ ಮೃತದೇಹವನ್ನು ಅಗ್ನಿಸ್ಪರ್ಶ ಮಾಡಲಾಗಿತ್ತು. ಆಕೆಯ ಅಸ್ಥಿಯನ್ನು ಅವರ ತಾಯಿ ತೆಗೆದುಕೊಂಡು ಹೋದರು ಎಂದು ಹೇಳಿದ್ದರು. ಕೊನೆಗೂ ಸಿಲ್ಕ್ ಸ್ಮಿತಾ ಸಮಾಧಿ ಸಿಗಲೇ ಇಲ್ಲ ಎಂದು ಜೂನಿಯರ್ ಸಿಲ್ಕ್ ಹೇಳಿದ್ದಾರೆ.

ಸಿಲ್ಕ್ ಸಿನಿಮಾಗಳು ಇಂದಿಗೂ ಜೀವಂತ

ಜೂನಿಯರ್ ಸಿಲ್ಮ್ ಸ್ಮಿತಾ ಆಂಧ್ರ ಪ್ರದೇಶದ ಎಲ್ಲೂರ್‌ನಲ್ಲಿ ನಟಿಸಿದ್ದರು. ಚಿಕ್ಕ ವಯಸ್ಸಿನಲ್ಲಿಯೇ ಸಿಲ್ಮ್ ಸ್ಮಿತಾರನ್ನು ಮದುವೆ ಆಗಿತ್ತು. ಆದರೆ, ಗಂಡನ ಮನೆಯವರು ಕಿರುಕುಳ ನೀಡಿದ್ದರಿಂದ ಅಲ್ಲಿಂದ ಹೊರಬಂದು ಮೇಕಪ್ ಆರ್ಟಿಸ್ಟ್ ಆಗಿ, ಬಳಿಕ ಐಟಂ ಸಾಂಗ್‌ಗಳಲ್ಲಿ ಕಾಣಿಸಿಕೊಂಡರು. ಸಿನಿಮಾದಿಂದ ಸಾಕಷ್ಟು ಹಣವನ್ನು ಸಂಪಾಧನೆ ಮಾಡಿದ್ದರೂ, ಬಳಿಕ ಆತ್ಮೀಯರೇ ಸಿಲ್ಕ್‌ಗೆ ಮೋಸ ಮಾಡಿದ್ದರು. ವೈಯಕ್ತಿಕ ಜೀವನ ಕೂಡ ಸರಿಯಾಗಿ ಇರಲಿಲ್ಲ. ಹೀಗಾಗಿ ಸಿಲ್ಕ್ ಸ್ಮಿತಾ ಆತ್ಮಹತ್ಯೆಗೂ ಶರಣಾಗಿದ್ದರು.

More from Filmibeat

English summary
Actress Vishnu Priya Gandhi Visit Silk Smitha Grave Yard for her role:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X