ಮಾಸ್ ಮಹಾರಾಜನ ಮಾಸ್ ಅವತಾರ.. 'ಟೈಗರ್ ನಾಗೇಶ್ವರ್ ರಾವ್' ಮಾಸ್ ಟೀಸರ್ ಔಟ್

vಟಾಲಿವುಡ್‌ನ ಮಾಸ್ ಮಹಾರಾಜ ರವಿತೇಜ ಪ್ಯಾನ್ ಇಂಡಿಯಾ ಸಿನಿಮಾದತ್ತ ಗಮನ ಹರಿಸಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಮಿಂಚಬೇಕು ಅಂತ ನಿರ್ಧರಿಸಿರೋ ರವಿತೇಜ ಕೆಲವು ತಿಂಗಳ ಹಿಂದಷ್ಟೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಆ ಸಿನಿಮಾವೇ 'ಟೈಗರ್ ನಾಗೇಶ್ವರ್ ರಾವ್'.

'ಟೈಗರ್ ನಾಗೇಶ್ವರ್ ರಾವ್' ತೆಲುಗಿನ ಮಾಸ್ ಮಹಾರಾಜನ ಮೊಟ್ಟ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಈ ಸಿನಿಮಾ ಬಗ್ಗೆ ಟಾಲಿವುಡ್‌ನಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಅದಕ್ಕೆ ತಕ್ಕಂತೆ ಸಿನಿಮಾ ಟೀಸರ್ ಅನ್ನು ರಿಲೀಸ್ ಮಾಡಲಾಗಿದೆ.

ravi-teja-pan-india-movie-tiger-nageswara-rao

ಕೆಲವು ದಿನಗಳ ಹಿಂದಷ್ಟೇ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿತ್ತು. ದಸರಾಗೆ ಅಂದ್ರೆ, ಅಕ್ಟೋಬರ್ 22ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗುತ್ತೆ ಎಂದು ಸಿನಿಮಾ ತಂಡ ಅನೌನ್ಸ್ ಮಾಡಿತ್ತು.

'ಟೈಗರ್ ನಾಗೇಶ್ವರ್ ರಾವ್' ಟಾಲಿವುಡ್‌ನ ಈ ವರ್ಷದ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ. ಈಗ ರಿಲೀಸ್ ಆಗಿರೋ ಈ ಸಿನಿಮಾದ ಟೀಸರ್ ಕೂಡ ಅಷ್ಟೇ ನಿರೀಕ್ಷೆಯನ್ನು ಹುಟ್ಟಾಕಿದೆ. ಸಿನಿಮಾ ಟೀಸರ್ ನೋಡಿ ತೆಲುಗು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಮದ್ರಾಸ್ ಸೆಂಟರ್ ಜೈಲಿನಿಂದ ಎಸ್ಕೇಪ್ ಆಗಿರುವ ಸ್ಟುವರ್ಟ್ ಪುರಂ ಕಳ್ಳನಿಗಾಗಿ ಹುಡುಗಾಟ ನಡೆಸುತ್ತಿರುವ ದೃಶ್ಯಗಳ ಮೂಲಕ ಟೀಸರ್ ಆರಂಭ ಆಗುತ್ತೆ.

ಮುರಳಿ ಶರ್ಮಾ ಹಾಗೂ ಅನುಪಮ್ ಖೇರ್ ಗುಪ್ತಚಾರ ಇಲಾಖೆಯ ಅಧಿಕಾರಿಗಳಾಗಿ 'ಟೈಗರ್ ನಾಗೇಶ್ವರ್ ರಾವ್' ಸಿನಿಮಾದಲ್ಲಿ ನಟಿಸಿರೋದು ವಿಶೇಷ. ಅಂದ್ಹಾಗೆ ನಾಗೇಶ್ವರ್ ರಾವ್ ಕುಖ್ಯಾತ ಕಳ್ಳ. ಅವನು ಈ ಮೋಸ್ಟ್ ವಾಂಟೆಡ್ ಕಳ್ಳನಾಗುವುದು ಯಾಕೆ ಆಗ್ತಾನೆ ಅನ್ನೋದನ್ನು ಮುರಳಿ ಶರ್ಮಾ ಈ ಟೀಸರ್‌ನಲ್ಲಿ ವಿವರಿಸ್ತಾರೆ. ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿರೊ ರವಿತೇಜ ನೋಡಿ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

70ರ ಕಾಲಘಟ್ಟದ ಹೈದ್ರಾಬಾದ್ ದ ಸ್ಟುವರ್ಟ್ ಪುರಂ ಹಳ್ಳಿಯೊಂದರಲ್ಲಿ ತೆರೆದು ಕೊಳ್ಳುವ ಕಥೆಯಿದು. ಅಲ್ಲಿನ ಕುಖ್ಯಾತ ಕಳ್ಳ ನಾಗೇಶ್ವರ ರಾವ್ ಅವರ ಜೀವನಾಧಾರಿತ ಸಿನಿಮಾವಾಗಿದೆ. ಈ ಕಾರಣಕ್ಕಾಗಿಯೇ ರವಿತೇಜ ಈ ಹಿಂದೆ ಕಂಡಿದ್ದ ಗೆಟಪ್, ಬಾಡಿ ಲಾಗ್ವೇಜ್ ಎಲ್ಲವನ್ನೂ ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ.

'ಟೈಗರ್ ನಾಗೇಶ್ವರ್ ರಾವ್' ಸಿನಿಮಾದಲ್ಲಿ ರವಿತೇಜಾ ಜೊತೆ ನೂಪುರ್ ಸನೋನ್ ಮತ್ತು ಗಾಯತ್ರಿ ಭಾರದ್ವಾಜ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಆರ್ ಮಧಿ ಛಾಯಾಗ್ರಹಣ, ಶ್ರೀಕಾಂತ್ ವೀಸಾ ಸಂಭಾಷಣೆ, ವಿ ಪ್ರಕಾಶ್ ಕುಮಾರ್ ಸಂಗೀತ ಸಿನಿಮಾಕ್ಕಿದೆ. ಅವಿನಾಶ್ ಕೊಲ್ಲಾ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಮಯಾಂಕ್ ಸಿಂಘಾನಿಯಾ ಸಹ ನಿರ್ಮಾಣದ ಜವಾಬ್ದಾರಿ ನಿಭಾಯಿಸಿದ್ದಾರೆ.

ಇದೇ ದಸರಾ ಹಬ್ಬಕ್ಕೆ 'ಟೈಗರ್ ನಾಗೇಶ್ವರ್ ರಾವ್' ಬಾಕ್ಸಾಫೀಸ್ ಅಬ್ಬರಿಸುತ್ತಿದೆ. ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದ್ದು, ದಸರಾ ಹಬ್ಬದ ವೇಳೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತೆ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತೆ ಎಂದು ನಿರೀಕ್ಷೆ ಮಾಡಲಾಗಿದೆ.

More from Filmibeat

English summary
Ravi Teja Pan India Movie Tiger Nageswara Rao teaser Out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X