"ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ, ಟಾರ್ಚರ್ ಸಹಿಸಲಾಗುತ್ತಿಲ್ಲ"; ಶ್ರೀರೆಡ್ಡಿ ಸೂಸೈಡ್ ನೋಟ್
ಭಾರತದಲ್ಲಿ ಮೀಟೂ ಅಭಿಯಾನ ಶುರುವಾದ ಆರಂಭದಲ್ಲಿ ಧ್ವನಿ ಎತ್ತಿದ ನಟಿಯರಲ್ಲಿ ಶ್ರೀ ರೆಡ್ಡಿ ಕೂಡ ಒಬ್ಬರು. ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ಈ ನಟಿ ಸುದ್ದಿಯಲ್ಲಿ ಇದ್ದರು. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯ ಮುಂದೆ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಇಲ್ಲಿಂದ ತೆಲುಗು ನಟಿ ಶ್ರೀರೆಡ್ಡಿ ರಾತ್ರೋರಾತ್ರಿ ವೈರಲ್ ಆಗುವುದಕ್ಕೆ ಶುರುವಾಗಿದ್ದರು.
ತೆಲುಗು ವಾಣಿಜ್ಯ ಮಂಡಳಿ ಮುಂದೆ ಹೈ ಡ್ರಾಮ ಮಾಡಿದ್ದ ನಟಿ ಶ್ರೀರೆಡ್ಡಿ ಟಾಲಿವುಡ್‌ನ ಹಲವು ಮಂದಿಯನ್ನು ಟಾರ್ಗೆಟ್ ಮಾಡಿದ್ದರು. ಅದರಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ಕೂಡ ಒಬ್ಬರು. ಇದೇ ವೇಳೆ ತೆಲುಗಿನ ಕೆಲವು ನಟಿಯರ ಮೇಲೂ ಗಂಭೀರ ಆರೋಪಗಳನ್ನು ಮಾಡಿದ್ದರು. ಹೀಗಾಗಿ ಮಾಧ್ಯಮಗಳಲ್ಲಿ ಕೇವಲ ಶ್ರೀ ರೆಡ್ಡಿನೇ ಕಾಣಿಸಿಕೊಂಡು ಸಂಚಲನ ಸೃಷ್ಟಿಸಿದ್ದರು.

ಇದೇ ವೇಳೆ ತೆಲುಗು ಚಿತ್ರರಂಗದಲ್ಲಿ ಪರಭಾಷೆಯ ನಟಿಯರಿಗೆ ಅವಕಾಶ ಕೊಡುತ್ತಿದ್ದಾರೆ. ತೆಲುಗು ನಟಿಯರಿಗೇ ಹೆಚ್ಚು ಅವಕಾಶ ಸಿಕ್ಕಿಲ್ಲ ಎಂದೂ ಟೀಕೆ ಮಾಡಿದ್ದಳು. ಇದೇ ಮೀಟೂ ಅಭಿಯಾನದ ವೇಳೆ ಟಾಲಿವುಡ್ ಮಂದಿಯನ್ನು ಹಾಗೂ ರಾಜಕೀಯ ಮುಖಂಡರನ್ನು ಕಾಡಿದ್ದರು. ಶ್ರೀರೆಡ್ಡಿ ಮಾಡಿದ ಪೋಸ್ಟ್‌ಗಳು ಅಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು.
ಮೀಟೂ ವೇಳೆ ಸದ್ದು ಮಾಡಿದ್ದ ಶ್ರೀರೆಡ್ಡಿಯನ್ನು ಜನರು ಕ್ರಮೇಣ ಮರೆಯುವುದಕ್ಕೆ ಶುರು ಮಾಡಿದ್ದರು. ಆ ಬಳಿಕ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೀಡಿಯೋಗಳನ್ನು ಮಾಡಿದ್ದರೂ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ. ಈ ಕಾರಣಕ್ಕೆ ಶ್ರೀರೆಡ್ಡಿ ತನ್ನದೊಂದು ಯೂಟ್ಯೂಬ್ ಚಾನೆಲ್ ಅನ್ನು ತೆರೆದಿದ್ದಳು. ಅದರಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ವಿಡಿಯೋ ಮಾಡುತ್ತಿದ್ದರು.
ಯೂಟ್ಯೂಬ್ ಚಾನೆಲ್ ಆರಂಭಿಸಿದ ಬಳಿಕ ರಾಜಕೀಯದ ಕಡೆ ಒಲವು ತೋರಿದ್ದರು. ಅದರಲ್ಲೂ ವೈಸಿಪಿ ನಾಯಕ ವೈಎಸ್ ಜಗನ್ ದೊಡ್ಡ ಅಭಿಮಾನಿಯಾಗಿದ್ದ ಶ್ರೀ ರೆಡ್ಡಿ ಅವರನ್ನು ಬೆಂಬಲಿಸಿ ವಿಡಿಯೋ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವೈಸಿಪಿ ಪಕ್ಷದ ಪರವಾಗಿ ಹೆಚ್ಚು ವಿಡಿಯೋಗಳನ್ನು ಮಾಡಿ ಸುದ್ದಿಯಲ್ಲಿ ಇದ್ದರು.
ಹಾಗೇ ಆಂಧ್ರ ಪ್ರದೇಶದ ಚುನಾವಣೆಗೂ ಮುನ್ನ ವೈಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಟಾರ್ಗೆಟ್ ಮಾಡಿದವರನ್ನು ಬಿಡಬೇಡಿ ಎಂದು ಜಗನ್‌ಗೆ ಮನವಿ ಮಾಡಿ ವಿಡಿಯೋ ಮಾಡಿದ್ದರು. ಮತ್ತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಶ್ರೀರೆಡ್ಡಿ ನಂಬಿದ್ದರು. ಆದರೆ, ಪರಿಸ್ಥಿತಿ ಬದಲಾಗಿತ್ತು. ಜಗನ್ ಮೋಹನ್ ರೆಡ್ಡಿ ಚುನಾವಣೆಯಲ್ಲಿ ಸೋತಿದ್ದರು. ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾದರೆ, ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿದ್ದರು.
ಅಂದು ಶ್ರೀರೆಡ್ಡಿ ಮಾಡಿ ಕಾಮೆಂಟ್‌ಗಳೇ ಇಂದು ಆಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಶ್ರೀರೆಡ್ಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತೆಲುಗುದೇಶಂ ಪಕ್ಷದ ಮುಖಂಡರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ರೀರೆಡ್ಡಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಾವು ಮಾನಸಿಕವಾಗಿ ನೊಂದಿದ್ದು, ಭದ್ರಕಾಳಿಯೇ ನನ್ನನ್ನು ಕಾಪಾಡಬೇಕು ಎಂದು ಹೇಳಿಕೊಂಡಿದ್ದಾರೆ. ನಾನು ಆತ್ಮಹತ್ಯೆಗೆ ಯೋಚಿಸುತ್ತಿದ್ದೇನೆ. ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ. ಈಗ ಹೇಳುತ್ತಿರುವ ಮಾತುಗಳು ಸಿಲ್ಲಿ ಎನಿಸಬಹುದು. ಆದರೆ, ನಾನು ಸಾಯಲು ಬಯಸುತ್ತೇನೆ ಎಂದು ಶ್ರೀರೆಡ್ಡಿ ಬರೆದುಕೊಂಡಿದ್ದಾರೆ. ಸದ್ಯ ಶ್ರೀ ರೆಡ್ಡಿಯ ಪೋಸ್ಟ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.


Click it and Unblock the Notifications











