ಮೊಮ್ಮಗ ಬೇಕು ಹೇಳಿಕೆ; "ಚಿರಂಜೀವಿ ಬಗ್ಗೆ ಗೊತ್ತಿಲ್ಲದಿದ್ದರೆ ಬಾಯ್ ಮುಚ್ಕೊಂಡು ಸುಮ್ಮನಿರಿ"-ಸೊಸೆ ಲಾವಣ್ಯ ತ್ರಿಪಾಠಿ

ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಪುತ್ರ ರಾಮ್ ಚರಣ್ ಹಾಗೂ ಸೊಸೆ ಉಪಾಸನಾ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ತಾತ ಆಗಿರೋ ಚಿರಂಜೀವಿ ಕೂಡ ಫುಲ್ ಖುಷಿಯಾಗಿದ್ದಾರೆ. ಎರಡನೇ ಬಾರಿ ಅಜ್ಜನಾದ ಸಂಭ್ರಮದಲ್ಲಿ ಇದ್ದಾರೆ. ಕೊನೆಗೂ ಮೊಮ್ಮಗ ಬೇಕೆಂಬ ಆಸೆ ಈಡೇರಿದೆ.

ಗ್ಲೋಬಲ್ ಸ್ಟಾರ್ ರಾಮ್ ಚರಣ್ ಹಾಗೂ ಉಪಾಸನಾ ಮೊದಲು ಹೆಣ್ಣು ಮಗು ಕ್ಲಿಂಕಾರಾಗೆ ಜನ್ಮ ನೀಡಿದ್ದರು. ಆ ಬಳಿಕ ಮೆಗಾಸ್ಟಾರ್ ಚಿರಂಜೀವಿ ಹಲವು ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಆ ವೇಳೆ ಚಿರಂಜೀವಿ ಹಲವು ಬಾರಿ ಮೊಮ್ಮಗನ ಬಗ್ಗೆ ಆಸೆಯನ್ನು ವ್ಯಕ್ತಪಡಿಸಿದ್ದರು. ಚಿರಂಜೀವಿ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮೆಗಾಸ್ಟಾರ್ ವಿರುದ್ಧ ಕಿಡಿಕಾರಿದ್ದರು.

Mega Family daughter in law and Varun Tej Wife Lavanya Tripathi slams Chiranjeevi heaters

ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬಕ್ಕೆ ಗಂಡು ಮಗು ಬೇಕು ಎಂದು ಬಯಸಿದ್ದಕ್ಕೆ ಸೋಶಿಯಲ್ ಮೀಡಿಯಾದಿಂದ ಹಿಡಿದು ಯೂಟ್ಯೂಬರ್‌ಗಳು ಕಿಡಿಕಾರಿದ್ದರು. ಚಿರಂಜೀವಿಗೆ ಗಂಡುಮಗುವಿನ ಬಗ್ಗೆ ಇಷ್ಟೊಂದು ಆಸಕ್ತಿ ಯಾಕೆ? ಕೇವಲ ಗಂಡು ಮಗು ಮಾತ್ರ ಉತ್ತರಾಧಿಕಾರಿಯಾಗಬೇಕೆ? ಚಿರಂಜೀವಿಗೆ ಹೆಣ್ಣು ಮಕ್ಕಳು ಬೇಡವೇ? ಎಂದು ಪ್ರಶ್ನೆ ಮಾಡಿದ್ದರು. ಯೂಟ್ಯೂಬರ್‌ಗಳಂತೂ ಚಿರಂಜೀವಿಯನ್ನು ಇನ್ನಿಲ್ಲಂದೆ ಟೀಕೆ ಮಾಡಿದ್ದರು. ಅದಕ್ಕೀಗ ಮೆಗಾ ಫ್ಯಾಮಿಲಿ ಸೊಸೆ, ನಟ ವರಣ್ ತೇಜ್ ಪತ್ನಿ ಲಾವಣ್ಯಾ ತ್ರಿಪಾಠಿ ತಿರುಗೇಟು ಕೊಟ್ಟಿದ್ದಾರೆ.

ಅಂದು ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬಕ್ಕೆ ಗಂಡು ಮಗು ಬೇಕು ಎಂದಿದ್ದರು. ಮನೆಯಲ್ಲಿ ಎಲ್ಲಾ ಕಡೆಗೂ ಹೆಣ್ಣು ಮಕ್ಕಳು ಕಾಣಿಸುತ್ತಾರೆ. ಹೀಗಾಗಿ ಒಂದು ಗಂಡು ಮಗು ಬೇಕು ಎಂದು ಹೇಳಿದ್ದರೇ ವಿನ: ಗಂಡು ಮಗುವೇ ಮೆಗಾ ಕುಟುಂಬದ ಉತ್ತರಾಧಿಕಾರಿ ಎಂದು ಹೇಳಿರಲಿಲ್ಲ. ಹೀಗಿದ್ದರೂ, ಚಿರಂಜೀವಿ ಮೊಮ್ಮಗನ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಕೆಲ ನೆಟ್ಟಿಗರು ರೊಚ್ಚಿಗೆದ್ದಿದ್ದರು.

ಮೆಗಾ ಸ್ಟಾರ್ ಚಿರಂಜೀವಿ ಬಗ್ಗೆ ಇಂತಹ ಟೀಕೆಗಳನ್ನು ಮಾಡಿದ್ದಕ್ಕೆ ಮೆಗಾ ಕುಟುಂಬದ ಸೊಸೆ ಹಾಗೂ ನಟ ವರುಣ್ ತೇಜ್ ಪತ್ನಿ ಲಾವಣ್ಯ ತ್ರಿಪಾಠಿ ಖಂಡಿಸಿದ್ದಾರೆ. ತೆಲುಗಿನ ಜನಪ್ರಿಯ ವಿಮರ್ಶಕ ಹರಿ ಚರಣ್ ಪುಡಿಪೇಡಿ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಮೆಗಾ ಸ್ಟಾರ್ ಚಿರಂಜೀವಿ ಹೇಳಿಕೆಗಳನ್ನು ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದರು ಎಂದು ಹರಿ ಚರಣ್ ಟ್ವೀಟ್ ಉಲ್ಲೇಖಿಸಿ, ಲಾವಣ್ಯ ಅಸಮಾಧಾನ ಹೊರ ಹಾಕಿದ್ದಾರೆ.

ರಾಮ್ ಚರಣ್‌ಗೆ ಅವಳಿ ಮಕ್ಕಳು ಜನಿಸಿದ ಬೆನ್ನಲ್ಲೇ ಲಾವಣ್ಯಾ ತ್ರಿಪಾಠಿ ತಮ್ಮ ಎಕ್ಸ್ ಖಾತೆಯಲ್ಲಿ ಹೀಗಂದಿದ್ದಾರೆ, "ಇಂತಹ ಸಂತೋಷದ ಸಮಯದಲ್ಲಿ ಬೇಡದ ಕೆಟ್ಟ ಟ್ವೀಟ್‌ಗಳನ್ನು ನೋಡುತ್ತೇನೆಂದು ನಾನು ಅಂದುಕೊಂಡಿರಲಿಲ್ಲ. ಚಿರಂಜೀವಿಯವರು ನಮ್ಮ ಕುಟುಂಬದ ಮಹಿಳೆಯರನ್ನು ಅದರಲ್ಲೂ ಮುಖ್ಯವಾಗಿ ಮೊಮ್ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆ ಅನ್ನೋದು ಯಾರಿಗೂ ಗೊತ್ತಿಲ್ಲ" ಎಂದು ನಟಿ ಲಾವಣ್ಯ ತ್ರಿಪಾಠಿ ಬರೆದು ಪೋಸ್ಟ್ ಮಾಡಿದ್ದಾರೆ.

ಹಾಗೇ ಚಿರಂಜೀವಿ ಬಗ್ಗೆ ನಿಮಗೆ ಏನೂ ಗೊತ್ತಿಲ್ಲ. ಹೀಗಾಗಿ ಅವರ ಬಗ್ಗೆ ಟೀಕೆಗಳನ್ನು ಕೊಡಬೇಡಿ ಎಂದಿದ್ದಾರೆ. "ಚಿರಂಜೀವಿ ಅವರ ಬಗ್ಗೆ ತಿಳಿಯದೆ ಹೇಳಿಕೆಗಳನ್ನು ನೀಡಬೇಡಿ" ಎಂದು ಲಾವಣ್ಯ ದೃಢವಾಗಿ ಹೇಳಿದ್ದಾರೆ. ಹಾಗೇ "ಅವರ ಬಗ್ಗೆ ಗೊತ್ತಿಲ್ಲದಿದ್ದರೆ ಸುಮ್ಮನಿರಿ" ಎಂಬ ಲಾವಣ್ಯ ತ್ರಿಪಾಠಿ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಲಾವಣ್ಯ ತ್ರಿಪಾಠಿ ಕೊಟ್ಟಿರುವ ಈ ತಿರುಗೇಟನ್ನು ಮೆಗಾ ಅಭಿಮಾನಿಗಳು ಸ್ವಾಗತಿಸಿದ್ದಾರೆ. ಅಭಿಮಾನಿಗಳು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಲಾವಣ್ಯಾ ತ್ರಿಪಾಠಿ ಟ್ವೀಟ್ ಮೆಗಾ ಕುಟುಂಬಕ್ಕೂ ನೆಮ್ಮದಿ ಕೊಟ್ಟಿದೆ.

More from Filmibeat

English summary
Mega Family daughter in law and Varun Tej Wife Lavanya Tripathi slams Chiranjeevi heaters;
Read more about: chiranjeevi movies controversy
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X