ಮೆಗಾಸ್ಟಾರ್ ಚಿರಂಜೀವಿ ಜೊತೆ ನಗ್ಮಾ ಜೋರು ಜಗಳ; ಸೆಟ್ಟಿನಿಂದ ಹೊರಹೋಗುವಂತಹದ್ದೇನಾಯ್ತು?

ಮೆಗಾಸ್ಟಾರ್ ಚಿರಂಜೀವಿ ಯಶಸ್ಸಿನ ಉತ್ತುಂಗದಲ್ಲಿ ಇದ್ದ ಕಾಲವದು. ಒಂದರ ಹಿಂದೊಂದು ಸಿನಿಮಾಗಳಲ್ಲಿ ಬಿಡುವಿಲ್ಲದೆ ಚಿರಂಜೀವಿ ನಟಿಸುತ್ತಿದ್ದರು. ಈ ವೇಳೆ 'ರಿಕ್ಷಾವಾಡು' ಅನ್ನುವ ಸಿನಿಮಾ ಕೂಡ ಸೆಟ್ಟೇರಿತ್ತು. ಅದಕ್ಕೆ ನಾಯಕಿ ಬೇರೆ ಯಾರೋ ಆಗಬೇಕಿತ್ತು. ಕೊನೆಯಲ್ಲಿ ನಗ್ಮಾ ಆಯ್ಕೆಯಾಗಿದ್ದರು. ಆದರೆ, ಸಿನಿಮಾ ಶುರುವಾಗಿದ್ದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ಕಿತ್ತಾಟ ಶುರುವಾಗಿತ್ತು.

ಒಂದು ಸಿನಿಮಾ ಶೂಟಿಂಗ್ ಅಂದ್ಮೇಲೆ ಕ್ರಿಯೇಟಿವ್ ಡಿಫ್ರೆನ್ಸ್ ಬಂದೇ ಬರುತ್ತೆ. ಕೆಲವೊಮ್ಮೆ ಯಾವ್ಯಾವುದೋ ಕಾರಣಕ್ಕೆ ಹೀರೊ ಹಾಗೂ ಹೀರೊಯಿನ್ ನಡುವೆ ಕಿತ್ತಾಟ ಶುರುವಾಗಿಬಿಡುತ್ತೆ. ಹಾಗೇ 'ರಿಕ್ಷಾವಾಡು' ಸಿನಿಮಾದಲ್ಲಿ ಚಿರಂಜೀವಿ ಹಾಗೂ ನಗ್ಮಾ ಜೋರಾಗಿ ಕಿತ್ತಾಡಿಕೊಂಡಿದ್ದರಂತೆ. ಬಳಿಕ ನಟಿ ನಗ್ಮಾ ಸೆಟ್ಟಿನಿಂದ ಹೊರಟೇ ಹೋಗಿದ್ದರು. ಹೊರ ಹೋಗುವಾಗ ಸೆಟ್‌ನಲ್ಲಿ ಇರುವವರಿಗೆ ಕಪಾಳಮೋಕ್ಷ ಕೂಡ ಮಾಡಿದ್ದರಂತೆ.

Chiranjeevi and Nagma clash in Rikshavodu

ಇನ್ನೇ ಸಿನಿಮಾ ನಿಂತೇ ಹೋಯ್ತು ಅನ್ನುವಾಗಲೇ ಮೆಗಾಸ್ಟಾರ್ ಚಿರಂಜೀವಿ ಅದೇನೋ ಮ್ಯಾಜಿಕ್ ಮಾಡಿದ್ದರು. ಕೋಪ ಮಾಡಿಕೊಂಡು ಹೋಗಿದ್ದ ನಗ್ಮಾ, ನಗು ನಗುತ್ತಲೇ ಸೆಟ್ಟಿಗೆ ಬಂದಿದ್ದರು. ಮತ್ತೆ ಚಿರಂಜೀವಿ ಜೊತೆ ಹೆಜ್ಜೆ ಹಾಕಿದ್ದರು. ಅಷ್ಟಕ್ಕೂ ಸೆಟ್ಟಿನಲ್ಲಿ ಅಂತಹದ್ದೇನು ನಡೀತು? ಅನ್ನೋದನ್ನು ತಿಳಿಯಲು ಮುಂದೆ ಓದಿ.

90ರ ದಶಕದಲ್ಲಿ ನಗ್ಮಾ ಸೌಂದರ್ಯಕ್ಕೆ ತೆಲುಗು ಮಂದಿ ಫಿದಾ ಆಗಿದ್ದರು. ಅದರಲ್ಲೂ ನಗ್ಮಾ ಡ್ಯಾನ್ಸ್‌ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಇನ್ನೊಂದು ಕಡೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಗ್ಮಾ ಇಬ್ಬರ ಕಾಂಬಿನೇಷನ್ ಕೂಡ ಹಾಗೇ ಮೋಡಿ ಮಾಡಿತ್ತು. ಚಿರಂಜೀವಿ ಹಾಕುವ ಸ್ಟೆಪ್ಸ್‌ಗೆ ನಗ್ಮಾ ಮ್ಯಾಚ್ ಮಾಡಿ ಹೆಜ್ಜೆ ಹಾಕುತ್ತಿದ್ದರು. ಈ ಕಾರಣಕ್ಕೆ ಈ ಜೋಡಿ ತೆಲುಗು ಮಂದಿಯ ಫೇವರಿಟ್ ಆಗಿತ್ತು. ಇವರ ಕಾಂಬಿನೇಷನ್‌ನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳು ಬಂದಿವೆ.

1995ರಲ್ಲಿ ಚಿರಂಜೀವಿ ನಟಿಸಿದ 'ರಿಕ್ಷಾವಾಡು' ಸಿನಿಮಾದಲ್ಲಿ ನಗ್ಮಾ ಪ್ರಮುಖ ನಟಿಯಾಗಿದ್ದರು. ಇದೇ ಸಿನಿಮಾದಲ್ಲಿ ಮತ್ತೊಬ್ಬ ನಟಿ ಕೂಡ ಇದ್ದರು. ಅವರೇ ಸೌಂದರ್ಯಾ. ಈ ಸಿನಿಮಾ ಸೌಂದರ್ಯಾ ಎರಡನೇ ನಾಯಕಿ. 'ರಿಕ್ಷಾವಾಡು' ಸಿನಿಮಾದಲ್ಲಿ ರಾಜಕೀಯ ನಾಯಕನ ಮಗಳಾಗಿ ನಗ್ಮಾ ನಟಿಸಿದ್ದರು. ಅಹಂಕಾರದಿಂದ ತುಂಬಿದ್ದ ಪಾತ್ರವದು. ಇದೇ ಗುಂಗಿನಲ್ಲಿ ಚಿರಂಜೀವಿ ಜೊತೆ ಕಿತ್ತಾಡಿಕೊಂಡಿದ್ದರು. ಅಷ್ಟೇ ಅಲ್ಲದೆ, ಸಿನಿಮಾ ಸೆಟ್ಟಿನಿಂದ ಹೊರಗೆ ಹೋಗಿದ್ದರು.

Chiranjeevi and Nagma clash in Rikshavodu

'ರಿಕ್ಷಾವಾಡು' ಸಿನಿಮಾದ ಹಾಡಿನ ಚಿತ್ರೀಕರಣ ನಡೆಯುತ್ತಿದ್ದಾಗ, ರಾಮನಾಯ್ಡು ಸ್ಟುಡಿಯೋದಲ್ಲಿ ಇಬ್ಬರ ನಡುವೆ ಹಾಡಿನ ಚಿತ್ರೀಕರಣ ನಡೆಯುತ್ತಿತ್ತು. ಆಗ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಬಳಿಕ ಸೆಟ್ಟಿನಿಂದ ಹೊರ ಹೋಗುವಾಗ ಸೆಟ್ಟಿನಲ್ಲಿದ್ದ ಕೆಲವರಿಗೆ ಕಪಾಳಮೋಕ್ಷ ಮಾಡಿ ಅಲ್ಲಿಂದ ಹೊರಟು ಹೋಗಿದ್ದರಂತೆ. ಇಷ್ಟೆಲ್ಲ ಆದರೂ, ಚಿರಂಜೀವಿ ಅದೇನೋ ಮೋಡಿ ಮಾಡಿದ್ದರು. ನಗುನಗುತ್ತಲೇ ಶೂಟಿಂಗ್‌ಗೆ ಬಂದಿದ್ದರು. ಆಗ ಸೆಟ್ಟಿನಲ್ಲಿ ಇದ್ದವರಿಗೆ ಆಶ್ಚರ್ಯ ಆಗಿತ್ತು. ಈಗ ಟಾಲಿವುಡ್‌ನಲ್ಲಿ ಮತ್ತೆ ಈ ಸುದ್ದಿ ವೈರಲ್ ಆಗುತ್ತಿದೆ.

ಸದ್ಯ ನಗ್ಮಾ ಸಿನಿಮಾದಿಂದ ದೂರ ಉಳಿದಿದ್ದಾರೆ. ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗಿರುವ ನಗ್ಮಾ, ಈ ಕ್ಷೇತ್ರದಲ್ಲಿಯೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಆದರೆ, ನಗ್ಮಾ ಇನ್ನೂ ಮದುವೆ ಆಗಿಲ್ಲ. ಅದಕ್ಕೆ ಕಾರಣವೇನು? ಅನ್ನೋದು ಇನ್ನೂ ಗೊತ್ತಾಗಿಲ್ಲ. ಇತ್ತ ಚಿರಂಜೀವಿ ವಯಸ್ಸು ಅರವತ್ತು ದಾಟಿದರೂ ಯುವಕನಂತೆ ಹೆಜ್ಜೆ ಹಾಕುತ್ತಿದ್ದಾರೆ. ಹೊಸ ಸಿನಿಮಾ 'ವಿಶ್ವಂಭರ'ನಲ್ಲಿ ನಟಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X