ಪ್ರೈವೆಟ್ ಜೆಟ್, ಐಷಾರಾಮಿ ಬಂಗಲೆ, ದುಬಾರಿ ಕಾರು, ಫಾರ್ಮ್ ಹೌಸ್: ಜಿರಂಜೀವಿ ಬಳಿ ಇರುವ ಆಸ್ತಿ ಎಷ್ಟು?
ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ನಟ. ಚಿರಂಜೀವಿ ಸಿನಿಮಾ ರಿಲೀಸ್ ಆಗುತ್ತಿದೆ ಅಂದರೆ, ಬಾಕ್ಸಾಫೀಸ್‌ನಲ್ಲಿ ಹೊಸ ಸಂಚಲನವೇ ಸೃಷ್ಟಿಯಾಗುತ್ತೆ. ಈ ನಟ ಇಂದು (ಆಗಸ್ಟ್ 22) 69ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಯಸ್ಸು 69 ಆಗಿದ್ದರೂ, ನಟ ಚಾರ್ಮ್, ಖದರ್ ಮಾತ್ರ ಕಮ್ಮಿಯಾಗಿಲ್ಲ.
ಒಬ್ಬ ನಟನಾಗಿ, ನಿರ್ಮಾಪಕನಾಗಿ ಸುಮಾರು ನಾಲ್ಕು ದಶಕಗಳಿಂದ ತೆಲುಗು ಚಿತ್ರರಂಗದಲ್ಲಿ ಸಿನಿಪ್ರಿಯರನ್ನು ರಂಜಿಸುತ್ತಿದ್ದಾರೆ. ಟಾಲಿವುಡ್‌ನ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರು. ಇಷ್ಟೇ ಚಿರಂಜೀವಿ ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತರ ನಟ ಕೂಡ ಹೌದು.

ದಕ್ಷಿಣ ಭಾರತದ ನಟರಾದ ರಜನಿಕಾಂತ್, ಕಮಲ್ ಹಾಸನ್, ಮೋಹನ್‌ಲಾಲ್, ಮಮ್ಮುಟ್ಟಿಯಂತ ದಿಗ್ಗಜರಂತೆ ಚಿರಂಜೀವಿ ಗಳಿಕೆಯಲ್ಲಿ ಮುಂದಿದ್ದಾರೆ. ಬರ್ತ್‌ಡೇ ಸಂಭ್ರಮದಲ್ಲಿರುವ ಮೆಗಾಸ್ಟಾರ್ ಚಿರಂಜೀವಿಯ ಬಳಿ ಇರುವ ಒಟ್ಟು ಆಸ್ತಿ ಎಷ್ಟು ಗೊತ್ತಾ? ಚಿರು ಐಷಾರಾಮಿ ಜೀವನ ಹೇಗಿದೆ? ಈ ನಟನ ಬಳಿ ಇರುವ ಐಷಾರಾಮಿ ಕಾರುಗಳ ಯಾವುದು? ಎಲ್ಲೆಲ್ಲಿ ಆಸ್ತಿಯನ್ನು ಹೊಂದಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಹೈದರಾಬಾದ್ ಜುಬಿಲಿ ಹಿಲ್ಸ್‌ನಲ್ಲಿ ಬಂಗಲೆ
ಟಾಲಿವುಡ್ ಸೆಲೆಬ್ರೆಟಿಗಳ ತಾಣ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿಯ ಭವ್ಯ ಬಂಗಲೆಯಿದೆ. ಹೈದರಾಬಾದ್‌ನ ದುಬಾರಿ ಏರಿಯಾಗಳಲ್ಲಿ ಜುಬಿಲಿ ಹಿಲ್ಸ್ ಕೂಡ ಒಂದು. ಇಲ್ಲಿ ಭವ್ಯ ಬಂಗಲೆಯನ್ನು ಹೊಂದಿದ್ದಾರೆ. ಪತ್ನಿ, ಮಕ್ಕಳು ಹಾಗೂ ಅಮ್ಮನೊಂದಿಗೆ ಇದೇ ಬಂಗಲೆಯಲ್ಲಿಯೇ ವಾಸವಿದ್ದಾರೆ. 2022ರಲ್ಲಿ ಇದರ ಬೆಲೆ 28 ಕೋಟಿ ರೂಪಾಯಿ ಎಂದು ಜಿಕ್ಯೂ ವರದಿ ಮಾಡಿತ್ತು.

ಬೆಂಗಳೂರಿನಲ್ಲಿ ಫಾರ್ಮ್ ಹೌಸ್
ಮೆಗಾಸ್ಟಾರ್ ಚಿರಂಜೀವಿ ಕೇವಲ ಹೈದರಾಬಾದ್‌ನಲ್ಲಿ ಅಷ್ಟೇ ಅಲ್ಲ. ಬೆಂಗಳೂರಿನಲ್ಲೂ ಫಾರ್ಮ್ ಹೌಸ್ ಹೊಂದಿದ್ದಾರೆ. ಬೆಂಗಳೂರಿನ ಸಮೀಪವಿರುವ ದೇವನಹಳ್ಳಿ ಸಮೀಪ ಹಲವು ವರ್ಷಗಳ ಹಿಂದೆ ಫಾರ್ಮ್ ಹೌಸ್ ಅನ್ನು ಖರೀದಿ ಮಾಡಿದ್ದು, ಇಲ್ಲಿ ಹಬ್ಬಗಳನ್ನು ಸೆಲೆಬ್ರೆಟ್ ಮಾಡುತ್ತಾರೆ. ಆಗಾಗ ಇಡೀ ಕುಟುಂಬ ಸೇರಿ ಇಲ್ಲಿಯೇ ಸಂಭ್ರಮಿಸುತ್ತೆ.
ದುಬಾರಿ ಕಾರುಗಳು- ಅವುಗಳ ಬೆಲೆ
ಮೆಗಾಸ್ಟಾರ್ ಚಿರಂಜೀವಿ ಬಳಿ ದುಬಾರಿ ಕಾರುಗಳು ಇವೆ. ಬಾಲಿವುಡ್ ಶಾದೀಸ್ ಈ ಬಗ್ಗೆ ವರದಿ ಮಾಡಿತ್ತು. 9 ಕೋಟಿ ರೂಪಾಯಿ ಮೊತ್ತದ ರಾಲ್ಸ್ ರಾಯ್ಸ್ ಫಾಂಟಮ್ ಕಾರು ಇದೆ. 1.2 ಕೋಟಿ ರೂಪಾಯಿ ವೆಚ್ಚದ ರೇಂಜ್ ರೋವರ್, 90 ಲಕ್ಷ ರೂಪಾಯಿಯ ಟೊಯೋಟಾ ಲಾಂಡ್ ಕ್ಯೂಸರ್, 2.5 ಕೋಟಿ ರೂಪಾಯಿ ವೆಚ್ಚದ ಮರ್ಸಿಡೀಸ್ ಬೆನ್ಜ್ ಎಎಂಜಿ ಕಾರು ಇದೆ. ಇಷ್ಟೇ ಅಲ್ಲದೆ 190 ಕೋಟಿ ರೂಪಾಯಿ ವೆಚ್ಚದ ಪ್ರೈವೆಟ್ ಜೆಟ್ ಕೂಡ ಇದೆ ಎನ್ನಲಾಗಿದೆ.
ಚಿರಂಜೀವಿಯ ಒಟ್ಟು ಆಸ್ತಿ ಎಷ್ಟು?
ಚಿರಂಜೀವಿ ಒಂದು ಸಿನಿಮಾಗೆ 63 ರಿಂದ 65 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಮೆಗಾಸ್ಟಾರ್ ಚಿರಂಜೀವಿ ಕಳೆದ ನಾಲ್ಕು ದಶಕಗಳಿಂದ ಸಿನಿಮಾಗಳಿಂದ, ಜಾಹೀರಾತುಗಳಿಂದ ಹಣವನ್ನು ಗಳಿಕೆ ಮಾಡಿದ್ದಾರೆ. ಹಾಗೇ ಹಲವು ಕಡೆಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ. ಈಗಾಗಲೇ ವರದಿ ಮಾಡಿದಂತೆ 2022ರಲ್ಲಿ ಮೆಗಾಸ್ಟಾರ್ ಚಿರಂಜೀವಿ ಬಳಿ ಇರುವ ಒಟ್ಟು ಆಸ್ತಿ 1650 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಹೀಗಾಗಿ ಮೆಗಾಸ್ಟಾರ್ ಟಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರು.


Click it and Unblock the Notifications











