twitter
    For Quick Alerts
    ALLOW NOTIFICATIONS  
    For Daily Alerts

    ಹಾಡುಗಳಿಲ್ಲದ ಈ ಸಿನಿಮಾವನ್ನು ಚಿರಂಜೀವಿ ಒಪ್ಪಿದ್ದೇಕೆ? ಗಾಡ್ ಫಾದರ್ ಹೇಳಿದ್ದೇನು?

    |

    ಆಚಾರ್ಯ'ದಂತಹ ಮೆಗಾ ಸಿನಿಮಾ ಟಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ಸಿನಿಮಾ ಮೆಗಾಸ್ಟಾರ್‌ಗೆ ದೊಡ್ಡ ಸೆಟ್ ಬ್ಯಾಕ್ ಆಗಿತ್ತು. ಈ ಸೋಲಿನ ಎದ್ದು ನಿಲ್ಲಲು ಚಿರಂಜೀವಿ ಮತ್ತೊಂದು ಸಿನಿಮಾ ಮೂಲಕ ಅಖಾಡಕ್ಕೆ ಇಳಿಯಲಿದ್ದಾರೆ. ಅದುವೇ 'ಗಾಡ್ ಫಾದರ್'.

    ಮೆಗಾಸ್ಟಾರ್ ಚಿರಂಜೀವಿ ನಟಿಸಿದ ಇದೇ 'ಗಾಡ್ ಫಾದರ್' ಸಿನಮಾ ಅಕ್ಟೋಬರ್ 5 ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತೆಲುಗು ಹಾಗೂ ಹಿಂದಿ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ.

    'ಗಾಡ್ ಫಾದರ್' ಎರಡು ಭಾಷೆಯಲ್ಲಿ ರಿಲೀಸ್

    ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ಅಖಾಡಕ್ಕಿಳಿದಿದ್ದಾರೆ. ಈ ಕಾರಣಕ್ಕೆ ಉತ್ತರ ಭಾರತದಲ್ಲೂ 'ಗಾಡ್ ಫಾದರ್' ಸಿನಿಮಾ ಕ್ರೇಜ್ಸ ಹೆಚ್ಚಾಗಿದೆ. ಹೀಗಾಗಿ ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು ಬಾಲಿವುಡ್ ಅಖಾಡಕ್ಕೆ ಇಳಿಯಲಿದೆ.

    Mega Star Chiranjeevi Revealed Why He Chooese God Father Movie

    'ಗಾಡ್‌ ಫಾದರ್' ಸಿನಿಮಾ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಸಂದರ್ಶನವನ್ನು ನೀಡಿದ್ದರು. ಈ ವೇಳೆ ಸಿನಿಮಾ ಬಗ್ಗೆ ಅವರಿಗಿರುವ ಕಾನ್ಫಿಡೆನ್ಸ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಅಲ್ಲದೆ ಈ ಸಿನಿಮಾವನ್ನು ಆಯ್ಕೆ ಮಾಡಿಕೊಂಡಿದ್ದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

    ಹಾಡುಗಳಿಲ್ಲದ ಸಿನಿಮಾವನ್ನು ಚಿರು ಒಪ್ಪಿದ್ದೇಕೆ?

    'ಗಾಡ್ ಫಾದರ್' ಮಲಯಾಳಂನ ಸೂಪರ್‌ ಹಿಟ್ ಸಿನಿಮಾ 'ಲೂಸಿಫರ್' ರಿಮೇಕ್. ಮೂಲ ಸಿನಿಮಾದಲ್ಲಿ ಹಾಡುಗಳಿಲ್ಲ. ಜೊತೆ ನಾಯಕಿನೂ ಇಲ್ಲ. ಆದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಆದರೆ, ತೆಲುಗಿನಲ್ಲಿ ಚಿರಂಜೀವಿ ಈ ಸಿನಿಮಾವನ್ನು ಮಾಡುವಾಗ ಹಾಡುಗಳಿಲ್ಲ. ನಾಯಕಿನೇ ಇಲ್ಲ ಅಂದರೆ, ಜನರು ಒಪ್ಪೋದಿಲ್ಲ. ಆದರೂ, ಈ ಸಿನಿಮಾವನ್ನು ಯಾಕೆ ಆಯ್ಕೆ ಮಾಡಿಕೊಂಡೆ ಅನ್ನೋದನ್ನು ಮೆಗಾಸ್ಟಾರ್ ರಿವೀಲ್ ಮಾಡಿದ್ದಾರೆ.

    " ಮೂಲ ಸಿನಿಮಾದಲ್ಲಿ ಹಾಡುಗಳಿಲ್ಲ. ನಾಯಕಿನೂ ಇಲ್ಲ. ಆದರೆ, ಗಾಡ್ ಫಾದರ್ ಸಿನಿಮಾದಲ್ಲಿ ಹಾಡು ಇದೆ. ನಾಯಕಿನೂ ಇದ್ದಾಳೆ. ಹೀಗಾಗಿ ಗಾಡ್ ಫಾದರ್ ಕೂಡ ಪ್ರೇಕ್ಷಕರಿಗೆ ತುಂಬಾನೇ ಇಷ್ಟ ಆಗಲಿದೆ" ಎಂದು ಮೆಗಾಸ್ಟಾರ್ ಚಿರಂಜೀವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

    Mega Star Chiranjeevi Revealed Why He Chooese God Father Movie

    ಇದೊಂದು ಕೌಟುಂಬಿಕ ಸಿನಿಮಾ

    'ಗಾಡ್ ಫಾದರ್' ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟ ಆಗಲಿದೆ. ರಾಜಕೀಯದ ಹಿನ್ನೆಲೆ ಇದ್ದರೂ, ಕೌಟುಂಬಿಕ ಸನ್ನಿವೇಶಗಳು ಕೂಡ ಇವೆ. ಈ ಸಿನಿಮಾದ ಹಿನ್ನೆಲೆ ಸಂಗೀತ ತುಂಬಾನೇ ಅದ್ಭುತವಾಗಿದೆ. ಕಥೆ ತುಂಬಾನೇ ಸ್ಟ್ರಾಂಗ್ ಆಗಿರೋದ್ರಿಂದ ಇದು ಪ್ರೇಕ್ಷಕರನ್ನು ಮೆಚ್ಚುಗೆಗೆ ಕಾರಣವಾಗಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

    ಥಮನ್ ನೀಡಿರುವ ಹಿನ್ನೆಲೆ ಸಂಗೀತದ ಬಗ್ಗೆ ಚಿರಂಜೀವಿ ಸಂತಸ ವ್ಯಕ್ತಪಡಿಸಿದ್ದಾರೆ. ಇವರ ಹಿನ್ನೆಲೆ ಸಂಗೀತವೇ ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ ಎಂದು ಹೇಳುವ ಮೂಲಕ ಮೆಗಾಸ್ಟಾರ್ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಅಂದ್ಹಾಗೆ 'ಗಾಡ್ ಫಾದರ್' ಸಿನಿಮಾವನ್ನು ನಿರ್ದೇಶಕ ಮೋಹನ್ ರಾಜಾ ನಿರ್ದೇಶಿಸಿದ್ದಾರೆ. ಸಲ್ಮಾನ್ ಖಾನ್ ಮೆಗಾಸ್ಟಾರ್ ಚಿರಂಜೀವಿ ಜೊತೆ ಕಾಣಿಸಿಕೊಳ್ಳಿದ್ದು, ಅವರ ದೃಶ್ಯಗಳು ಪ್ರೇಕ್ಷಕರಿಗೆ ಕಿಕ್ ಕೊಡಲಿವೆ.

    English summary
    Mega Star Chiranjeevi Revealed Why He Chooese God Father Movie, Know More.
    Monday, September 26, 2022, 21:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X