Chiranjeevi: 68 ವರ್ಷದ ಚಿರಂಜೀವಿ ವರ್ಕ್‌ಔಟ್‌ಗೆ ಬೆಚ್ಚಿಬಿದ್ದ ನೆಟ್ಟಿಗರು; ಮೆಗಾ ವಿಡಿಯೋ ವೈರಲ್
ಕೆಲವು ಸೂಪರ್‌ಸ್ಟಾರ್‌ಗಳಿಗೆ ವಯಸ್ಸೇ ಆಗುವುದಿಲ್ಲವೇನೋ ಅನ್ನುಷ್ಟು ಫಿಟ್ ಆಗಿ ಇರುತ್ತಾರೆ. ಅದರಲ್ಲೂ 60 ವರ್ಷ ದಾಟಿದ ಸ್ಟಾರ್‌ಗಳ ಫಿಟ್ನೆಸ್ ಬಗ್ಗೆ ಅಭಿಮಾನಿಗಳಿಗೆ ಸಹಜವಾಗಿ ಕುತೂಹಲವಿದೆ. ಇಂತಹವರಲ್ಲಿ ಮೆಗಾಸ್ಟಾರ್ ಚಿರಂಜೀವಿ ಕೂಡ ಒಬ್ಬರು. ಹೊಸ ಸಿನಿಮಾ ಒಪ್ಪಿಕೊಂಡರೆ ಫಿಟ್ ಆಗಿ ಸೆಟ್ಟಿಗೆ ಕಾಲಿಡುತ್ತಾರೆ.
ಮೆಗಾಸ್ಟಾರ್ ಚಿರಂಜೀವಿ ಈಗ ಹೊಸ ಸಿನಿಮಾಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. 'ವಿಶ್ವಂಭರ' ಅನ್ನುವ ಫ್ಯಾಂಟಸಿ ಸಿನಿಮಾದಲ್ಲಿ ಚಿರಂಜೀವಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಜಿಮ್‌ನಲ್ಲಿ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಿದ್ದಾರೆ. 68 ವರ್ಷದ ನಟನ ವರ್ಕ್‌ಔಟ್ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಸದ್ಯ ಅವರೇ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

ಸುಮಾರು ನಾಲ್ಕು ದಶಕಗಳಿಂದ ಮೆಗಾ ಸ್ಟಾರ್ ಚಿರಂಜೀವಿ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮೆಗಾಸ್ಟಾರ್ ಸಿನಿಮಾ ನೋಡುವುದಕ್ಕೆ ತೆಲುಗು ಮಂದಿಗೆ ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ, ರಾಜಕೀಯಕ್ಕೆ ಎಂಟ್ರಿ ಕೊಟ್ಟು ಮತ್ತೆ ಸಿನಿಮಾ ಹಿಂತಿರುಗಿದ ಬಳಿಕ ಕ್ರೇಜ್ ಕೊಂಚ ತಗ್ಗಿದ್ದರೂ, ಮೆಗಾ ಕಮ್‌ಬ್ಯಾಕ್‌ಗೆ ಎದುರು ಕಸರತ್ತು ಮಾಡುತ್ತಿದ್ದಾರೆ. ಇನ್ನೊಂದು ಕಡೆ ಮೊದಲಿನಿಂದಲೂ ಫಿಟ್ನೆಸ್ ಫ್ರೀಕ್ ಆಗಿರೋ ಚಿರಂಜೀವಿ ಡಯೆಟ್ ಪ್ಲ್ಯಾನ್ ಏನು? ಎಷ್ಟು ಗಂಟೆ ವರ್ಕ್‌ಔಟ್ ಮಾಡುತ್ತಾರೆ? ಫಿಟ್ನೆಸ್ ಸೀಕ್ರೆಟ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಸದ್ಯ 'ವಿಶ್ವಂಭರ' ಸಿನಿಮಾದಿಂದ ಮೆಗಾ ಸಕ್ಸಸ್ ನೋಡಲು ಚಿರಂಜೀವಿ ಕಷ್ಟ ಪಡುತ್ತಿದ್ದಾರೆ. ಅದಕ್ಕಾಗಿ ಗಂಟೆಗಟ್ಟಲೆ ಜಿಮ್‌ನಲ್ಲಿ ಬೆವರು ಸುರಿಸುತ್ತಿದ್ದಾರೆ. ಅವರ ವರ್ಕ್‌ಔಟ್ ವಿಡಿಯೋ ನೋಡಿ ಯುವಕರೇ ಗಾಬರಿ ಬಿದ್ದಿದ್ದಾರೆ. ಚಿರಂಜೀವಿಯ ದೈಹಿಕ ಹಾಗೂ ಮಾನಸಿಕ ಸ್ಥೈರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆಗಿದ್ರೆ, ಚಿರಂಜೀವಿ ವರ್ಕ್‌ಔಟ್, ಡಯೆಟ್ ಎಲ್ಲಾ ಹೇಗಿರುತ್ತೆ?
ಸಸ್ಯಾಹಾರ ಡಯೆಟ್
ಇತ್ತೀಚೆಗೆ ಸಸ್ಯಾಹಾರ ಡಯೆಟ್ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಾಗುತ್ತಿದೆ. ಹೆಚ್ಚು ಪೈಬರ್ ಹಾಗೂ ಕೊಬ್ಬಿನ ಅಂಶ ಕಡಿಮೆ ಇರುವುದರಿಂದ ಆರೋಗ್ಯಕ್ಕೆ ಉತ್ತಮ ಅನ್ನುವ ಅರಿವನ್ನು ಮೂಡಿಸಲಾಗುತ್ತಿದೆ. ಚಿರಂಜೀವಿ ಕೂಡ ಸಸ್ಯಾಹಾರ ಡಯೆಟ್ ಅನ್ನು ಫಾಲೋ ಮಾಡುತ್ತಾರೆ. ಮನೆಯಲ್ಲಿ ಮಾಡಿದ ಆಹಾರವನ್ನೇ ಹೆಚ್ಚಾಗಿ ಬಳಸುತ್ತಾರೆ. ಪ್ರೊಟೀನ್, ಸಲಾಡ್ ಹಾಗೂ ಸೂಪ್ ಅನ್ನು ಹೆಚ್ಚಾಗಿ ಬಳಸುತ್ತಾರೆಂದು ಹೆಲೋ ಇಂಡಿಯಾ ವರದಿ ಮಾಡಿದೆ.
ವರ್ಕ್‌ಔಟ್ ಮಿಸ್ ಮಾಡೋದಿಲ್ಲ
ಮೆಗಾಸ್ಟಾರ್ ಚಿರಂಜೀವಿ ಪ್ರತಿದಿನ ವರ್ಕ್‌ಔಟ್ ಮಾಡುತ್ತಾರೆ. ಡಯೆಟ್ ಜೊತೆಗೆ ಜಿಮ್‌ನಲ್ಲಿ ಕಸರತ್ತು ಮಾಡುವುದನ್ನು ಮರೆಯುವುದಿಲ್ಲ. 7 ಗಂಟೆಗೆ ಶೂಟಿಂಗ್ ಇದ್ದರೂ, ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು 6 ಗಂಟೆಯವರೆಗೂ ವರ್ಕ್‌ಔಟ್ ಮಾಡುತ್ತಾರೆ. ಆ ಬಳಿಕವೇ ಸಿನಿಮಾ ಸೆಟ್ಟಿಗೆ ಹೋಗುತ್ತಾರೆ. ಪ್ರತಿ ಬಾರಿ ಹೊಸ ಸಿನಿಮಾ ಒಪ್ಪಿಕೊಂಡಾಗಲೂ ಜಿಮ್‌ನಲ್ಲಿ ಫಿಟ್ ಆದ ಬಳಿಕ ಸೆಟ್ಟಿಗೆ ಹೋಗುತ್ತಾರೆ.
ಒತ್ತಡ ರಹಿತ ಜೀವನ
ಮೆಗಾಸ್ಟಾರ್ ಚಿರಂಜೀವಿ ಒತ್ತಡವನ್ನು ತೆಗೆದುಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಹೀಗಾಗಿ ಮಾನಸಿಕ ಆರೋಗ್ಯದ ಕಡೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮ ಮಾನಸಿಕ ಆರೋಗ್ಯ ಚೆನ್ನಾಗಿದ್ದರೆ, ದೈಹಿಕ ಆರೋಗ್ಯ ಕೂಡ ಅದ್ಭುತವಾಗಿರುತ್ತೆ ಅನ್ನೋದು ಅವರ ನಂಬಿಕೆ. ಹಾಗೇ ಜಿಮ್‌ನಲ್ಲಿ ದೇಹಕ್ಕೂ ಅಷ್ಟೇ ಕಸರತ್ತು ನೀಡುತ್ತಾರೆ. ಅದಕ್ಕೆ ಈಗ ರಿಲೀಸ್ ಮಾಡಿರುವ ವಿಡಿಯೋನೇ ಸಾಕ್ಷಿ.


Click it and Unblock the Notifications










