Chiranjeevi 70th Birthday: ಅಮಿತಾಬ್‌ ಬಚ್ಚನ್‌ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಮೆಗಾಸ್ಟಾರ್ ಬಗ್ಗೆ ನಿಮಗೆಷ್ಟು ಗೊತ್ತು?

ಟಾಲಿವುಡ್‌ನ ಜನಪ್ರಿಯ ನಟ ಮೆಗಾಸ್ಟಾರ್ ಚಿರಂಜೀವಿ ಇಂದು (ಆಗಸ್ಟ್ 22) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 70ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಟಾಲಿವುಡ್‌ ದಿಗ್ಗಜನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್‌ನಿಂದ ಹಿಡಿದು ತೆಲುಗು ಚಿತ್ರರಂಗದ ದಿಗ್ಗಜರಿಂದ ಶುಭಾಶಯಗಳ ಹರಿದುಬರುತ್ತಿದೆ. ಇದೇ ವೇಳೆ ಅವರ ಹೊಸ ಸಿನಿಮಾ 'ವಿಶ್ವಂಭರ'ದ ಗ್ಲಿಂಪ್ಸ್ ಅನ್ನು ರಿವೀಲ್ ಮಾಡಲಾಗಿದೆ.

70ನೇ ವಯಸ್ಸಿಗೆ ಕಾಲಿಟ್ಟಿದ್ದರು ಮೆಗಾಸ್ಟಾರ್ ಚಿರಂಜೀವಿಯಲ್ಲಿ ಇನ್ನೂ ಚಿರ ಯುವಕರಷ್ಟೇ ಉತ್ಸಾಹವಿದೆ. ಅದೇ ಜೋಷ್, ಅದೇ ಖದರ್ ಅನ್ನು ಉಳಿಸಿಕೊಂಡಿದ್ದಾರೆ. ಈ ವಯಸ್ಸಿನಲ್ಲೂ ಚಿರಂಜೀವಿ ಹೆಜ್ಜೆ ಹಾಕಿದರೆ, ಅಭಿಮಾನಿಗಳು ಥ್ರಿಲ್ ಆಗುತ್ತಾರೆ. ಮೆಗಾಸ್ಟಾರ್ ಫೈಟ್‌ಗೆ ಫಿದಾ ಆಗುತ್ತಾರೆ. ಇವರ ಸಿನಿಮಾಗಳನ್ನು ನೋಡುವುದಕ್ಕೆ ಪ್ರೇಕ್ಷಕರು ಮುಗಿಬೀಳುತ್ತಾರೆ.

Megastar Chiranjeevi 70th Birthday Rare amp amp Unknown Facts About Tollywood legend

ಮೆಗಾಸ್ಟಾರ್ ಚಿರಂಜೀವಿ ಭಾರತೀಯ ಚಿತ್ರರಂಗ ಕಂಡ ಅತಿ ದೊಡ್ಡ ಸ್ಟಾರ್‌ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇವರಿಗೆ ದೇಶ ಅಷ್ಟೇ ಅಲ್ಲ. ವಿದೇಶಗಳಲ್ಲಿಯೂ ಅಸಂಖ್ಯಾತ ಅಭಿಮಾನಿ ಬಳಗವಿದೆ. ಚಿತ್ರರಂಗದಲ್ಲಿ ದೊಡ್ಡ ಸಾಧನೆ ಮಾಡಿ ಜನಮಾನಸದಲ್ಲಿ ಉಳಿದುಕೊಂಡಿರುವ ಚಿರಂಜೀವಿ ವೃತ್ತಿಜೀವನಕ್ಕೆ ಸಂಬಂಧಿಸಿದ ಕೆಲವು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.

ಮುಂದೆ ಓದಿ

ಚಿರಂಜೀವಿ ನಟಿಸಬೇಕಿದ್ದ ಹಾಲಿವುಡ್ ಸಿನಿಮಾ ಯಾವುದು?
ಯಾವ ವರ್ಷದಲ್ಲಿ ಚಿರಂಜೀವಿ ಆಸ್ಕರ್‌ಗೆ ಆಹ್ವಾನ ನೀಡಿದ್ದರು?
ಇಂಗ್ಲಿಷ್-ರಷ್ಯನ್‌ಗೆ ಡಬ್ ಆದ ಸಿನಿಮಾಗಳು ಯಾವುವು?
₹10 ಕೋಟಿ ಸೇರಿದ ಮೊದಲ ತೆಲುಗು ಸಿನಿಮಾ ಯಾವುದು?

ಅಮಿತಾಬ್‌ಗಿಂತ ಹೆಚ್ಚು ಸಂಭಾವನೆ

90ರ ದಶಕದಲ್ಲಿ ಮೆಗಾಸ್ಟಾರ್ ಚಿರಂಜೀವಿ ಸಿಕ್ಕಾಪಟ್ಟೆ ಬೇಡಿಕೆಯಲ್ಲಿ ಇದ್ದರು. ಇವರ ಸಿನಿಮಾಗಳು ಒಂದರ ಹಿಂದೊಂದು ಸಿನಿಮಾಗಳು ಸೂಪರ್‌ ಹಿಟ್ ಆಗುತ್ತಿದ್ದವು. ಟಾಲಿವುಡ್‌ನಲ್ಲಿ ಚಿರಂಜೀವಿಯ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತೇ ಇತ್ತು. ಅದ್ಯಾವ ಮಟ್ಟಿಗೆ ಕ್ರೇಜ್ ಇತ್ತು ಎಂದರೆ, ಬಾಲಿವುಡ್‌ನ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುತ್ತಿದ್ದರು. ಆ ಮಟ್ಟಿಗೆ ಟಾಲಿವುಡ್‌ನಲ್ಲಿ ಬೇಡಿಕೆಯ ನಟನಾಗಿದ್ದರು.

ಕೋಟಿ ಸಂಭಾವನೆ ಪಡೆದ ಮೊದಲ ನಟ

ಮೆಗಾಸ್ಟಾರ್ ಚಿರಂಜೀವಿ 1 ಕೋಟಿ ರೂ.ಗೂ ಹೆಚ್ಚು ಸಂಭಾವನೆ ಪಡೆದ ಮೊದಲ ತೆಲುಗು ನಟ. ಇದು ಅವರ ಅಂದಿನ ಜನಪ್ರಿಯತೆಯನ್ನು ಹೇಳುತ್ತೆ. 1992ರಲ್ಲಿ ಕೆ.ವಿಶ್ವನಾಥ್ ನಿರ್ದೇಶಿಸಿದ 'ಆಪದ್ಭಾಂಧವುಡು' ಸಿನಿಮಾ ತೆರೆಕಂಡಿತ್ತು. ಈ ಸಿನಿಮಾಗಾಗಿ ಚಿರಂಜೀವಿ 1.25 ಕೋಟಿ ರೂ. ಸಂಭಾವನೆ ಪಡೆದಿದ್ದರು. ಆ ವೇಳೆ ತೆಲುಗು ನಟರೊಬ್ಬರು ಪಡೆದ ಅತಿ ಹೆಚ್ಚು ಸಂಭಾವನೆ ಇದಾಗಿತ್ತು. ಆ ಸಮಯದಲ್ಲಿ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಒಂದು ಸಿನಿಮಾಗೆ 1 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದರು. ಈ ವೇಳೆ ಚಿರಂಜೀವಿ ಅವರನ್ನು ಹಿಂದಿಕ್ಕಿದ್ದರು.

ಹಾಲಿವುಡ್ ಸಿನಿಮಾ ಮಿಸ್

90ರ ದಶಕದಲ್ಲಿ ಚಿರಂಜೀವಿ ಯಶಸ್ಸಿನ ಉತ್ತುಂಗದಲ್ಲಿ ಇದ್ದರು. ಈ ಸಮಯದಲ್ಲಿ ಅವರಿಗೆ ಹಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶವಿತ್ತು. 'ದಿ ರಿಟರ್ನ್ ಆಫ್ ದಿ ಥೀಫ್ ಆಫ್ ಬಾಗ್ದಾದ್' ಎಂಬ ಹಾಲಿವುಡ್ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ, 1999ರಲ್ಲಿ ಸಿನಿಮಾ ಕೆಲಸಗಳು ಶುರುವಾಗಿದ್ದರೂ, ಕೆಲವು ಕಾರಣಗಳಿಂದ ಸ್ಥಗಿತಗೊಂಡಿತ್ತು. ಈ ಹೀಗಾಗಿ ಹಾಲಿವುಡ್‌ನಲ್ಲಿ ನಟಿಸುವ ಅವಕಾಶವನ್ನು ಕಳೆದುಕೊಂಡರು.

Megastar Chiranjeevi 70th Birthday Rare amp amp Unknown Facts About Tollywood legend

ಆಸ್ಕರ್ ಸಮಾರಂಭಕ್ಕೆ ಆಹ್ವಾನ

ಮೆಗಾಸ್ಟಾರ್ ಚಿರಂಜೀವಿಗೆ ಆಸ್ಕರ್ ಪ್ರಶಸ್ತಿಗೆ ಆಹ್ವಾನ ನೀಡಲಾಗಿತ್ತು. 1987ರಲ್ಲಿ ಈ ಆಹ್ವಾನವನ್ನು ಸ್ವೀಕರಿಸಿದ ಮೊದಲ ದಕ್ಷಿಣ ಭಾರತದ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದು ಮೆಗಾಸ್ಟಾರ್‌ಗೆ ಸಿಕ್ಕಿದ ಅಪರೂಪದ ಆಹ್ವಾನವಾಗಿತ್ತು.

ಇಂಗ್ಲಿಷ್- ರಷ್ಯನ್‌ಗೆ ಸಿನಿಮಾ ಡಬ್

ತೆಲುಗು ನಿರ್ದೇಶಕ ಕೆ. ಮುರಳಿ ಮೋಹನ್ ರಾವ್ ಅವರ 'ಕೊಡಮ ಸಿಂಹಂ' ಸಿನಿಮಾದಲ್ಲಿ ಚಿರಂಜೀವಿ ನಟಿಸಿದ್ದರು. ಈ ಸಿನಿಮಾ 1990ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಇಂಗ್ಲಿಷ್ ಭಾಷೆಗೆ ಡಬ್ ಆಗಿತ್ತು. ಇದು ಇಂಗ್ಲಿಷ್‌ಗೆ 'ಹಂಟರ್ಸ್ ಆಫ್ ದಿ ಇಂಡಿಯನ್ ಟ್ರೆಷರ್' ಎಂಬ ಹೆಸರಿನಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಇದು ಮೊದಲ ದಕ್ಷಿಣ ಭಾರತದ ಸಿನಿಮಾ ಎನಿಸಿಕೊಂಡಿತ್ತು. ಇದರೊಂದಿಗೆ 'ಪಸಿವಾಡಿ ಪ್ರಾಣಂ' ಮತ್ತು 'ಸ್ವಯಂ ಕೃಷಿ' ಸಿನಿಮಾಗಳು ರಷ್ಯನ್ ಭಾಷೆಗೂ ಡಬ್ ಆಗಿದ್ದವು.

10 ಕೋಟಿ ಕ್ಲಬ್ ಸೇರಿದ ಮೊದಲ ತೆಲುಗು ಚಿತ್ರ

1992ರಲ್ಲಿ ಚಿರಂಜೀವಿ ನಟಿಸಿದ 'ಘರಾನಾ ಮೊಗುಡು' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರಿ ಯಶಸ್ಸು ಗಳಿಸಿತು. ಇದು ಗಲ್ಲಾಪೆಟ್ಟಿಗೆಯಲ್ಲಿ 10 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್‌ ಮಾಡಿದ ಮೊದಲ ತೆಲುಗು ಚಿತ್ರವಾಯಿತು.

More from Filmibeat

English summary
Celebrate Megastar Chiranjeevi’s 70th birthday with rare and unknown facts about his life, career, family, and political journey. Discover unseen moments of Tollywood’s biggest star.
Read more about: chiranjeevi birthday telugu actor
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X