ಅಣ್ಣ ಖೈದಿ, ತಮ್ಮ ಪೊಲೀಸ್: ಮೆಗಾ ಬ್ರದರ್ಸ್ ಫೋಟೊ ಸಖತ್ ವೈರಲ್
ತೆಲುಗು ಚಿತ್ರರಂಗದಲ್ಲಿ ಮೆಗಾ ಕುಟುಂಬಕ್ಕೆ ಸಖತ್ ಹವಾ. ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಹಲವು ಕುಡಿಗಳು ತೆಲುಗು ಚಿತ್ರರಂಗದಲ್ಲಿ ನಾಯಕ ನಟರಾಗಿ ಮೆರೆಯುತ್ತಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಇಂದಿಗೂ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್, ಅವರ ಸಹೋದರ ಪವನ್ ಕಲ್ಯಾಣ್ ಸಹ ದೊಡ್ಡ ಸ್ಟಾರ್. ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ್, ಸಾಯಿ ಧರಮ್ ತೇಜ್, ಅಲ್ಲು ಸಿರೀಶ್, ಪಂಜಾ ವೈಷ್ಣವ್ ತೇಜ್, ಚಿರಂಜೀವಿಯ ಮತ್ತೊಬ್ಬ ಸಹೋದರ ನಾಗೇಂದ್ರ ಬಾಬು ಎಲ್ಲರೂ ಚಿತ್ರರಂಗದಲ್ಲಿ ಮಿನುಗುತ್ತಿರುವವರೇ.
'ಭೀಮ್ಲಾ ನಾಯಕ್' ಬಿಡುಗಡೆಗೆ ಮುನ್ನಾ ಭಾವುಕರಾದ ಪವನ್ ಕಲ್ಯಾಣ್
ಈ ಹಿಂದೆ ಮೆಗಾಸ್ಟಾರ್ ಚಿರಂಜೀವಿ ಹಾಗೂ ಸಹೋದರ ಪವನ್ ಕಲ್ಯಾಣ್ ಕೆಲವು ಕೌಟುಂಬಿಕ ಕಾರಣಗಳಿಂದ ದೂರಾಗಿದ್ದರು. ಆದರೆ ನಂತರ ಇಬ್ಬರೂ ಮತ್ತೆ ಒಂದಾದರು. ಇದೀಗ ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಒಟ್ಟಿಗಿರುವ ಚಿತ್ರ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಚಿರಂಜೀವಿ, 'ಗಾಡ್ ಫಾದರ್' ಸಿನಿಮಾದ ಚಿತ್ರೀಕರಣಕ್ಕಾಗಿ ಖೈದಿಯ ವೇಷ ತೊಟ್ಟಿದ್ದಾರೆ. ಅದೇ ಪವನ್ ಕಲ್ಯಾಣ್ ಭೀಮ್ಲ ನಾಯಕ್ ಸಿನಿಮಾದ ಚಿತ್ರೀಕರಣಕ್ಕಾಗಿ ಪೊಲೀಸ್ ಅಧಿಕಾರಿಯ ವೇಷ ತೊಟ್ಟಿದ್ದಾರೆ. ಎರಡೂ ಸಿನಿಮಾಗಳ ಚಿತ್ರೀಕರಣ ಒಂದೇ ಫಿಲಂ ಸಿಟಿಯಲ್ಲಿ ನಡೆಯುತ್ತಿರುವ ವೇಳೆ ಈ ಚಿತ್ರವನ್ನು ಕ್ಲಿಕ್ಕಿಸಲಾಗಿದೆ. ಇವರಿಬ್ಬರ ಭೇಟಿಯ ವಿಡಿಯೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ವಿಡಿಯೋವನ್ನು ಚಿರಂಜೀವಿ ಪುತ್ರ ರಾಮ್ ಚರಣ್ ತೇಜ ಸೇರಿದಂತೆ ಹಲವರು ಹಂಚಿಕೊಂಡಿದ್ದಾರೆ.
ಚಿರಂಜೀವಿ ಹಾಗೂ ಪವನ್ ಕಲ್ಯಾಣ್‌ರ ಈ ಭೇಟಿ ಕೆಲವು ತಿಂಗಳು ಹಿಂದೆ ನಡೆದಿದ್ದು, ವಿಡಿಯೋ ಹಾಗೂ ಚಿತ್ರಗಳನ್ನು 'ಗಾಡ್‌ಫಾದರ್' ಚಿತ್ರತಂಡ ಈಗ ಬಿಡುಗಡೆ ಮಾಡಿದೆ. ''ಗಾಡ್‌ಫಾದರ್' ಚಿತ್ರತಂಡದಿಂದ 'ಭೀಮ್ಲಾ ನಾಯಕ್'ಗೆ ಶುಭ ಹಾರೈಕೆಗಳು' ಎಂದು ಚಿತ್ರತಂಡ ಹೇಳಿದೆ. 'ಭೀಮ್ಲಾ ನಾಯಕ್' ಸಿನಿಮಾವು ಇಂದು (ಫೆಬ್ರವರಿ 24) ಬಿಡುಗಡೆ ಆಗಿದೆ.


Click it and Unblock the Notifications











