Chiranjeevi Controversies: ಮೆಗಾಸ್ಟಾರ್ ಚಿರಂಜೀವಿಯ ವಿವಾದಗಳು ಒಂದೆರಡಲ್ಲ.. ದೊಡ್ಡ ಪಟ್ಟಿನೇ ಇದೆ

ಟಾಲಿವುಡ್‌ನಲ್ಲಿ ಮೆಗಾಸ್ಟಾರ್ ಚಿರಂಜೀವಿ ಆಗಾಗ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಲೇ ಇರುತ್ತಾರೆ. ಈಗ ಚಿರಂಜೀವಿ ತಮ್ಮ ಪುತ್ರನಿಗೆ ಒಂದು ಗಂಡು ಮಗು ಬೇಕು ಎಂದು ಹೇಳಿದ್ದು ದೊಡ್ಡ ವಿವಾದವನ್ನೇ ಸೃಷ್ಟಿಸಿದೆ. ಹೆಣ್ಣು ಮಕ್ಕಳ ಬಗ್ಗೆ ಚಿರಂಜೀವಿಗೆ ಇರುವ ಭಾವನೆಗಳನ್ನು ದೇಶಾದ್ಯಂತ ಖಂಡಿಸಲಾಗುತ್ತಿದೆ. ಈ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದೆ.

ಇತ್ತೀಚೆಗೆ ಮೆಗಾಸ್ಟಾರ್ ಚಿರಂಜೀವಿ 'ಬ್ರಹ್ಮಾಆನಂದಂ' ಸಿನಿಮಾ ಇವೆಂಟ್‌ನಲ್ಲಿ ಭಾಗಿಯಾಗಿದ್ದರು. ಮುಖ್ಯ ಅತಿಥಿಯಾಗಿ ಬಂದಿದ್ದ ಚಿರಂಜೀವಿ ಸಿನಿಮಾ ಬಗ್ಗೆ ಅಷ್ಟೇ ಮಾತಾಡಿದ್ದರೆ ಸರಿ ಹೋಗುತ್ತಿತ್ತು. ಆದರೆ, ತಮ್ಮ ಪುತ್ರನಿಗೆ ಗಂಡು ಮಗು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ದೊಡ್ಡ ವಿವಾದವೇ ಸೃಷ್ಟಿಯಾಗಿದೆ. ಅಷ್ಟಕ್ಕೂ ಈ ವೇದಿಕೆ ಮೇಲೆ ಚಿರಂಜೀವಿಯ ಹೇಳಿಕೆ ಹೀಗಿತ್ತು.

Megastar Chiranjeevi controversies from gender Rajasekhar to Blood bank

"ಮನೆಯಲ್ಲಿ ಮೊಮ್ಮಕ್ಕಳ ಜೊತೆಯಲ್ಲಿ ಇರುವಾಗ ನನಗೆ ಒಂದು ಲೇಡಿಸ್ ಹಾಸ್ಟೆಲ್ ವಾರ್ಡನ್‌ನಂತೆ ಅನಿಸುತ್ತೆ. ಸುತ್ತಮುತ್ತ ಬರೀ ಹೆಣ್ಣು ಮಕ್ಕಳೇ ಇದ್ದಾರೆ" ಎಂದು ಚಿರಂಜೀವಿ ಹಾಸ್ಯ ಮಾಡಿದ್ದರು. ಹಾಗೇ ಮುಂದುವರೆಸಿ "ಚರಣ್ ಈ ಬಾರಿ ಗಂಡು ಮಗು ಬೇಕು.. ನಮ್ಮ ಲೆಗಸಿ ಮುಂದುವರೆಯಬೇಕು" ಎಂದು ಹೇಳಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಹಾಗಂತ ಹೀಗೆ ವಿವಾದಾತ್ಮಕ ಹೇಳಿಕೆ ಕೊಟ್ಟು ಪೇಚಿಗೆ ಸಿಲುಕಿದ್ದು ಇದೇ ಮೊದಲೇನು ಅಲ್ಲ. ಹಲವು ಬಾರಿ ಕಾಂಟ್ರವರ್ಸಿಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅದ್ಯಾವುದು ಅಂತ ನೋಡುವುದಾರೇ.

ಚಿರಂಜೀವಿ-ರಾಜಶೇಖರ್ ವಿವಾದ

2020ರಲ್ಲಿ ಚಿರಂಜೀವಿ ಕಲಾವಿದರ ಸಂಘದ ಸದಸ್ಯರ ನಡುವಿನ ಸಮಸ್ಯೆಗಳನ್ನು ಆಂತರಿಕವಾಗಿ ಬಗೆಹರಿಸಿಕೊಳ್ಳಬೇಕು ಎಂದು ಹೇಳಿಕೆ ಕೊಟ್ಟಿದ್ದರು. ಅದು ಅಂದು ಕಾರ್ಯಕಾರಿ ಉಪಾಧ್ಯಕ್ಷ ಆಗಿದ್ದ ರಾಜಶೇಖರ್ ಅವರಿಗೆ ಕೋಪಕ್ಕೆ ಕಾರಣವಾಗಿತ್ತು. ಆಗ ಇಬ್ಬರ ನಡುವೆ ವಾದ ವಿವಾದಗಳು ನಡೆದಿದ್ದವು. ಚಿರಂಜೀವಿ ಹೇಳಿಕೆಗೆ ರಾಜಶೇಖರ್ ತಿರುಗೇಟು ನೀಡಿದ್ದರು. "ಈ ಸಂಘದಲ್ಲಿ ಚಿಕ್ಕದಾಗಿ ಕಿಡಿ ಹೊತ್ತಿಕೊಂಡರೂ ಅದನ್ನು ತಕ್ಷಣಕ್ಕೆ ಆರಿಸುವುದಕ್ಕೆ ನೋಡಬೇಕು. ದೊಡ್ಡದಾಗಿ ಹರಡುವುದಕ್ಕೆ ಬಿಡಬಾರದು. ಸದಸ್ಯರಲ್ಲಿ ವೈಮಸ್ಸು ಇದ್ದರೆ, ಅದರ ಬಗ್ಗೆ ಚರ್ಚೆ ಮಾಡಬೇಕು ಎಂದಿದ್ದರು." ಆಗ ರಾಜಶೇಖರ್, ಚಿರಂಜೀವಿ ಹಾಗೂ ಮೋಹನ್ ಬಾಬು ನಡುವೆ ವೈಮನಸ್ಸು ಇದೆ ಎಂದು ಸುದ್ದಿ ಹಬ್ಬಿತ್ತು. ಬಳಿಕ ರಾಜಶೇಖರ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮೂವರ ಮಧ್ಯೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು.

Megastar Chiranjeevi controversies from gender Rajasekhar to Blood bank

ಕೋವಿಡ್ ಪಾಸಿಟಿವ್

2020ರಲ್ಲಿ ಚಿರಂಜೀವಿ ತನಗೆ ಕೋವಿಡ್ ಪಾಸಿಟಿವ್ ಎಂದು ಹೇಳಿಕೆ ನೀಡಿದ್ದರು. ಬಳಿಕ ತನಗೆ ಪಾಸಿಟಿವ್ ಬಂದಿಲ್ಲ. ಕಿಟ್‌ನಲ್ಲಿನ ಸಮಸ್ಯೆಯಿಂದ ಹೀಗಾಯ್ತು ಎಂದಿದ್ದರು. ಆನಂತರ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದೆ ಲೆಜೆಂಡರಿ ನಿರ್ದೇಶಕ ಕೆ ವಿಶ್ವನಾಥ್ ಅವರನ್ನು ಭೇಟಿ ಮಾಡಲು ಹೋಗಿದ್ದರು. ಆ ವೇಳೆ ತೆಲಂಗಾಣದ ಆರೋಗ್ಯ ಇಲಾಖೆ ದೂರನ್ನು ನೀಡಿತ್ತು.

ಬ್ಲಡ್ ಬ್ಯಾಂಕ್ ವಿವಾದ

2011ರಲ್ಲಿ ರಾಜಶೇಖರ್ ಹಾಗೂ ಜೀವಿತಾ ಮೆಗಸ್ಟಾರ್ ಅವರ ಬ್ಲಾಡ್ ಬ್ಯಾಂಕ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ರಕ್ತವನ್ನು ಬ್ಲಾಕ್ ಮಾರ್ಕೆಟ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆ ವಿರುದ್ಧ ಅಲ್ಲು ಅರವಿಂದ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅದರಲ್ಲಿ ರಾಜಶೇಖರ್ ಹಾಗೂ ಜೀವಿತಾಗೆ ಸೋಲಾಗಿತ್ತು.

ವಜ್ರೋತ್ಸವಂ ವಿವಾದ

2007ರಲ್ಲಿ 'ವಜ್ರೋತ್ಸವಂ' ಕಾರ್ಯಕ್ರಮದಲ್ಲಿ ಚಿರಂಜೀವಿಗೆ ಲೆಜೆಂಡರಿ ಪ್ರಶಸ್ತಿಯನ್ನು ನೀಡಲು ಮುಂದಾಗಿದ್ದರು. ಆದರೆ, ಚಿರಂಜೀವಿ ಆ ಗೌರವವನ್ನು ಪಡೆಯಲು ಹಿಂದೇಟು ಹಾಕಿದ್ದರು. ತಮಗೆ ಯಾವಾಗ ಈ ಪ್ರಶಸ್ತಿ ಪಡೆಯಲು ಯೋಗ್ಯ ಅಂತ ಅನಿಸುತ್ತೋ ಆಗ ಸ್ವೀಕರಿಸುತ್ತೇನೆ ಎಂದು ತಿರಸ್ಕರಿಸಿದ್ದರು. ಆಗ ಅವರ ಗೆಳೆಯ ಮೋಹನ್ ಬಾಬು ಈ ನಿರ್ಧಾರದ ವಿರುದ್ಧ ಪ್ರಶ್ನೆ ಮಾಡಿದ್ದರು.

ಏರ್‌ಪೋರ್ಟ್‌ನಲ್ಲಿ ಚಿರಂಜೀವಿ ವಿವಾದ

2024ರಲ್ಲಿ ಚಿರಂಜೀವಿ ತನ್ನ ಪತ್ನಿ ಸುರೇಖಾ ಅವರೊಂದಿಗೆ ತೆರಳುತ್ತಿದ್ದರು. ಈ ವೇಳೆ ಏರ್‌ಪೋರ್ಟ್‌ನ ಅಭಿಮಾನಿಯೊಬ್ಬರು ಚಿರಂಜೀವಿ ಜೊತೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಂದೆ ಬಂದಿದ್ದರು. ಆ ವೇಳೆ ಅವರನ್ನು ತಳ್ಳಿದಂತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಗ ಚಿರಂಜೀವಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದರು.

More from Filmibeat

English summary
Megastar Chiranjeevi controversies from gender, Rajasekhar to Blood bank. Here is the list
Read more about: chiranjeevi controversy tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X