ಸಮಂತಾ-ನಾಗಚೈತನ್ಯ ವಿಚ್ಛೇನದಕ್ಕೆ ಕಾರಣ ಮೇಘನಾ? ಈಕೆ ಯಾರು? ಸಮಂತಾ ಪೋಸ್ಟ್‌ನಲ್ಲಿ ಅಂತಹದ್ದೇನಿದೆ?
ವಿಚ್ಛೇದನದ ಬಳಿಕ ಸಮಂತಾ ರುಥ್ ಪ್ರಭು ಹಿಂದೆಂದಿಗಿಂತಲೂ ಹೆಚ್ಚು ಚರ್ಚೆಯಲ್ಲಿರುತ್ತಾರೆ. ಅದಕ್ಕೆ ಕಾರಣವೇ ವಿಚ್ಚೇದನ ಇರಬಹುದು. ಒಂದು ಕಾಲದಲ್ಲಿ ತನ್ನ ನಟನೆಯಿಂದ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾಧಿಸಿದ ನಟಿಯೀಕೆ. ವಿವಾಹದ ಬಳಿಕ ಸಿನಿಮಾಗಳಲ್ಲಿ ನಟಿಸುವುದು ಕೊಂಚ ಮಟ್ಟಿಗೆ ಕಡಿಮೆ ಆಗಿದ್ದರೂ, ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿರಲಿಲ್ಲ.
ಸಮಂತಾ ವಿಚ್ಛೇದನದ ಬಳಿಕ ಇನ್ನೂ ಹೆಚ್ಚು ಸುದ್ದಿಯಾಗುವುದಕ್ಕೆ ಶುರುವಾಗಿದ್ದು ಮಾತ್ರ ನಿಜ. ಸೋಶಿಯಲ್ ಮೀಡಿಯಾಗಳಲ್ಲಿ ಸಮಂತಾ ಸದಾ ಟ್ರೆಂಡಿಂಗ್‌ನಲ್ಲಿಯೇ ಇರುತ್ತಾರೆ. ಡಿವೋರ್ಸ್ ಬಳಿಕ ಸಮಂತಾ ಹಾಗೂ ನಾಗಚೈತನ್ಯ ಬಗ್ಗೆ ಹಲವು ಸುದ್ದಿಗಳು ಹಬ್ಬಿದ್ದವು. ಇಬ್ಬರ ಬಗ್ಗೆನೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುವುದಕ್ಕೆ ಶುರುವಾಗಿತ್ತು. ಆದರೆ, ಅದೆಲ್ಲದಕ್ಕೂ ಸಾಧ್ಯವಾದಗಲೆಲ್ಲಾ ಸಮಂತಾ ಉತ್ತರ ಕೊಡುತ್ತಲೇ ಬಂದಿದ್ದಾರೆ.

ಪ್ರೀತಿಸಿ ಮದುವೆ ಆಗಿದ್ದ ಜೋಡಿ ಕೆಲವೇ ವರ್ಷಗಳಲ್ಲಿ ಬೇರೆಯಾಗಿದ್ದು ಇಬ್ಬರ ಅಭಿಮಾನಿಗಳಿಗೂ ಅರಗಿಸಿಕೊಳ್ಳುವುದಕ್ಕೆ ಆಗಿಲ್ಲ. ಅಂದಿನಿಂದ ಈ ಜೋಡಿ ಬಗ್ಗೆ ಒಂದಲ್ಲ ಒಂದು ಸುದ್ದಿ ಸದ್ದು ಮಾಡುತ್ತಲೇ ಇದೆ. ಎರಡನೇ ಮದುವೆ, ಅಫೇರ್‌ಗಳ ಬಗ್ಗೆ ಸುದ್ದಿಯಾಗುತ್ತಲೇ ಇದೆ. ಈಗ ಸಮಂತಾ, ನಾಗಚೈತನ್ಯ ವಿಚ್ಛೇದನದ ಬಗ್ಗೆ ಮತ್ತೊಂದು ಸುದ್ದಿ ಓಡಾಡುತ್ತಿದೆ. ಅದಕ್ಕೆ ಕಾರಣ ಸಮಂತಾ ಮಾಡಿದ ಒಂದು ಪೋಸ್ಟ್.
ಸಮಂತಾ ಹಾಗೂ ನಾಗಚೈತನ್ಯ ನಡುವೆ ನಿರಂತರವಾಗಿ ಕಿತ್ತಾಟ ಆಗುತ್ತಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಇನ್ನಿಲ್ಲದಂತೆ ದ್ವೇಷಿಸುತ್ತಿದ್ದರು. ಈ ಕಾರಣಕ್ಕಾಗಿ ವಿಚ್ಚೇದನಕ್ಕೆ ನಿರ್ಧರಿಸಿದ್ದರು. ಇದನ್ನು ಸಮಂತಾ ಖುದ್ದಾಗಿ ಹೇಳಿಕೊಂಡಿದ್ದು ಬಿಟ್ಟರೆ ಹೆಚ್ಚಿನ ಅಪ್‌ಡೇಟ್ ಇಲ್ಲ. ಅದು ಅವರ ವೈಯಕ್ತಿಕ ವಿಚಾರ ಕೂಡ ಹೌದು. ಆದರೆ, ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸಮಂತಾ ಮಾಡುವ ಕೆಲ ಪೋಸ್ಟ್‌ಗಳು ಅನುಮಾನಕ್ಕೆ ಕಾರಣವಾಗಿದ್ದೂ ಇದೆ.
ಸದ್ಯ ಸಮಂತಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಮೇಘನಾ ವಿನೋದ್ ಅನ್ನುವ ಮಹಿಳೆಯ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಜೊತೆಗೆ "ನನ್ನ ಎಲ್ಲಾ ಓಳ್ಳೆಯ ನಿರ್ಧಾರಗಳ ಹಿಂದೊಂದು ಮುಖವಿದೆ" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಬಳಿಕ ಮೇಘನಾ ವಿನೋದ್ ಹೆಸರು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ಮೇಘನಾ ವಿನೋದ್ ಯಾರು? ಸಮಂತಾ-ನಾಗಚೈತನ್ಯ ವಿಚ್ಛೇದನಕ್ಕೆ ಈಕೆನೇ ಕಾರಣನಾ? ಈ ಬಗ್ಗೆನೇ ಚರ್ಚೆಯಾಗುತ್ತಿದೆ.

ಸಮಂತಾ ಶೇರ್ ಮಾಡಿರುವ ಫೋಟೊದಲ್ಲಿರೋದು ಮೇಘನಾ ವಿನೋದ್. ಮಲೇಷ್ಯಾದಲ್ಲಿ ನೆಲೆಸಿರುವ ಈಕೆ ಸಮಂತಾರ ಆಪ್ತ ಸ್ನೇಹಿತೆ. ಇಬ್ಬರ ಜೊತೆಗಿರುವ ಫೋಟೊಗಳು ಹಾಗೂ ಸಮಂತಾ ಬರೆದ ಸಾಲುಗಳನ್ನು ನೋಡಿದ ಬಳಿಕ ಇಬ್ಬರ ವಿಚ್ಛೇದನಕ್ಕೆ ಈಕೆನೇ ಕಾರಣನಾ? ಅಂತ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಈ ಹಿಂದೆ ಕೂಡ ನಾಗ ಚೈತನ್ಯ ಹಾಗೂ ಸಮಂತಾ ಬ್ರೇಕಪ್ ಆದಾಗ ಹಲವರ ಹೆಸರುಗಳು ಓಡಾಡಿದ್ದವು. ಅದರಲ್ಲಿ ಹೆಸರುಗಳಲ್ಲಿ ಪಟ್ಟಿಯಲ್ಲಿ ಮೇಘನಾ ವಿನೋದ್ ಹೆಸರು ಕೂಡ ಕೇಳಿಬಂದಿತ್ತು. ಈಗ ಮತ್ತೆ ಈಕೆಯ ಹೆಸರು ಚರ್ಚೆಗೆ ಬರೋದಕ್ಕೆ ಕಾರಣ ಸಮಂತಾ ಹಂಚಿಕೊಂಡ ಫೋಟೊ. ಜೊತೆಗೆ ನನ್ನ ಎಲ್ಲಾ ಉತ್ತಮ ನಿರ್ಧಾರಗಳ ಹಿಂದಿರುವ ಫೇಸ್ ಇದೇ" ಎಂದು ಬರೆದ ಸಾಲುಗಳು.
ಇನ್ನು ಸಮಂತಾ ವೃತ್ತಿ ಬದುಕಿಗೆ ಬರೋದಾದರೆ, ಸ್ಯಾಮ್ ಸದ್ಯ ಮೆಯೋಸೈಟಿಸ್‌ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಹೀಗಾಗಿ ಹೆಚ್ಚು ಕಡಿಮೆ ಒಂದು ವರ್ಷಗಳ ಕಾಲ ಯಾವುದೇ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿರಲಿಲ್ಲ. ಈಗ ಸಮಂತಾ 'ಸಿಟಾಡೆಲ್' ಭಾರತದ ಆವೃತ್ತಿಯಲ್ಲಿ ನಟಿಸಿದ್ದು, ಇದು ಬಿಡುಗಡೆಯಾಗಬೇಕಿದೆ. ಇನ್ನೊಂದು ಕಡೆ ಹೆಲ್ತ್ ಪಾಡ್‌ಕಾಸ್ಟ್ ಅನ್ನೂ ಆರಂಭಿಸಿದ್ದು, ಶೀಘ್ರದಲ್ಲಿಯೇ ಹೊಸ ಸಿನಿಮಾಗಳಿಗೆ ಹ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ.


Click it and Unblock the Notifications











