ಚಿತ್ರರಂಗದ ಭವಿಷ್ಯ: ಚಿರಂಜೀವಿ ಮನೆಯಲ್ಲಿ ಮಹತ್ವದ ಸಭೆ

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಇತರೆ ರಂಗಗಳಂತೆಯೇ ಚಿತ್ರರಂಗದ ಭವಿಷ್ಯ ಕೂಡ ಮಸುಕಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಚಿತ್ರೀಕರಣ ನಡೆಸಿ, ಅವುಗಳನ್ನು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡುವುದು ಹಾಗೂ ಅದಕ್ಕೆ ಪ್ರೇಕ್ಷಕರನ್ನು ಕರೆತರುವುದು ಸುಲಭದ ಮಾತಲ್ಲ.

Recommended Video

ಪವನ್ ಕಲ್ಯಾಣ್, ಅಮಿತಾಬ್ ಬಚ್ಚನ್ ಗೆ ಚಾಲೆಂಜ್ ಮಾಡಿದ ಚಿರಂಜೀವಿ. | Chiranjeevi

ಈ ಬಗ್ಗೆ ಚಲನಚಿತ್ರ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರಲ್ಲಿ ಈಗಾಗಲೇ ಕಳವಳ ತೀವ್ರವಾಗಿದೆ. ಚಿತ್ರರಂಗದ ಮುಂದಿನ ಭವಿಷ್ಯವೇನು? ಎಂಬುದು ಚಿತ್ರರಂಗದ ನಡುವೆ ಚರ್ಚೆಯ ವಸ್ತುವಾಗಿದೆ. ಆದರೆ ತೆಲುಗು ಚಿತ್ರರಂಗದಲ್ಲಿ ಸ್ವತಃ ಸರ್ಕಾರ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದೆ. ಏಕೆಂದರೆ ರಾಜ್ಯದ ಆದಾಯದಲ್ಲಿ ಚಿತ್ರರಂಗದ ಕೊಡುಗೆ ದೊಡ್ಡಮಟ್ಟದ್ದು. ಅದಕ್ಕಾಗಿ ತೆಲಂಗಾಣ ಸಿನೆಮಾಟೋಗ್ರಫಿ ಸಚಿವರೇ ಹಿರಿಯ ನಟ ಚಿರಂಜೀವಿ ಅವರ ಮನೆಗೆ ತೆರಳಿ ಸಭೆ ನಡೆಸಿದ್ದಾರೆ. ಮುಂದೆ ಓದಿ..

ಚಿರಂಜೀವಿ ಮನೆಯಲ್ಲಿ ಸಭೆ

ಚಿರಂಜೀವಿ ಮನೆಯಲ್ಲಿ ಸಭೆ

ತೆಲಂಗಾಣ ಸರ್ಕಾರದ ಸಿನೆಮಾಟೊಗ್ರಫಿ ಸಚಿವ ತಲಸಿನಿ ಶ್ರೀನಿವಾಸ ಯಾದವ್ ಗುರುವಾರ ಚಿರಂಜೀವಿ ಅವರ ಜುಬಿಲೀ ಹಿಲ್ಸ್‌ನ ಮನೆಗೆ ತೆರೆಳಿ ತೆಲುಗು ಚಿತ್ರರಂಗದ ಭವಿಷ್ಯದ ಕುರಿತು ಮಾತುಕತೆ ನಡೆಸಿದ್ದಾರೆ.

ನಟರು, ನಿರ್ಮಾಪಕರು, ನಿರ್ದೇಶಕರು

ನಟರು, ನಿರ್ಮಾಪಕರು, ನಿರ್ದೇಶಕರು

ಈ ಸಭೆಯಲ್ಲಿ ನಾಗಾರ್ಜುನ, ದಿಲ್ ರಾಜು, ಅಲ್ಲು ಅರವಿಂದ್, ಎಸ್ ಎಸ್ ರಾಜಮೌಳಿ, ಡಿವಿವಿ ದಾನಯ್ಯ, ಸಿ. ಕಲ್ಯಾಣ್, ಶ್ಯಾಮ್ ಪ್ರಸಾದ್ ರೆಡ್ಡಿ, ಜೆಮಿನಿ ಕಿರಣ್, ವಿವಿ ವಿನಾಯಕ್, ತ್ರಿವಿಕ್ರಮ್ ಶ್ರೀನಿವಾಸ್, ಕೊರತಲಾ ಶಿವ, ಎನ್ ಶಿವ ಹಾಗೂ ಇನ್ನೂ ಅನೇಕರು ಭಾಗಿಯಾಗಿದ್ದರು.

ಡೆಮೊ ವಿಡಿಯೋಗಳ ಸಲ್ಲಿಕೆ

ಡೆಮೊ ವಿಡಿಯೋಗಳ ಸಲ್ಲಿಕೆ

ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಶೀಘ್ರದಲ್ಲಿಯೇ ಅನುಮತಿ ನೀಡಬೇಕು. ನಂತರ ಚಿತ್ರೀಕರಣ ಹಾಗೂ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಬಿಡುಗಡೆ ಮಾಡುವ ವಿಚಾರಗಳನ್ನು ಪರಿಗಣಿಸಬೇಕು ಎಂಬ ಕುರಿತು ಸರ್ಕಾರಕ್ಕೆ ಮನವಿ ಮಾಡುವ ಬಗ್ಗೆಯೂ ಮಾತುಕತೆ ನಡೆಯಿತು. ಅದಕ್ಕೆ ಸಂಬಂಧಿಸಿದ ಮಾರ್ಗದರ್ಶಿಗಳನ್ನು ನೀಡಲಿದ್ದು, ಒಳಾಂಗಣ ಹಾಗೂ ಹೊರಾಂಗಣ ಚಿತ್ರೀಕರಣಗಳು ಹೇಗೆ ನಡೆಯಲಿವೆ ಎಂಬ ಡೆಮೋ ವಿಡಿಯೋಗಳನ್ನು ಸರ್ಕಾರಕ್ಕೆ ನೀಡುವುದರ ಬಗ್ಗೆ ತೀರ್ಮಾನಿಸಲಾಯಿತು.

ಚಿತ್ರಮಂದಿರ ನೌಕರರ ಪ್ರತಿಭಟನೆ

ಚಿತ್ರಮಂದಿರ ನೌಕರರ ಪ್ರತಿಭಟನೆ

ಚಿತ್ರಮಂದಿರಗಳ ಮಾಲೀಕರು ಲಾಕ್ ಡೌನ್ ಅವಧಿಯಲ್ಲಿ ತಮಗೆ ಪೂರ್ಣ ಪ್ರಮಾಣದ ವೇತನ ನೀಡಿಲ್ಲ. ಸಂಬಳಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ ತೆಲಂಗಾಣ ಚಿತ್ರಮಂದಿರ ನೌಕರರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಪೂರ್ಣ ವೇತನ ನೀಡಬೇಕು ಎಂದು ಸರ್ಕಾರ ಸೂಚಿಸಿದ್ದರೂ ಚಿತ್ರಮಂದಿರಗಳ ಮಾಲೀಕರು ಅರ್ಧದಷ್ಟು ಸಂಬಳ ನೀಡುತ್ತಿಲ್ಲ. ಇದರಿಂದ ತೀವ್ರ ಕಷ್ಟಕ್ಕೆ ಸಿಲುಕಿದ್ದೇವೆ ಎಂದು ಆರೋಪಿಸಿದ್ದರು.

More from Filmibeat

English summary
Telangana Cinematography Minister Talasani Srinivas Reddy and many others held a meeting at Chiranjeevi's residence on Thursday to discuss about the future of Telugu cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X